Testosterone Level: ಪುರುಷರ ದೇಹದಲ್ಲಿ ಟೆಸ್ಟೋಸ್ಟೆರಾನ್ ಮಟ್ಟ ಹೆಚ್ಚಿಸಲು, ಫಲವತ್ತತೆ ಮಟ್ಟ ಕಾಪಾಡಲು ಇದನ್ನು ಸೇವಿಸಿ!   

ಲವಂಗವನ್ನು ಭಾರತೀಯ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಬಳಕೆ ಮಾಡಲಾಗುತ್ತದೆ. ವೈಜ್ಞಾನಿಕವಾಗಿ ಲವಂಗವನ್ನು ಸಿಜಿಜಿಯಂ ಅರೋಮ್ಯಾಟಿಕಮ್ ಎಂದು ಕರೆಯುತ್ತಾರೆ. ಲವಂಗ ಪುರುಷರ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನಮಗೆ ಶೀತ (Cold) ಅಥವಾ ಗಂಟಲು ನೋವು (Pain) ಬಂದಾಗ ಲವಂಗ (Cloves) ಅಗಿದು ತಿನ್ನಲು ಅನೇಕ ಬಾರಿ ಹೇಳುವುದನ್ನು ನೀವು ಕೇಳಿರುತ್ತೀರಿ. ಲವಂಗದ ಎಣ್ಣೆ (Cloves Oil) ಹಲ್ಲುನೋವಿನ ಸಮಸ್ಯೆಗೆ ಉತ್ತಮ ಪರಿಹಾರ ನೀಡುತ್ತದೆ. ಅಲ್ಲದೆ  ನಾವು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕಷಾಯ ಮಾಡಿ ಕುಡಿಯುತ್ತೇವೆ. ಈ ವೇಳೆ ಲವಂಗವನ್ನು ಸಹ ಕಷಾಯಕ್ಕೆ ಸೇರಿಸುತ್ತೇವೆ. ಲವಂಗವನ್ನು ಕೇವಲ ಕಷಾಯದಲ್ಲಿ ಮಾತ್ರ ಬಳಸುವುದಿಲ್ಲ. ಅಡುಗೆಯಲ್ಲಿ ಹಾಗೂ ವಿವಿಧ ಪಾಕ ವಿಧಾನಗಳಲ್ಲಿ, ಔಷಧವಾಗಿ ಬಳಕೆ ಮಾಡುತ್ತಾರೆ. ವೈಜ್ಞಾನಿಕವಾಗಿ ಲವಂಗವನ್ನು ಸಿಜಿಜಿಯಂ ಅರೋಮ್ಯಾಟಿಕಮ್ ಎಂದು ಕರೆಯುತ್ತಾರೆ.

  ಪುರುಷರ ಆರೋಗ್ಯಕ್ಕೆ ಲವಂಗ

  ಲವಂಗವನ್ನು ಭಾರತೀಯ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಬಳಕೆ ಮಾಡಲಾಗುತ್ತದೆ. ಇದು ಆಂಟಿಫಂಗಲ್, ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿವೈರಲ್, ಉರಿಯೂತದ, ಉತ್ಕರ್ಷಣ ನಿರೋಧಕ ಮತ್ತು ಆಂಟಿಕಾರ್ಸಿನೋಜೆನಿಕ್ ಮುಂತಾದ ಅನೇಕ ಗುಣಗಳನ್ನು ಹೊಂದಿದೆ. ಲವಂಗವು ಎಲ್ಲಾ ವಯಸ್ಸಿನವರಿಗೆ ಒಳ್ಳೆಯದು.

  ಲವಂಗ ಪುರುಷರ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. ಪುರುಷರ ದೇಹದಲ್ಲಿ ಟೆಸ್ಟೋಸ್ಟೆರಾನ್ ಮಟ್ಟ ಹೆಚ್ಚಿಸಲು ಮತ್ತು ಪುರುಷರ ಫಲವತ್ತತೆ ಮಟ್ಟವನ್ನು ಸುಧಾರಿಸಲು ಲವಂಗ ಸಹಾಯ ಮಾಡುತ್ತದೆ. ಹಾಗಾದರೆ ಪುರುಷರ ಟೆಸ್ಟೋಸ್ಟೆರಾನ್ ಮಟ್ಟ ಹೆಚ್ಚಿಸಲು ಲವಂಗ ಹೇಗೆ  ಪ್ರಯೋಜನಕಾರಿಯಾಗಿದೆ ಎಂದು ಇಲ್ಲಿ ತಿಳಿಯೋಣ.

  ಇದನ್ನೂ ಓದಿ: ನಿಮ್ಮ ಮಗು ಓದೋಕೆ ಉದಾಸೀನಾ ಮಾಡ್ತಿದ್ಯಾ? ಈ ಟ್ರಿಕ್ಸ್ ಸ್ವಲ್ಪ ಟ್ರೈ ಮಾಡಿ ನೋಡಿ

  ವೀರ್ಯ ಉತ್ಪಾದನೆ ಹೆಚ್ಚಿಸಲು ಲವಂಗ ಸೇವನೆ

  ವಯಸ್ಸು ಹೆಚ್ಚಾಗುವಿಕೆ, ಧೂಮಪಾನ, ಕಳಪೆ ಆಹಾರ, ಮದ್ಯಪಾನ ಮತ್ತು ದೀರ್ಘಕಾಲದ ಕಾಯಿಲೆಗಳಿಂದಾಗಿ ಅನೇಕ ಜನರ ಕೆಟ್ಟ ಜೀವನಶೈಲಿ ಹಾಗೂ ಇತರೆ ಅಂಶಗಳು ಪುರುಷರ ಫಲವತ್ತತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಇದು ವೀರ್ಯದ ಸಂಖ್ಯೆ ಕಡಿಮೆ ಆಗಲು ಕಾರಣವಾಗುತ್ತದೆ. ಪುರುಷ ಫಲವತ್ತತೆ ಕಾಪಾಡಿಕೊಳ್ಳುವಲ್ಲಿ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ.

  ಒಂದು ಅಧ್ಯಯನದ ಪ್ರಕಾರ, ಲವಂಗವು ಶಕ್ತಿಯುತ ಉತ್ಕರ್ಷಣ ನಿರೋಧಕ ಚಟುವಟಿಕೆ ಹೊಂದಿದೆ. ಇದು ಸ್ವತಂತ್ರ ರಾಡಿಕಲ್ಗಳ ವಿರುದ್ಧ ಹೋಗುವ ಮೂಲಕ ಸಂತಾನೋತ್ಪತ್ತಿ ಅಂಗಗಳಿಗೆ ಹಾನಿಯಾಗದಂತೆ ರಕ್ಷಣೆ ಮಾಡುತ್ತದೆ. ಇದು ವೀರ್ಯದ ಸಂಖ್ಯೆ ಹೆಚ್ಚಿಸುತ್ತದೆ ಮತ್ತು ವೀರ್ಯದ ಗುಣಮಟ್ಟ ಮತ್ತು ಚಲನಶೀಲತೆ ಸುಧಾರಿಸುತ್ತದೆ.

  ಅಧಿಕ ರಕ್ತದೊತ್ತಡದ ಅಪಾಯ ಕಡಿಮೆ ಮಾಡುತ್ತದೆ

  ವಿವಿಧ ಅಧ್ಯಯನಗಳ ಪ್ರಕಾರ, ಮಹಿಳೆಯರಿಗಿಂತ ಪುರುಷರು ಅಧಿಕ ರಕ್ತದೊತ್ತಡಕ್ಕೆ ಹೆಚ್ಚು ಒಳಗಾಗುತ್ತಾರೆ. ಲವಂಗದಲ್ಲಿರುವ ಕಾರ್ಡಿಯೋಪ್ರೊಟೆಕ್ಟಿವ್ ಚಟುವಟಿಕೆಯು ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತದೆ. ಆದರೆ ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹೃದಯ ಸ್ನಾಯುವಿನ ಆರೋಗ್ಯ ಕಾಪಾಡುತ್ತದೆ.

  ಕಾಮವನ್ನು ಹೆಚ್ಚಿಸಲು ಲವಂಗ ಸೇವನೆ

  ಲವಂಗಗಳು ಫ್ಲೇವನಾಯ್ಡ್‌ಗಳು, ಆಲ್ಕಲಾಯ್ಡ್‌ಗಳು ಮತ್ತು ಸಪೋನಿನ್‌ಗಳಂತಹ ಫೈಟೊಕೆಮಿಕಲ್‌ಗಳನ್ನು ಹೊಂದಿವೆ. ಇದು ಲೈಂಗಿಕ ಬಯಕೆಯನ್ನು ಉತ್ತೇಜಿಸಲು ಅಥವಾ ಕಾಮವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಲೈಂಗಿಕ ಕಾರ್ಯಕ್ಷಮತೆ ಮತ್ತು ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸುತ್ತದೆ.

  ಅಕಾಲಿಕ ಸ್ಖಲನ ತಡೆಗಟ್ಟಲು ಲವಂಗವನ್ನು ಶತಮಾನಗಳಿಂದ ಬಳಕೆ ಮಾಡಲಾಗ್ತಿದೆ. ಅಧ್ಯಯನದ ಪ್ರಕಾರ ಲವಂಗವು ನರಮಂಡಲವನ್ನು ಉತ್ತೇಜಿಸುವ ಮೂಲಕ ಲೈಂಗಿಕ ಕ್ರಿಯೆಗೆ ಪ್ರಚೋದನೆ ನೀಡುತ್ತದೆ.

  ಮಧುಮೇಹ ನಿರ್ವಹಣೆಗೆ ಲವಂಗ

  ಮಹಿಳೆಯರಿಗಿಂತ ಪುರುಷರಿಗೆ ಮಧುಮೇಹ ಬರುವ ಸಾಧ್ಯತೆ ಎರಡು ಪಟ್ಟು ಹೆಚ್ಚು. ಲವಂಗ ಹೆಚ್ಚಿನ ಆಂಟಿಹೈಪರ್ಗ್ಲೈಸೆಮಿಕ್, ಹೆಪಟೊಪ್ರೊಟೆಕ್ಟಿವ್, ಹೈಪೋಲಿಪಿಡೆಮಿಕ್ ಮತ್ತು ಆಂಟಿಆಕ್ಸಿಡೇಟಿವ್ ಚಟುವಟಿಕೆ ಹೊಂದಿದೆ. ದೇಹದಲ್ಲಿನ ಗ್ಲೂಕೋಸ್ ಮತ್ತು ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು ಮತ್ತು ಯಕೃತ್ತಿನ ಜೀವಕೋಶಗಳಿಗೆ ಹಾನಿಯಾಗದಂತೆ ತಡೆಯಲು ಸಹಕಾರಿ.

  ಇದನ್ನೂ ಓದಿ: ಯಾವ ಡಯಟ್ ಪ್ಲಾನ್ ಫಾಲೋ ಮಾಡಿದ್ರೆ ವೇಗವಾಗಿ ತೂಕ ಕಡಿಮೆ ಮಾಡಬಹುದು? ಸಂಶೋಧನೆ ಕಂಡುಕೊಂಡಿದ್ದೇನು?

  ಹಲ್ಲಿನ ಆರೋಗ್ಯಕ್ಕೆ ಲವಂಗ

  ಲವಂಗವು ಆಂಟಿಜಿವಿಟಿಸ್ ಮತ್ತು ಆಂಟಿಪ್ಲೇಕ್ ಗುಣಲಕ್ಷಣ ಹೊಂದಿದೆ. ಇದು ಹಲ್ಲುಗಳ ಆರೋಗ್ಯಕ್ಕೆ ಸಹಕಾರಿ. ಲವಂಗವು ಬಾಯಿಯ ಸೂಕ್ಷ್ಮಾಣುಜೀವಿಗಳನ್ನು ಪ್ರತಿಬಂಧಿಸುತ್ತದೆ. ಸೋಂಕು, ಉರಿಯೂತ ಮತ್ತು ಒಸಡುಗಳಲ್ಲಿನ ನೋವಿಗೆ ಪರಿಹಾರ ನೀಡುತ್ತದೆ. ಪುರುಷರಲ್ಲಿ ಬಾಯಿಯ ದುರ್ವಾಸನೆ ಮತ್ತು ಪಿರಿಯಾಂಟೈಟಿಸ್ ತಡೆಯುತ್ತದೆ.
  Published by:renukadariyannavar
  First published: