• Home
  • »
  • News
  • »
  • lifestyle
  • »
  • Weight Loss: ತೂಕ ಇಳಿಕೆಗೆ ತೆಂಗಿನ ಎಣ್ಣೆ ಬಳಕೆ ಟ್ರೆಂಡಿಂಗ್, ಕೊಬ್ಬು ಹೇಗೆ ಕರಗಿಸುತ್ತೆ?  

Weight Loss: ತೂಕ ಇಳಿಕೆಗೆ ತೆಂಗಿನ ಎಣ್ಣೆ ಬಳಕೆ ಟ್ರೆಂಡಿಂಗ್, ಕೊಬ್ಬು ಹೇಗೆ ಕರಗಿಸುತ್ತೆ?  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತೆಂಗಿನ ಎಣ್ಣೆಯು ತೂಕ ನಷ್ಟಕ್ಕೆ ಪ್ರಯೋಜನಕಾರಿ ಆಗಿದೆ. ತೆಂಗಿನ ಎಣ್ಣೆಯಲ್ಲಿ ಲಾರಿಕ್ ಆಮ್ಲವು ನೈಸರ್ಗಿಕವಾಗಿದೆ. ದೇಹದಲ್ಲಿ ಕೊಬ್ಬನ್ನು ಸಂಗ್ರಹಿಸುವ ಬದಲು ಲಾರಿಕ್ ಆಮ್ಲವು ಯಕೃತ್ತಿನ ಮೂಲಕ ಹಾದು ಹೋಗುತ್ತದೆ. ಮತ್ತು ಶಕ್ತಿಯಾಗಿ ಬದಲಾಗುತ್ತದೆ.

  • Share this:

    ಕೂದಲಿನ ಆರೋಗ್ಯವನ್ನು (Hair Care) ಕಾಪಾಡಲು ಸಾಮಾನ್ಯವಾಗಿ ತೆಂಗಿನ ಎಣ್ಣೆ (Coconut Oil) ಬಳಕೆ ಮಾಡಲಾಗುತ್ತದೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ತೆಂಗಿನ ಎಣ್ಣೆ ಸಖತ್ ಟ್ರೆಂಡ್ (Trend) ನಲ್ಲಿದೆ. ಕೊಬ್ಬರಿ ಎಣ್ಣೆಯನ್ನು ಅಡುಗೆಯಲ್ಲಿ ಬಳಕೆ ಮಾಡೋದು ಸಹ ಗೊತ್ತಿರುವ ವಿಚಾರ. ಸದ್ಯ ತೂಕ ಇಳಿಕೆಗೆ (Weight Loss) ತೆಂಗಿನ ಎಣ್ಣೆ ಬಳಕೆ ಮಾಡಲಾಗುತ್ತಿರುವ ವಿಚಾರ ಟ್ರೆಂಡಿಂಗ್ ನಲ್ಲಿದೆ. ವಿಶೇಷವಾಗಿ ತೂಕ ಇಳಿಸುವ ಜನರು ಇದನ್ನು ತಮ್ಮ ಆಹಾರದಲ್ಲಿ ಸೇರಿಸುತ್ತಾರೆ ಎಂದು ಹೇಳಲಾಗಿದೆ. ತೆಂಗಿನ ಎಣ್ಣೆ ಅನೇಕ ಇತರ ಆರೋಗ್ಯ ಸಮಸ್ಯೆಗಳಿಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಜೊತೆಗೆ ಸಾಮಾನ್ಯವಾಗಿ ಜನರು ಹೃದಯದ ಆರೋಗ್ಯ ಕಾಳಜಿಗೆ ಬಳಕೆ ಮಾಡುತ್ತಾರೆ.


    ತೆಂಗಿನ ಎಣ್ಣೆ ತೂಕ ಇಳಿಕೆಗೆ ಮತ್ತು ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ


    ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ತೆಂಗಿನ ಎಣ್ಣೆ


    ತೆಂಗಿನ ಎಣ್ಣೆಯು ತೂಕ ನಷ್ಟಕ್ಕೆ ಪ್ರಯೋಜನಕಾರಿ ಆಗಿದೆ. ತೆಂಗಿನ ಎಣ್ಣೆಯಲ್ಲಿ ಲಾರಿಕ್ ಆಮ್ಲವು ನೈಸರ್ಗಿಕವಾಗಿದೆ. ದೇಹದಲ್ಲಿ ಕೊಬ್ಬನ್ನು ಸಂಗ್ರಹಿಸುವ ಬದಲು ಲಾರಿಕ್ ಆಮ್ಲವು ಯಕೃತ್ತಿನ ಮೂಲಕ ಹಾದು ಹೋಗುತ್ತದೆ. ಮತ್ತು ಶಕ್ತಿಯಾಗಿ ಬದಲಾಗುತ್ತದೆ.


    ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನಗೊಳಿಸಲು ಸಹಕಾರಿ


    ದೇಹದಲ್ಲಿ ಸರಿಯಾದ ಪ್ರಮಾಣದ ಎಚ್‌ ಡಿಎಲ್ ಕೊಲೆಸ್ಟ್ರಾಲ್ ಇರುವುದು ಅವಶ್ಯಕ. ತೆಂಗಿನ ಎಣ್ಣೆಯ ಸೇವನೆಯು ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಮಾಡುತ್ತದೆ. ಮತ್ತು ಉತ್ತಮ ಕೊಲೆಸ್ಟ್ರಾಲ್ ಪ್ರಮಾಣ ಕಾಪಾಡಲು ಸಹಾಯ ಮಾಡುತ್ತದೆ.




    ಹೃದಯದ ಆರೋಗ್ಯಕ್ಕೆ ತೆಂಗಿನ ಎಣ್ಣೆ ಪರಿಣಾಮ


    ನ್ಯೂಟ್ರಿಫೈ ನಿರ್ದೇಶಕಿ ಪೂನಂ ದುನೇಜಾ ಪ್ರಕಾರ, ತೆಂಗಿನ ಎಣ್ಣೆಯು ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿದೆ. ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಇದು ಮಧ್ಯಮ ಸರಣಿ ಟ್ರೈಗ್ಲಿಸರೈಡ್‌ಗಳನ್ನು ಒಳಗೊಂಡಿದೆ. ಹೆಚ್ಚಿನ ಸಾಂದ್ರತೆಯ ಲಿಪೊಪ್ರೋಟೀನ್ ಹೆಚ್ಚಿಸುತ್ತದೆ. ಮತ್ತು ಕಡಿಮೆ ಸಾಂದ್ರತೆಯ ಕಡಿಮೆ ಮಾಡುತ್ತದೆ. ಇದು ದೀರ್ಘ ಸರಪಳಿ ಟ್ರೈಗ್ಲಿಸರೈಡ್‌ಗಳನ್ನು ಒಳಗೊಂಡಿದೆ.


    ಕೊಬ್ಬು ಮತ್ತು ತೂಕ ನಷ್ಟಕ್ಕೆ ಸಹಕಾರಿ


    ವರ್ಜಿನ್ ಕೊಬ್ಬರಿ ಎಣ್ಣೆ ಕೊಬ್ಬು ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಈಗಾಗಲೇ ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿರುವ ಜನರು ತೆಂಗಿನ ಎಣ್ಣೆ ಬದಲಿಗೆ ಆಲಿವ್ ಎಣ್ಣೆ, ಕಡಲೆಕಾಯಿ ಎಣ್ಣೆ ಅಥವಾ ಎಳ್ಳಿನ ಎಣ್ಣೆ ಬಳಸಲು ಸಲಹೆ ನೀಡಲಾಗುತ್ತದೆ. ಏಕೆಂದರೆ ಇವೆಲ್ಲವೂ ಒಮೆಗಾ 3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿವೆ. ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ತೆಂಗಿನ ಎಣ್ಣೆ ಆರೋಗ್ಯಕ್ಕೆ ಪ್ರಯೋಜನಕಾರಿ


    ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ


    ತೆಂಗಿನ ಎಣ್ಣೆಯನ್ನು ಅನೇಕ ರೀತಿಯ ಸೌಂದರ್ಯವರ್ಧಕ ಉತ್ಪನ್ನಗಳ ತಯಾರಿಕೆ ಮತ್ತು ಆರೈಕೆಗೆ ಬಳಸುತ್ತಾರೆ. ಇದರಲ್ಲಿ ಅನೇಕ ಪೋಷಕಾಂಶಗಳಿವೆ. ಇದು ಕೂದಲು, ಚರ್ಮ, ಉಗುರು ಮತ್ತು ಹಲ್ಲುಗಳ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಶುಷ್ಕ ಮತ್ತು ಮಂದ ಚರ್ಮವನ್ನು ತೇವಗೊಳಿಸಲು ಚಳಿಗಾಲದಲ್ಲಿ ಬಳಸಲಾಗುತ್ತದೆ.


    ಇದನ್ನೂ ಓದಿ: ನಿತ್ಯ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸಿ: ಆರೋಗ್ಯಕರ ಪ್ರಯೋಜನಗಳನ್ನು ಪಡೆಯಿರಿ..!


    ಬಾಯಿಯ ಆರೋಗ್ಯ ಕಾಪಾಡಲು ತೆಂಗಿನ ಎಣ್ಣೆ ಸಹಕಾರಿ


    ಆಯಿಲ್ ಪುಲ್ಲಿಂಗ್ ಬಗ್ಗೆ ನೀವೆಲ್ಲರೂ ಕೇಳಿರಬಹುದು. ಹೆಚ್ಚಿನ ಜನರು ಈ ಆಯಿಲ್ ಪುಲ್ಲಿಂಗ್ ಗೆ ತೆಂಗಿನ ಎಣ್ಣೆ ಬಳಸುತ್ತಾರೆ. ಪಬ್ಮೆಡ್ ಸೆಂಟ್ರಲ್ ಪ್ರಕಾರ, ತೆಂಗಿನ ಎಣ್ಣೆಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್ ಗುಣಲಕ್ಷಣಗಳು ಬಾಯಿಯ ಆರೋಗ್ಯಕ್ಕೆ ಹಾನಿ ಮಾಡುವ ಹಾನಿಕಾರಕ ಬ್ಯಾಕ್ಟೀರಿಯಾದಿಂದ ರಕ್ಷಿಸುತ್ತವೆ. ಇದು ಬಾಯಿಯ ದುರ್ವಾಸನೆ ಕಡಿಮೆ ಮಾಡುತ್ತದೆ.

    Published by:renukadariyannavar
    First published: