• Home
  • »
  • News
  • »
  • lifestyle
  • »
  • Coconut Milk: ದಪ್ಪ ಮತ್ತು ಉದ್ದ ಕೂದಲಿಗಾಗಿ ಹಂಬಲಿಸುತ್ತಿದ್ದೀರಾ? ಹಾಗಿದ್ರೆ ತೆಂಗಿನ ಹಾಲನ್ನು ಬಳಸಿ

Coconut Milk: ದಪ್ಪ ಮತ್ತು ಉದ್ದ ಕೂದಲಿಗಾಗಿ ಹಂಬಲಿಸುತ್ತಿದ್ದೀರಾ? ಹಾಗಿದ್ರೆ ತೆಂಗಿನ ಹಾಲನ್ನು ಬಳಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತಮ್ಮ ಕೂದಲು ಯಾವಾಗಲೂ ಉದ್ದ ದಪ್ಪ ಮತ್ತು ರೇಷ್ಮೆಯಂತಿರಬೇಕು ಎಂದು ಜನರು ಬಯಸುತ್ತಾರೆ. ಕೇವಲ ಉದ್ದ ಮತ್ತು ದಪ್ಪ ಕೂದಲು ಇರುವ ಬಯಕೆ ಇದ್ದರಷ್ಟೇ ಸಾಲದು ಅದಕ್ಕೆ ಕಾಳಜಿ ವಹಿಸುವ ಜವಾಬ್ದಾರಿ ಕೂಡ ಇರುತ್ತದೆ. ಹೀಗಾಗಿ ಕೂದಲ ರಕ್ಷಣೆಯ ವಿಷಯದಲ್ಲಿ ತೆಂಗಿನ ಹಾಲು ಅದ್ಭುತ ಪರಿಹಾರ ನೀಡುತ್ತದೆ.

ಮುಂದೆ ಓದಿ ...
  • Share this:

    ದಪ್ಪ, ಮೃದು ಮತ್ತು ಕಪ್ಪು ರೇಷ್ಮೆಯಂತಹ ಕೂದಲು (Silky Hair) ಇರಬೇಕು. ಉದ್ದ ಜಡೆ ಹಾಕ್ಬೇಕು, ವಿಭಿನ್ನ ರೀತಿಯ ಹೇರ್ ಸ್ಟೈಲ್ (Hair Style) ಮಾಡಬೇಕು. ದಪ್ಪ ಕೂದಲು ಸೌಂದರ್ಯದ (Beauty) ಪ್ರತೀಕ ಎಂದು ಹೇಳಲಾಗುತ್ತದೆ. ಎಲ್ಲರೂ ಅಂದವಾದ ಮತ್ತು ಹೊಳಪುಳ್ಳ, ಸಿಲ್ಕಿ ಕೂದಲು ಹೊಂದುವ ಆಸೆ ಹೊಂದಿರುತ್ತಾರೆ. ಅದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ಹಲವು ರೀತಿಯ ಕೂದಲು ಉತ್ಪನ್ನಗಳಿಗೆ (Hair Products) ಮಾರು ಹೋಗಿ ಅನ್ವಯಿಸಿ, ಕೂದಲು ಬರುತ್ತಾ ಅಂತಾ ಕಾಯುತ್ತಾರೆ. ಅದಾಗ್ಯೂ ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವ ಹಾಗೂ ಡ್ಯಾಂಡ್ರಫ್ ಸಮಸ್ಯೆ ಹೆಚ್ಚುತ್ತಿದೆ. ಬಿಳಿ ಕೂದಲಿನ ಸಮಸ್ಯೆ ಯಂಗ್ ಏಜ್ ನಲ್ಲಿಯೇ ಉಂಟಾಗುತ್ತಿರುವುದು ಕಳವಳ ಹೆಚ್ಚಿಸಿದೆ.


    ಇಂದು ನಾವು ತೆಂಗಿನ ಹಾಲನ್ನು ಕೂದಲಿಗೆ ಹೇಗೆ ಬಳಸುವುದು ಮತ್ತು ಕೂದಲಿಗೆ ಅದರಿಂದ ಸಿಗುವ ಪ್ರಯೋಜನಗಳು ಯಾವವು ಎಂಬ ಬಗ್ಗೆ ಇಲ್ಲಿ ತಿಳಿಯೋಣ.


    ತೆಂಗಿನ ಹಾಲು ಕೂದಲಿಗೆ ಹೇಗೆ ಪ್ರಯೋಜನಕಾರಿ?


    ಒಣ ತೆಂಗಿನಕಾಯಿಯ ಬಿಳಿ ಭಾಗದಿಂದ ತೆಂಗಿನ ಹಾಲನ್ನು ಹೊರ ತೆಗೆದು ಅದನ್ನು ಕೂದಲಿಗೆ ಅನ್ವಯಿಸಬೇಕು. ಇದರಲ್ಲಿರುವ ಕೊಬ್ಬು ಮತ್ತು ಮಾಯಿಶ್ಚರೈಸಿಂಗ್ ಅಮಶವು ಚೆನ್ನಾಗಿ ಕಾರ್ಯ ನಿರ್ವಹಿಸುತ್ತದೆ.


    ಇದನ್ನೂ ಓದಿ: ಸಸ್ಯಾಹಾರಿಗಳಿಗೆ ಪ್ರೋಟೀನ್ ಕೊರತೆ ಕಾಡುತ್ತದೆ ಎಂಬ ಯೋಚನೆಯೇ? ಈ ಪದಾರ್ಥಗಳಲ್ಲಿದೆ ಸಮೃದ್ಧ ಪೋಷಕಾಂಶ!


    ಮತ್ತು ನಿಮ್ಮ ಕೂದಲನ್ನು ಮೃದುವಾಗಿಸುತ್ತದೆ ಮತ್ತು ಟ್ಯಾಂಗ್ಲಿಂಗ್ ಸಮಸ್ಯೆ ತೆಗೆದು ಹಾಕುತ್ತದೆ. ಮುಖದ ಕೂದಲಿನ ಸಮಸ್ಯೆ ತೊಡೆದು ಹಾಕಲು ಇದು ಸಹಾಯಕವಾಗಿದೆ. ಕೂದಲಿನ ಒಟ್ಟಾರೆ ಆರೋಗ್ಯಕ್ಕೆ ತೆಂಗಿನ ಹಾಲು ತುಂಬಾ ಮುಖ್ಯವಾಗಿದೆ.


    ತೆಂಗಿನ ಹಾಲು ಕೂದಲಿನ ಬೆಳವಣಿಗೆಯನ್ನು ವೇಗಗೊಳಿಸುತ್ತದೆ


    ಕೂದಲಿಗೆ ತೆಂಗಿನ ಹಾಲಿನಿಂದ ಮಸಾಜ್ ಮಾಡಬಹುದು. ಮತ್ತು ಕೂದಲನ್ನು ತೊಳೆಯಬಹುದು. ನೀರು ಮತ್ತು ಎಣ್ಣೆಯನ್ನು ಇದು ಒಳಗೊಂಡಿದೆ. ತೆಂಗಿನ ಹಾಲು ನಿಮ್ಮ ಕೂದಲು ಮತ್ತು ನೆತ್ತಿಯ ಆರೋಗ್ಯ ಕಾಪಾಡುತ್ತದೆ.


    ಮತ್ತು ಅವುಗಳ ಬೆಳವಣಿಗೆ ಉತ್ತೇಜಿಸಲು ಸಹಾಯ ಮಾಡುತ್ತದೆ. ವಿಟಮಿನ್‌, ಪ್ರೋಟೀನ್‌, ಸತು ಮತ್ತು ಕಬ್ಬಿಣದಂಶಗಳಿಂದ ತೆಂಗಿನ ಹಾಲು ಸಮೃದ್ಧವಾಗಿದೆ. ಇದನ್ನು ಅನೇಕ ರೀತಿಯ ಶಾಂಪೂ ಮತ್ತು ಸೋಪ್ ತಯಾರಿಕೆಯಲ್ಲಿ ಬಳಸುತ್ತಾರೆ.


    ಕೂದಲಿಗೆ ತೆಂಗಿನ ಹಾಲನ್ನು ಹೇಗೆ ಬಳಸುವುದು?


    ಕೂದಲು ಬೆಳವಣಿಗೆಗೆ ತೆಂಗಿನ ಹಾಲು ಮಾಸ್ಕ್


    ಬೇಕಾಗುವ ಸಾಮಾಗ್ರಿಗಳು: ಕಾಲು ಕಪ್ ತೆಂಗಿನ ಹಾಲು


    ಬಳಕೆಯ ವಿಧಾನ: ತೆಂಗಿನ ಹಾಲನ್ನು ಲಘುವಾಗಿ ಬೆಚ್ಚಗಾಗಿಸಿ ಮತ್ತು ಸುಮಾರು 15 ನಿಮಿಷ ಕೂದಲಿಗೆ ಮತ್ತು ನೆತ್ತಿಗೆ ಮಸಾಜ್ ಮಾಡಿ. ನಂತರ ಕೂದಲನ್ನು ಶವರ್ ಕ್ಯಾಪ್ನಿಂದ ಮುಚ್ಚಿ. ಒಂದು ಗಂಟೆಯ ನಂತರ ಶಾಂಪೂವಿನಿಂದ ಕೂದಲು ತೊಳೆಯಿರಿ.


    ತೆಂಗಿನ ಹಾಲು ಮತ್ತು ಮೊಸರು ಮಾಸ್ಕ್


    ಬೇಕಾಗುವ ಸಾಮಾಗ್ರಿಗಳು: ಐದು ಚಮಚ ತೆಂಗಿನ ಹಾಲು, ಒಂದು ಚಮಚ ಮೊಸರು, ನಾಲ್ಕನೇ ಒಂದು ಚಮಚ ಕರ್ಪೂರ ಪುಡಿ.


    ಬಳಕೆಯ ವಿಧಾನ: ಎಲ್ಲಾ ಪದಾರ್ಥಗಳನ್ನು ಬಟ್ಟಲಿನಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣವನ್ನು ಕೂದಲಿನ ಬುಡದಿಂದ ತುದಿಯವರೆಗೆ ಚೆನ್ನಾಗಿ ಹಚ್ಚಿ. ಒಂದು ಗಂಟೆಯ ನಂತರ ಶಾಂಪೂವಿನಿಂದ ಕೂದಲು ತೊಳೆಯಿರಿ.


    ತೆಂಗಿನ ಹಾಲು ಮತ್ತು ಆಲಿವ್ ಎಣ್ಣೆ ಮಾಸ್ಕ್


    ಬೇಕಾಗುವ ಸಾಮಾಗ್ರಿಗಳು: ನಾಲ್ಕು ಚಮಚ ತೆಂಗಿನ ಹಾಲು, ಒಂದು ಚಮಚ ಆಲಿವ್ ಎಣ್ಣೆ, ಒಂದು ಚಮಚ ಜೇನುತುಪ್ಪ


    ಬಳಕೆಯ ವಿಧಾನ: ಬಟ್ಟಲಿನಲ್ಲಿ ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ. ಉಗುರು ಬೆಚ್ಚಗಾಗಿಸಿ ಮತ್ತು ನೆತ್ತಿ ಮತ್ತು ಕೂದಲಿಗೆ ಅನ್ವಯಿಸಿ. ಒಂದು ಗಂಟೆಯ ನಂತರ ಸಾಮಾನ್ಯ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ.


    ತೆಂಗಿನ ಹಾಲು ಮತ್ತು ಜೇನುತುಪ್ಪ ಮಾಸ್ಕ್


    ಬೇಕಾಗುವ ಸಾಮಾಗ್ರಿಗಳು: ನಾಲ್ಕು ಚಮಚ ತೆಂಗಿನ ಹಾಲು, ಎರಡು ಚಮಚ ಜೇನುತುಪ್ಪ


    ಇದನ್ನೂ ಓದಿ: ರಕ್ತದೊತ್ತಡ ಸುಧಾರಿಸುವ ಖರ್ಜೂರದ ಪ್ರಯೋಜನ ತಿಳಿದರೆ ಇಂದೇ ಸೇವಿಸಲು ಪ್ರಾರಂಭಿಸುವಿರಿ


    ಬಳಕೆಯ ವಿಧಾನ: ಬಟ್ಟಲಿನಲ್ಲಿ ತೆಂಗಿನ ಹಾಲು ಮತ್ತು ಜೇನುತುಪ್ಪ ಮಿಶ್ರಣ ಮಾಡಿ. ಮಿಶ್ರಣವನ್ನು ನೆತ್ತಿಯ ಮೇಲೆ ಮತ್ತು ಕೂದಲಿನ ಮೇಲೆ ಚೆನ್ನಾಗಿ ಅನ್ವಯಿಸಿ. ಎರಡು ಗಂಟೆಗಳ ನಂತರ ಶಾಂಪೂ ಹಾಕಿ ಕೂದಲನ್ನು ತೊಳೆಯಿರಿ.

    Published by:renukadariyannavar
    First published: