ಬಿರು ಬೇಸಿಗೆಗೆ ತಂಪಾಗಿಸುವ ಆರೋಗ್ಯಕರ ಪಾನೀಯಗಳು

news18
Updated:May 24, 2018, 4:49 PM IST
ಬಿರು ಬೇಸಿಗೆಗೆ ತಂಪಾಗಿಸುವ ಆರೋಗ್ಯಕರ ಪಾನೀಯಗಳು
news18
Updated: May 24, 2018, 4:49 PM IST
ನ್ಯೂಸ್ 18 ಕನ್ನಡ

ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಲು ವಿಭಿನ್ನ ರೀತಿಯ ಪಾನಿಯಗಳಿಗೆ ಮೊರೆ ಹೋಗುತ್ತೇವೆ. ಇಂತಹ ಸಮಯದಲ್ಲಿ ನಾವು ಆಯ್ಕೆ ಮಾಡಿಕೊಳ್ಳುವ ಪಾನೀಯಗಳ ಬಗ್ಗೆ ಅರಿವಿರಬೇಕು. ಏಕೆಂದರೆ ಬಾಯಾರಿದಾಗ ಕೆಲ ಪಾನೀಯಗಳನ್ನು ಕುಡಿದರೆ ದೇಹದ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಬೇಸಿಗೆಯ ಬೇಗೆಯಿಂದ ದೇಹವನ್ನು ತಂಪಾಗಿಸಲು ಪಾಕಶಾಸ್ತ್ರ ಸಂಶೋಧಕಿ ಅಕಾಂಶಾ ಡೀನ್ ಕೆಲ ಪಾನೀಯಗಳನ್ನು ಸೂಚಿಸಿದ್ದಾರೆ.

* ಎಳನೀರು : ನೈಸರ್ಗಿಕವಾಗಿ ಸಿಗುವ ಎಳನೀರನ್ನು ಕುಡಿಯುವುದರಿಂದ ದಾಹವನ್ನು ನೀಗಿಸಿ, ದೇಹವನ್ನು ತಂಪಾಗಿಟ್ಟುಕೊಳ್ಳಬಹುದು. ಪ್ರತಿನಿತ್ಯ ಎಳನೀರು ಸೇವಿಸುವುದರಿಂದ ಆರೋಗ್ಯ ವೃದ್ಧಿಸುತ್ತದೆ. ಅಲ್ಲದೆ ಹಲವಾರು ರೋಗಗಳು ಹೋಗಲಾಡಿಸುವಲ್ಲಿ ಎಳನೀರು ಪ್ರಮುಖ ಪಾತ್ರ ವಹಿಸುತ್ತದೆ.

* ನಿಂಬೆ ಪಾನಕ : ನಿಂಬೆ ಹಣ್ಣಿನ ಪಾನಕವನ್ನು ವಿಶ್ವದ ಅತ್ಯಂತ ಜನಪ್ರಿಯ ಪಾನೀಯವೆಂದು ಕರೆಯಲಾಗುತ್ತದೆ. ಇದು ಬಾಯಾರಿಕೆಯನ್ನು ಹೋಗಲಾಡಿಸುವುದಲ್ಲದೆ, ಜೀರ್ಣಕ್ರಿಯೆ ಸುಧಾರಿಸಲು ಸಹಾಯ ಮಾಡುತ್ತದೆ. ನಿಂಬೆಯಲ್ಲಿ ಸಿ ವಿಟಮಿನ್ ಹೇರಳವಾಗಿದ್ದು, ಇದು ದೇಹವನ್ನು ಶುದ್ಧೀಕರಿಸಿ ಎದೆಯುರಿಯನ್ನು ಶಮನಗೊಳಿಸುತ್ತದೆ.

* ಲಸ್ಸಿ : ಸಾಂಪ್ರದಾಯಿಕ ಪಾನೀಯವಾದ ಲಸ್ಸಿ ಕುಡಿಯುವುದರಿಂದ ದೇಹವನ್ನು ತಂಪಾಗಿಡಬಹುದು. ಮೊಸರಿನಿಂದ ತಯಾರಿಸುವ ಲಸ್ಸಿಗೆ ಸಕ್ಕರೆ ಮತ್ತು ಇತರೆ ಫ್ಲೇವರ್ ಸೇರಿಸಿ ಕುಡಿಯಬಹುದು. ಲಸ್ಸಿಯಲ್ಲಿ ಅತ್ಯುತ್ತಮ ಜೀರ್ಣಕಾರಿ ಅಂಶಗಳಿದ್ದು ಇದು ದೇಹವನ್ನು ಆರೋಗ್ಯವಾಗಿಡಲು ಸಹಕಾರಿಯಾಗಿದೆ.

* ಕಬ್ಬಿನ ರಸ : ಕಬ್ಬಿನ ರಸ ಅಥವಾ ಕಬ್ಬಿನ ಹಾಲು ಬೇಸಿಗೆಯ ತಾಪಕ್ಕೆ ಹೇಳಿ ಮಾಡಿಸಿದ ಪಾನೀಯವಾಗಿದೆ. ಇದರಲ್ಲಿ ಆಂಟಿಆಕ್ಸಿಡಂಟ್ಸ್ ಅಧಿಕ ಪ್ರಮಾಣದಲ್ಲಿದ್ದು, ಅಲ್ಲದೆ ಯಕೃತಿಯ ಬಲವನ್ನು ಹೆಚ್ಚಿಸುವಲ್ಲಿಯೂ ಪ್ರಮುಖ ಪಾತ್ರವಹಿಸುತ್ತದೆ.

'ಕಬ್ಬಿನಲ್ಲಿ ನಮ್ಮ ದೇಹಕ್ಕೆ ಬೇಕಾಗಿರುವಂತಹ ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್​ಗಳು, ಖನಿಜಾಂಶಗಳು ಮತ್ತು ಆಂಟಿಆಕ್ಸಿಡಂಟ್ಸ್​​ಗಳು ಹೇರಳವಾಗಿದ್ದು, ಇದು ನಿರ್ಜಲೀಕರಣಕ್ಕೆ ಉತ್ತಮವಾಗಿದೆ' ಎಂದು ಜಸ್ಟ್ ಡಯಟ್​ ಸಂಸ್ಥಾಪಕಿ ಜಾಸ್ಲೀನ್ ಕೌರ್ ತಿಳಿಸಿದ್ದಾರೆ. ಅಲ್ಲದೆ ಕಬ್ಬಿನ ರಸದಿಂದ ಸಿಗುವ ಪ್ರಯೋಜನಗಳ ಕುರಿತಾದ ಕೆಲ ಮಾಹಿತಿಗಳನ್ನು ಅವರು ನೀಡಿದ್ದಾರೆ.
Loading...

* ಪ್ರತಿರೋಧಕ ಶಕ್ತಿ ಹೆಚ್ಚಿಸುತ್ತದೆ : ಕಬ್ಬಿನ ರಸದಲ್ಲಿ ಆಂಟಿಆಕ್ಸಿಡಂಟ್ಸ್ ಅಂಶಗಳಿದ್ದು ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ವೃದ್ಧಿಸುತ್ತದೆ. ಯಕೃತ್ ಮತ್ತು ಉಸಿರಾಟದ ತೊಂದರೆಯನ್ನು ಹೋಗಲಾಡಿಸುತ್ತದೆ. ಕಬ್ಬಿನ ಹಾಲನ್ನು ಕುಡಿಯುವುದರಿಂದ ಕ್ಯಾನ್ಸರ್​ನಂತಹ ರೋಗಗಳನ್ನು ದೂರ ಮಾಡಬಹುದು.

* ಸಮೃದ್ಧ ಆಂಟಿಆಕ್ಸಿಡಂಟ್ಸ್ : ದೇಹದಲ್ಲಿರುವ ಹಾನಿಕಾರಕ ಜೀವಾಣುಗಳನ್ನು ಮತ್ತು ಇತರೆ ಕೆಟ್ಟ ಅಂಶಗಳನ್ನು ಶುದ್ಧೀಕರಿಸುವಲ್ಲಿ ಕಬ್ಬಿನ ಹಾಲು ಮುಖ್ಯ ಪಾತ್ರವಹಿಸುತ್ತದೆ. ನೈಸರ್ಗಿಕ ಸಕ್ಕರೆ ಹೊಂದಿರುವ ಈ ಪಾನೀಯ ಚಯಾಪಚಯ ಕ್ರಿಯೆಯನ್ನು ಉತ್ತೇಜಿಸಿ, ದೇಹದ ತೂಕವನ್ನು ನಿಯಂತ್ರಿಸುತ್ತದೆ.

* ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ : ಕಬ್ಬಿನ ಹಾಲನ್ನು ಜೀರ್ಣಕ್ರಿಯೆಯ ಟಾನಿಕ್ ಎನ್ನಬಹುದು. ಮಲಬದ್ದತೆಯ ಸಮಸ್ಯೆಯನ್ನು ನಿರ್ನಾಮ ಮಾಡುವಲ್ಲಿ ಇದು ತುಂಬಾ ಉಪಕಾರಿಯಾಗಿದೆ. ದೇಹದಲ್ಲಿರುವ ಆಮ್ಲೀಯ ಪ್ರಮಾಣದಲ್ಲಿ ಸಮತೋಲನ ಕಾಪಾಡಲು ಕಬ್ಬಿನ ರಸ ಸಹಕಾರಿಯಾಗಿದೆ.

* ಬಾಯಿ ದುರ್ವಾಸನೆ ಹೋಗಲಾಡಿಸುತ್ತದೆ : ಉಸಿರಾಟದ ತೊಂದರೆ ಮತ್ತು ಬಾಯಿ ದುರ್ವಾಸನೆಯ ಸಮಸ್ಯೆಯಿದ್ದರೆ ಕಬ್ಬಿನ ರಸವನ್ನು ಕುಡಿಯುವುದರಿಂದ ಪರಿಹಾರ ಕಾಣಬಹುದು. ಇದರಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗಿದ್ದು ಇದು ಎಲುಬುಗಳನ್ನು ಮತ್ತು ಹಲ್ಲನ್ನು ಗಟ್ಟಿಗೊಳಿಸುತ್ತದೆ.
First published:May 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...