• Home
 • »
 • News
 • »
 • lifestyle
 • »
 • Diabetes Problem: ದೀರ್ಘಕಾಲದ ಮಧುಮೇಹವು ಜಠರದ ಮೇಲೆ ಯಾವ ರೀತಿ ಕೆಟ್ಟ ಪರಿಣಾಮ ಬೀರುತ್ತದೆ ನೋಡಿ

Diabetes Problem: ದೀರ್ಘಕಾಲದ ಮಧುಮೇಹವು ಜಠರದ ಮೇಲೆ ಯಾವ ರೀತಿ ಕೆಟ್ಟ ಪರಿಣಾಮ ಬೀರುತ್ತದೆ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಧುಮೇಹವು ನಮ್ಮ ಅನೇಕ ಅಂಗಗಳು ಮತ್ತು ದೇಹದ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರುತ್ತದೆ. ಕಣ್ಣು ಮತ್ತು ಕೀಲುಗಳು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಜಠರಗರುಳಿನ ಆರೋಗ್ಯ ಕೆಡಿಸುತ್ತದೆ. ಈ ಬಗ್ಗೆ ಅಂಕಿ ಅಂಶಗಳು ಏನು ಹೇಳುತ್ತವೆ ನೋಡೋಣ. ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮಧುಮೇಹ ಕಾಯಿಲೆ ಈಗ ಸಾಂಕ್ರಾಮಿಕ ರೋಗದಂತೆ ಹರಡುತ್ತಿದೆ.

ಮುಂದೆ ಓದಿ ...
 • Share this:

  ನಾವೆಲ್ಲರೂ ನಮಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ದಿನಚರಿ (Routine) ಫಾಲೋ ಮಾಡ್ತಾ ಇರ್ತೇವೆ. ಬೆಳಗ್ಗೆ ಏಳುವುದರಿಂದ ಹಿಡಿದು, ಚಟುವಟಿಕೆ, ಆಹಾರ (Food) ಎಲ್ಲವೂ ಸೇರಿರುತ್ತದೆ. ಆದ್ರೆ ನಮ್ಮ ದಿನಚರಿ ಎಷ್ಟು ಆರೋಗ್ಯಕರವಾಗಿದೆ (Healthy) ಎಂಬುದು ಮುಖ್ಯ ವಿಷಯ. ಯಾಕಂದ್ರೆ ನಮ್ಮ ಅನಾರೋಗ್ಯಕರ ದಿನಚರಿ ಆರೋಗ್ಯದ ಮೇಲೆ ಸಾಕಷ್ಟು ಕೆಟ್ಟ ಪರಿಣಾಮ (Side Effect) ಬೀರುತ್ತದೆ. ಜೀವನಶೈಲಿ (Lifestyle) ಚೆನ್ನಾಗಿದ್ದರೆ, ಸಾಧ್ಯವಾದಷ್ಟು ಕಾಯಿಲೆಗಳಿಂದ ದೂರವಿರಲು ಸಾಧ್ಯ ಆಗುತ್ತದೆ. ಉತ್ತಮ ಜೀವನಶೈಲಿ ಫಾಲೋ ಮಾಡುವುದು ಪ್ರತಿಯೊಬ್ಬರ ಆರೋಗ್ಯಕ್ಕೆ ಅವಶ್ಯಕವಾಗಿದೆ. ಇತ್ತೀಚಿನ ದಿನಗಳಲ್ಲಿ ಸರಿಯಾದ ಜೀವನಶೈಲಿ ಫಾಲೋ ಮಾಡದೇ ಇರೋದು ಮಧುಮೇಹ ಬರುವ ಅಪಾಯ ಹೆಚ್ಚು ಮಾಡಿದೆ.  


  ಅನಾರೋಗ್ಯಕರ ದಿನಚರಿಯಿಂದ ಮಧುಮೇಹ ಅಪಾಯ


  ಮಧುಮೇಹವು ನಮ್ಮ ಅನೇಕ ಅಂಗಗಳು ಮತ್ತು ದೇಹದ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರುತ್ತದೆ. ಕಣ್ಣು ಮತ್ತು ಕೀಲುಗಳು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಜಠರಗರುಳಿನ ಆರೋಗ್ಯ ಕೆಡಿಸುತ್ತದೆ. ಈ ಬಗ್ಗೆ ಅಂಕಿ ಅಂಶಗಳು ಏನು ಹೇಳುತ್ತವೆ ನೋಡೋಣ.


  ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮಧುಮೇಹ ಕಾಯಿಲೆ ಈಗ ಸಾಂಕ್ರಾಮಿಕ ರೋಗದಂತೆ ಹರಡುತ್ತಿದೆ.
  ಇದು ಇಲ್ಲಿಯವರೆಗೆ ಪ್ರಪಂಚದಾದ್ಯಂತ 366 ದಶಲಕ್ಷಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಿದೆ ಎಂದು ಸಂಶೋಧನೆ ಹೇಳಿವೆ. ಹೆಚ್ಚುತ್ತಿರುವ ಜಾಗತಿಕ ಜನಸಂಖ್ಯೆ, ನಗರೀಕರಣ, ಸ್ಥೂಲಕಾಯ ಮತ್ತು ಜಡ ಜೀವನಶೈಲಿ ಮಧುಮೇಹಕ್ಕೆ ಕಾರಣವಾಗ್ತಿದೆ.


  ಇದು ಮುಂಬರುವ ವರ್ಷಗಳಲ್ಲಿ ಹೆಚ್ಚಾಗುವ ಸಾಧ್ಯತೆಯಿದೆ. ಮಧುಮೇಹವು ದೇಹದ ಎಲ್ಲಾ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ದೀರ್ಘಕಾಲದ ಮಧುಮೇಹವು ಜಠರಗರುಳಿನ (ಜಿಐ) ತೊಡಕು ಉಂಟು ಮಾಡುತ್ತದೆ. ಈ ತೊಡಕಿನ ಬಗ್ಗೆ ಜನರಲ್ಲಿ ಜಾಗೃತಿ ಕಡಿಮೆ ಇದೆ.


  ಸಂಶೋಧನೆ ಏನು ಹೇಳುತ್ತದೆ?


  2013 ರಲ್ಲಿ ವರ್ಲ್ಡ್ ಜರ್ನಲ್ ಆಫ್ ಡಯಾಬಿಟಿಸ್‌ ನಲ್ಲಿ ಬಾಬು ಕೃಷ್ಣನ್, ಶಿತು ಬಾಬು, ಜೆಸ್ಸಿಕಾ ವಾಕರ್, ಆಡ್ರಿಯನ್ ಬಿ ವಾಕರ್ ಮತ್ತು ಜೋಸೆಫ್ ಎಂ ಪಪ್ಪಚನ್ ಅವರು, ಮಧುಮೇಹ ಮೆಲ್ಲಿಟಸ್‌ನಿಂದ ಹೆಚ್ಚಿದ ಜಠರಗರುಳಿನ ತೊಂದರೆಗಳ ಕುರಿತು ಸಂಶೋಧನಾ ಲೇಖನ ಪ್ರಕಟಿಸಿದ್ದಾರೆ.


  ಈ ಸಂಶೋಧನಾ ಲೇಖನ ಪಬ್ಮೆಡ್ ಸೆಂಟ್ರಲ್‌ ನಲ್ಲಿ ಪ್ರಕಟವಾಗಿದೆ. ಈ ಸಂಶೋಧನೆ ಅಡಿ ಮಧುಮೇಹ ಮತ್ತು GI ತೊಡಕುಗಳ ಆರಂಭಿಕ ಪತ್ತೆ ಮತ್ತು ಸರಿಯಾದ ನಿರ್ವಹಣೆ ಪ್ರಮುಖವಾಗಿದೆ. ಡಯಾಬಿಟಿಸ್ ಮೆಲ್ಲಿಟಸ್ ದೇಹದ ಎಲ್ಲಾ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ.


  ಅನ್ನನಾಳದ ಡಿಸ್ಮೋಟಿಲಿಟಿ, ಗ್ಯಾಸ್ಟ್ರೋ ಅನ್ನನಾಳದ ಹಿಮ್ಮುಖ ಹರಿವು ರೋಗ, ಜಠರ ಗರುಳಿನ ಅಂಗಗಳು ಬಾಧಿತವಾಗಿದ್ದರೆ, ಗ್ಯಾಸ್ಟ್ರೊಪರೆಸಿಸ್, ಎಂಟ್ರೊಪತಿ, ಆಲ್ಕೊಹಾಲ್ಯುಕ್ತವಲ್ಲದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ಮತ್ತು ಗ್ಲೈಕೊಜೆನಿಕ್ ಹೆಪಟೊಪತಿ ಆರೋಗ್ಯ ತೊಂದರೆ ಉಂಟು ಮಾಡುತ್ತದೆ ಎಂದು ಹೇಳಿದೆ.


  ಹೀಗಾಗಿ ಗ್ಲೈಸೆಮಿಕ್ ನಿಯಂತ್ರಣ ಮಾಡಲಾಗುವುದಿಲ್ಲ. ಡಯಾಬಿಟಿಕ್ ಗ್ಯಾಸ್ಟ್ರೋಪರೆಸಿಸ್ ಸಮಸ್ಯೆಯು ಹಸಿವು, ಹೊಟ್ಟೆಯುಬ್ಬರ, ವಾಂತಿ, ಕಿಬ್ಬೊಟ್ಟೆ ನೋವು ಮತ್ತು ಅನಿಯಮಿತ ಗ್ಲೈಸೆಮಿಕ್ ನಿಯಂತ್ರಣಕ್ಕೆ ಕಾರಣವಾಗಿದೆ.


  ಗ್ಲೂಕೋಸ್ ಅನ್ನು ಬಳಸಲು ದೇಹಕ್ಕೆ ಇನ್ಸುಲಿನ್ ಅಗತ್ಯವಿದೆ. ಇನ್ಸುಲಿನ್ ಸಹಾಯದಿಂದ ದೇಹದಾದ್ಯಂತ ಜೀವಕೋಶಗಳು ಗ್ಲೂಕೋಸ್ ಹೀರಿಕೊಳ್ಳುತ್ತವೆ. ಶಕ್ತಿಗಾಗಿ ಬಳಸುತ್ತವೆ. ಮಧುಮೇಹ ಹೊಂದಿರುವ ಜನರಲ್ಲಿ ಈ ಪ್ರಕ್ರಿಯೆ ವಿಭಿನ್ನವಾಗಿದೆ. ಸಾಕಷ್ಟು ಇನ್ಸುಲಿನ್ ಇಲ್ಲದಿದ್ದರೆ ರಕ್ತದ ಸಕ್ಕರೆಯ ಮಟ್ಟ ಕಡಿಮೆ ಮಾಡಲು, ಸಾಕಷ್ಟು ಇನ್ಸುಲಿನ್ ಅನ್ನು ಉತ್ಪಾದನೆಯಾಗಲ್ಲ. ಇದು ರಕ್ತದ ಸಕ್ಕರೆ ಮಟ್ಟ ಹೆಚ್ಚಿಸುತ್ತದೆ.


  ಇದನ್ನೂ ಓದಿ: ದೇಹದಲ್ಲಿ ಪ್ರೊಟೀನ್ ಕೊರತೆ ಉಂಟಾದರೆ ಈ ಸಮಸ್ಯೆಗಳು ಶುರುವಾಗುತ್ತವೆ! 


  ತಡೆಗಟ್ಟುವುದು ಹೇಗೆ?


  ಚಯಾಪಚಯ ದರ ಮತ್ತು ಜೀವನಶೈಲಿಯ ಸರಿಯಾದ ನಿರ್ವಹಣೆ ಮೂಲಕ ಜಠರಗರುಳಿನ ತೊಂದರೆ ತಡೆಯಬಹುದು ಅಂತಾರೆ ಸಂಶೋಧಕರು. ಮಧುಮೇಹದಿಂದ ಉಂಟಾಗುವ ಗ್ಯಾಸ್ಟ್ರೋಪರೆಸಿಸ್ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಗಾಗಿ ಆಹಾರದಲ್ಲಿ ಬದಲಾವಣೆ ಮಾಡಬೇಕು. ಚೆನ್ನಾಗಿ ಜೀರ್ಣವಾಗುವ ಆಹಾರ ಸೇವಿಸಬೇಕು. ವಾಂತಿ ಕಡಿಮೆ ಮಾಡುವ ಅಥವಾ ಹೊಟ್ಟೆ ಕ್ಲೀನ್ ಮಾಡುವ ಔಷಧಿ ಸೇವಿಸಬಹುದು.

  Published by:renukadariyannavar
  First published: