• Home
  • »
  • News
  • »
  • lifestyle
  • »
  • Caravan: ಟ್ರಿಪ್ ಕ್ರೇಜ್ ಇರುವವರಿಗೆ ಒಂದು ಗುಡ್ ನ್ಯೂಸ್, ಇದು ಸಿಎಂ ಬೊಮ್ಮಾಯಿ ಕೊಟ್ಟ ಆಫರ್!

Caravan: ಟ್ರಿಪ್ ಕ್ರೇಜ್ ಇರುವವರಿಗೆ ಒಂದು ಗುಡ್ ನ್ಯೂಸ್, ಇದು ಸಿಎಂ ಬೊಮ್ಮಾಯಿ ಕೊಟ್ಟ ಆಫರ್!

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ

Good News For Tourist: ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂಬ ಮಾತಿದೆ. ಹಾಗೆಯೇ ಟ್ರಿಪ್​ ಕ್ರೇಜ್ ಇರುವವರಿಗೆ ಕರ್ನಾಟಕ ಸರ್ಕಾರ ಒಂದು ಗುಡ್ ನ್ಯೂಸ್ ನೀಡಿದೆ. ಕೇಳಿದ್ರೆ ಫುಲ್ ಖಷಿ ಆಗುತ್ತೆ.

  • Share this:

ಟ್ರಿಪ್ (Trip) ಅಂದ್ರೆ ಯಾರಿಗ್ ತಾನೆ ಇಷ್ಟ ಇಲ್ಲ ಹೇಳಿ. ನಮ್ ದೇಶದಲ್ಲೇ ಸುತ್ತೋಕೆ ಸ್ಥಳಗಳು ಒಂದಾ ಎರಡಾ? ದೊಡ್ಡವರ ಮಾತಿನಂತೆ ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂಬುದಕ್ಕೆ ಸಮನಾಗಿ ನಾವು ಕೂಡ ಪಾಲಿಸುತ್ತಿದ್ದೇವೆ ಅಂದ್ರೂ ತಪ್ಪಾಗಲಾರದು. ಹಾಗೆಯೇ ವೀಕೆಂಡ್ ಬಂತ್ (Weekend) ಅಂದ್ರೆ ಬ್ಯಾಗ್ ಪ್ಯಾಕ್ ಮಾಡಿ ಟೂರಿಗೆ ಹೋಗೋ ಜನರನ್ನು ನಾವು ಕಾಣಬಹುದು. ಟೂರಿಗೆ ಹೋದಾಗ ಅಲ್ಲಿ ಒಂದು ಅಥವಾ ವಾರಾಂತ್ಯ ಟ್ರಿಪ್ ಹಮ್ಮಿಕೊಂಡಾಗ ಲಾಡ್ಜ್, ರೂಮ್​ಗಳನ್ನು ಹುಡುಕುವುದು ಸಾಮಾನ್ಯ. ಅಲ್ಲಿ ಉಳಿದುಕೊಳ್ಳಲು ವ್ಯವಸ್ಥಗಳನ್ನೆಲ್ಲಾ ಸರಿಯಾಗಿ ವಿಚಾರಿಸಿಕೊಂಡು ಉಳಿದುಕೊಳ್ಳಲು ವ್ಯವಸ್ಥೆಗಳನ್ನು ಮಾಡಲಾಗುತ್ತದೆ.


ಅವ್ಯವಸ್ಥೆಗಳು ಒಂಟಾಗುವಿಕೆ
ಅದೆಷ್ಟೇ ಸರಿಯಾಗಿದ್ದ ಲಾಡ್ಜ್​ಗಳನ್ನು ನೋಡಿದ್ದರೂ ಕೂಡ ಒಮ್ಮೊಮ್ಮೆ ಇದು ಅವ್ಯವಸ್ಥೆಗೆ ಕಾರಣವಾಗುತ್ತದೆ. ಅಂದರೆ ಅಲ್ಲಿರುವ ಸೌಲಭ್ಯಗಳು ಸರಿಯಾಗಿರದೇ ಗಲಾಟಯನ್ನು ಮಾಡುವ ಸಂದರ್ಭ ಎದುರಿಸಿರುವ ಹಲವಾರು ಉದಾಹರಣೆಗಳಿವೆ. ಇದಕ್ಕೆ ಪರ್ಯಾಯವಾಗಿ ಕೆಲ ಜನರು ಟೆಂಟ್​ಗಳನ್ನು ಹಾಕಿಕೊಂಡು ಅಲ್ಲಿ ತಮ್ಮ ಸ್ನೇಹಿತರೊಂದಿಗೆ ಜಾಲಿ ಮಾಡುತ್ತಾರೆ.


ಫೈರ್ ಕ್ಯಾಂಪ್​
ಕೆಲವು ರೂಮ್ ಮತ್ತು ಲಾಡ್ಜ್​ಗಳಲ್ಲಿ ಫೈರ್ ಕ್ಯಾಂಪ್​ಗಳನ್ನು ಹಾಕಲು ಅನುಮತಿ ಇರುವುದಿಲ್ಲ. ಇದಕ್ಕಾಗೆ ಟೆಂಟ್​ಗಳನ್ನು ಹಾಕುತ್ತಾರೆ. ಹೀಗೆ ಟ್ರಿಪ್​ಗಳಿಗೆ ಹೋಗುವಾಗ ಮೊಬೈಲ್​ಗಳಲ್ಲಿ ರೂಮ್​ಗಳು ಎಲ್ಲಿ ಸೌಲಭ್ಯಗಳಿಗೆ, ಅದರ ವಿಮರ್ಶೆ ಹೀಗೆ ನೂರಾರು ರೀತಿಯಾಗಿ ಪರಿಶೀಲಿಸಿ ತದನಂತರ ರೂಮ್​ಗಳನ್ನು ಮಾಡುತ್ತಾರೆ.


ಇದನ್ನೂ ಓದಿ: IRCTCಯಿಂದ 'ಡಿವೈನ್​ ಕರ್ನಾಟಕ ಟೂರ್' ಪ್ಯಾಕೇಜ್​​; ಕುಕ್ಕೆ ಸೇರಿದಂತೆ ಈ ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ


ಇನ್ನು ಮುಂದೆ ಈ ರೀತಿಯ ಟೆನ್ಷನ್ ಬೇಡ
ಇನ್ನು ಮುಂದೆ ಟ್ರಿಪ್ ಹೋಗುವವರಿಗೆ ರಾಜ್ಯ ಸರ್ಕಾರ ವತಿಯಿಂದ ಒಂದು ಬಂಪರ್ ಆಫರ್​ಗಳನ್ನು ನೀಡಲಾಗುತ್ತದೆ. ರೂಮ್​ಗಳನ್ನು ನೋಡಿ ಅದರಿಂದ ನಿರಾಸೆ ಆಗುವಂತಹ ಚಿಂತೆಯೇ ಇನ್ನು ಮುಂದೆ ಬೇಡ ಬಿಡಿ.


ರಾಜ್ಯದ ಬೇರೆ ಬೇರೆ ಸ್ಥಳಗಳಗಳಿಗೆ ಪ್ರವಾಸ ಮಾಡುವ ಜನರಿಗೆ, ಅನುಕೂಲವಾಗಲೆಂದು ರಾಜ್ಯ ಸರ್ಕಾರ ಬಂಪರ್ ಗಿಫ್ಟ್​ ಕೊಡಲು ಮುಂದಾಗಿದೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಪ್ರವಾಸಿಗರಿಗೆ ಕ್ಯಾರಾವಾನ್  ಸೌಲಭ್ಯವನ್ನು ನೀಡುತ್ತಿದೆ. ಇದರಿಂದ ಪ್ರವಾಸಿಗರ ಪ್ರವಾಸ ಸುಗಮವಾಗಲಿದೆ. ಪ್ರಯಾಣದ ವೇಳೆ ತಾಜಾ ಆಹಾರ ಸಿಗುವುದು ಕಷ್ಟ ಮತ್ತು ಬೇರೆ ಬೇರೆ ಊರುಗಳಿಗೆ ಪ್ರವಾಸ ಕೈಗೊಳ್ಳುವುದರಿಂದ ಇಳಕೊಳ್ಳಲು ಸಾಕಷ್ಟು ಸಮಸ್ಯೆ ಅನುಭವಿಸಬೇಕಾಗುತ್ತದೆ. ಪ್ರವಾಸಿಗರಿಗೆ ಈ ತೊಂದರೆಯನ್ನು ತಪ್ಪಿಸಲು ರಾಜ್ಯ ಸರ್ಕಾರ ಶೀಘ್ರದಲ್ಲೇ ಕ್ಯಾರವಾನ್​ ಸೌಲಭ್ಯವನ್ನು ಒದಗಿಸಲಿದೆ.


ಮುಖ್ಯಮಂತ್ರಿಯ ಯೋಜನೆ ಪ್ರಕಾರ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗೆ ಕಾರವಾರಕ್ಕೆ  ಭೇಟಿ ನೀಡಿದ್ದಾಗ ಅತಿ ಶೀಘ್ರದಲ್ಲೇ ಸಾರ್ವಜನಿಕರಿಗೆ ಈ ಸೌಲಭ್ಯವು ಲಭ್ಯವಾಗಲಿದೆ. ಸದ್ಯಕ್ಕೆ ಪ್ರವಾಸೋದ್ಯಮ ಇಲಾಖೆಯು ಖಾಸಗಿ ಸಹಭಾಗಿತ್ವದಲ್ಲಿ ಸಾರ್ವಜನಿಕರಿಗೆ ಈ ಸೇವೆಯನ್ನು ಒದಗಿಸಲಿದೆ ಎಂದು ಮಾಹಿತಿಗಳು ತಿಳಿದುಬಂದಿದೆ.


ಏನೆಲ್ಲಾ ಲಭ್ಯವಿದೆ?
ಸದ್ಯಕ್ಕೆ ಖಾಸಗಿ ಸಂಸ್ಥೆಯೊಂದು ಎರಡು ಕ್ಯಾರಾವಾನ್​ಗಳನ್ನು  ವಿನ್ಯಾಸಗೊಳಿಸಿದೆ. ಒಂದು ಬಸ್ ಮಾದರಿಯ ಕ್ಯಾರವಾನ್​ ಆಗಿದ್ದು, ಇದು 2 ಹಾಸಿಗೆಗಳು, ಅಡುಗೆಮನೆ, ಶೌಚಾಲಯ ಸೌಲಭ್ಯಗಳು, 1 ಟೇಬಲ್, 4 ಕುರ್ಚಿಗಳು ಮತ್ತು ಹೆಚ್ಚಿನವುಗಳನ್ನು ಹೊಂದಿರುತ್ತದೆ. ಈ ಕ್ಯಾರವಿನ್​ 5 ಮಂದಿ ಇರಲು ಅರಾಮದಾಯಕವಾಗಿದೆ.


ಇದನ್ನೂ ಓದಿ: ಅಪ್ಪು ಮಾಡಿರುವ ಸ್ಕೂಬಾ ಡೈವಿಂಗ್ ನೀವೂ ಮಾಡ್ಬೇಕಾ? ಹಾಗಿದ್ರೆ ನೇರವಾಗಿ ಈ ಸ್ಥಳಕ್ಕೆ ಬನ್ನಿ! ರೋಚಕ ಸ್ಥಳದ ಕುತೂಹಲಕಾರಿ ಡಿಟೇಲ್ಸ್ ಇಲ್ಲಿದೆ


ಇದರಲ್ಲಿ ಅಡುಗೆಮನೆ, ಸಣ್ಣ ಮಲಗುವ ಕೋಣೆ ಮತ್ತು ಟಾಯ್ಲೆಟ್ ರೂಮ್ ಇರುತ್ತದೆ. ಇದರಲ್ಲಿ 3 ಜನರು ಪ್ರಯಾಣಿಸಬಹುದು. ಗಂಡ, ಹೆಂಡತಿ ಮತ್ತು ಮಗುವಿನೊಂದಿಗೆ ಸಣ್ಣ ಕುಟುಂಬ ಪ್ರಯಾಣಕ್ಕೆ ಈ ಕ್ಯಾರವಾನ್ ಹೇಳಿ ಮಾಡಿಸಿದಂತಿದೆ.
ಈ ಕ್ಯಾರವಾನ್​ಗಳ ಬಾಡಿಗೆಯನ್ನು ಇನ್ನೂ ತಿಳಿಸಿಲ್ಲ. ಕೆಲವೇ ದಿನಗಳಲ್ಲಿ ಇದಕ್ಕಾಗಿ ಪ್ರತ್ಯೇಕ ಅಪ್ಲಿಕೇಶನ್ ಮತ್ತು ವೆಬ್‌ಸೈಟ್​ಅನ್ನು ಅಭಿವೃದ್ಧಿಪಡಿಸಿದ ನಂತರ ಬೆಲೆಯನ್ನು ನಿಗದಿಪಡಿಸಲಾಗುತ್ತದೆ.


ಒಟ್ಟಿನಲ್ಲಿ ಇನ್ನು ಮುಂದೆ ಅರಾಮಾಗಿ ಕ್ಯಾರಾವಿನ್​ನೊಂದಿಗೆ ನೀವು ಮತ್ತು ನಿಮ್ಮವರ ಜೊತೆಯಲ್ಲಿ ಪ್ರಯಾಣ ಮಾಡಬಹುದಾಗಿದೆ.

First published: