• Home
  • »
  • News
  • »
  • lifestyle
  • »
  • Coconut Oil: ಅಡುಗೆಗೆ ತೆಂಗಿನೆಣ್ಣೆ ಬಳಸಿದ್ರೆ ಕೊಲೆಸ್ಟ್ರಾಲ್ ಕಡಿಮೆಯಾಗುತ್ತೆ

Coconut Oil: ಅಡುಗೆಗೆ ತೆಂಗಿನೆಣ್ಣೆ ಬಳಸಿದ್ರೆ ಕೊಲೆಸ್ಟ್ರಾಲ್ ಕಡಿಮೆಯಾಗುತ್ತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಡುಗೆಗೆ ಎಣ್ಣೆ ಬಳಸುವಾಗ ಅದು ಆರೋಗ್ಯ ವೃದ್ಧಿಸುವಂತೆ ಇರಬೇಕು. ಜೊತೆಗೆ ಮನೆಯ ಸದಸ್ಯರ ತೂಕದ ಬಗ್ಗೆಯೂ ಕಾಳಜಿ ವಹಿಸಬೇಕಾಗುತ್ತದೆ. ಹಾಗಾಗಿ ಆರೋಗ್ಯಕರ ತೂಕ ಕಾಪಾಡಿಕೊಳ್ಳಲು ಸಹಾಯ ಮಾಡುವ ಯಾವ ಅಡುಗೆ ಎಣ್ಣೆ ಬಳಸಬೇಕು ಎಂಬ ಯೋಚನೆ ನಿಮಗಿದ್ದರೆ ತೆಂಗಿನ ಎಣ್ಣೆ ಬಳಸಿ ಅಂತಾರೆ ತಜ್ಞರು.

ಮುಂದೆ ಓದಿ ...
  • Share this:

    ಅಡುಗೆಗೆ (Cooking) ನೀವು ಆಲಿವ್ ಆಯಿಲ್ (Olive Oil), ಸಂಸ್ಕರಿಸಿದ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಕುಸುಬಿ, ಸಾಸಿವೆ, ಶೇಂಗಾ ಎಣ್ಣೆ ಬಳಕೆ ಮಾಡಿರಬಹುದು. ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳಲ್ಲಿ (Home) ತಮಗೆ ಬೇಕಾದ ರೀತಿಯ ಅಡುಗೆ ಎಣ್ಣೆ ಬಳಕೆ ಮಾಡುತ್ತಾರೆ. ಅಡುಗೆಯಲ್ಲಿ ಹೆಚ್ಚಿನ ಎಣ್ಣೆ ಬಳಕೆ ಮಾಡುವುದು ಅನಾರೋಗ್ಯಕ್ಕೆ (Unhealthy) ಕಾರಣವಾಗುತ್ತದೆ. ಜೊತೆಗೆ ಬೊಜ್ಜು ಸಮಸ್ಯೆ (Obesity Problem) ಹೆಚ್ಚು ಮಾಡುತ್ತದೆ. ಹಾಗಾಗಿ ನಾವು ಅಡುಗೆ ಎಣ್ಣೆಯನ್ನು ಆಯ್ಕೆ ಮಾಡುವಾಗ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಜೊತೆಗೆ ತೂಕ ಹೆಚ್ಚಿಸದಂತೆ ಎಣ್ಣೆ ಬಳಕೆ ಮಾಡಬೇಕಾಗುತ್ತದೆ. ಆರೋಗ್ಯ ಹೆಚ್ಚಿಸುವ ಮತ್ತು ಆರೋಗ್ಯ ವರ್ಧಕ ಎಣ್ಣೆ ಬಳಕೆ ಮಾಡುವುದು ತುಂಬಾ ಮುಖ್ಯ.


    ಆರೋಗ್ಯಕರ ಎಣ್ಣೆಯನ್ನೇ ಅಡುಗೆಗೆ ಬಳಸಿ


    ಅಡುಗೆಗೆ ಎಣ್ಣೆ ಬಳಸುವಾಗ ಅದು ಆರೋಗ್ಯ ವೃದ್ಧಿಸುವಂತೆ ಇರಬೇಕು. ಜೊತೆಗೆ ಮನೆಯ ಸದಸ್ಯರ ತೂಕದ ಬಗ್ಗೆಯೂ ಕಾಳಜಿ ವಹಿಸಬೇಕಾಗುತ್ತದೆ. ಹಾಗಾಗಿ ಆರೋಗ್ಯಕರ ತೂಕ ಕಾಪಾಡಿಕೊಳ್ಳಲು ಸಹಾಯ ಮಾಡುವ ಯಾವ ಅಡುಗೆ ಎಣ್ಣೆ ಬಳಸಬೇಕು ಎಂಬ ಯೋಚನೆ ನಿಮಗಿದ್ದರೆ ತೆಂಗಿನ ಎಣ್ಣೆ ಬಳಸಿ ಅಂತಾರೆ ತಜ್ಞರು.


    ತೆಂಗಿನ ಎಣ್ಣೆಯು ತೂಕ ಇಳಿಕೆಗೆ ಅತ್ಯುತ್ತಮ ಆಯ್ಕೆ ಆಗಿದೆ. ಏಕೆಂದರೆ ಇದು ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ವಿಟಮಿನ್ ಸಿ ಮತ್ತು ಆಂಟಿಮೈಕ್ರೊಬಿಯಲ್ ಮತ್ತು ಆಂಟಿಆಕ್ಸಿಡೆಂಟ್ ಗುಣಲಕ್ಷಣ ಸೇರಿದಂತೆ ಹಲವು ಅಗತ್ಯ ಪೋಷಕಾಂಶಗಳನ್ನು ಹೊಂದಿದೆ. ಇದು ನಿಮ್ಮ ಆಂತರಿಕ ಆರೋಗ್ಯ ಕಾಪಾಡಲು ತುಂಬಾ ಅತ್ಯಗತ್ಯ.




    ಹಾಗಾದ್ರೆ ತೆಂಗಿನ ಎಣ್ಣೆಯನ್ನು ಅಡುಗೆಯಲ್ಲಿ ಬಳಸಿದರೆ ಯಾವ ಆರೋಗ್ಯ ಸಮಸ್ಯೆ ಕಡಿಮೆ ಮಾಡಲು ಸಹಕಾರಿ ಎಂಬುದನ್ನು ಇಲ್ಲಿ ನೋಡೋಣ.


    ತೆಂಗಿನ ಎಣ್ಣೆ ಸೇವನೆ ರಕ್ತದ ಸಕ್ಕರೆ ನಿಯಂತ್ರಿಸುತ್ತದೆ


    ತೆಂಗಿನ ಎಣ್ಣೆಯನ್ನು ಅಡುಗೆಯಲ್ಲಿ ಬಳಸಿದ್ರೆ ಇದು ರಕ್ತದ ಸಕ್ಕರೆ ನಿಯಂತ್ರಿಸುವಲ್ಲಿ ಪ್ರಯೋಜನಕಾರಿ. ತೆಂಗಿನ ಎಣ್ಣೆಯಲ್ಲಿ ಕಂಡು ಬರುವ ಪೋಷಕಾಂಶಗಳು ಮಧುಮೇಹಿಗಳ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡುತ್ತದೆ.


    2009 ರಲ್ಲಿ ಅನಿಮಲ್ ಸ್ಟಡೀಸ್ನಲ್ಲಿ ಪ್ರಕಟವಾದ ಸಂಶೋಧನೆ ಹೇಳಿದ ಪ್ರಕಾರ, ತೆಂಗಿನ ಎಣ್ಣೆಯಲ್ಲಿರುವ ಸ್ಯಾಚುರೇಟೆಡ್ ಕೊಬ್ಬು ಇನ್ಸುಲಿನ್ ಹೆಚ್ಚಾಗುವಿಕೆ ತಡೆಯುತ್ತದೆ.


    ಮೆದುಳಿನ ಆರೋಗ್ಯಕ್ಕೆ ಪ್ರಯೋಜನಕಾರಿ


    ತೆಂಗಿನೆಣ್ಣೆ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯಕ್ಕೂ ಪ್ರಯೋಜನಕಾರಿ. ಉತ್ಕರ್ಷಣ ನಿರೋಧಕ ಗುಣಲಕ್ಷಣ ಹೊಂದಿದ್ದು, ಒತ್ತಡ ಕಡಿಮೆ ಮಾಡಲು ಸಹಕಾರಿ. ತೆಂಗಿನ ಎಣ್ಣೆಯ ಪೋಷಕಾಂಶಗಳು ಖಿನ್ನತೆ ಸಮಸ್ಯೆ ಹೊಡೆದೋಡಿಸುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ.


    ಆರೋಗ್ಯಕರ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ


    ತೆಂಗಿನ ಎಣ್ಣೆಯ ನಿಯಮಿತ ಸೇವನೆ ನಿಮ್ಮ ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ. ಸಂಯುಕ್ತ ಮಧ್ಯಮ ಸರಪಳಿಯ ಟ್ರೈಗ್ಲಿಸರೈಡ್‌ಗಳು ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುತ್ತವೆ. ತೆಂಗಿನ ಎಣ್ಣೆಯನ್ನು 8 ವಾರ ಸೇವಿಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ.


    ಯಕೃತ್ತಿನ ರೋಗ ತಡೆಯುತ್ತದೆ


    ಯಕೃತ್ತಿನ ಸಮಸ್ಯೆಗಳಿಗೆ ತೆಂಗಿನ ಎಣ್ಣೆ ಬಳಕೆ ಉತ್ತಮ ಆಯ್ಕೆ. ತೆಂಗಿನ ಎಣ್ಣೆ ಯಕೃತ್ತಿನ ಆರೋಗ್ಯ ಹೆಚ್ಚಿಸುತ್ತದೆ ಎಂದು ಸಂಶೋಧನೆಯೊಂದು ತಿಳಿಸಿದೆ. ಯಕೃತ್ತಿನ ಸಮಸ್ಯೆ ನಿವಾರಣೆಗೆ ವೈದ್ಯರ ಸಲಹೆ ಮೇರೆಗೆ ನಿಯಮಿತವಾಗಿ ಸೇವಿಸಿ.


    ಚರ್ಮ ಮತ್ತು ಕೂದಲಿನ ಆರೋಗ್ಯ ಕಾಪಾಡುತ್ತದೆ


    ತೆಂಗಿನ ಎಣ್ಣೆಯನ್ನು ದೀರ್ಘಕಾಲ ಮನೆಮದ್ದುಗಳಿಗೆ ಬಳಸುತ್ತಾರೆ. ವಿಟಮಿನ್ ಸಿ ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳು ಇದರಲ್ಲಿವೆ. ಚರ್ಮ ಮತ್ತು ಕೂದಲನ್ನು ಪೋಷಿಸುತ್ತದೆ.


    ಇದನ್ನೂ ಓದಿ: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕಪ್ಪು ಒಣ ದ್ರಾಕ್ಷಿ ಸೇವನೆ ಮಾಡಿದ್ರೆ ಮೂಳೆಗಳು ಗಟ್ಟಿಯಾಗುತ್ತೆ


    ತೂಕ ನಷ್ಟ


    ತೂಕ ನಷ್ಟಕ್ಕೆ ತೆಂಗಿನ ಎಣ್ಣೆ ಉತ್ತಮ ಆಯ್ಕೆ ಆಗಿದೆ. ತೆಂಗಿನ ಎಣ್ಣೆಯ ಸ್ಯಾಚುರೇಟೆಡ್ ಕೊಬ್ಬಿನ ಮಧ್ಯಮ ಸರಣಿ ಟ್ರೈಗ್ಲಿಸರೈಡ್‌ಗಳು ಹಸಿವನ್ನು ನಿಯಂತ್ರಿಸುತ್ತವೆ. ಕಡಿಮೆ ಕ್ಯಾಲೊರಿ ಸೇವನೆಗೆ ಸಹಕಾರಿ.

    Published by:renukadariyannavar
    First published: