ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ನೂರಾರು ಕಿರಿಕಿರಿಗಳನ್ನು ಎದುರಿಸಿ ಕೊನೆಗೆ ಕಿರಿಕಿರಿಯಿಂದ ಪಾರಾಗಿರುತ್ತಾರೆ. ನೂರಾರು ಕಿರಿಕಿರಿಗಳಲ್ಲಿ ಹಾಳಾಗಿರುವ ಜಿಪ್ ಸಮಸ್ಯೆ ಕೂಡ ಒಂದು. ಜಿಪ್ ಸಮಸ್ಯೆಯಿಂದ ನಿರಾಸೆ ಆದವರು ಕೊನೆಗೆ ಟೈಲರ್ ಅಥವಾ ಇನ್ನಿತರ ಅಂಗಡಿಗಳಿಗೆ ತೆರಳಿ ಜಿಪ್ ಹಾಕಿಸಿಕೊಂಡು ಬರುವವರ ಸಂಖ್ಯೆ ಹೆಚ್ಚು. ಈ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಈ ವಿಡಿಯೋ ನೋಡಿದರೇ ಸ್ವತಃ ನೀವೇ ಜಿಪ್ ಸರಿಪಡಿಸಲು ನಿಮಗೆ ಒಂದು ನಿಮಿಷ ಸಾಕು.!
ಮನೆಯಲ್ಲಿ ಮಕ್ಕಳ ಕೈಗೆ ಬ್ಯಾಗ್ ಸಿಕ್ಕರೇ ಅವರು ಬ್ಯಾಗಿನ ಜಿಪ್ ಎಳೆದಾಡಿದ ಪರಿಣಾಮ ಕೆಲವೊಮ್ಮೆ ಕೈ ಕೊಡುವ ಸಾಧ್ಯತೆ ಹೆಚ್ಚಿರುತ್ತದೆ. ಹೆಚ್ಚಾಗಿ ಊರಿಗೆ ಹೋಗುವ ಸಂದರ್ಭಗಳಲ್ಲಿ ಬಹಳ ಜನರು ಜಿಪ್ ಸಮಸ್ಯೆ ಎದುರಿಸಿರುತ್ತಾರೆ. ಜಿಪ್ ಸಮಸ್ಯೆ ಹೇಗೆ ಸರಿಮಾಡಬಹುದು ಎಂಬುದು ಈ ವಿಡಿಯೋದಲ್ಲಿ ತೋರಿಸಲಾಗಿದೆ.
ಚಮ್ಮಾರನ ಕೌಶಲ್ಯದ ವಿಡಿಯೋ ವೈರಲ್:
ಹಾಳಾಗಿ ಹೋಗಿರುವ ಜಿಪ್ ಹೇಗೆ ಸರಿ ಮಾಡಬಹುದು ಎಂಬುದನ್ನು ತೋರಿಸಿರುವ ಚಮ್ಮಾರನ ವಿಡಿಯೋ ವೈರಲ್ ಆಗಿದೆ. ಕೆಂಟ್ನ ಚಮ್ಮಾರರೊಬ್ಬರು ಹಾಳಾಗಿ ಹೋಗಿರುವ ಜಿಪ್ ಅನ್ನು ಹೇಗೆ ಸರಿಪಡಿಸಬಹುದು ಎಂಬುದರ ಬಗ್ಗೆ ಕೆಲವೇ ಸೆಕೆಂಡ್ಗಳ ವಿಡಿಯೋದಲ್ಲಿ ತಮ್ಮ ಕೌಶಲ್ಯವನ್ನು ತೋರಿಸಿದ್ದಾರೆ. ಕೇವಲ ಸಣ್ಣ ಕೈ ಸುತ್ತಿಗೆ ಮತ್ತು ಕಟ್ಟಿಂಗ್ ಪ್ಲೇಯರ್ ಬಳಸಿ ಹೇಗೆ ಹಾಳಾಗಿ ಹೋಗಿರುವ ಜಿಪ್ ಅನ್ನು ಸರಿ ಮಾಡಬಹುದು ಎಂಬುದನ್ನು ಸುಲಭವಾಗಿ ತೋರಿಸಿ ಕೊಟ್ಟಿದ್ದಾರೆ.
ಇನ್ನು, ಕೆಂಟ್ನ ಚಮ್ಮಾರ ಅವರು @originalcobblers ಎಂಬ ಖಾತೆಯಲ್ಲಿ ತಮ್ಮ ಕೌಶಲ್ಯದ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ 1 ನಿಮಿಷದ 32 ಸೆಕೆಂಡ್ಗಳ ದೃಶ್ಯವಿದೆ. ಈ ವಿಡಿಯೋ ಈಗಾಗಲೇ 3 ಲಕ್ಷಕ್ಕೂ ಅಧಿಕ ವೀಕ್ಷಣೆ ಗಳಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ವಿಡಿಯೋದಿಂದ ಜಿಪ್ ಸಮಸ್ಯೆ ನೀವೇ ಸರಿಪಡಿಸಿಕೊಳ್ಳಲು ನಿಮಗೆ 1 ನಿಮೀಷ ಸಾಕಾಗಬಹುದು. ಅಷ್ಟು ಸುಲಭವಾಗಿ ಅವರು ಜಿಪ್ ಸಮಸ್ಯೆ ಸರಿಪಡಿಸುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ವಿಡಿಯೋದಲ್ಲಿ ಏನಿದೆ?
ವಿಡಿಯೋ ಆರಂಭದಲ್ಲಿ ಹಾಳಾದ ಜಿಪ್ ಸರಿಪಡಿಸುವುದು ಎಷ್ಟು ಸುಲಭ. ಆದರೆ, ಹೆಚ್ಚಿನ ಗ್ರಾಹಕರು ತಮ್ಮ ಬ್ಯಾಗ್ ಜಿಪ್ ಹೋಗಿದೆ ಎಂದು ಅಂಗಡಿಗಳಿಗೆ ತೆರೆಳುತ್ತಾರೆ. ಆದರೆ ಮನೆಯಲ್ಲೇ ಸಿಗುವ ವಸ್ತುಗಳಿಂದ ಸ್ವತಃ ಅವರೇ ಜಿಪ್ ಸಮಸ್ಯೆಯನ್ನು ನಿವಾರಿಸಬಹುದು. ಮನೆಯಲ್ಲಿ ಸುಲಭವಾಗಿ ಸಿಗುವ ವಸ್ತುಗಳಿಂದು ಬೀಳದಿರುವ ಜಿಪ್ ಅನ್ನು ಹೇಗೆ ಸರಿಪಡಿಸಬಹುದು ಎಂಬುದನ್ನು ವಿಡಿಯೋದಲ್ಲಿ ತೋರಿಸಿದ್ದೇನೆ ಎಂದು ಚಮ್ಮಾರ ಹೇಳುತ್ತಾರೆ.
ಇನ್ನು, ಜಿಪ್ ಅನ್ನು ಮಧ್ಯದ ಭಾಗಕ್ಕೆ ಎಳೆದು ಎರಡು ತಂತಿಗಳ ನಡುವೆ ಸಮನಾಗಿ ಅಂತರ ನೋಡಿಕೊಂಡು ಕಟ್ಟಿಂಗ್ ಪ್ಲೇಯರ್ ನಿಂದ ಜಿಪ್ ಎಳೆಯುವುದನ್ನು ಗಟ್ಟಿಯಲ್ಲಿ ಒತ್ತುವ ಮೂಲಕ ಜಿಪ್ ಸಮಸ್ಯೆ ಸುಲಭವಾಗಿ ಸರಿಮಾಡಬಹುದು ಎಂದು ವಿಡಿಯೋದಲ್ಲಿ ತೋರಿಸಲಾಗಿದೆ.
ಚಮ್ಮಾರರ ಕೌಶಲ್ಯದ ವಿಡಿಯೋ ನೋಡುವು ಮೂಲಕ ನೀವೂ ಕೂಡ ಜಿಪ್ ಅನ್ನು ಮನೆಯಲ್ಲೇ ಹಾಕಿಕೊಳ್ಳಬಹುದು. ಹಾಗಾದರೇ ಏಕೆ ತಡ ವಿಡಿಯೋ ಮೇಲೆ ಕ್ಲಿಕ್ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ