Hair Care Tips: ತೆಂಗಿನ ಎಣ್ಣೆಯಲ್ಲಿರುವ ಪೋಷಕಾಂಶಗಳು ಹೇಗೆ ಕೂದಲ ಆರೋಗ್ಯಕ್ಕೆ ಪ್ರಯೋಜನಕಾರಿ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆಯುರ್ವೇದದಲ್ಲಿ ತೆಂಗಿನೆಣ್ಣೆಯಿಂದ ತಲೆಹೊಟ್ಟು ಮತ್ತು ಕೂದಲಿಗೆ ಸಂಪೂರ್ಣ ಪೋಷಣೆಯನ್ನು ನೀಡಲು ಚಂಪಿ ಮಾಡುತ್ತಾರೆ. ತೆಂಗಿನೆಣ್ಣೆಯಿಂದ ಹೇರ್ ಮಾಸ್ಕ್ ಅನ್ನು ಅನ್ವಯಿಸಲು ಶಿಫಾರಸು ಮಾಡಲಾಗುತ್ತದೆ. ಹಾಗಾದರೆ ತೆಂಗಿನೆಣ್ಣೆಯಿಂದ ಹೇರ್ ಮಾಸ್ಕ್ ಅನ್ನು ಹೇಗೆ ತಯಾರಿಸುತ್ತಾರೆ ಮತ್ತು ಅದು ಕೂದಲಿಗೆ ಹೇಗೆ ಪ್ರಯೋಜನವನ್ನು ನೀಡುತ್ತದೆ ಎಂದು ತಿಳಿಯೋಣ.

ಮುಂದೆ ಓದಿ ...
  • Share this:

    ತೆಂಗಿನ ಎಣ್ಣೆ (Coconut Oil) ಇಡೀ ದೇಹಕ್ಕೆ (Body) ಪ್ರಯೋಜನಕಾರಿ (Benefits) ಆಗಿದೆ. ತೆಂಗಿನ ಎಣ್ಣೆ ಕೂದಲು (Hair) ಹಾಗೂ ತ್ವಚೆಯ ಆರೋಗ್ಯಕ್ಕೆ (Skin Health) ಸಹ ತುಂಬಾ ಲಾಭಕಾರಿ ಆಗಿದೆ. ತೆಂಗಿನ ಎಣ್ಣೆಯಿಂದ ದೇಹದ ನೋವು ಪೀಡಿತ ಭಾಗಗಳಿಗೆ ಮಸಾಜ್ ಮಾಡುವುದು ಸಾಕಷ್ಟು ವಿಶ್ರಾಂತಿ ನೀಡುತ್ತದೆ. ಜೊತೆಗೆ ದೇಹವನ್ನು ನಿರ್ವಿಷಗೊಳಿಸಲು ತೆಂಗಿನ ಎಣ್ಣೆ ಬಳಕೆ ಮಾಡಲಾಗುತ್ತದೆ. ನೆತ್ತಿಯ ಮೇಲೆ ತೆಂಗಿನ ಎಣ್ಣೆ ಮಸಾಜ್ ಅತ್ಯಂತ ಪ್ರಾಚೀನ ನೈಸರ್ಗಿಕ ವಿಧಾನಗಳಲ್ಲಿ ಒಂದಾಗಿದೆ. ನೆತ್ತಿ ಮತ್ತು ಕೂದಲಿನ ಮೇಲೆ ಸಾಮಾನ್ಯ ತೆಂಗಿನ ಎಣ್ಣೆಯಿಂದ ತಲೆಗೆ ಬಿಸಿ ನೀರಿನ ಸ್ನಾನ ಮಾಡಲು ಹೇಳಲಾಗುತ್ತದೆ.


    ಆಯುರ್ವೇದದಲ್ಲಿ ತೆಂಗಿನೆಣ್ಣೆಯಿಂದ ತಲೆಹೊಟ್ಟು ಮತ್ತು ಕೂದಲಿಗೆ ಸಂಪೂರ್ಣ ಪೋಷಣೆಯನ್ನು ನೀಡಲು ಚಂಪಿ ಮಾಡುತ್ತಾರೆ. ತೆಂಗಿನೆಣ್ಣೆಯಿಂದ ಚಂಪಿ ಜೊತೆಗೆ ತೆಂಗಿನ ಎಣ್ಣೆ DIY ಹೇರ್ ಮಾಸ್ಕ್ ಅನ್ನು ಅನ್ವಯಿಸಲು ಶಿಫಾರಸು ಮಾಡಲಾಗುತ್ತದೆ.


    ಹಾಗಾದರೆ ತೆಂಗಿನೆಣ್ಣೆಯಿಂದ ಹೇರ್ ಮಾಸ್ಕ್ ಅನ್ನು ಹೇಗೆ ತಯಾರಿಸುತ್ತಾರೆ ಮತ್ತು ಅದು ಕೂದಲಿಗೆ ಹೇಗೆ ಪ್ರಯೋಜನವನ್ನು ನೀಡುತ್ತದೆ ಎಂಬುದನ್ನು ತಿಳಿಯುವುದು ಮುಖ್ಯ.


    ಇದನ್ನೂ ಓದಿ: ನಿಂಬೆ ಅಷ್ಟೇ ಅಲ್ಲ ಅದರ ಎಲೆಗಳೂ ಸಹ ಹಲವು ಆರೋಗ್ಯ ಪ್ರಯೋಜನ ನೀಡುತ್ತವೆ! ಹೇಗೆ ಎಂದು ನೋಡಿ


    ತೆಂಗಿನ ಎಣ್ಣೆಯಲ್ಲಿರುವ ಪೋಷಕಾಂಶಗಳು ಯಾವವು?


    ತೆಂಗಿನ ಎಣ್ಣೆಯು ಉರಿಯೂತ ಗುಣಲಕ್ಷಣ ಹೊಂದಿದೆ. ಇದರಲ್ಲಿರುವ ಲಾರಿಕ್ ಆಸಿಡ್ ಕೂದಲನ್ನು ಮೃದುವಾಗಿಸುತ್ತದೆ ಮತ್ತು ಕೂದಲು ಉದುರದಂತೆ ತಡೆಯುತ್ತದೆ. ಜೊತೆಗೆ ವಿಟಮಿನ್ಗಳು ಮತ್ತು ಕೊಬ್ಬಿನಾಮ್ಲಗಳು ಇದರಲ್ಲಿ ಇವೆ. ಇದು ನೆತ್ತಿಯ ಮೇಲೆ ಮೇದೋಗ್ರಂಥಿಗಳ ಶೇಖರಣೆ ತೊಡೆದು ಹಾಕುತ್ತದೆ.


    ತೆಂಗಿನ ಎಣ್ಣೆಯಿಂದ ನಿಮ್ಮ ಕೂದಲನ್ನು ನಿಯಮಿತವಾಗಿ ಮಸಾಜ್ ಮಾಡಿದರೆ, ಅದರಲ್ಲಿರುವ ಸ್ಯಾಚುರೇಟೆಡ್ ಕೊಬ್ಬು ನಿಮ್ಮ ಕೂದಲನ್ನು ಎಂದಿಗೂ ಹಾನಿ ಮಾಡಲ್ಲ.


    ತೆಂಗಿನ ಎಣ್ಣೆ ಹೇರ್ ಮಾಸ್ಕ್ ಪ್ರಯೋಜನಗಳು


    ತೆಂಗಿನ ಎಣ್ಣೆಯು ಕೂದಲನ್ನು ತೇವಗೊಳಿಸಿ ಪೋಷಿಸುತ್ತದೆ. ಇದು ಪ್ರೋಟೀನ್ ನಷ್ಟ ತಡೆಯುತ್ತದೆ. ನಿಮ್ಮ ಕೂದಲು ಶುಷ್ಕತೆ ಮತ್ತು ಸೀಳುವಿಕೆ ತಡೆಯುತ್ತದೆ. ತೆಂಗಿನ ಎಣ್ಣೆಯಲ್ಲಿರುವ ಪೋಷಕಾಂಶಗಳು ಈ ಎಲ್ಲಾ ಸಮಸ್ಯೆಗಳಿಂದ ನಿಮಗೆ ಪರಿಹಾರ ನೀಡುತ್ತದೆ. ಇವು ನಿಮ್ಮ ಕೂದಲು ಹೊಳೆಯುವಂತೆ ಮಾಡುತ್ತದೆ.


    ತೆಂಗಿನ ಎಣ್ಣೆಯು ಹೇರ್ ಮಾಸ್ಕ್‌ ಇತರ ಪದಾರ್ಥಗಳ ಜೊತೆ ಕೂಡಿದಾಗ ನಿಮ್ಮ ಕೂದಲಿಗೆ ಎರಡು ಪಟ್ಟು ಪ್ರಯೋಜನಕಾರಿ ಆಗುತ್ತದೆ.


    ಆವಕಾಡೊ ಮತ್ತು ತೆಂಗಿನ ಎಣ್ಣೆ ಹೇರ್ ಮಾಸ್ಕ್


    ಆವಕಾಡೊ ವಿಟಮಿನ್ ಬಿ ಕಾಂಪ್ಲೆಕ್ಸ್ ಬಯೋಟಿನ್ ನಲ್ಲಿ ಸಮೃದ್ಧವಾಗಿದೆ. ಇದು ಕೂದಲನ್ನು ಆರೋಗ್ಯವಾಗಿಡುತ್ತದೆ. ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಕೂದಲನ್ನು ಮೃದುವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ.


    ಒಂದು ಮಾಗಿದ ಆವಕಾಡೊ ಮತ್ತು ತೆಂಗಿನ ಎಣ್ಣೆ ತೆಗೆದುಕೊಳ್ಳಿ. ಮಾಗಿದ ಆವಕಾಡೊವನ್ನು ಮ್ಯಾಶ್ ಮಾಡಿ. ತೆಂಗಿನ ಎಣ್ಣೆಯೊಂದಿಗೆ ಮಿಶ್ರಣ ಮಾಡಿ. ಕೂದಲನ್ನು ಲಘುವಾಗಿ ತೇವಗೊಳಿಸಿ. ಈ ಮಾಸ್ಕ್ ಅನ್ನು ಕೂದಲಿಗೆ ಹಚ್ಚಿರಿ. ಒಂದು ಗಂಟೆಯ ನಂತರ ಕೂದಲನ್ನು ಶಾಂಪೂವಿನಿಂದ ತೊಳೆಯಿರಿ.


    ಜೇನುತುಪ್ಪ ಮತ್ತು ತೆಂಗಿನ ಎಣ್ಣೆ ಹೇರ್ ಮಾಸ್ಕ್


    ಜೇನುತುಪ್ಪವು ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್ ಗುಣ ಹೊಂದಿದೆ. ಇದು ಕೂದಲಿನ ಸಮಸ್ಯೆ ನಿವಾರಿಸುತ್ತದೆ. ಒಂದು ಚಮಚ ಜೇನುತುಪ್ಪ, ತೆಂಗಿನ ಎಣ್ಣೆ ತೆಗೆದುಕೊಳ್ಳಿ. ಚೆನ್ನಾಗಿ ಮಿಶ್ರಣ ಮಾಡಿ. ಕೂದಲಿನ ಮೇಲೆ ನೀರನ್ನು ಸಿಂಪಡಿಸಿ ತೇವಗೊಳಿಸಿ.


    ಮಾಸ್ಕ್ ನ್ನು ನೆತ್ತಿ ಮತ್ತು ಕೂದಲಿಗೆ ನಿಧಾನವಾಗಿ ಅನ್ವಯಿಸಿ. 40 ನಿಮಿಷ ನಂತರ ಶಾಂಪೂವಿನಿಂದ ಕೂದಲು ತೊಳೆಯಿರಿ.


    ಇದನ್ನೂ ಓದಿ: ಗರ್ಭಧಾರಣೆಯ ನಂತರ ಹೊಟ್ಟೆ ಕೊಬ್ಬನ್ನು ಕಡಿಮೆ ಮಾಡುವುದು ಹೇಗೆ?


    ಆಪಲ್ ಸೈಡರ್ ವಿನೆಗರ್ ಮತ್ತು ತೆಂಗಿನ ಎಣ್ಣೆ


    ಹುದುಗಿಸಿದ ಆಪಲ್ ಸೈಡರ್ ವಿನೆಗರ್ ಪೋಷಕಾಂಶಗಳು ಕೂದಲಿಗೆ ಪ್ರಯೋಜನಕಾರಿ. ಎರಡು ಚಮಚ ತೆಂಗಿನ ಎಣ್ಣೆ, ಒಂದು ಚಮಚ ಆಪಲ್ ಸೈಡರ್ ವಿನೆಗರ್ ತೆಗೆದುಕೊಂಡು, ಮಿಶ್ರಣ ಮಾಡಿ. ಇದನ್ನು ಕೂದಲು ಮತ್ತು ನೆತ್ತಿಯ ಮೇಲೆ ಅನ್ವಯಿಸಿ. ಅರ್ಧ ಘಂಟೆಯ ನಂತರ ಕೂದಲನ್ನು ತೊಳೆಯಿರಿ.

    Published by:renukadariyannavar
    First published: