Health Tips: ಪುರುಷರ ಲೈಂಗಿಕ ಸಮಸ್ಯೆಗೆ ಲವಂಗ ಅದ್ಭುತ ಮದ್ದು; ಈ ರೀತಿ ಬಳಸಿ..

Clovesನಲ್ಲಿ ಫೈಬರ್ ಅಂಶ ಹೇರಳವಾಗಿದೆ. ಹೀಗಾಗಿ ಮಲಬದ್ಧತೆ, ಗ್ಯಾಸ್ ಸಮಸ್ಯೆ ಮತ್ತು ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಗುಣಪಡಿಸಲು ಇದು ಸಹಾಯ ಮಾಡುತ್ತದೆ. ಅಲ್ಲದೇ ಇದು ಕೀಟನಾಶಕವೂ ಆಗಿದೆ.

ಲವಂಗ

ಲವಂಗ

 • Share this:
  ಮಸಾಲೆ (spice) ಆಹಾರ ಪದಾರ್ಥಗಳಲ್ಲಿ ಪ್ರಸಿದ್ಧಿ ಪಡೆದಿರುವ ಲವಂಗವನ್ನು (Cloves) ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲಿ ಬಳಸಲಾಗುತ್ತದೆ, ಆದರೆ ಇದು ನಿಮ್ಮನ್ನು ಅನೇಕ ರೋಗಗಳಿಂದ ದೂರವಿರಿಸಬಹುದು (many ailments)ಹೌದು ಲವಂಗವನ್ನು ಆಹಾರದಲ್ಲಿ ಬಳಕೆ ಅಥವಾ ಹಾಗೆ ಸೇವನೆ ಮಾಡುವುದರಿಂದ ಹಲವು ಪ್ರಯೋಜನಗಳಿವೆ. (benefits) ಆರೋಗ್ಯಕಾರಿ ಅಂಶದೊಂದಿಗೆ ಇದು ಲೈಂಗಿಕ ಸಮಸ್ಯೆಯಿಂದಲೂ ಮುಕ್ತಿ ಪಡೆಯಬಹುದು ಎಂದು ತಜ್ಞರು (Experts)ಹೇಳುತ್ತಾರೆ. ಇತ್ತೀಚಿನ ಒತ್ತಡ ಜೀವನದಲ್ಲಿ ವಿವಾಹಿತ ಪುರುಷರು ಹೆಚ್ಚಾಗಿ ಲೈಂಗಿಕ ಸಮಸ್ಯೆಗಳನ್ನು(sexual problems)ಎದುರಿಸಿತ್ತಿದ್ದಾರೆ, ಅಂತಹ ಪುರುಷರು ಮನೆಮದ್ದಾಗಿ ಸಿಗುವ ಲವಂಗವನ್ನು ಒಮ್ಮೆ ಟ್ರೈ ಮಾಡುವುದರಿಂದ ಯಾವುದೇ ತಪ್ಪಿಲ್ಲ ಅಬೋಣ

  ಇದನ್ನು ಓದಿ:Clove Tea: ಲವಂಗ ಟೀ ಬಗ್ಗೆ ಕೇಳಿದ್ದೀರಾ? ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ಗೊತ್ತಾ?

  ಲವಂಗದ ಪ್ರಯೋಜನವೇನು ಎಂದು ಕೇಳಿದರೆ ಹಲವಾರು ಉತ್ತರಗಳು ದೊರಕಬಹುದು. ಈ ಪುಟ್ಟ ಸಾಂಬಾರ ಪದಾರ್ಥದಲ್ಲಿ ಅದೆಷ್ಟೋ ಪೋಷಕಾಂಶಗಳು ಅಡಕವಾಗಿದ್ದು ರುಚಿ ಹೆಚ್ಚಿಸುವುದಕ್ಕಿಂತಲೂ ಹೆಚ್ಚಿನ ಪೋಷಣೆಯನ್ನು ನೀಡುತ್ತದೆ. ವಾಸ್ತವವಾಗಿ ಲವಂಗ ಎಂದರೆ ದಾಲ್ಚಿನ್ನಿ ಗಿಡದ ಹೂವುಗಳ ಮೊಗ್ಗುಗಳನ್ನು ಎಳೆಯದಿದ್ದಾಗಲೇ ಕೊಯ್ದು ಒಣಗಿಸಿದ ಭಾಗ. ಲವಂಗದ ಇತಿಹಾಸವನ್ನು ಕೆದಕಿದರೆ ಇದನ್ನು ತುಂಬಾ ಹಿಂದಿನಿಂದಲೂ ಮಾನವರು ಉಪಯೋಗಿಸುತ್ತಾ ಬಂದಿದ್ದರು ಎಂಬುದು ತಿಳಿದು ಬರುತ್ತದೆ.

  ಲೈಂಗಿಕ ಸಮಸ್ಯೆಗಳಿಂದ ಮುಕ್ತಿ
  ಲವಂಗವನ್ನು ನಿಯಮಿತವಾಗಿ ಸೇವಿಸುವುದರಿಂದ ಲೈಂಗಿಕ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ ಎನ್ನುತ್ತಾರೆ ವೈದ್ಯ ಅಬ್ರಾರ್ ಮುಲ್ತಾನಿ. ಲವಂಗವನ್ನು ಸೇವಿಸುವುದರಿಂದ ವೀರ್ಯದ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದಾಗ್ಯೂ, ನೀವು ಅದನ್ನು ಅತಿಯಾಗಿ ಸೇವಿಸುವುದನ್ನು ತಪ್ಪಿಸಬೇಕು, ಏಕೆಂದರೆ ಇದನ್ನು ಅತಿಯಾಗಿ ಸೇವಿಸುವುದರಿಂದ ಪುರುಷ ಹಾರ್ಮೋನ್ ಟೆಸ್ಟೋಸ್ಟೆರಾನ್ ಅನ್ನು ತೊಂದರೆಗೊಳಿಸಬಹುದು, ಆದ್ದರಿಂದ ಲವಂಗ ಮತ್ತು ಅದರ ಸಂಬಂಧಿತ ಉತ್ಪನ್ನಗಳನ್ನು ಆಯುರ್ವೇದಾಚಾರ್ಯರ ಮೇಲ್ವಿಚಾರಣೆಯಲ್ಲಿ ಮಾತ್ರ ಬಳಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

  ಪೂರ್ವ ಇಂಡೋನೇಶಿಯಾದಲ್ಲಿರುವ ದ್ವೀಪಗಳಲ್ಲಿ ನೂರಾರು ದೈತ್ಯಗಾತ್ರದ ಹಾಗೂ ಪುರಾತನ ವೃಕ್ಷಗಳಿವೆ. ಈ ದ್ವೀಪಗಳನ್ನು ಮೋಲುಕ್ಕಾಸ್ ಎಂದು ಕರೆಯುತ್ತಾರೆ. ಈ ದ್ವೀಪಗಳಿಗೆ ಸಾಂಬಾರ ದ್ವೀಪಗಳು ಎಂಬ ಅನ್ವರ್ಥನಾಮವೂ ಇದೆ. ಇದಕ್ಕೆ ಕಾರಣ ಇಲ್ಲಿ ಬೆಳೆಯುವ ವಿವಿಧ ಸಾಂಬಾರ ಪದಾರ್ಥಗಳ ಮರಗಳು. ಇವುಗಳಲ್ಲಿ ಕೆಲವು ಮರಗಳು ಈ ದ್ವೀಪಗಳಲ್ಲಿ ಮಾತ್ರವೇ ಬೆಳೆಯುವಂತಹದ್ದಾಗಿದ್ದು ಇದಲ್ಲಿ ಟಾರ್ನೇಟ್ ಎಂಬ ದ್ವೀಪದಲ್ಲಿ ಆಫೋ (Afo) ಎಂಬ ಹೆಸರಿನ ದಾಲ್ಚಿನ್ನಿಯ ಮರ ನಾನ್ನೂರು ವರ್ಷಗಳಷ್ಟು ಹಳೆಯದಾಗಿದ್ದು ವಿಶ್ವದ ಅತಿ ಹಳೆಯ ಮರವಾಗಿದೆ.

  ವಾಯು ಪ್ರಕೋಪ ಶಮನ
  ಲವಂಗದಲ್ಲಿ ಫೈಬರ್ ಅಂಶ ಹೇರಳವಾಗಿದೆ. ಹೀಗಾಗಿ ಮಲಬದ್ಧತೆ, ಗ್ಯಾಸ್ ಸಮಸ್ಯೆ ಮತ್ತು ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಗುಣಪಡಿಸಲು ಇದು ಸಹಾಯ ಮಾಡುತ್ತದೆ. ಅಲ್ಲದೇ ಇದು ಕೀಟನಾಶಕವೂ ಆಗಿದೆ. ಲವಂಗವು ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ರಂಜಕ, ಪೊಟ್ಯಾಸಿಯಮ್, ಸೋಡಿಯಂ ಮತ್ತು ಸತುವುಗಳಂತಹ ಖನಿಜಗಳಲ್ಲಿ ಸಮೃದ್ಧವಾಗಿದೆ. ಇವೆಲ್ಲವೂ ಆರೋಗ್ಯಕ್ಕೆ ಅಗತ್ಯವಾದ ಅಂಶಗಳೆಂದು ಪರಿಗಣಿಸಲಾಗಿದೆ. ಲವಂಗದ ಸೇವನೆಯಿಂದ ಜೀರ್ಣರಸಗಳು ಹೆಚ್ಚು ಸ್ರವಿಸಲು ಪ್ರಚೋದನೆ ಪಡೆಯುತ್ತದೆ. ತನ್ಮೂಲಕ ಜೀರ್ಣಕ್ರಿಯೆ ಉತ್ತಮಗೊಳ್ಳುತದೆ.ಇದರೊಂದಿಗೆ ಲವಂಗ ವಾಯು ಪ್ರಕೋಪವನ್ನು ಶಮನಗೊಳಿಸುತ್ತದೆ ಹಾಗೂ ಹೊಟ್ಟೆಯ ಉರಿ, ವಾಕರಿಕೆ ಹುಳಿತೇಗು ಮೊದಲಾದವುಗಳಿಂದ ರಕ್ಷಿಸುತ್ತದೆ.

  ಮಧುಮೇಹಕ್ಕೆ ಪರಿಣಾಮಕಾರಿ
  ಲವಂಗವು ದೇಹದಲ್ಲಿನ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಲವಂಗವು ಮಧುಮೇಹ ರೋಗಿಗಳಿಗೆ ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ. ಇದು ದೇಹದೊಳಗೆ ಇನ್ಸುಲಿನ್ ನಂತೆ ಕೆಲಸ ಮಾಡುತ್ತದೆ. ಲವಂಗವು ರಕ್ತದೊತ್ತಡವನ್ನು ನಿಯಂತ್ರಿಸುವ ಗುಣಗಳನ್ನು ಹೊಂದಿದೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ. ರಕ್ತದೊತ್ತಡದ ಸಮಸ್ಯೆಗೆ ಇದು ಪ್ರಯೋಜನಕಾರಿಯಾಗಿದೆ ಎಂದು ಆಯುರ್ವೇದ ವೈದ್ಯ ಅಬ್ರಾರ್ ಮುಲ್ತಾನಿ ಅವರು ಸಲಹೆ ನೀಡುತ್ತಾರೆ.

  ಬೆಳಿಗ್ಗೆ ಖಾಲಿ ಹೊಟ್ಟೆ(Empty Stomach)ಯಲ್ಲಿ 2 ಲವಂಗವನ್ನು ಸೇವಿಸುವುದರಿಂದ ಜೀರ್ಣಕಾರಿ ಸಮಸ್ಯೆಗಳು ಗುಣವಾಗುತ್ತವೆ. ಲವಂಗವು ಜೀರ್ಣಕಾರಿ ಕಿಣ್ವಗಳ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ, ಇದು ಮಲಬದ್ಧತೆ ಮತ್ತು ಅಜೀರ್ಣದಂತಹ ಜೀರ್ಣಕಾರಿ ಅಸ್ವಸ್ಥತೆಗಳನ್ನು ತಡೆಯುತ್ತದೆ ಎಂದು ತಿಳಿಸಿದ್ದಾರೆ. ರಾತ್ರಿ ಮಲಗುವಾಗ 2 ಲವಂಗವನ್ನು ಉಗುರುಬೆಚ್ಚಗಿನ ನೀರಿನಲ್ಲಿ ಸೇವಿಸುವುದರಿಂದ ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

  ಇದನ್ನು ಓದಿ:Health Tips: ದಿನಾ ಬೆಳಗ್ಗೆ 2 ಲವಂಗ ತಿಂದರೆ ಸಾಕು, ಇಷ್ಟೆಲ್ಲಾ ಆರೋಗ್ಯ ಸಮಸ್ಯೆಗಳು ಸದ್ದಿಲ್ಲದೇ ಮಾಯವಾಗುತ್ತವೆ !

  ತಲೆನೋವು ಎದುರಾದರೆ ಅಪಾಯಕಾರಿ ಮಾತ್ರೆಗಳನ್ನು ಸೇವಿಸಲು ಹೋಗಬೇಡಿ. ಬದಲಿಗೆ ಕೆಲವು ಲವಂಗಗಳನ್ನು ನುಣ್ಣಗೆ ಅರೆದು ಇದಕ್ಕೆ ಕೊಂಚವೇ ಕಲ್ಲುಪ್ಪು ಸೇರಿಸಿ ಇದನ್ನು ಒಂದು ಲೋಟ ಬಿಸಿ ಹಾಲಿಗೆ ಬೆರೆಸಿ ಕುಡಿಯಿರಿ. ತಲೆನೋವು ತಕ್ಷಣ ಮಾಯವಾಗುತ್ತದೆ. ಲವಂಗದಲ್ಲಿರುವ ಆಂಟಿ ಆಕ್ಸಿಡೆಂಟುಗಳು ದೇಹದಲ್ಲಿರುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ಹಾಗೂ ದೇಹದಲ್ಲಿ ಸಂಗ್ರಹವಾಗಿದ್ದ ಕಲ್ಮಶಗಳನ್ನು ನಿವಾರಿಸುವ ಮೂಲಕ ಯಕೃತ್ ಅನ್ನು ರಕ್ಷಿಸುತ್ತದೆ.
  Published by:vanithasanjevani vanithasanjevani
  First published: