• Home
  • »
  • News
  • »
  • lifestyle
  • »
  • Sugar: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನೈಸರ್ಗಿಕವಾಗಿ ಕಡಿಮೆ ಮಾಡಲು ಬಯಸುತ್ತೀರಾ? ಇಲ್ಲಿದೆ ನೋಡಿ ಉಪಾಯ

Sugar: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನೈಸರ್ಗಿಕವಾಗಿ ಕಡಿಮೆ ಮಾಡಲು ಬಯಸುತ್ತೀರಾ? ಇಲ್ಲಿದೆ ನೋಡಿ ಉಪಾಯ

ದಾಲ್ಚಿನ್ನಿ

ದಾಲ್ಚಿನ್ನಿ

Sugar: ಇತ್ತಿಚಿಗೆ ಹೆಚ್ಚು ಕಾಡುತ್ತಿರುವ ಆರೋಗ್ಯ ಸಮಸ್ಯೆಯೆಂದ್ರೆ ಅದು ಅಧಿಕ ರಕ್ತದೊತ್ತಡ. ಈ ಅಧಿಕ ರಕ್ತದೊತ್ತಡಕ್ಕೆ ದಾಲ್ಚಿನ್ನಿ ಉತ್ತಮ ರೋಗ ನಿರೋಧಕ

  • Share this:

ಇತ್ತಿಚಿಗೆ ಹೆಚ್ಚು ಕಾಡುತ್ತಿರುವ ಆರೋಗ್ಯ ಸಮಸ್ಯೆಯೆಂದ್ರೆ ಅದು ಅಧಿಕ ರಕ್ತದೊತ್ತಡ. ಈ ಅಧಿಕ ರಕ್ತದೊತ್ತಡಕ್ಕೆ ದಾಲ್ಚಿನ್ನಿ(Cinnamon) ಉತ್ತಮ ರೋಗ ನಿರೋಧಕ ಎಂದು ವಿವಿಧ ಅಧ್ಯಯನಗಳಿಂದ ತಿಳಿದು ಬಂದಿದೆ.ದಾಲ್ಚಿನ್ನಿ ಮರದ (Tree) ತೊಗಟೆಯಿಂದ ತಯಾರಿಸುವ ಮಸಾಲೆಯಾಗಿದೆ. ಇದನ್ನು ಅಡುಗೆಯಲ್ಲಿ (cooking) ಉತ್ತಮ ರುಚಿ (Taste) ಮತ್ತು ಸುಗಂಧಕ್ಕಾಗಿ ಬಳಸಲಾಗುತ್ತದೆ. ದಾಲ್ಚಿನ್ನಿಯಲ್ಲಿನ ಪ್ರಮುಖ ಸಕ್ರಿಯ ಘಟಕಾಂಶವೆಂದರೆ ದಾಲ್ಚಿನ್ನಿ ಆಲ್ಡಿಹೈಡ್. ಈ ಅಂಶವು ಅನೇಕ ಆರೋಗ್ಯ (Health) ಪ್ರಯೋಜನಗಳಿಗೆ ಕಾರಣವಾಗಿದೆ.ದಾಲ್ಚಿನ್ನಿಯು ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದ ಸಮಸ್ಯೆಗಳನ್ನು(Problems) ನಿವಾರಿಸುತ್ತದೆ.


ಆದರೆ ದಾಲ್ಚಿನ್ನಿ ಮಧುಮೇಹಿಗಳಿಗೆ ಉತ್ತಮವಾಗಿದೆಯೇ ಇಲ್ಲವೋ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಆದರೆ ದಾಲ್ಚಿನ್ನಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ವಿವಿಧ ಅಧ್ಯಯನಗಳು ಸೂಚಿಸುತ್ತವೆ. ಆದರೆ ಅಂದಾಜು ಮೂರು ತಿಂಗಳವರೆಗೆ ಇದು ಯಾವುದೇ ಪರಿಣಾಮ ಬೀರುವುದಿಲ್ಲ.


ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿರ್ವಹಿಸಲು ದಾಲ್ಚಿನ್ನಿ ಸಹಾಯ ಮಾಡಬಹುದೇ?


  • ಮಧುಮೇಹವು ಅಸಹಜವಾಗಿ ಅಧಿಕ ರಕ್ತದ ಸಕ್ಕರೆಯ ಮಟ್ಟದಿಂದ ಕೂಡಿದ ಒಂದು ಕಾಯಿಲೆಯಾಗಿದೆ. ದಾಲ್ಚಿನ್ನಿ ಆಂಟಿಆಕ್ಸಿಡೆಂಟ್‌ಗಳನ್ನು ಅಧಿಕವಾಗಿ ಹೊಂದಿದೆ. ಇದು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮಧುಮೇಹ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಸುಧಾರಿಸಿ ಅವಗಳ ಅಪಾಯ ಮಟ್ಟವನ್ನು ಕಡಿಮೆ ಮಾಡುತ್ತದೆ.

  • ದಾಲ್ಚಿನ್ನಿ ಹಲವಾರು ಅಧ್ಯಯನಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಸಾಬೀತಾಗಿದೆ. ಇದು ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುವ ಮೂಲಕ ರಕ್ತದಲ್ಲಿನ ಸಕ್ಕರೆ ಅಂಶವನ್ನು ಸಹ ಕಡಿಮೆ ಮಾಡಬಹುದು ಎಂದು ಆರೋಗ್ಯ ತಜ್ಞರು ಸೂಚಿಸುತ್ತಾರೆ.

  • ಇದು ಕೆಲವು ಮಧುಮೇಹ-ವಿರೋಧಿ ಸಂಯುಕ್ತಗಳನ್ನು ಹೊಂದಿದ್ದು ಅದು ನಮ್ಮ ದೇಹಕ್ಕೆ ಗ್ಲೂಕೋಸ್ ಪ್ರವೇಶಿಸುವ ದರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

  • ದಾಲ್ಚಿನ್ನಿ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಇದು ಮಧುಮೇಹದ ಸಮಸ್ಯೆಗೆ ನೇರವಾಗಿ ಸಂಬಂಧಿಸಿದೆ. ಆರೋಗ್ಯಕರ ಜೀರ್ಣಾಂಗವು ಸಕ್ಕರೆಯನ್ನು ಸಂಸ್ಕರಿಸುತ್ತದೆ, ಜೀರ್ಣಿಸಿಕೊಳ್ಳುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಹೆಚ್ಚುವರಿ ಸಕ್ಕರೆ ಅಂಶವನ್ನು ಹೊರಹಾಕುತ್ತದೆ.

  • ಮಧುಮೇಹ ರೋಗಿಗಳು ಮತ್ತು ಔಷಧಿಗಳನ್ನು ತೆಗೆದುಕೊಳ್ಳುವವರು ತಮ್ಮ ದೈನಂದಿನ ದಿನಚರಿಯಲ್ಲಿ ದಾಲ್ಚಿನ್ನಿಯನ್ನು ಸೇರಿಸುವಾಗ ಸ್ವಲ್ಪ ಜಾಗರೂಕರಾಗಿರಬೇಕು. ಏಕೆಂದರೆ ಇದು ಹೈಪೊಗ್ಲಿಸಿಮಿಯಾಕ್ಕೆ ಕಾರಣವಾಗಬಹುದು. ಆದ್ದರಿಂದ ಆಗಾಗ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಬೇಕು. ಯಕೃತ್ತಿನ ಸಮಸ್ಯೆಗಳಿರುವ ಮಧುಮೇಹಿಗಳು ದಾಲ್ಚಿನ್ನಿ ಸೇವನೆಯನ್ನು ಮಿತಿಗೊಳಿಸಬೇಕು.

  • ದಾಲ್ಚಿನ್ನಿಯನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಆದರೆ ಇದು ಔಷಧಿಗಳಿಗೆ ಬದಲಿಯಾಗಿಲ್ಲ. ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ ಮತ್ತು ಸಮಯೋಚಿತ ಔಷಧಗಳು ಉತ್ತಮ ಗ್ಲೂಕೋಸ್ ನಿಯಂತ್ರಣಕ್ಕೆ ಅತ್ಯುತ್ತಮ ಮಾರ್ಗವಾಗಿವೆ.ಇದನ್ನೂ ಓದಿ: ಹಬ್ಬಕ್ಕೆ ಭರ್ಜರಿ ಆಫರ್, ಸಾವಿರ ರೂಪಾಯಿ ಒಳಗೆ ಖರೀದಿಸಿ ಬ್ಯೂಟಿಫುಲ್ ಡ್ರೆಸ್

  • ಆರೋಗ್ಯ ತಜ್ಞರು ಏನ್‌ ಹೇಳ್ತಿದಾರೆ?


“ಈ ದಾಲ್ಚಿನ್ನಿಯು ಇನ್ಸುಲಿನ್‌ನ ಸೂಕ್ಷ್ಮತೆಯನ್ನು ಹೆಚ್ಚಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಮಧುಮೇಹದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ” ಎಂದು ಝೆನ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಡಯೆಟಿಷಿಯನ್ ಪ್ರಿಯಾ ಪಾಲನ್ ಅವರು ಹೇಳುತ್ತಾರೆ. ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಲು ದಾಲ್ಚಿನ್ನಿಯನ್ನು ಮಾತ್ರ ಸೇವನೆ ಮಾಡುತ್ತವೆ ಎಂಬುದು ಉಚಿತವಲ್ಲ.


ಮಧುಮೇಹದ ನಿರ್ವಹಣೆಗೆ ದಾಲ್ಚಿನ್ನಿಯನ್ನು ಹೇಗೆ ಬಳಸುವುದು?


ದಾಲ್ಚಿನ್ನಿಯನ್ನು ಬಳಸುವ ಅತ್ಯುತ್ತಮ ವಿಧಾನವೆಂದರೆ ದಾಲ್ಚಿನಿ ತೊಗಟೆಯ ಸಣ್ಣ ತುಂಡನ್ನು ರಾತ್ರಿಯಿಡೀ ಒಂದು ಲೋಟ ನೀರಿನಲ್ಲಿ ನೆನೆಸಿಡಬೇಕು. ಖಾಲಿ ಹೊಟ್ಟೆಯಲ್ಲಿ ಈ ದಾಲ್ಚಿನ್ನಿ ನೀರನ್ನು ಸೇವಿಸಬೇಕು.ಮತ್ತಷ್ಟು ಪ್ರಯೋಜನ ಪಡೆಯಲು ಭಕ್ಷ್ಯಗಳು, ಸಿಹಿತಿಂಡಿಗಳು ಮತ್ತು ಪಾನೀಯಗಳಲ್ಲಿ ದಾಲ್ಚಿನ್ನಿ ಪುಡಿಯನ್ನು ಹಾಕಿಕೊಂಡು ಸೇವಿಸಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟದ ನಿರ್ವಹಣೆಯನ್ನು ಆರೋಗ್ಯಕರ ಆಹಾರ ಮತ್ತು ವ್ಯಾಯಾಮದೊಂದಿಗೆ ದಾಲ್ಚಿನ್ನಿಯನ್ನು ಸಹ ಸೇರಿಸಿಕೊಳ್ಳಬಹುದು ಎಂಬುದು ತಜ್ಞರ ಸಲಹೆ ಆಗಿದೆ.


ಇದನ್ನೂ ಓದಿ: ಪ್ರತಿದಿನ ಮಹಿಳೆಯರು ಗೋಡಂಬಿ ತಿಂದ್ರೆ ಈ ಆರೋಗ್ಯ ಸಮಸ್ಯೆಗಳು ಕಾಡಲ್ಲ


ದಾಲ್ಚಿನ್ನಿ ಪುಡಿಯನ್ನು ಮಸಾಲೆಯುಕ್ತ ಚಹಾಕ್ಕೆ ಸೇರಿಸಿ ಕುಡಿಯಿರಿ. ದಾಲ್ಚಿನ್ನಿಯ ವಿಶಿಷ್ಟ ರುಚಿ ಮತ್ತು ಅದರ ವಿವಿಧ ಆರೋಗ್ಯ ಪ್ರಯೋಜನಕಾರಿ ಅಂಶಗಳೊಂದಿಗೆ ಬಿಸಿ ಬಿಸಿ ಚಹಾ ಸೇವಿಸಿ.

First published: