Coffee: ಚಿಂತೆಬೇಡ...ದೇಹದ ತೂಕ ಇಳಿಸಲು ಒಂದು ಕಪ್ ಕಾಫಿ ಸೇವಿಸಿ!

Weight loss: ಕಾಫಿ ಕುಡಿಯುವುದರಿಂದ ದೇಹದ ತೂಕ ಇಳಿಕೆಯಾಗುತ್ತದೆ ಎಂದು ಹೇಳಿದರೂ ನಾವು ಅದನ್ನು ಹೇಗೆ ಸೇವಿಸುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾದರೆ ತೂಕ ಇಳಿಸಬೇಕೆನ್ನುವವರು ಕಾಫಿಯನ್ನು ಮಿತವಾಗಿ ಕುಡಿದರೆ ಉತ್ತಮ.

ಕಾಫಿ

ಕಾಫಿ

  • Share this:
ಕಾಫಿಯ ಒಂದು ಸಿಪ್ ದೇಹದೊಳಗೆ ಹೋಗುತ್ತಿದ್ದಂತೆ ವ್ಯಕ್ತಿ ಆ್ಯಕ್ಟೀವ್‌ ಮೋಡ್‍ಗೆ ಬಂದು ಬಿಡುತ್ತಾನೆ. ಅಷ್ಟೊಂದು ಶಕ್ತಿ ಈ ಕಾಫಿಗಿದೆ. ಕೆಫಿನ್ ಅಂಶವನ್ನು ಒಳಗೊಂಡಿರುವ ಇದು ಉಲ್ಲಾಸಿತ ಪಾನೀಯ ಎಂದು ಕರೆಸಿಕೊಂಡಿದೆ. ಕೆಲಸದ ಒತ್ತಡದ ಸಮಯದಲ್ಲಿ ಕಾಫಿ ಕುಡಿದರೆ ಸಾಕು ಇರುವ ಒತ್ತಡವೆಲ್ಲವೂ ಮಂಗ ಮಾಯ. ಆದರೆ ಅತಿ ಹೆಚ್ಚು ಕಾಫಿ ಸೇವನೆ ಒಳ್ಳೆಯದಲ್ಲ. ದೇಹದಲ್ಲಿ ಉಷ್ಣತೆ, ನಿದ್ರಾಹೀನತೆ ಉಂಟಾಗುತ್ತದೆ ಎಂದು ಕೆಲವರು  ಹೇಳುತ್ತಾರೆ. ಹಾಗಾಗಿ ಹಿತವಾಗಿರಲಿ ಎಂಬುದು ಕೆಲವರ ಸಲಹೆ. ಇದನ್ನು ಹೊರತು ಪಡಿಸಿ ಕಾಫಿ ಕುಡಿಯುವುದರಿಂದ ದೇಹದ ತೂಕ ಇಳಿಕೆಯಾಗುತ್ತದೆ ಎಂದು ಹೇಳಿದರೂ ನಾವು ಅದನ್ನು ಹೇಗೆ ಸೇವಿಸುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾದರೆ ತೂಕ ಇಳಿಸಬೇಕೆನ್ನುವವರು ಕಾಫಿಯನ್ನು ಮಿತವಾಗಿ ಕುಡಿದರೆ ಉತ್ತಮ.

1. ಹಸಿವನ್ನು ನಿಗ್ರಹಿಸಲು ಕಾಫಿ ಸಹಾಯಕ.

ತೂಕ ಇಳಿಸಬೇಕೆನ್ನುವವರು ಮೊದಲು ಯಥೇಚ್ಛವಾಗಿ ತಿನ್ನುವುದಕ್ಕೆ ಕಡಿವಾಣ ಹಾಕಬೇಕು. ಕಾಫಿಯಲ್ಲಿರುವ ಕೆಫೀನ್ ಎಂಬ ಅಂಶ ಹಸಿವಾಗುವನ್ನು ತಡೆಹಿಡಿಯುತ್ತದೆ ಜೊತೆಗೆ ಪದೇ ಪದೇ ತಿನ್ನುವ ಅಭ್ಯಾಸಕ್ಕೆ ಬ್ರೇಕ್ ಹಾಕುತ್ತದೆ. ಕೆಫೀನ್ ಮತ್ತು ಹಸಿವಿನ ನಡುವಿನ ಸಂಬಂಧವನ್ನು ತೋರಿಸುವ ಸಾಕಷ್ಟು ಸಂಶೋಧನೆಗಳು ನಡೆದಿದ್ದು, ನಮಗೆ ಹಸಿವನ್ನುಂಟು ಮಾಡುವ ಗ್ರೆಲಿನ್ ಎಂಬ ಹಾರ್ಮೋನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ತೂಕ ಇಳಿಸಿಕೊಳ್ಳುವವರು ಕಾಫಿ ಸೇವನೆಗೆ ಪ್ರಾಶಸ್ತ್ಯ ನೀಡಿದರೆ ಉತ್ತಮ. ಅಂದರೆ ಊಟ ಮಾಡುವ ಮೊದಲು ಒಂದು ಕಪ್ ಕಾಫಿ ಕುಡಿಯುವ ಮೂಲಕ ಹಸಿವನ್ನು ನಿಗ್ರಹಿಸಿ ತೂಕ ಇಳಿಸಬಹುದು.

2. ದೇಹದಲ್ಲಿ ಚಯಾಪಚಯ ಕ್ರಿಯೆ ಹೆಚ್ಚಳ

ಕಾಫಿ ಕುಡಿಯುವುದರಿಂದ ಮನಸ್ಥಿತಿ ಸುಧಾರಣೆ ಉಂಟಾಗುತ್ತದೆ. ಶಕ್ತಿ ಹೆಚ್ಚಳ, ಚಯಾಪಚಯ ಕ್ರಿಯೆ ಹೆಚ್ಚಾಗುತ್ತದೆ. ಹಾಗಾಗಿ ಕಾಫಿಗೆ ಆದ್ಯತೆ ನೀಡಬಹುದು. ತೂಕ ಇಳಿಕೆಯು ದೇಹದ ಚಯಾಪಚಯ ಕ್ರಿಯೆಯ ಮೇಲೆ ಅವಲಂಬಿತವಾಗಿರುತ್ತದೆ. ಜರ್ನಲ್ ಆಫ್ ಫುಡ್ ಸೈನ್ಸ್ ಅಂಡ್ ನ್ಯೂಟ್ರಿಷನ್‍ನಲ್ಲಿ ಇತ್ತೀಚೆಗೆ ಪ್ರಕಟವಾದ ಅಧ್ಯಯನವು ಬಿಎಂಐ ಅನ್ನು ಸಮತೋಲನಗೊಳಿಸಲು ಮತ್ತು ಚಯಾಪಚಯ ಕ್ರಿಯೆಯನ್ನು ವೇಗಗೊಳಿಸಲು ಕೆಫೀನ್ ಸಹಾಯ ಮಾಡುತ್ತದೆ ಎಂದು ತೋರಿಸಿದೆ. ದೇಹಕ್ಕೆ ಪೋಷಕಾಂಶಗಳ ಹಂಚಿಕೆಗೆ ಸಹಕಾರಿ ಹಾಗೂ ದಿನವಿಡಿ ಕ್ಯಾಲೋರಿಯನ್ನು ಸರಿದೂಗಿಸಿಕೊಂಡು ಹೋಗಲು ಕೂಡ ಸಹಾಯ ಮಾಡುತ್ತದೆ. ಇದರರ್ಥ ಕಾಫಿಯಲ್ಲಿ ದೇಹದ ಚಯಾಪಚಯ ಕ್ರಿಯೆಯ ವೇಗವನ್ನು ಹೆಚ್ಚಿಸಿ ದೇಹದಲ್ಲಿನ ಕ್ಯಾಲೋರಿಗಳನ್ನು ನಾಶಮಾಡುವ ಶಕ್ತಿ ಇದೆ. ಇದು ತೂಕ ಇಳಿಕೆಗೆ ಸಹಾಯಕವಾಗಲಿದೆ.

3.  ಉತ್ಕರ್ಷಣ ನಿರೋಧಕ

ಆ್ಯಂಟಿಆಕ್ಸಿಡೆಂಟ್ಸ್ ಅಂಶವು ದೇಹದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪಾಲಿಫಿನಾಲ್ಸ್ ಎಂದು ಕರೆಯಲ್ಪಡುವ ಆ್ಯಂಟಿಆಕ್ಸಿಡೆಂಟ್ಸ್ ಕಾಫಿಯ ಅಂಶ ಸಮೃದ್ಧವಾಗಿದೆ. ಇದು ಉರಿಯೂತ ಕಡಿಮೆ ಮಾಡುವುದು ಸೇರಿದಂತೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಮತ್ತು ತೂಕ ನಷ್ಟಕ್ಕೆ ಬಂದಾಗ, ಆ್ಯಂಟಿಆಕ್ಸಿಡೆಂಟ್ ಹಸಿವನ್ನು ಕಡಿಮೆ ಮಾಡುತ್ತದೆ ಮತ್ತು ದೇಹದಲ್ಲಿ ಚಯಾಪಚಯ ಮಟ್ಟವನ್ನು ಹೆಚ್ಚಿಸುತ್ತದೆ.
Published by:Harshith AS
First published: