Father's Day 2022: ನಿಮ್ಮ ಪ್ರೀತಿಯ ತಂದೆಗೆ ರುಚಿಕರ ಸ್ಮೂದಿಗಳನ್ನು ಮಾಡಿ ಸರ್‌ಪ್ರೈಸ್ ನೀಡಿ

ಫಾದರ್ಸ್ ಡೇಗಾಗಿ ನಿಮ್ಮ ತಂದೆಗೆ ಯಾವ ಉಡುಗೊರೆ ನೀಡುವ ಆಲೋಚನೆಯಲ್ಲಿದ್ದೀರಿ? ಒಂದು ವೇಳೆ ನಿಮ್ಮ ತಂದೆ ಸ್ಮೂದಿಗಳನ್ನು ಇಷ್ಟ ಪಡುವವರಾಗಿದ್ದರೆ, ವಿಭಿನ್ನ ರೀತಿಯ ಸ್ಮೂದಿಯನ್ನು ಮಾಡಿಕೊಟ್ಟು, ಅವರನ್ನು ಖುಷಿ ಪಡಿಸಿ! ಈ ಬಗ್ಗೆ ಇಲ್ಲಿದೆ ಟಿಪ್ಸ್...

ಕಾಫಿ ಸ್ಮೂದಿ

ಕಾಫಿ ಸ್ಮೂದಿ

 • Share this:
ನಮ್ಮ ಜೀವನದಲ್ಲಿ ತಂದೆ (Father) ಅಥವಾ ತಂದೆ ವಯಸ್ಸಿನ ವ್ಯಕ್ತಿಗಳನ್ನು ಗೌರವಿಸಲು ತಂದೆಯ ದಿನವನ್ನು ಆಚರಿಸಲಾಗುತ್ತದೆ. ತನ್ನ ಮಕ್ಕಳಿಗಾಗಿ (Children) ತಂದೆ ತೋರಿದ ಪ್ರೀತಿ, ಗೌರವ, ಬೋಧನೆಗಳು ಮತ್ತು ತ್ಯಾಗ ನೆನಪಿಸುವ ದಿನವಿದು ಹಾಗಾಗಿ ಅಪ್ಪಂದಿರ ದಿನಕ್ಕಾಗಿ (Father's Day) ನಿಮ್ಮ ತಂದೆಗೆ ಯಾವ ಉಡುಗೊರೆ ನೀಡುವ ಆಲೋಚನೆಯಲ್ಲಿದ್ದೀರಿ? ಒಂದು ವೇಳೆ ನಿಮ್ಮ ತಂದೆ ಸ್ಮೂದಿಗಳನ್ನು (Smoothies) ಇಷ್ಟ ಪಡುವವರಾಗಿದ್ದರೆ, ವಿಭಿನ್ನ ರೀತಿಯ ಸ್ಮೂದಿಯನ್ನು ಮಾಡಿಕೊಟ್ಟು, ಅವರನ್ನು ಖುಷಿ ಪಡಿಸಿ. ಲಾವಜ್ಜಾ ಇಂಡಿಯಾದ ಬ್ಯಾವರೆಜ್ ಟ್ರೈನಿಂಗ್ ಮ್ಯಾನೇಜರ್ ಗಿರೀಶ್ ಚಂದ್ರ ಅವರು ಕೆಲವು ರುಚಿಕರ ಮತ್ತು ಆರೋಗ್ಯಕರ ಸ್ಮೂದಿಗಳ ರೆಸಿಪಿಗಳನ್ನು ಇಲ್ಲಿ ತಿಳಿಸಿದ್ದಾರೆ.

1) ವೇಗನ್ ಕ್ಯಾಶೂ ಕ್ಯಾಪಚೀನೋ ಸ್ಮೂದಿ
ಈ ಕೆನೆಭರಿತ ಸ್ಮೂದಿಯಲ್ಲಿ ಆರೋಗ್ಯಕರ ಕೊಬ್ಬು ಮತ್ತು ಪ್ರೊಟೀನ್ ಇರುತ್ತದೆ.

ಸಾಮಾಗ್ರಿಗಳು

 • 100 ಎಂಎಲ್ ಫ್ರೆಂಚ್ ಪ್ರೆಸ್ ಕಾಫಿ ( ಸ್ವಲ್ಪ ಸ್ಟಾಂಗ್ ಇರಲಿ)

 • 40 ಎಂಎಲ್ ಸೋಯಾ ಕ್ರೀಂ ಅಥವಾ ವೇಗನ್ ವೆನಿಲಾ ಪ್ರೊಟೀನ್ ಪೌಡರ್

 • 6-8 ಗೋಡಂಬಿಗಳು

 • 1 ಪ್ರೋಜನ್ ಬಾಳೆ ಹಣ್ಣು

 • 10 ಎಂ ಎಲ್ ವೆನಿಲಾ ಎಕ್ಸ್ಟ್ರಾಕ್ಟ್ ಅಥವಾ ಸಿರಪ್

 • ಒಂದು ಚಿಟಿಕೆ ಪಿಂಕ್ ಉಪ್ಪು ಅಥವಾ ರಾಕ್ ಸಾಲ್ಟ್

 • 3-4 ಐಸ್ ತುಂಡುಗಳು

 • ಕತ್ತರಿಸಿದ ಬಾದಾಮಿ ಅಥವಾ ಗೋಡಂಬಿ, ಬಾಳೆ ಹಣ್ಣು ( ಅಲಂಕಾರಕ್ಕೆ)


ವಿಧಾನ
ಎಲ್ಲಾ ಸಾಮಾಗ್ರಿಗಳನ್ನು ಬ್ಲೆಂಡರ್‍ನಲ್ಲಿ ರುಬ್ಬಿರಿ. ಅತಿಯಾಗಿ ರುಬ್ಬಿದರೆ, ಸ್ಮೂದಿಯ ಕೆನೆಭರಿತ ರಚನೆ ಹಾಳಾಗುತ್ತದೆ. ಬೇಕಿದ್ದರೆ ಸ್ಮೂದಿಗೆ ಒಂದು ಚಮಚ ಪ್ರೊಟೀನ್ ಪೌಡರ್ ಹಾಕಿ.

2) ಎಸ್ಸ್‍ಪ್ರೆಸ್ಸೋ ಮತ್ತು ಡೇಟ್ಸ್ ಸ್ಮೂದಿ
ಇದು ಬೆಳಗ್ಗಿನ ಉಪಹಾರವಾಗಿ ಸೇವಿಸಲು ಅತ್ಯಂತ ಸೂಕ್ತವಾಗಿದೆ. ಕಾಫಿ ಮತ್ತು ಉಪಹಾರ ಎರಡನ್ನೂ ಒಂದರ ರೂಪದಲ್ಲೇ ಸೇವಿಸಿದ ಅನುಭವ ಪಡೆಯಬಹುದು.

ಸಾಮಾಗ್ರಿಗಳು

 • 30 ಎಂಎಲ್ ಎಸ್‍ಪ್ರೆಸ್ಸೋ ಅಥವಾ ಮೊಕಪಾಟ್ ಕಾಫಿ

 • 1 ಬಾಳೆ ಹಣ್ಣು

 • 2-3 ಖರ್ಜೂರಗಳು

 • 1 ಟೇಬಲ್ ಚಮಚ ಪೀನಟ್ ಬಟರ್

 • 1 ಟೇಬಲ್ ಚಮಚ ಮ್ಯಾಪಲ್ ಸಿರಪ್

 • 60 ಎಂಎಲ್ ಬಾದಾಮಿ ಹಾಲು ಅಥವಾ ನಿಮ್ಮ ಆಯ್ಕೆ ಯಾವುದಾದೂ ಹಾಲು

 • 5 ಐಸ್ ಕ್ಯೂಬ್‍ಗಳು


ವಿಧಾನ
ಎಲ್ಲಾ ಸಾಮಾಗ್ರಿಗಳನ್ನು ಬ್ಲೆಂಡರ್‍ನಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಐಸ್ ಕ್ಯೂಬ್‍ಗಳನ್ನು ಪುಡಿ ಮಾಡಬೇಕಾದ ಕಾರಣ , ಬ್ಲೆಂಡರನ್ನು ಮಧ್ಯಮ ವೇಗದಲ್ಲಿಡಿ. ಆದರೆ ತುಂಬಾ ಸಮಯ ಬ್ಲೆಂಡ್ ಮಾಡಬೇಡಿ. ಸ್ಮೂದಿ ಗಾಢವಾಗಿ ಇರಬೇಕೆಂದರೆ, ಘನೀಕರಿಸಿದ ಬಾಳೆಹಣ್ಣನ್ನು ಬಳಸಿ ಮತ್ತು ಎಸ್‍ಪ್ರೆಸ್ಸೊವನ್ನು ಬ್ಲೆಂಡರ್‍ಗೆ ಹಾಕುವ ಮೊದಲು ತಣ್ಣಗಾಗಲು ಬಿಡಬೇಕು.

ಇದನ್ನೂ ಓದಿ: Recipe: ಮಕ್ಕಳಿಗೆ ಮಾಡಿ ಕೊಡಿ ರುಚಿಯಾದ ಕ್ಯಾಪ್ಸಿಕಂ ಎಗ್ ಚಿಲ್ಲಿ

3) ಕೋಲ್ಡ್ ಬ್ರೂ ಪ್ರೊಟೀನ್ ಸ್ಮೂದಿ
ಈ ಸ್ಮೂದಿ ಅತ್ಯಂತ ರುಚಿಕರವಾಗಿರುತ್ತದೆ ಮಾತ್ರವಲ್ಲ, ಎಲ್ಲಾ ಋತುಗಳಲ್ಲೂ ಇದನ್ನು ಸೇವಿಸಬಹುದಾಗಿದೆ. ಕೋಲ್ಡ್ ಬ್ರೂ ಪ್ರೊಟೀನ್ ಸ್ಮೂದಿಗೆ ನೀವು ಪ್ರೊಟೀನ್ ಪೌಡರನ್ನು ಕೂಡ ಸೇರಿಸಬಹುದು.

ಸಾಮಾಗ್ರಿಗಳು

 • 150 ಎಂಎಲ್ ಕೋಲ್ಡ್‍ಬ್ರೂ ( ಅದನ್ನು ಮೊದಲೇ ಐಸ್ ಕ್ಯೂಬ್‍ಗಳನ್ನಾಗಿ ಮಾಡಿಟ್ಟುಕೊಂಡಿರಬೇಕು)

 • 4-5 ಗೋಡಂಬಿ ಬೀಜಗಳು

 • 40-50 ಎಂಎಲ್ ಬಾದಾಮಿ ಹಾಲು

 • 60 ಗ್ರಾಂ ಗ್ರೀಕ್ ಯೋಗರ್ಟ್ ( ಬೇಕಿದ್ದರೆ ಸಾದಾ ಅಥವಾ ವೆನಿಲಾ ಫ್ಲೇವರ್ ಬಳಸಬಹುದು)

 • 1 ಟೇಬಲ್ ಚಮಚ ಚೀಯಾ ಬೀಜಗಳು


ವಿಧಾನ
ಗೋಡಂಬಿ ಬೀಜಗಳನ್ನು ಮೊದಲೇ ರಾತ್ರಿಯಿಡೀ ನೆನೆಸಿಟ್ಟುಕೊಂಡಿರಬೇಕು. ಎಲ್ಲಾ ಸಾಮಾಗ್ರಿಗಳನ್ನು ಬ್ಲೆಂಡರ್‍ನಲ್ಲಿ ಅತ್ಯಂತ ನುಣ್ಣಗೆ ರುಬ್ಬಿಕೊಳ್ಳಿ. ಚೀಯಾ ಬೀಜಗಳಿಂದ ಅಲಂಕರಿಸಿ, ಕೂಡಲೇ ಸೇವಿಸಲು ಕೊಡಿ.

4) ಕಾಫಿ ಓಟ್ ಮತ್ತು ಪೀನಟ್ ಬಟರ್ ಸ್ಮೂದಿ
ಇದು ಒಂದು ಪೌಷ್ಟಿಕಾಂಶಯುಕ್ತ ಕಾಫಿ ಆಗಿದ್ದು, ನಿಮ್ಮ ನಿತ್ಯದ ಪ್ರೊಟೀನ್ ಅಗತ್ಯವನ್ನು ಪೂರೈಸುತ್ತದೆ.

ಬೇಕಾಗುವ ಸಾಮಾಗ್ರಿಗಳು

 • 100 ಎಂ ಎಲ್ ಫ್ರೆಂಚ್ ಪ್ರೆಸ್ ಕಾಫಿ ( ಕೊಂಚ ಸ್ಟ್ರಾಂಗ್ ಆಗಿರಲಿ)

 • 1 ಫ್ರೋಜನ್ ಬಾಳೆ ಹಣ್ಣು

 • 120 ಎಂಎಲ್ ಹಾಲು

 • 1 ಟೇಬಲ್ ಚಮಚ ಪೀನಟ್ ಬಟರ್

 • 30 ಗ್ರಾಂ ರೋಲ್‍ಡ್ ಓಟ್


ವಿಧಾನ
ಮೇಲೆ ತಿಳಿಸಿದ ಎಲ್ಲಾ ಸಾಮಾಗ್ರಿಗಳನ್ನು ಬ್ಲೆಂಡರ್‍ನಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಿಮಗೆ ಇಷ್ಟವಿದ್ದರೆ , ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಇನ್ನಷ್ಟು ಹಾಲನ್ನು ಸೇರಿಸಬಹುದು. ಈ ಇದನ್ನು ತಯಾರಿಸದ ಕೂಡಲೇ ಸೇವಿಸಲು ಕೊಡಿ. ಕಾಫಿ ಓಟ್ ಮತ್ತು ಪೀನಟ್ ಬಟರ್ ಸ್ಮೂದಿಯನ್ನು ಕತ್ತರಿಸಿದ ಖರ್ಜೂರ ಅಥವಾ ನಿಮ್ಮಿಷ್ಟದ ಯಾವುದಾದರೂ ಹಣ್ಣುಗಳಿಂದ ಅಲಂಕರಿಸಬಹುದು. ನಿಮ್ಮ ನಿತ್ಯದ ಪ್ರೊಟೀನ್ ಅಗತ್ಯವನ್ನು ಪೂರೈಸಿಕೊಳ್ಳಲು , ಈ ಸ್ಮೂದಿಗೆ ಒಂದು ಚಮಚ ಪ್ರೊಟೀನ್ ಪೌಡರ್ ಸೇರಿಸಿ.

5) ಜಾವ ಗ್ರೀನ್ ಸ್ಮೂದಿ
ಈ ಕೆನೆಭರಿತ ಸ್ಮೂದಿ ತುಂಬಾ ರುಚಿಕರವಾಗಿರುತ್ತದೆ. ಇದನ್ನು ಮಾಡುವುದು ಕೂಡ ಸುಲಭ. ಖಂಡಿತಾ , ಪ್ರಯತ್ನಿಸಿ.

ಇದನ್ನೂ ಓದಿ: Breakfast Recipe: ಬೆಳಗಿನ ತಿಂಡಿಗೆ ಸುಲಭವಾದ ಮತ್ತು ಆರೋಗ್ಯಕರವಾದ ಅಕ್ಕಿ ರೊಟ್ಟಿ ಮಾಡಿ ಸವಿಯಿರಿ

ಸಾಮಾಗ್ರಿ

 • 150 ಎಂ ಎಲ್ ಫ್ರೆಂಚ್ ಫ್ರೆಸ್ ಕಾಫಿ ( ಸ್ವಲ್ಪ ಸ್ಟ್ರಾಂಗ್)

 • ಅರ್ಧ ಅವಕಾಡೋ (ಸಿಪ್ಪೆ ತೆಗೆದು , ಮ್ಯಾಶ್ ಮಾಡಿರಬೇಕು)

 • 50 ಎಂ ಎಲ್ ಕಂಡೆನ್ಸ್‍ಡ್ ಮಿಲ್ಕ್

 • 10 ಎಂ ಎಲ್ ವೆನಿಲಾ ಸಿರಪ್

 • 5-6 ಐಸ್ ಕ್ಯೂಬ್‍ಗಳು


ಮಾಡುವ ವಿಧಾನ
ಅವಕಾಡೋ, ಕಾಫಿ, ಕಂಡೆನ್ಸ್‍ಡ್ ಮಿಲ್ಕ್, ವೆನಿಲ್ಲಾ ಸಿರಪ್ ಮತ್ತು ಐಸ್ ತುಂಡುಗಳನ್ನು ಬ್ಲೆಂಡರ್‍ನಲ್ಲಿ ಹಾಕಿ, ಅತ್ಯಂತ ನುಣ್ಣಗೆ ಆಗುವ ವರೆಗೆ ಬ್ಲೆಂಡ್ ಮಾಡಿ. ನಿಮ್ಮ ಜಾವಾ ಗ್ರೀನ್ ಸ್ಮೂದಿ ಸಿದ್ಧವಾಗುತ್ತದೆ. ನಿಮಗೆ ಸಿಹಿ ಕಡಿಮೆ ಬೇಕು ಎಂದಿದ್ದರೆ, ಕಂಡೆನ್ಸ್‍ಡ್ ಮಿಲ್ಕ್ ಬದಲಿಗೆ ಸೋಯಾ ಕ್ರೀಂ ಮತ್ತು ವೆನಿಲಾ ಸಿರಪ್ ಬದಲಿಗೆ ವೆನಿಲಾ ಎಕ್ಸ್ಟ್ರಾಕ್ಟ್ ಬಳಸಿ.
Published by:Ashwini Prabhu
First published: