Recipe: ವರಮಹಾಲಕ್ಷ್ಮೀ ಹಬ್ಬಕ್ಕೆ ಸುಲಭವಾಗಿ ಮಾಡಿ ರುಚಿಕರ ಕಾಯಿ ಹೋಳಿಗೆ

ಪ್ರತಿಯೊಬ್ಬರ ಮನೆಯಲ್ಲಿ ಹೆಂಗಸರು ಮಹಾಲಕ್ಷ್ಮಿ ಹಬ್ಬಕ್ಕೆ ಸಿಹಿತಿಂಡಿ ಮಾಡಿ ದೇವರಿಗೆ ಇಟ್ಟು ಪೂಜೆ ಸಲ್ಲಿಸುತ್ತಾರೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಹೋಳಿಗೆ, ಸಿಹಿ ತಿಂಡಿ ಮಾಡಲೇಬೇಕು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಶ್ರಾವಣ ಮಾಸ (Sharvana Masa) ಬಂತೆಂದರೆ ಸಾಕು, ಹಬ್ಬಗಳು (Festival) ಸಾಲು ಸಾಲಾಗಿ ಬರುತ್ತದೆ. ಸಾಲೇ ಶುರು ಆಗುತ್ತದೆ. ಹಬ್ಬ ಹರಿ ದಿನಗಳಲ್ಲಿ ಪೂಜೆ ಜೊತೆ ವೈವಿದ್ಯಮಯ ಅಡುಗೆಗಳನ್ನು (Dishes) ಮಾಡುವುದು ಒಂದು ವಾಡಿಕೆಯಾಗಿದೆ. ಅದರಲ್ಲೂ ಸಿಹಿ ತಿನಿತಿನುಸುಗಳನ್ನು ಮಾಡುವುದು ಅತ್ಯವಶ್ಯಕ. ಯಾವುದನ್ನು ಮಾಡಬೇಕು, ಯಾವುದನ್ನು ಬಿಡಬೇಕು ಎಂಬ ಗೊಂದಲದಲ್ಲಿ ಸಿಲುಕಿಕೊಂಡು ಬಿಡುತ್ತೇವೆ.  ವರಮಹಾಲಕ್ಷ್ಮಿ (Varmahalakshmi) ಹಬ್ಬಕ್ಕೆ ಹೋಳಿಗೆ, ಸಿಹಿ ತಿಂಡಿ (Sweet Food) ತಯಾರಿಸಲೇಬೇಕು.

ಪ್ರತಿಯೊಬ್ಬರ ಮನೆಯಲ್ಲಿ ಹೆಂಗಸರು ಮಹಾಲಕ್ಷ್ಮಿ ಪೂಜೆಯನ್ನು ಅವರವರ ಶಕ್ತಾನುಸಾರ ವೈಭವವಾಗಿ ಮಾಡುತ್ತಾರೆ. ಇಂಥ ವಿಶೇಷವಾದ ದಿನದಂದು ಬಂಧು-ಬಳಗದವರು ಮನೆಗೆ ಬರುವುದು ಸರ್ವೇ ಸಾಮಾನ್ಯ. ಪೂಜೆಯ ಪ್ರಯುಕ್ತ ಹೂವು ಹಣ್ಣುಗಳನ್ನು ತಂದು ಲಕ್ಷ್ಮೀ ದೇವಿಗೆ ಅಲಂಕಾರ ಮಾಡಿ, ಹಣ್ಣು, ಕಾಯಿ, ಸಿಹಿ ತಿನಿಸುಗಳನ್ನು ನೈವೇದ್ಯವಾಗಿ ಸಮರ್ಪಣೆ ಮಾಡುತ್ತಾರೆ. ಸುಲಭವಾಗಿ ಮನೆಯಲ್ಲೇ ಹೋಳಿಗೆ ತಯಾರಿಸಿ

ಹೋಳಿಗೆ ಮಾಡಲು ಬೇಕಾಗುವ ಸಾಮಾಗ್ರಿಗಳು:

ಮೈದಾ ಹಿಟ್ಟು – 2ಕಪ್
ಅರಸಿನ ಪುಡಿ – ಕಾಲು ಚಮಚ
ಉಪ್ಪು – ಚಿಟಿಕೆ
ಎಣ್ಣೆ – 3 ದೊಡ್ಡ ಚಮಚ
ತೆಂಗಿನ ತುರಿ – 2 ಕಪ್
ಬೆಲ್ಲ – 1 ಕಪ್
ಏಲಕ್ಕಿ ಪುಡಿ – ಅರ್ಧ ಚಮಚ

ಹೋಳಿಗೆ ಮಾಡುವ ವಿಧಾನ:

ಒಂದು ಪಾತ್ರೆಗೆ 2 ಕಪ್ ಮೈದಾ ಹಿಟ್ಟು, ಕಾಲು ಚಮಚ ಅರಸಿನ ಪುಡಿ, ಚಿಟಿಕೆ ಉಪ್ಪು ಹಾಕಿ ಕಲಸಿ.ನಂತರ ಇದಕ್ಕೆ ೧ ದೊಡ್ಡ ಚಮಚ ಎಣ್ಣೆ, ಸ್ವಲ್ಪ ನೀರು ಹಾಕಿ ಮೆತ್ತಗೆ ಕಲಸಿ.

ಈಗ ಇದಕ್ಕೆ 1  ದೊಡ್ಡ ಚಮಚ ಎಣ್ಣೆ ಹಾಕಿ ಪುನಃ ಚೆನ್ನಾಗಿ ಕಲಸಿ, ಹಿಟ್ಟು ತಯಾರಿಸಿ. ಮೇಲೆ ಮತ್ತೆ1 ದೊಡ್ಡ ಚಮಚ ಎಣ್ಣೆ ಸವರಿ. 3 ಗಂಟೆಗಳ ಕಾಲ ನೆನೆಯಲು ಬಿಡಿ.

ಈಗ ಒಂದು ಪಾತ್ರೆಗೆ 2 ಕಪ್ ತೆಂಗಿನ ತುರಿಯನ್ನು ತರಿ ತರಿಯಾಗಿ ರುಬ್ಬಿ ಹಾಕಿ.

ಒಂದು ಬಾಣಲೆಗೆ 1 ಕಪ್ ಬೆಲ್ಲ, ಕಾಲು ಕಪ್ ನೀರು ಹಾಕಿ , ಬೆಲ್ಲ ಕರಗುವ ತನಕ ಬಿಸಿಮಾಡಿ.

ನಂತರ ಇದನ್ನು ಗಾಳಿಸಿ ಒಂದು ಬಾಣಲೆಗೆ ಹಾಕಿ, ಇದಕ್ಕೆ ತರಿ ತರಿಯಾಗಿ ರುಬ್ಬಿದ ತೆಂಗಿನ ತುರಿಯನ್ನು ಹಾಕಿ ಚೆನ್ನಾಗಿ ಕಲಸಿ.

ಇದನ್ನೂ ಓದಿ: Ugadi Recipe: ಈ ಯುಗಾದಿ ಹಬ್ಬ ಸಂಭ್ರಮಿಸಲು ಘಮ ಘಮಿಸುವ ರುಚಿಯಾದ ಬೆಲ್ಲದ ಹೋಳಿಗೆ ಬೇಕೇ? ಇಲ್ಲಿದೆ ರೆಸಿಪಿ

ಈಗ ಇದಕ್ಕೆ ಅರ್ಧ ಚಮಚ ಏಲಕ್ಕಿ ಪುಡಿ ಹಾಕಿ ಕಲಸಿ, ತಣಿಯಲು ಬಿಡಿ.

ನಂತರ ಕಲಸಿಟ್ಟ ಮೈದಾ ಹಿಟ್ಟನ್ನು ಪುನಃ ಚೆನ್ನಾಗಿ ನಾದಿಕೊಳ್ಳಿ.ಇದರಿಂದ ಸಣ್ಣ ಉಂಡೆ ತೆಗೆದುಕೊಂಡು, ಬೆರಳುಗಳಿಂದ ಅಗಲ ಮಾಡಿ.

ಈಗ ಕಾಯಿ ಹೂರಣವನ್ನು ಇದರ ಒಳಗಡೆ ಇಟ್ಟು, ಎಲ್ಲ ಬದಿಯನ್ನು ಮುಚ್ಚಿ.

ಈ ರೀತಿಯಾಗಿ ಹೂರಣ ತುಂಬಿದ ಹಿಟ್ಟಿನ ಉಂಡೆಗಳನ್ನು ಮಾಡಿಟ್ಟುಕೊಳ್ಳಿ. ನಂತರ ಒಂದು ಬೇಕಿಂಗ್ ಹಾಳೆಯ ಮೇಲೆ ಎಣ್ಣೆ ಸವರಿ, ಅದರ ಮೇಲೆ ಹಿಟ್ಟಿನ ಉಂಡೆ ಇಟ್ಟು ಬೆರಳಿನಿಂದ ಸಮವಾಗಿ ಒತ್ತಿ. ಪುನಃ ಇದರ ಮೇಲೆ ಇನ್ನೊಂದು ಬೇಕಿಂಗ್ ಹಾಳೆಯನ್ನು ಇಟ್ಟು ಅದರ ಮೇಲೆ ಎಣ್ಣೆ ಸವರಿ, ಸಮವಾಗಿ ಒತ್ತಿ.

ಎಷ್ಟು ಬೇಕೊ ಅಷ್ಟು ತೆಳ್ಳಗೆ ಮಾಡಿ.ನಂತರ ಮೇಲಿನ ಬೇಕಿಂಗ್ ಹಾಳೆಯನ್ನು ನಿಧಾನವಾಗಿ ತೆಗೆಯಿರಿ. ಈಗ ಬಿಸಿಯಾದ ಕಾವಲಿ ಮೇಲೆ ಸ್ವಲ್ಪ ತುಪ್ಪ ಅಥವಾ ಎಣ್ಣೆ ಹಾಕಿ, ಅದರ ಮೇಲೆ ಹೋಳಿಗೆಯನ್ನು ಹಾಕಿ, ನಿಧಾನವಾಗಿ ಬೇಕಿಂಗ್ ಹಾಳೆಯಿಂದ ಬೇರ್ಪಡಿಸಿ.

ಇದನ್ನೂ ಓದಿ: Sweet Recipe: ಸಖತ್ ರುಚಿಕರ ಗೋಧಿ ಹಲ್ವಾ, 3 ಸಾಮಗ್ರಿಗಳಿದ್ರೆ ಸಾಕು ರೆಡಿಯಾಗುತ್ತೆ ಈ ಸಿಹಿ ತಿಂಡಿ

ಇದರ ಮೇಲೆ ಸ್ವಲ್ಪ ಎಣ್ಣೆ ಹಾಕಿ ಮಗುಚಿ ಹಾಕಿ. ಎರಡು ಬದಿ ಬೇಯಿಸಿ. ರುಚಿಯಾದ ಕಾಯಿ ಹೋಳಿಗೆಯನ್ನು ತುಪ್ಪದೊಂದಿಗೆ ಸವಿಯಿರಿ.
Published by:Pavana HS
First published: