• Home
  • »
  • News
  • »
  • lifestyle
  • »
  • Coconut Smoothie: ಪೋಷಕಾಂಶಗಳ ಗಣಿ ತೆಂಗಿನ ಹಾಲು ಸ್ಮೂಥಿ ಮಾಡೋದು ಹೀಗೆ

Coconut Smoothie: ಪೋಷಕಾಂಶಗಳ ಗಣಿ ತೆಂಗಿನ ಹಾಲು ಸ್ಮೂಥಿ ಮಾಡೋದು ಹೀಗೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆಹಾರ ಪ್ರಿಯರು ತೆಂಗಿನ ಹಾಲು ಸೇವಿಸಿದರೆ ಆರೋಗ್ಯ ಚೆನ್ನಾಗಿರುತ್ತದೆ. ತ್ವಚೆಯು ಚೆನ್ನಾಗಿರಲು ತೆಂಗಿನಕಾಯಿ ನೀರು ಸಹಾಯ ಮಾಡುತ್ತದೆ. ತೆಂಗಿನಕಾಯಿ ರುಚಿಯಲ್ಲಿ ಸಿಹಿಯಾಗಿರುತ್ತದೆ. ಇಂದು ನಾವು ಪೋಷಕಾಂಶಗಳಿಂದ ಸಮೃದ್ಧವಾಗಿರುವ ತೆಂಗಿನಕಾಯಿ ಹಾಲಿನ ಸ್ಮೂಥಿ ರೆಸಿಪಿ ಮಾಡೋದು ಹೇಗೆ ಅಂತಾ ಇಲ್ಲಿ ತಿಳಿಯೋಣ.

ಮುಂದೆ ಓದಿ ...
  • Share this:

    ತೆಂಗಿನಕಾಯಿಯನ್ನು (Coconut) ನಾವು ಆಹಾರದಲ್ಲಿ (Food) ಬಳಕೆ ಮಾಡುತ್ತೇವೆ. ಅಲ್ಲದೇ ತೆಂಗಿನಕಾಯಿ ಅನೇಕ ಪೋಷಕಾಂಶಗಳಿಂದ (Nutrients) ಕೂಡಿದೆ. ಹಾಗೂ ತೆಂಗಿನಕಾಯಿ ಆರೋಗ್ಯಕ್ಕೆ (Health) ತುಂಬಾ ಪ್ರಯೋಜನಕಾರಿ (Beneficial) ಎಂದು ಪರಿಗಣಿತವಾಗಿದೆ. ದಕ್ಷಿಣ ಭಾರತದಲ್ಲಿ ತೆಂಗಿನಕಾಯಿ ಎಣ್ಣೆ, ಕೊಬ್ಬರಿಯನ್ನು ಅನೇಕ ಭಕ್ಷ್ಯಗಳ ತಯಾರಿಕೆಯಲ್ಲಿ ಬಳಕೆ ಮಾಡ್ತಾರೆ. ಜೊತೆಗೆ ಆಹಾರ ಪ್ರಿಯರು ತೆಂಗಿನ ಹಾಲು ಸೇವಿಸಿದರೆ ಆರೋಗ್ಯ ಚೆನ್ನಾಗಿರುತ್ತದೆ. ತ್ವಚೆಯು ಚೆನ್ನಾಗಿರಲು ತೆಂಗಿನಕಾಯಿ ನೀರು ಸಹಾಯ ಮಾಡುತ್ತದೆ. ತೆಂಗಿನಕಾಯಿ ರುಚಿಯಲ್ಲಿ ಸಿಹಿಯಾಗಿರುತ್ತದೆ. ಇಂದು ನಾವು ಪೋಷಕಾಂಶಗಳಿಂದ ಸಮೃದ್ಧವಾಗಿರುವ ತೆಂಗಿನಕಾಯಿ ಹಾಲಿನ ಸ್ಮೂಥಿ ರೆಸಿಪಿ ಮಾಡೋದು ಹೇಗೆ ಅಂತಾ ಇಲ್ಲಿ ತಿಳಿಯೋಣ.


    ರುಚಿಕರ ಮತ್ತು ಆರೋಗ್ಯಕರ ತೆಂಗಿನಕಾಯಿ


    ತೆಂಗಿನಕಾಯಿ ರುಚಿ ಮತ್ತು ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ ನೀಡುತ್ತದೆ. ತೆಂಗಿನ ಹಾಲು ಆರೋಗ್ಯಕ್ಕೆ ಹೇಗೆ ಉತ್ತಮ ಎಂಬುದನ್ನು ಮೊದಲು ತಿಳಿಯೋಣ. ನಂತರ ತೆಂಗಿನಕಾಯಿ ಹಾಲಿನ ಸ್ಮೂಥಿ ಮಾಡುವ ವಿಧಾನ ನೋಡೋಣ.


    ಹೃದಯದ ಆರೋಗ್ಯಕ್ಕೆ ಸಹಕಾರಿ


    ಎನ್‌ ಸಿಬಿಐ ಸಂಶೋಧನೆಯ ಪ್ರಕಾರ, ತೆಂಗಿನ ಹಾಲು ಸೇವನೆ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಹಾಗೂ ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವ ಮೂಲಕ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ಇದು ಹೃದಯದ ಆರೋಗ್ಯ ಕಾಪಾಡುತ್ತದೆ. ಕೊಲೆಸ್ಟ್ರಾಲ್ ಅನ್ನು ಸಮತೋಲನದಲ್ಲಿ ಇಡಲು ತುಂಬಾ ಸಹಾಯ ಮಾಡುತ್ತದೆ.




    ತೂಕ ನಿಯಂತ್ರಿಸುತ್ತದೆ


    ತೆಂಗಿನ ಹಾಲಿನಲ್ಲಿರುವ ಕೊಬ್ಬು ಹೆಚ್ಚಾಗಿ ಮಧ್ಯಮ ಸರಪಳಿ ಕೊಬ್ಬಿನಾಮ್ಲಗಳ ರೂಪದಲ್ಲಿದೆ. ದೀರ್ಘ ಸರಪಳಿ ಕೊಬ್ಬಿನಾಮ್ಲಕ್ಕೆ ಹೋಲಿಕೆ ಮಾಡಿದ್ರೆ ಮಧ್ಯಮ ಸರಪಳಿ ಕೊಬ್ಬಿನಾಮ್ಲಗಳು ವ್ಯಕ್ತಿಯ ಕೊಬ್ಬನ್ನು ಹೆಚ್ಚು ವೇಗವಾಗಿ ಶಕ್ತಿಯಾಗಿ ಪರಿವರ್ತನೆ ಮಾಡುತ್ತವೆ. ಜೊತೆಗೆ ಶಕ್ತಿ ಬಳಕೆ ಹೆಚ್ಚಿಸುತ್ತವೆ. ಹೀಗಾಗಿ ತೆಂಗಿನಕಾಯಿ ಹಾಲು ಕೊಬ್ಬು ಕಡಿಮೆ ಮಾಡುತ್ತದೆ. ತೂಕ ನಿಯಂತ್ರಿಸಲು ಸಹಕಾರಿ.


    ಮಧುಮೇಹ ನಿಯಂತ್ರಣಕ್ಕೆ ಸಹಕಾರಿ


    ತೆಂಗಿನಕಾಯಿ ಹಾಲು ಆಂಟಿ ಡಯಾಬಿಟಿಕ್ ಗುಣ ಹೊಂದಿದೆ. ಇದು ಹೆಚ್ಚಿದ ಗ್ಲೂಕೋಸ್ ಮತ್ತು ಇನ್ಸುಲಿನ್ ಮಟ್ಟ ನಿಯಂತ್ರಿಸಲು ಸಹಕಾರಿ. ಜೊತೆಗೆ ಮಧುಮೇಹದಿಂದ ಹಾನಿಯಾದ ಮೇದೋಜ್ಜೀರಕ ಗ್ರಂಥಿ ಆರೋಗ್ಯಕ್ಕೆ ಸಾಕಷ್ಟು ಸಹಾಯ ಮಾಡುತ್ತದೆ. ಹಾಗಾಗಿ ತೆಂಗಿನ ಹಾಲಿನ ಸೇವನೆ ಮಧುಮೇಹದಲ್ಲಿ ತುಂಬಾ ಪ್ರಯೋಜನಕಾರಿ.


    ತೆಂಗಿನ ಹಾಲು ಲಾರಿಕ್ ಆಮ್ಲ ಹೊಂದಿದೆ. ಇದು ದೇಹವನ್ನು ಮೊನೊಲೌರಿನ್ ಎಂಬ ಅತ್ಯಗತ್ಯ ಸಂಯುಕ್ತವಾಗಿ ಪರಿವರ್ತಿಸುವ ಕೆಲಸ ಮಾಡುತ್ತದೆ. ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿವೈರಲ್ ಸಂಯುಕ್ತವೂ ಆಗಿದೆ. ವೈರಸ್‌ ಅಥವಾ ಬ್ಯಾಕ್ಟೀರಿಯಾದಿಂದ ಉಂಟಾಗುವ ಅನೇಕ ರೋಗಗಳಿಂದ ದೇಹವನ್ನು ರಕ್ಷಿಸುತ್ತದೆ. ಲಾರಿಕ್ ಆಮ್ಲವು ಆಂಟಿಫಂಗಲ್ ಗುಣಲಕ್ಷಣ ಹೊಂದಿದೆ. ಇದು ದೇಹವನ್ನು ಶಿಲೀಂಧ್ರಗಳ ಸೋಂಕಿನಿಂದ ರಕ್ಷಿಸುತ್ತದೆ.


    ಹುಣ್ಣುಗಳ ಸಮಸ್ಯೆ ನಿವಾರಿಸುತ್ತದೆ


    ಅಲ್ಸರ್ ಸಮಸ್ಯೆ ನಿವಾರಣೆಗೆ ತೆಂಗಿನ ಹಾಲು ತುಂಬಾ ಪ್ರಯೋಜನಕಾರಿ. ಸಂಶೋಧನೆಯ ಪ್ರಕಾರ, ತೆಂಗಿನ ನೀರಿಗೆ ಹೋಲಿಸಿದರೆ ಪ್ರತಿದಿನ ಎರಡು ಮಿಲಿ ತೆಂಗಿನ ಹಾಲು ಸೇವಿಸಿದರೆ ಹುಣ್ಣುಗಳ ಗಾತ್ರ 54 ಪ್ರತಿಶತ ಕಡಿಮೆ ಆಗುತ್ತದೆ.


    ಕೂದಲು ಉದುರುವಿಕೆ ಸಮಸ್ಯೆ ನಿವಾರಣೆ


    ಕೂದಲು ಉದುರುವ ಸಮಸ್ಯೆಗೆ ದೇಹದಲ್ಲಿ ಪೋಷಕಾಂಶಗಳ ಕೊರತೆ ಪ್ರಮುಖ ಕಾರಣವಾಗಿದೆ. ಕಬ್ಬಿಣ ಮತ್ತು ಸತು ಅಂಶಗಳ ಕೊರತೆ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ತೆಂಗಿನ ಹಾಲು ಬಳಕೆ ಪ್ರಯೋಜನಕಾರಿ.  ತೆಂಗಿನ ಹಾಲು ಈ ಅಂಶ ಹೊಂದಿದೆ. ಕೂದಲು ಉದುರುವುದು ಕಡಿಮೆ ಆಗುತ್ತದೆ. ಕೂದಲಿನಲ್ಲಿ ತೇವಾಂಶ ಉಳಿಸಲು ಸಹಕಾರಿ. ಕೂದಲಿನ ಬೆಳವಣಿಗೆ ವೇಗವಾಗುತ್ತದೆ.


    ಇದನ್ನೂ ಓದಿ: ಚಳಿಗಾಲದಲ್ಲಿ ಚರ್ಮ ಫಳ ಫಳ ಹೊಳೆಯಲು ಈ ಗಿಡಮೂಲಿಕೆ ಬಳಸಿ


    ತೆಂಗಿನ ಹಾಲಿನ ಸ್ಮೂಥಿ ತಯಾರಿಸುವುದು ಹೇಗೆ?


    ಎರಡು ದೊಡ್ಡ ಆಪಲ್, ತೆಂಗಿನ ಹಾಲು ಅರ್ಧ ಕಪ್, ದಾಲ್ಚಿನ್ನಿ ಪಿಂಚ್ ಬೇಕು. ಮೊದಲು ಸೇಬುವನ್ನು ಚೆನ್ನಾಗಿ ತೊಳೆದು ಕತ್ತರಿಸಿ. ಪಿಂಚ್ ದಾಲ್ಚಿನ್ನಿ ಪುಡಿ ಬ್ಲೆಂಡರ್ ಜಾರ್ನಲ್ಲಿ ಹಾಕಿ ರುಬ್ಬಿರಿ. ಅದಕ್ಕೆ ಅರ್ಧ ಕಪ್ ತೆಂಗಿನ ಹಾಲು ಸೇರಿಸಿ. ಲೋಟಕ್ಕೆ ಸುರಿದು ಕುಡಿಯಿರಿ.

    Published by:renukadariyannavar
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು