• Home
 • »
 • News
 • »
 • lifestyle
 • »
 • ನಿಮಗೆ ಸೆಲ್ಫಿ ಕ್ರೇಜ್ ಇದೆಯಾ..?; ಹಾಗಿದ್ದರೆ ತಪ್ಪದೇ ಈ ಸುದ್ದಿ ಓದಿ

ನಿಮಗೆ ಸೆಲ್ಫಿ ಕ್ರೇಜ್ ಇದೆಯಾ..?; ಹಾಗಿದ್ದರೆ ತಪ್ಪದೇ ಈ ಸುದ್ದಿ ಓದಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆತ್ಮಸ್ಥೈರ್ಯದ ಕೊರತೆ ಇರುವ ವ್ಯಕ್ತಿಗಳ ತಮ್ಮ ಆತ್ಮಸ್ಥೈರ್ಯ ವೃದ್ಧಿಸಿಕೊಳ್ಳಲು, ವ್ಯಸನಕಾರಿ ನಡವಳಿಕೆ ಹೊಂದಿರುವವರು ಈ ಸೆಲ್ಫಿ ಮಾನಸಿಕ ಸಮಸ್ಯೆಗೆ ಬೇಗತುತ್ತಾಗುತ್ತಾರೆ ಎನ್ನುತ್ತೆ ಸಂಶೋಧನೆ.

 • Share this:

  ಈಗೇನಿದ್ದರೂ ಮೊಬೈಲ್ ಜಮಾನ. ಯಾರ ಕೈಯಲ್ಲಿ ನೋಡಿದರೂ ಮೊಬೈಲ್ ಮೊಬೈಲ್. ನಿಂತರೂ ಕೂತರೂ ಸೆಲ್ಫಿ ಕ್ಲಿಕ್ಕಿಸುವ ಜನರನ್ನ ನೋಡೇ ಇರುತ್ತೀರಾ..? ಆ ರೀತಿಯ ಅಭ್ಯಾಸ ನಿಮಗೂ ಇದ್ದರೆ ಅದು ಮಾನಸಿಕ ಅಸ್ವಸ್ಥತೆ ಆಗಿರಬಹುದು ಜೋಕೆ.


  ಹೌದು, ಯಾವಾಗಲೂ ಮೊಬೈಲ್ ಹಿಡಿದುಕೊಂಡು ಸೆಲ್ಫಿ ಕ್ಲಿಕ್ಕಿಸುವ ಪ್ರವೃತ್ತಿ ಸೆಲ್ಫಿಟಿಸ್ ಎಂಬ ಮಾನಸಿಕ ಅಸ್ವಸ್ಥತೆ ಎನ್ನುತ್ತಿದೆ ಹೊಸದೊಂದು ಸಂಶೋಧನೆ. ನಾಟಿಂಗ್ ಹ್ಯಾಮ್`ನ ಟ್ರೆಂಟ್ ಯೂನಿವರ್ಸಿಟಿ ಮತ್ತು ಥಿಯಾಗರಾಜರ್ ಸ್ಕೂಲ್ ಆಫ್ ಮ್ಯಾನೇಜ್ ಮೆಂಟ್ ನಡೆಸಿದ ಸಂಶೋಧನೆಯಲ್ಲಿ ಈ ಸತ್ಯ ಹೊರಬಿದ್ದಿದೆ. ಸಂಶೊಧನೆಯ ಮಾಹಿತಿ ಆಧರಿಸಿದ ಮಾನಸಿಕ ತಜ್ಱರು ಸೆಲ್ಫಿ ಕ್ಲಿಕ್ಕಿಸುವುದು ಮಾನಸಿಕ ಅಸ್ವರ್ಸತತೆ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ.


  ನಿಮಗೆ ಪ್ರಪೋಸ್ ಮಾಡಿದವರು ನಿಜವಾಗಿಯೂ ಪ್ರೀತಿಸುತ್ತಾರಾ? ಲವ್ ಟೆಸ್ಟ್ ಮಾಡೋದು ಹೇಗೆ? ಇಲ್ಲಿದೆ ಟ್ರಿಕ್ಸ್


  ಆತ್ಮಸ್ಥೈರ್ಯದ ಕೊರತೆ ಇರುವ ವ್ಯಕ್ತಿಗಳ ತಮ್ಮ ಆತ್ಮಸ್ಥೈರ್ಯ ವೃದ್ಧಿಸಿಕೊಳ್ಳಲು, ವ್ಯಸನಕಾರಿ ನಡವಳಿಕೆ ಹೊಂದಿರುವವರು ಈ ಸೆಲ್ಫಿ ಮಾನಸಿಕ ಸಮಸ್ಯೆಗೆ ಬೇಗತುತ್ತಾಗುತ್ತಾರೆ ಎನ್ನುತ್ತೆ ಸಂಶೋಧನೆ. 200 ಸ್ವಯಂಪ್ರೇರಿತರನ್ನ ಸಂಶೋಧನೆಗೆ ಒಳಪಡಿಸಿ ಅದರ ಅಂಕಿ ಅಂಶದ ಆಧಾರದ ಮೇಲೆ ಈ ನಿರ್ಧಾರಕ್ಕೆ ಬರಲಾಗಿದೆ.


  ಸಂಶೋಧನೆಗೆ ಒಳಪಟ್ಟ 200 ಮಂದಿಯ ಪೈಕಿ ಶೇ.34ರಷ್ಟು ಜನ ಬಾರ್ಡರ್ ಲೈನ್ ಸೆಲ್ಫಿಟಿಸ್, ಶೇ.40.5ರಷ್ಟು ಜನ ತೀವ್ರ ಸೆಲ್ಫಿಟಿಸ್, ಶೇ.25.5ರಷ್ಟು ಜನ ದೀರ್ಘಕಾಲದಿಂದ ಸೆಲ್ಫಿಟಿಸ್ ಸಮಸ್ಯೆಯಿಂದ ಬಳಲುತ್ತಿರುವುದು ಕಂಡು ಬಂದಿದೆ. ಸೆಲ್ಫಿ ಮೋಹ ಪುರುಷರಲ್ಲಿ ಶೇ. 57.5ರಷ್ಟಿದ್ದರೆ ಮಹಿಳೆಯರಲ್ಲಿ 42.5ರಷ್ಟಿದೆ.

  Published by:Vinay Bhat
  First published: