Health tips: ಸಿಹಿ ತಿನ್ನಬೇಕೆಂಬ ತುಡಿತವೇ..? ಇದನ್ನು ಹತ್ತಿಕ್ಕಲು ಹೀಗೆ ಮಾಡಿ..

Helath tips: ಲವಂಗವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ, ಅದು ಸಿಹಿ ತಿನ್ನಬೇಕೆಂಬ ನಮ್ಮ ತುಡಿತ ಹತ್ತಿಕ್ಕಲು ಸಹಾಯ ಮಾಡುತ್ತದೆ.

ಲವಂಗ

ಲವಂಗ

  • Share this:
ಲವಂಗ (Cloves), ದಾಲ್ಚಿನಿ, ಏಲಕ್ಕಿ ಮತ್ತು ಇತರ ಕೆಲವು ಮಸಾಲೆ ಪದಾರ್ಥಗಳು(Several other spices ) ಪ್ರತಿಯೊಂದು ಅಡುಗೆ ಮನೆಯಲ್ಲಿ(Indian pantry) ಇದ್ದೇ ಇರುತ್ತವೆ. ಈ ಪರಿಮಳಯುಕ್ತ ಮಸಾಲೆಗಳು, ಮಸಾಲಾ ಚಹಾದಿಂದ (Masala chai )ಹಿಡಿದು ದಾಲ್‍ಗಳವರೆಗೆ ದಿನನಿತ್ಯದ ಮಾಡುವ ಒಂದಲ್ಲ ಒಂದು ಅಡುಗೆಯಲ್ಲಿ ಬಳಕೆಯಾಗುತ್ತಲೇ ಇರುತ್ತವೆ. ಅವುಗಳ ಜನಪ್ರಿಯತೆಗೆ (Popularity)ಕಾರಣ ಕೇವಲ ಅವುಗಳ ಸುವಾಸನೆಯಲ್ಲ, ವೈದ್ಯಕೀಯ ಲಾಭಗಳು ಕೂಡ. ಭಾರತೀಯ ಮಸಾಲೆಗಳು ಹಲವಾರು ಪೌಷ್ಟಿಕಾಂಶಗಳನ್ನು ಹೊಂದಿದ್ದು, ಅನಾದಿ ಕಾಲದಿಂದಲೂ ವೈದ್ಯಕೀಯ (Traditional medical practice) ಚಿಕಿತ್ಸೆಯಲ್ಲಿ ಬಳಕೆಯಲ್ಲಿವೆ.

ಪೌಷ್ಟಿಕಾಂಶ ತಜ್ಞರ ಪ್ರಕಾರ
ಇವುಗಳನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ, ಈ ಮಸಾಲೆಗಳು ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡಬಹುದು, ಋತುಕಾಲಿಕ ಕಾಯಿಲೆಗಳಿಂದ ಕಾಪಾಡಬಹುದು ಮತ್ತು ದೇಹವನ್ನು ಒಳಗಿನಿಂದ ಪೋಷಿಸಬಹುದು.

ಇದನ್ನೂ ಓದಿ: Clove Tea: ಲವಂಗ ಟೀ ಬಗ್ಗೆ ಕೇಳಿದ್ದೀರಾ? ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ಗೊತ್ತಾ?

ಮಸಾಲೆ ಪದಾರ್ಥಗಳ ಬಗ್ಗೆ ಇದೇ ರೀತಿಯ ಅಭಿಪ್ರಾಯ ಹೊಂದಿರುವ ಸೆಲೆಬ್ರಿಟಿ ಪೌಷ್ಟಿಕಾಂಶ ತಜ್ಞ ಮತ್ತು ಲೈಫ್ ಕೋಚ್ ಲ್ಯೂಕ್ ಕೌಂಟಿನೋ ತಮ್ಮ ಹೊಸ ಇನ್‍ಸ್ಟಾಗ್ರಾಂ ಪೋಸ್ಟ್‌ನಲ್ಲಿ ಲವಂಗದಲ್ಲಿನ ಆರೋಗ್ಯಕರ ಲಾಭಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಲವಂಗದ ಆರೋಗ್ಯಕರ ಲಾಭಗಳು
ಲವಂಗ ಅಡುಗೆ ಮನೆಯಲ್ಲಿರುವ ಪ್ರಮುಖ ಮಸಾಲೆಗಳಲ್ಲಿ ಒಂದು. ಅಡುಗೆಗಳಲ್ಲಿ ಹೆಚ್ಚಾಗಿ ಬಳಸಲ್ಪಡುವ ಇದು, ಕಫ, ಶೀತ, ತಲೆ ನೋವು ಮತ್ತಿತರ ಕಾಯಿಲೆಗಳಿಗೆ ಮನೆ ಮದ್ದಾಗಿಯೂ ಬಳಸಲ್ಪಡುತ್ತದೆ. ಅವು ಉರಿಯೂತ ನಿವಾರಕ, ವೈರಲ್ ನಿವಾರಕ, ವಾಯುಹಾರಿ ಮತ್ತು ಆ್ಯಂಟಿ - ಫ್ಲಟುಲೆಂಟ್ ಗುಣಗಳನ್ನು ಹೊಂದಿದೆ. ಬೈದ್ಯನಾಥ್‍ನ ಡಾ. ಅಶುತೋಶ್ ಗೌತಮ್ ಪ್ರಕಾರ, “ಲವಂಗ ( ಮತ್ತು ಲವಂಗದ ಎಣ್ಣೆ) ಆ್ಯಂಟಿ ಆಕ್ಸಿಡೆಂಟ್‍ಗಳ ಉತ್ಕೃಷ್ಟ ಮೂಲಗಳಲ್ಲಿ ಒಂದಾಗಿದೆ. ಅದನ್ನು ಮುಖ್ಯವಾಗಿ ಹಲ್ಲುನೋವು ಮತ್ತು ಹೊಟ್ಟೆನೋವಿಗೆ ಆ್ಯಂಟಿಸೆಪ್ಟಿಕ್ ಮತ್ತು ನೋವು ನಿವಾರಕವಾಗಿ ಬಳಸುತ್ತಾರೆ.”

ಸೆಲೆಬ್ರಿಟಿ ಪೌಷ್ಟಿಕಾಂಶ ತಜ್ಞ ಮತ್ತು ಲೈಫ್ ಕೋಚ್ ಲ್ಯೂಕ್ ಕೌಂಟಿನೋ ಲವಂಗದ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾ, ಲವಂಗವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ, ಅದು ಸಿಹಿ ತಿನ್ನಬೇಕೆಂಬ ನಮ್ಮ ತುಡಿತ ಹತ್ತಿಕ್ಕಲು ಸಹಾಯ ಮಾಡುತ್ತದೆ.

ಹೌದು, ಈ ಬೆಚ್ಚಗಿನ ಮತ್ತು ಸಿಹಿಯಾದ ಮಸಾಲೆ ಪದಾರ್ಥದಲ್ಲಿ ನಿಗ್ರಿಸೈನ್ ಇದೆ. ನಿಗ್ರಿಸೈನ್ ಇನ್ಸುಲಿನ್ ಸಂವೇದನೆ ಸುಧಾರಿಸುತ್ತದೆ ಮತ್ತು ಸಿಹಿ ತಿನ್ನಬೇಕೆಂಬ ಬಯಕೆ ಕಡಿಮೆ ಮಾಡುತ್ತದೆ ಎಂದು ತಿಳಿಸಿದ್ದಾರೆ. ಲವಂಗ, ಹಲ್ಲು ನೋವು, ಬಾಯಿಯಲ್ಲಿನ ದುರ್ವಾಸನೆ, ಅಜೀರ್ಣ, ವಾಂತಿ ಮತ್ತಿತರ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಸಹಾಯ ಮಾಡುತ್ತದೆ ಎಂದು ಲ್ಯೂಕ್ ಕೌಂಟಿನೋ ಮಾಹಿತಿ ಹಂಚಿಕೊಂಡಿದ್ದಾರೆ.

ಲವಂಗವನ್ನು ಸೇವಿಸಬೇಕಾದ ಪ್ರಮಾಣ ಮತ್ತು ವಿಧಾನ
ಲ್ಯೂಕ್ ಕೌಂಟಿನೋ, ಆರೋಗ್ಯಕರ ಲಾಭಗಳನ್ನು ಪಡೆಯಲು ಲವಂಗವನ್ನು ಹೇಗೆ ಸೇವಿಸಬೇಕು ಎಂಬುದರ ಬಗ್ಗೆ ಸ್ಪಷ್ಟ ಸೂಚನೆಗಳನ್ನು ಹಂಚಿಕೊಂಡಿದ್ದಾರೆ. ಲವಂಗಗಳನ್ನು ಕಚ್ಚಬೇಡಿ ಮತ್ತು ನುಂಗಬೇಡಿ; ಬದಲಿಗೆ ನಿಮಗೆ ಸಾಧ್ಯವಾದಷ್ಟು ಸಮಯ ಒಂದು ಅಥವಾ ಎರಡು ಲವಂಗಗಳನ್ನು ಚೀಪಿರಿ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Side Effects Of Cloves: ಅತಿಯಾದ್ರೆ ಲವಂಗ ಕೂಡ ಆರೋಗ್ಯಕ್ಕೆ ಹಾನಿಕಾರಕ

ಅದು ಬಹಳಷ್ಟು ಜನರಿಗೆ ಅನುಕೂಲಕರವಾಗಿದೆ, ನಿಮ್ಮ ಮೇಲೆ ಅದು ಕೆಲಸ ಮಾಡದೆ ಇರಬಹುದು. ನಿಮಗೆ ಅದು ಹೊಂದಿಕೊಳ್ಳುತ್ತದಾದರೆ ಸೇವಿಸಿ, ಇಲ್ಲವಾದಲ್ಲಿ ಸೇವಿಸಬೇಡಿ” ಎಂದು ಕೌಂಟಿನೋ ಸಲಹೆ ನೀಡಿದ್ದಾರೆ.

ಪ್ರಯೋಜನ
ಬಹುಶಃ ನಿಮಗೆ ತಿಳಿದಿರಲಿಕ್ಕಿಲ್ಲ. ಲವಂಗದಲ್ಲಿ ವಿಟಮಿನ್ ಸಿ ಅಂಶಗಳಿದೆ. ಇದು ರಕ್ತದಲ್ಲಿ ಬಿಳಿ ರಕ್ತಕಣಗಳನ್ನು ಹೆಚ್ಚಿಸುತ್ತದೆ. ಇದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಖಾಯಿಲೆಗಳ ವಿರುದ್ಧ ಹೋರಾಡಲು ಸಹಕಾರಿಯಾಗುತ್ತದೆ.
ಲವಂಗ ನಮ್ಮ ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ. ಲವಂಗದಲ್ಲಿನ ಅಂಶಗಳು ಜೀರ್ಣರಸಗಳನ್ನು ಹೆಚ್ಚು ಉತ್ಪತ್ತಿ ಮಾಡುತ್ತವೆ. ಇದರಿಂದ ಮಲಬದ್ಧತೆ ಸೇರಿದಂತೆ ಜೀರ್ಣಾಂಗಕ್ಕೆ ಸಂಬಂಧಿಸಿದ ನಾನಾ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ.
ಲಿವರ್ ಅಥವಾ ಯಕೃತ್ತಿನ ಕಾರ್ಯಕ್ಷಮತೆ ಹೆಚ್ಚಿಸುವ ತಾಕತ್ತು ಲವಂಗದಲ್ಲಿದೆ. ನಮ್ಮ ದೇಹದೊಳಗಿನ ಎಲ್ಲಾ ಟಾಕ್ಸಿನ್ ಅಥವಾ ವಿಷಕಾರಿ ಅಂಶಗಳನ್ನು ಹೊರಹಾಕುವ ಶಕ್ತಿ ಲಿವರ್​ಗಿದೆ. ಆ ಲಿಬರ್ ಸರಿಯಾಗಿ ಕೆಲಸ ಮಾಡದಿದ್ದರೆ ಸಮಸ್ಯೆಯಾಗುತ್ತದೆ. ಲವಂಗ ಲಿವರ್​ನ ಆರೋಗ್ಯ ಕಾಪಾಡುತ್ತದೆ.
Published by:vanithasanjevani vanithasanjevani
First published: