ಕ್ರಿಸ್ಮಸ್ ಹಬ್ಬ (Christmas Festival) ಎಂದರೆ ಅದೇನೋ ಸಂತೋಷ ಹಾಗೂ ಸಂಭ್ರಮ ಮೂಡುತ್ತದೆ. ವರ್ಷದ ಕೊನೆಯ ಹಬ್ಬವಾದ್ದರಿಂದ ಎಲ್ಲೆಡೆ ಜೋರಾಗಿ ಆಚರಿಸಲಾಗುತ್ತದೆ. ಕ್ರಿಸ್ಮಸ್ ಹಬ್ಬವನ್ನು ಯೇಸುಕ್ರಿಸ್ತನ ಜನ್ಮದಿನ ಎಂದು ಕ್ರೈಸ್ತ ಬಾಂಧವರು ಆಚರಿಸಿದರೂ ಸಹ, ದೇಶದ ಪ್ರತಿಯೊಬ್ಬ ಜನರು ಇದನ್ನು ಇಷ್ಟಪಡುತ್ತಾರೆ. ಕ್ರಿಸ್ಮಸ್ ಹಬ್ಬದ ಸಮಯದಲ್ಲಿ ಮನೆಗಳನ್ನು ಸುಂದರವಾಗಿ ಅಲಂಕಾರ (Decoration) ಮಾಡಲಾಗುತ್ತದೆ. ಆದರೆ ವಿಶೇಷವಾಗಿ ಈ ಕ್ರಿಸ್ಮಸ್ ಟ್ರೀಯನ್ನು ಅಲಂಕಾರ ಮಾಡುತ್ತಾರೆ. ಪ್ರತಿಬಾರಿಯೂ ವಿಭಿನ್ನವಾಗಿ ಈ ಟ್ರೀ ಅಲಂಕಾರ ಮಾಡಲು ಇಷ್ಟಪಡುತ್ತೇವೆ. ಈ ಬಾರಿ ಸಹ ನೀವೂ ಈ ಟ್ರೀ (Tree) ಅಲಂಕಾರ ಮಾಡಲು ಐಡಿಯಾ ಹುಡುಕಾಡುತ್ತಿದ್ರೆ ನಾವು ನಿಮಗೆ ಸಹಾಯ ಮಾಡುತ್ತೇವೆ. ಸುಂದರವಾಗಿ ಕ್ರಿಸ್ಮಸ್ ಟ್ರೀ (Christmas Tree) ಡೆಕೊರೇಟ್ ಮಾಡಲು ಕೆಲ ಐಡಿಯಾಗಳು ಇಲ್ಲಿದೆ.
ಗೋಲ್ಡ್ ಮತ್ತು ವೈಟ್
ಗೋಲ್ಡ್ ಮತ್ತು ವೈಟ್ ಬಣ್ಣದ ಮಿಶ್ರಣ ಯಾವಾಗಲೂ ಸುಂದರವಾಗಿ ಕಾಣುತ್ತದೆ. ನೀವು ಈ ಬಣ್ಣದ ಬಲೂನ್ಗಳನ್ನು ಬಳಸಿ ಅಥವಾ ಡೆಕೊರೇಟಿವ್ ಟೇಪ್ಗಳನ್ನು ಬಳಸಿ. ಇದು ನಿಮಗೆ ಒಂದು ಸುಂದರ ಲುಕ್ ನೀಡುತ್ತದೆ. ಅಲ್ಲದೇ, ಇದಕ್ಕೆ ನೀವು ದೀಪಗಳನ್ನು ಹಾಕಿದರೆ ಇನ್ನೂ ಸುಂದರವಾಗಿ ಕಾಣುತ್ತದೆ.
ರೆಡ್ ಮತ್ತು ಯೆಲ್ಲೋ
ರೆಡ್ ಮತ್ತು ಯೆಲ್ಲೋ ಬಣ್ಣ ಸದ್ಯ ಟ್ರೆಂಡಿಂಗ್ ಇರುವ ಬಣ್ಣ ಎನ್ನಬಹುದು. ಇದನ್ನು ನೀವು ಮನೆ ಹಾಗೂ ಕ್ರಿಸ್ಮಸ್ ಟ್ರೀ ಅಲಂಕರಿಸಲು ಬಳಸಬಹುದು. ಈ ಬಾರಿ ಹಬ್ಬಕ್ಕೆ ಈ ಥೀಮ್ ಟ್ರೈ ಮಾಡಬಹುದು. ನೀವು ಕ್ರಿಸ್ಮಸ್ ಟ್ರೀಗೆ ಕೇವಲ ರೆಡ್ ಮತ್ತು ಯೆಲ್ಲೋ ಗಿಫ್ಟ್ ಬಾಕ್ಸ್ ಅನ್ನು ಹಾಕಬಹುದು. ಇದು ತುಂಬಾ ಡಿಫರೆಂಟ್ ಆಗಿ ಕಾಣುತ್ತದೆ.
ಇದನ್ನೂ ಓದಿ: ಫ್ರಿಜ್ನಲ್ಲಿ ಹಾಲಿಡಲು ಒಂದು ವಿಧಾನವಿದೆ, ಜಾಗ ಸಿಕ್ಕಲ್ಲಿ ಇಡಬೇಡಿ
ಹಳೆಯ ನೆನಪುಗಳ ಫೋಟೋ
ಹಳೆಯ ನೆನಪುಗಳನ್ನು ನಾವು ನೆನಪಿಸಿಕೊಂಡರೆ ಅದೇನೋ ಸಂತೋಷ ಸಿಗುತ್ತದೆ. ಅದರಲ್ಲೂ ಹಬಬ್ದ ದಿನ, ಖುಷಿಯ ಕ್ಷಣಗಳನ್ನು ನೀವು ಮತ್ತೆ ಮೆಲುಕು ಹಾಕಬೇಕು. ಅದಕ್ಕೆ ನೀವು ಕ್ರಿಸ್ಮಸ್ ಟ್ರೀ ಅಲಂಕಾರ ಮಾಡುವ ಹಳೆಯ ಫೋಟೋಗಳನ್ನು ನೇತು ಹಾಕಿ. ಮನೆಯ ಎಲ್ಲರಿಗೆ ಸಂತೋಷವಾಗುತ್ತದೆ.
ಗೇಮ್ ಟ್ರೀ ಮಾಡಿ
ಮಕ್ಕಳಿಗೆ ಈ ಕ್ರಿಸ್ಮಸ್ ಹಬ್ಬ ಬಹಳ ಇಷ್ಟದ ಹಬ್ಬ ಎನ್ನಬಹುದು. ಈ ಸಮಯದಲ್ಲಿ ಅವರಿಗೆ ಗಿಫ್ಟ್ಗಳು ಹೆಚ್ಚು ಸಿಗುತ್ತದೆ ಹಾಗೂ ಗೆಳೆಯರ ಜೊತೆ ವಿಭಿನ್ನ ಆಟವಾಡಲು ಸಹ ಸಮಯ ಸಿಗುತ್ತದೆ. ಹಾಗಾಗಿ ನೀವು ಕ್ರಿಸ್ಮಸ್ ಟ್ರೀ ಅನ್ನು ಗೇಮ್ ಟ್ರೀ ಆಗಿ ಬದಲಾಯಿಸಿ. ಮಕ್ಕಳಿಗೆ ಇಷ್ಟವಾಗುವ ರೀತಿ ಹಾಗೂ ಕುತೂಹಲಕಾರಿ ರೀತಿಯಾಗಿ ನೀವು ಅಲಂಕಾರ ಮಾಡಬಹುದು.
ಗಿಫ್ಟ್ ಟ್ರೀ ಮಾಡಿ
ಆಟದ ವಸ್ತುಗಳ ರೀತಿಯೇ ನೀವು ಗಿಫ್ಟ್ ಟ್ರೀ ಮಾಡಬಹುದು. ಸಣ್ಣ ಸಣ್ಣ ಗಿಫ್ಟ್ಗಳನ್ನು, ಬಣ್ಣ ಬಣ್ಣದ ಬಾಕ್ಸ್ನಲ್ಲಿ ಹಾಕಿ, ಟ್ರೀ ಸುತ್ತ ಡೆಕೊರೇಟ್. ಅಲ್ಲದೇ ಮಕ್ಕಳಿಗೆ ಅವರ ಹೆಸರಿನ ಗಿಫ್ಟ್ ಹುಡುಕಲು ಹೇಳಿ. ಹೀಗೆ ಮಾಡುವುದರಿಂದ ಸುಂದರ ಅಲಂಕಾರ ಮಾತ್ರವಲ್ಲದೇ, ಮನೆಯಲ್ಲಿ ಸಂತೋಷ ಸಹ ಮೂಡುತ್ತದೆ.
ಕ್ಯಾಂಡಿ ಕ್ರಿಸ್ಮಸ್ ಟ್ರೀ
ಇದು ಬಹಳ ವಿಶೇಷ ಎನ್ನಬಹುದು. ನೀವು ಕ್ರಿಸ್ಮಸ್ ಟ್ರೀಯನ್ನು ಕ್ಯಾಂಡಿಯಿಂದ ಸಹ ಮಾಡಬಹುದು. ಇದು ಬಹಳ ವಿಶೇಷ ಎನ್ನಬಹುದು. ಹಾಗೆಯೇ ನೀವು ಕ್ಯಾಂಡಿಯ ಬದಲಾಗಿ ಚಾಕೊಲೇಟ್ಗಳನ್ನು ಸಹ ಹಾಕಿ ಡೆಕೊರೇಟ್ ಮಾಡಬಹುದು. ಈ ರೀತಿಯ ಫ್ಯಾನ್ಸಿ ವಸ್ತುಗಳು ಮಕ್ಕಳಿಗೆ ಹೆಚ್ಚು ಇಷ್ಟವಾಗುತ್ತದೆ.
ಇದನ್ನೂ ಓದಿ: ಸೌತೆಕಾಯಿ ತಿಂದ್ರೆ ಪ್ರಯೋಜನಗಳ ಜೊತೆ ಸಮಸ್ಯೆ ಕೂಡ ಆಗುತ್ತೆ ಅಂತಾರೆ ತಜ್ಞರು
ರೆಡ್ ಮತ್ತು ವೈಟ್
ಗೋಲ್ಡ್ ಮತ್ತು ವೈಟ್ ರೀತಿಯೇ ರೆಡ್ ಮತ್ತು ವೇಟ್ ಬಣ್ಣದ ಮಿಶ್ರಣ ಕೂಡ ಬಹಳ ಚೆಂದ ಕಾಣುತ್ತದೆ. ಅದರಲ್ಲೂ ಕ್ರಿಸ್ಮಸ್ ಸಮಯದಲ್ಲಿ ಈ ಬಣ್ಣ ಹೆಚ್ಚು ಉತ್ತಮ ಎನ್ನಬಹುದು. ನೀವು ಟ್ರೀ ಅನ್ನು ಕೆಂಪು ಹಾಗೂ ವೈಟ್ ಬಣ್ಣದಲ್ಲಿ ಅಲಂಕಾರ ಮಾಡಿ, ಅದರ ಮೇಲೆ ಡಾರ್ಕ್ ಬಣ್ಣದ ಗಿಫ್ಡ್ ಬಾಕ್ಸ್ ಹಾಕಿದರೆ ಬಹಳ ಚೆಂದ ಕಾಣುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ