ಜೀವನಶೈಲಿ ಮತ್ತು ಆಹಾರ ಪದ್ಧತಿ (Lifestyle And Food) ಉತ್ತಮವಾಗಿದ್ದಾಗ ಮಾತ್ರ ದೇಹ (Body) ಆರೋಗ್ಯವಾಗಿರುತ್ತೆ (Health). ಒಂದು ವೇಳೆ ನಮ್ಮ ಜೀವನಶೈಲಿ ಮತ್ತು ಆಹಾರ ಪದ್ಧತಿ ಚೆನ್ನಾಗಿರದಿದ್ದರೆ ಅದು ನಮ್ಮನ್ನು ರೋಗಿಗಳನ್ನಾಗಿ ಮಾಡುತ್ತದೆ. ರೋಗ ನಿರೋಧಕ ಶಕ್ತಿ ದೌರ್ಬಲ್ಯ ಆದ್ರೆ ಅನೇಕ ರೀತಿಯ ಕಾಯಿಲೆ ಮುತ್ತಿಕೊಳ್ಳುತ್ತವೆ. ಇದರಿಂದ ಹಲವು ರೀತಿಯ ಆರೋಗ್ಯ ಅಸ್ವಸ್ಥತೆ ಕಾಡುತ್ತದೆ. ಉರಿಯೂತ ಎಂದು ಕರೆಯುವ ಊತವು ರೋಗಗಳ ಕಾರಣಗಳಲ್ಲಿ ಒಂದಾಗಿದ್ದು, ಅದು ಬಾಧಿಸುತ್ತದೆ. ನಿಷ್ಕ್ರಿಯ ವ್ಯವಸ್ಥೆಗೆ ದೇಹದ ಪ್ರತಿಕ್ರಿಯೆ ಉರಿಯೂತ ಉಂಟು ಮಾಡುತ್ತದೆ. ನಿಮ್ಮ ಆಹಾರದಲ್ಲಿ ಕೆಲವು ಆಹಾರ ಪದಾರ್ಥ ಸೇರಿಸಿದರೆ ಅದು ನೈಸರ್ಗಿಕವಾಗಿ ಉರಿಯೂತ ಕಡಿಮೆ ಮಾಡುತ್ತದೆ.
ನೈಸರ್ಗಿಕವಾಗಿ ಉರಿಯೂತ ಕಡಿಮೆ ಮಾಡುವುದು ಹೇಗೆ?
ಜರ್ನಲ್ ಆಫ್ ಅಪ್ಲೈಡ್ ಟಾಕ್ಸಿಕಾಲಜಿಯಲ್ಲಿ ಹೇಳಿದ ಪ್ರಕಾರ, ನಮ್ಮ ದೇಹವು ಎರಡು ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ. ದೇಹದಲ್ಲಿ ಯಾವುದೇ ರೀತಿಯ ಸೋಂಕು ಅಥವಾ ಗಾಯಗಳಿದ್ದಾಗ ಊತ ಉಂಟಾಗುತ್ತದೆ. ಇದು ತೀವ್ರ ಉರಿಯೂತ ಆಗಿದೆ. ಇದು ಕೆಲವೇ ದಿನಗಳ ನಂತರ ವಾಸಿಯಾಗಬಹುದು.
ಇನ್ನೊಂದು ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲವಾದಾಗ ರೋಗಗಳು ಸಂಭವಿಸುತ್ತವೆ. ರಕ್ತದ ಸಕ್ಕರೆ, ಕ್ಯಾನ್ಸರ್, ಮೂತ್ರಪಿಂಡದ ಕಾಯಿಲೆ ಕಾಡುತ್ತವೆ. ಇದು ದೀರ್ಘಕಾಲದ ಉರಿಯೂತ ಉಂಟು ಮಾಡುತ್ತದೆ. ಇದು ಆರೋಗ್ಯಕ್ಕೆ ಹಾನಿಕರವಾಗಿದೆ.
ಅರಿಶಿನ
ಅರಿಶಿನವು ವಿಟಮಿನ್ ಸಿ, ವಿಟಮಿನ್ ಬಿ 6, ಸೋಡಿಯಂ, ಪೊಟ್ಯಾಸಿಯಮ್, ಆಂಟಿಆಕ್ಸಿಡೆಂಟ್ ಹೊಂದಿದೆ. ಇದು ಉರಿಯೂತ ಗುಣ ಲಕ್ಷಣ ಹೊಂದಿದೆ. ಜರ್ನಲ್ ಆಫ್ ಅಪ್ಲೈಡ್ ಟಾಕ್ಸಿಕಾಲಜಿ ಪ್ರಕಾರ, ಅರಿಶಿನ ಶಕ್ತಿಯುತ ಕರ್ಕ್ಯುಮಿನ್ ಸಂಯುಕ್ತ ಹೊಂದಿದೆ. ಇದು ತೀವ್ರ ಮತ್ತು ದೀರ್ಘಕಾಲದ ಉರಿಯೂತ ಕಡಿಮೆ ಮಾಡಲು ಚಿಕಿತ್ಸಕವಾಗಿ ಕೆಲಸ ಮಾಡುತ್ತದೆ.
ಉರಿಯೂತದ ನೋವು ನಿವಾರಣೆಗೆ ಕರ್ಕ್ಯುಮಿನ್ ಸಹಕಾರಿ. ಕರ್ಕ್ಯುಮಿನ್ ಪೂರಕಗಳು ಸಹ ಮಾರುಕಟ್ಟೆಯಲ್ಲಿವೆ. ದಾಲ್, ಸೂಪ್ ಮಾಡುವಾಗ ಅರಿಶಿನ ಸರಿಯಾದ ಪ್ರಮಾಣದಲ್ಲಿ ಬಳಸಬೇಕು. ಗಾಯವಾಗಿದ್ದರೆ, ಆ ಜಾಗದಲ್ಲಿ ಅರಿಶಿನ ಹಚ್ಚಿ. ಆಂಟಿ ಸೆಪ್ಟಿಕ್ ಗುಣವಿರುವ ಅರಿಶಿನ ಗಾಯ ಬೇಗ ವಾಸಿವಾಗಲು ಸಹಕಾರಿ. ಅರಿಶಿನ ಹಾಲನ್ನು ರಾತ್ರಿ ಕುಡಿಯುವುದು ಉತ್ತಮ.
ದಾಲ್ಚಿನ್ನಿ
ದಾಲ್ಚಿನ್ನಿ ಸಂಧಿವಾತ ಸೇರಿ ಹಲವು ದೀರ್ಘಕಾಲದ ಉರಿಯೂತ ನಿವಾರಿಸುತ್ತದೆ. ಇದು ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ರಂಜಕ, ಪೊಟ್ಯಾಸಿಯಮ್, ವಿಟಮಿನ್ ಎ ಮುಂತಾದ ಪ್ರಮುಖ ಪೋಷಕಾಂಶ ಹೊಂದಿದೆ. ಇದು ರಕ್ತದ ಸಿ ಪ್ರತಿಕ್ರಿಯಾತ್ಮಕ ಪ್ರೋಟೀನ್ ಮಟ್ಟ ಕಡಿಮೆ ಮಾಡುತ್ತದೆ. ಈ ಪ್ರೋಟೀನ್ ಉರಿಯೂತ ಉತ್ತೇಜಿಸುತ್ತದೆ. ದಾಲ್ಚಿನ್ನಿ ಚಹಾ ಕುಡಿಯಿರಿ. ಅಡುಗೆಯಲ್ಲಿ ದಾಲ್ಚಿನ್ನಿ ಬಳಸಬಹುದು.
ಬಾದಾಮಿ
ಬಾದಾಮಿಯು ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣ ಹೊಂದಿದೆ. ಬಾದಾಮಿ ವಿಟಮಿನ್ ಇ ಹೊಂದಿದೆ. ಬಾದಾಮಿ ಮೊನೊಸಾಚುರೇಟೆಡ್ ಕೊಬ್ಬು ಹೊಂದಿದೆ. ಸಿ-ರಿಯಾಕ್ಟಿವ್ ಪ್ರೋಟೀನ್ ಉರಿಯೂತ ಗುರುತಿಸುವ ಸಂಯುಕ್ತ ಕಡಿಮೆ ಮಾಡುತ್ತದೆ. ನೀರಿನಲ್ಲಿ ನೆನೆಸಿದ ಬಾದಾಮಿ ಸೇವಿಸಿ.
ಹಸಿರು ಚಹಾ
ಹಸಿರು ಚಹಾದಲ್ಲಿ 13 ರೀತಿಯ ಅಗತ್ಯ ಜೀವಸತ್ವಗಳಿವೆ. ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಡಿ, ವಿಟಮಿನ್ ಇ, ವಿಟಮಿನ್ ಕೆ ಸೇರಿವೆ. ಗ್ರೀನ್ ಟೀ ಕೂಡ ಉತ್ಕರ್ಷಣ ನಿರೋಧಕ ಗುಣದಿಂದ ಕೂಡಿದೆ. ಹಸಿರು ಚಹಾವು ಬೊಜ್ಜು ಮತ್ತು ಕ್ಯಾನ್ಸರ್ ಕಾಯಿಲೆ ರೋಗಿಗಳಿಗೆ ಪ್ರಯೋಜನ ನೀಡುತ್ತದೆ. ಹಾಲಿನ ಟೀ ಬದಲು ಗ್ರೀನ್ ಟೀ ಸೇವಿಸಿ.
ಇದನ್ನೂ ಓದಿ: ಬೊಜ್ಜಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ವಿಶ್ವ ಆರೋಗ್ಯ ಸಂಸ್ಥೆ!
ಬೆಳ್ಳುಳ್ಳಿ
ಬೆಳ್ಳುಳ್ಳಿಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ6, ಪೊಟ್ಯಾಶಿಯಂ, ಸೋಡಿಯಂ, ಮ್ಯಾಂಗನೀಸ್ ಸಮೃದ್ಧವಾಗಿದೆ. ಪಶು ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಕಾರ ಡಯಾಲಿಲ್ ಡೈಸಲ್ಫೈಡ್ ಬೆಳ್ಳುಳ್ಳಿಯಲ್ಲಿದೆ. ಬೆಳ್ಳುಳ್ಳಿ ಆಹಾರದಲ್ಲಿ ಬಳಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ