• Home
  • »
  • News
  • »
  • lifestyle
  • »
  • Save Water: ಮನೆಯಲ್ಲಿ ನೀರು ವೇಸ್ಟ್​ ಆಗದಂತೆ ತಡೆಯಲು ಸೂಪರ್ ಹ್ಯಾಕ್ಸ್​ ಟ್ರೈ ಮಾಡಿ

Save Water: ಮನೆಯಲ್ಲಿ ನೀರು ವೇಸ್ಟ್​ ಆಗದಂತೆ ತಡೆಯಲು ಸೂಪರ್ ಹ್ಯಾಕ್ಸ್​ ಟ್ರೈ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Ways to Reduce Water Wastage: ನೀರು ನಮ್ಮ ಅಮೂಲ್ಯವಾದ ಸಂಪನ್ಮೂಲವಾಗಿದೆ ಎಂದು ನಾವು ಅರ್ಥಮಾಡಿಕೊಂಡಾಗ ಮಾತ್ರ, ಅದನ್ನು ಸಂರಕ್ಷಿಸಲು ನಾವು ಕ್ರಮಗಳನ್ನು ತೆಗೆದುಕೊಳ್ಳಬಹುದು.

  • Share this:

ತಾಜಾ, ಶುದ್ಧ, ಕುಡಿಯಬಹುದಾದ ನೀರು (Fresh And Clean Water) ನಮ್ಮ ಭೂಮಿಯಲ್ಲಿ (Earth) ಸೀಮಿತ ಸಂಪನ್ಮೂಲ ಎಂಬುದು ನೆನಪಿರಬೇಕಾದ ವಿಚಾರ. ಪ್ರಪಂಚದಾದ್ಯಂತ ನೀರು ಹೆಚ್ಚಾಗಿ ಕಂಡುಬಂದರೂ, ಅದರಲ್ಲಿ ಹೆಚ್ಚಿನ ನೀರಿನಲ್ಲಿ ಲವಣಗಳಿರುತ್ತದೆ. ಸಮುದ್ರ ಅಥವಾ ಸಮುದ್ರದ ನೀರಿನಿಂದ ಲವಣಗಳನ್ನು ಹೊರತೆಗೆಯುವುದು ದುಬಾರಿ ಪ್ರಕ್ರಿಯೆ. ಹಲವಾರು ಬಾರಿ ಕಲುಷಿತ ನೀರು ಜನರ ಪ್ರಾಣಕ್ಕೆ ಕುತ್ತು ತಂದಿದೆ.  ನೀರು ನಮ್ಮ ಅಮೂಲ್ಯವಾದ ಸಂಪನ್ಮೂಲವಾಗಿದೆ ಎಂದು ನಾವು ಅರ್ಥಮಾಡಿಕೊಂಡಾಗ ಮಾತ್ರ, ಅದನ್ನು ಸಂರಕ್ಷಿಸಲು ನಾವು ಕ್ರಮಗಳನ್ನು ತೆಗೆದುಕೊಳ್ಳಬಹುದು. ಪ್ರತಿ ದಿನ ಸ್ವಲ್ಪ ನೀರು ಉಳಿಸಿದರೂ (Save Water) ಸಾಕು. ಹಾಗಾದ್ರೆ ಮೊದಲು ನಿಮ್ಮ ಮನೆಯಲ್ಲಿ ನೀರು ವೇಸ್ಟ್​ ಆಗದಂತೆ ತಡೆಯಲು ಕೆಲ ಟಿಪ್ಸ್ ಇಲ್ಲಿದೆ.  


ನಿಮಗೆ ತಿಳಿಯದೆಯೇ ನೀರು ವ್ಯರ್ಥವಾಗಬಹುದಾದ ಕಲೆ ಲೀಕೇಜ್​ ಸ್ಥಳಗಳನ್ನು ಪರಿಶೀಲನೆ ಮಾಡುವುದು ಮುಖ್ಯ. ನಿಮಗೆ ತಿಳಿಯದಿದ್ದರೆ, ಅದರಲ್ಲಿ ಪರಿಣಿತಿ ಪಡೆದಿರುವವರನ್ನು ಕರೆಸಿ, ಚೆಕ್ ಮಾಡಿಸಿ. ನೀವು ಪರ್ಯಾಯವಾಗಿ ನಿಮ್ಮ ನೀರಿನ ಮೀಟರ್ ಅನ್ನು ಬಳಸಬಹುದು.


ಕಡಿಮೆ ನೀರು ಬಳಕೆ ಮಾಡಿ


ಪ್ರತಿ ಬಳಕೆಯಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ಸಂರಕ್ಷಿಸಲು ಬಟ್ಟೆ ಮತ್ತು ಡಿಶ್‌ವಾಶರ್‌ಗಳನ್ನು ತೊಳೆಯುವಾಗ ಕೆಲ ಮುನ್ನೆಚ್ಚರಿಕೆವಹಿಸಬೇಕು.  ಪ್ರತಿ ಬಾರಿ ಯಂತ್ರದ ಸಾಮರ್ಥ್ಯದ ಅರ್ಧದಷ್ಟು ಮಾತ್ರ ಬಳಸಿದರೆ ಬಹಳಷ್ಟು ನೀರು ವ್ಯರ್ಥವಾಗುತ್ತದೆ. ಅಲ್ಲದೆ, ಪಾತ್ರೆ ತೊಳೆಯುವಾಗ ಸಹ ಒಂದೇ ಬಾರಿಗೆ ತೊಳೆಯಿರಿ, ಪದೇ ಪದೇ ಅರ್ಧ ಅರ್ಧ ಮಾಡಬೇಡಿ.


ಎಲ್ಲದಕ್ಕಿಂತ ಮುಖ್ಯವಾಗಿ ನೀವು ಗಮನಿಸಿರಬಹುದು, ನಲ್ಲಿಯನ್ನು ಓಪನ್ ಮಾಡಿದ ತಕ್ಷಣ ಜೋರಾಗಿ ನೀರು ಬರುತ್ತದೆ. ಇದು ನೀರು ವೇಸ್ಟ್​ ಆಗಲು ಮುಖ್ಯವಾದ ಕಾರಣ. ಸಣ್ಣ ಪ್ರಮಾಣದಲ್ಲಿ ಹಾಗೂ ಅಗತ್ಯವಾದಷ್ಟು ಮಾತ್ರ ನೀರು ಬಿಟ್ಟುಕೊಂಡು ಬಳಕೆ ಮಾಡುವುದು ಸೂಕ್ತ. ನಿಮಗೆ ಇದಕ್ಕೆ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಉಪಕರಣಗಳು ಸಹ ಬಹಳಷ್ಟಿದೆ.
ಮೊದಲೇ ಹೇಳಿದಂತೆ ನೀರಿನ ಲೀಕೇಜ್​ಗಳ ಪರಿಶೀಲನೆ ಮಾಡಬೇಕು. ಆದರೆ, ನಾವು ಒಂದು ತಪ್ಪು ಮಾಡುತ್ತೇವೆ. ನಲ್ಲಿಯನ್ನು ನಿಲ್ಲಿಸಿದ ತಕ್ಷಣ ಬರುವ ಸಣ್ಣ ಪ್ರಮಾಣದ ನೀರನ್ನು ನೆಗ್ಲೆಕ್ಟ್​ ಮಾಡುತ್ತೇವೆ. ಅಲ್ಲದೇ, ನಾವು ಸಹ ನಲ್ಲಿಯನ್ನು ಗಟ್ಟಿಯಾಗಿ ಕಟ್ಟುವುದಿಲ್ಲ. ಇದು ನೀರು ವೇಸ್ಟ್ ಆಗಲು ಕಾರಣವಾಗುತ್ತದೆ.


ಇದನ್ನೂ ಓದಿ: ಈ 2 ವಸ್ತುಗಳನ್ನು ಅರಿಶಿನ ಹಾಲಿಗೆ ಸೇರಿಸಿ ಕುಡಿದರೆ ಡಯಾಬಿಟಿಸ್​ ಕಂಟ್ರೋಲ್ ಆಗುತ್ತೆ


ಮರುಬಳಕೆ ಮಾಡಲು ಪ್ಲ್ಯಾನ್ ಮಾಡಿ


ಮನೆಯ ಹೊರಗಡೆಯ ಪೈಪ್ ಲೈನ್ ಅಥವಾ ಟಾಯ್ಲೆಟ್ ಅಥವಾ ಅಡುಗೆ ಕೋಣೆಯಲ್ಲಿರುವ ಸಿಂಕ್ ನಲ್ಲಿ ಯಾವಾಗಲೂ ನಿರು ಹೆಚ್ಚು ವೇಸ್ಟ್​ ಆಗುವುದು. ಹಾಗಾಗಿ ಅಲ್ಲಿ ಆಗಾಗ ಚೆಕ್ ಮಾಡಬೇಕು. ಹಾಗೆಯೇ, ನೀರು ವೇಸ್ಟ್ ಆಗದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು.


ನಿಮ್ಮ ಮನೆಯ ಗಾರ್ಡನ್ ಮೂಲಕ ಸಹ ನೀವು ನೀರು ವೇಸ್ಟ್ ಆಗುವುದನ್ನ ತಡೆಯಬಹುದು.  ಹೆಚ್ಚು ನೀರು ಬೇಕಾಗದ ಗಿಡಗಳನ್ನು ಬೆಳೆಸುವುದು ಮೊದಲು ಬುದ್ದಿವಂತಿಕೆ ಎನ್ನಬಹುದು. ಈ ರೀತಿ ಗಿಡಗಳಿಗೆ ಹೆಚ್ಚು ನೀರಿನ ಅವಶ್ಯಕತೆ ಇಲ್ಲ. ಪ್ರತಿ ದಿನವೂ ಲೀಟರ್​ಗಟ್ಟಲೆ ನೀರನ್ನು ಉಳಿಸಬಹುದು. ಸ್ಥಳೀಯ ಗಿಡಗಳನ್ನು ನೆಡುವುದರಿಂದ ನೀರಿನ ಉಳಿತಾಯಕ್ಕೂ ಸಹಕಾರಿಯಾಗುತ್ತದೆ.


ಇದನ್ನೂ ಓದಿ: ಮಕ್ಕಳ ರೂಂನಲ್ಲಿ ಈ ವಸ್ತುಗಳನ್ನು ಇಡಲೇಬಾರದಂತೆ, ಆರೋಗ್ಯಕ್ಕೆ ಹಾನಿಕರ ಅಂತಾರೆ ತಜ್ಞರು


ಮತ್ತೊಂದು ವಿಚಾರ ಎಂದರೆ, ನೀವು ನಿಮ್ಮ ಮನೆಯ ಒಳಗೆ ಬಳಸುವ ನೀರನ್ನು ಮನೆಯ ಹೊರಗೆ ಸಹ ಬಳಕೆ ಮಾಡಿಕೊಳ್ಳಬಹುದು. ಮನೆಯ ಸಿಂಕ್ ಹಾಗೂ ಟಾಯ್ಲೆಟ್​ ನೀರು ನೇರವಾಗಿ ಗಾರ್ಡನ್​ಗೆ ಹೋಗುವಂತೆ ಪೈಪ್​ ಹಾಕಿಸಬಹುದು. ಇದು ಅನಗತ್ಯವಾಗಿ ನೀರು ವೇಸ್ಟ್​ ಆಗದಂತೆ ತಡೆಯುತ್ತದೆ. ಅಲ್ಲದೇ, ಗಿಡಗಳಿಗೆ ಪ್ರತ್ಯೇಕವಾಗಿ ಸಹ ನೀರು ಹಾಕುವುದು ಬೇಡ. ಇನ್ನು ಬಹಳ ಅಗತ್ಯವಿರುವ ಗಿಡಗಳಿಗೆ ನೀವು ನಿಮ್ಮ ಕೈಯಾರೆ ನೀರು ಹಾಕುವುದು ಹೆಚ್ಚು ನೀರು ಉಳಿಸಲು ಸಹಾಯ ಮಾಡುತ್ತದೆ.

Published by:Sandhya M
First published: