• Home
  • »
  • News
  • »
  • lifestyle
  • »
  • Christmas 2022: ಮಂಕಾಗುತ್ತಿದೆ ಕ್ರಿಸ್‌ಮಸ್ ಆಚರಣೆ - ಪಾರ್ಟಿ, ಕ್ಲಬ್‌ಗಳಿಗೆ ಸೀಮಿತವಾಗುತ್ತಿದೆಯೇ ಹಬ್ಬ?

Christmas 2022: ಮಂಕಾಗುತ್ತಿದೆ ಕ್ರಿಸ್‌ಮಸ್ ಆಚರಣೆ - ಪಾರ್ಟಿ, ಕ್ಲಬ್‌ಗಳಿಗೆ ಸೀಮಿತವಾಗುತ್ತಿದೆಯೇ ಹಬ್ಬ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Merry Christmas traditions: ವರ್ಷಗಳು ಕಳೆದಂತೆ ಕ್ರಿಸ್‌ಮಸ್ ಆಚರಣೆಗಳಲ್ಲೂ ಹಲವಾರು ವೈವಿಧ್ಯತೆಗಳು ಉಂಟಾಗಿವೆ. ರಜಾದಿನಗಳನ್ನು ಕುಟುಂಬದವರೆಲ್ಲರೂ ಜೊತೆಯಾಗಿ ಆಚರಿಸುವ ಬದಲಿಗೆ ಕ್ರಿಸ್‌ಮಸ್ ದೀಪಾಲಂಕಾರ, ರಾತ್ರಿ ಕ್ಲಬ್‌ಗಳು ಪಾರ್ಟಿಗಳು ಆ ಜಾಗವನ್ನು ಆಕ್ರಮಿಸಿಕೊಂಡಿವೆ.

  • Trending Desk
  • 2-MIN READ
  • Last Updated :
  • Share this:

ಕ್ರಿಸ್‌ಮಸ್ (Christmas) ಬಂಧು ಬಾಂಧವರನ್ನು ಒಗ್ಗೂಡಿಸುವ ಹಬ್ಬ. ಮನೆಗಳನ್ನು ಅಲಂಕರಿಸುವುದು (Decoration), ಕ್ರಿಸ್‌ಮಸ್ ಟ್ರೀಯ (Tree) ಅಲಂಕಾರ, ಸ್ನೇಹಿತರಿಗೆ, ಬಂಧುಗಳಿಗೆ, ಉಡುಗೊರೆಗಳನ್ನು ನೀಡುವುದು ಅತಿಥಿಗಳನ್ನು ಔತಣಕೂಟಗಳಿಗೆ ಆಹ್ವಾನಿಸುವುದು ಹೀಗೆ ಪ್ರಪಂಚದಾದ್ಯಂತ ಕ್ರಿಸ್‌ಮಸ್ ಅನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಕ್ರಿಸ್‌ಮಸ್ ಬಂತೆಂದರೆ ಕುಟುಂಬದವರೆಲ್ಲರೂ ಒಗ್ಗೂಡಿ ಹಬ್ಬವನ್ನು ಆಚರಿಸಲು ಮುಂದಾಗುತ್ತಾರೆ. ಎಲ್ಲೆಲ್ಲೋ ಇದ್ದವರು ಹಬ್ಬದ ಸಮಯದಲ್ಲಿ ಒಂದಾಗಿ ಕ್ರಿಸ್‌ಮಸ್ ಆಚರಣೆಗೆ ತೊಡಗುತ್ತಾರೆ. ವರ್ಷಕ್ಕೊಮ್ಮೆ ಚಳಿಗಾಲದ (Winter) ಸಮಯದಲ್ಲಿ ಕುಟುಂಬದವರೆಲ್ಲೂ ಒಂದಾಗಿ ಸಮಯವನ್ನು ಕಳೆಯುತ್ತಾರೆ.


ಆಧುನಿಕತೆಯ ಕರಿನೆರಳು ಕ್ರಿಸ್‌ಮಸ್ ಆಚರಣೆಯ ಮೇಲೆ ಬಿದ್ದಿದೆ


ಆದರೆ ವರ್ಷಗಳು ಕಳೆದಂತೆ ಕ್ರಿಸ್‌ಮಸ್ ಆಚರಣೆಗಳಲ್ಲೂ ಹಲವಾರು ವೈವಿಧ್ಯತೆಗಳು ಉಂಟಾಗಿವೆ. ರಜಾದಿನಗಳನ್ನು ಕುಟುಂಬದವರೆಲ್ಲರೂ ಜೊತೆಯಾಗಿ ಆಚರಿಸುವ ಬದಲಿಗೆ ಕ್ರಿಸ್‌ಮಸ್ ದೀಪಾಲಂಕಾರ, ರಾತ್ರಿ ಕ್ಲಬ್‌ಗಳು ಪಾರ್ಟಿಗಳು ಆ ಜಾಗವನ್ನು ಆಕ್ರಮಿಸಿಕೊಂಡಿವೆ. ಸಮಾನ ವಯಸ್ಸಿನ ಸ್ನೇಹಿತರು ಅಥವಾ ಸಹೋದ್ಯೋಗಿಗಳೊಂದಿಗೆ ಇಂತಹ ಮನರಂಜನಾ ಆಚರಣೆಗಳನ್ನು ನಡೆಸಲಾಗುತ್ತದೆ.


ಕುಟುಂಬದೊಂದಿಗೆ ಹಬ್ಬ ಆಚರಣೆ ಮಾಯವಾಗಿದೆ


ಕ್ರಿಸ್‌ಮಸ್ ಎಂದರೆ ಉಲ್ಲಾಸದ ಆಚರಣೆಯಾಗಿ ಮಾರ್ಪಟ್ಟಿದ್ದು ಕೌಟುಂಬಿಕ ಸಂಪ್ರದಾಯಗಳಿಗೆ ತಿಲಾಂಜಲಿ ಇಟ್ಟು ಹೆಚ್ಚು ಮೋಜು ಮಸ್ತಿಯಲ್ಲಿ ಯುವಜನಾಂಗ ಆಚರಣೆಯನ್ನು ನಡೆಸುತ್ತಿದೆಯೇ ಎಂಬ ಅಂಶ ಇಲ್ಲಿ ಕಾಡುತ್ತದೆ. ಒಂದು ರೀತಿಯಲ್ಲಿ ಹೇಳುವುದಾದರೆ ಹೆಚ್ಚಿನ ಬದಲಾವಣೆ ಇಲ್ಲಿ ಕಂಡುಬಂದಿದೆ.


ಈ ಬಗ್ಗೆ ಹಿರಿಯನ್ನು ಕೇಳಿದಾಗ ಈ ಬದಲಾವಣೆಯನ್ನು ಅವರು ಅಂಗೀಕರಿಸಿದ್ದು 22 ರ ಹರೆಯದ ಜೈಪುರದ ನಿವಾಸಿ ಸಿರಿಲ್ ಕೂಡ ಸಾಮಾಜಿಕ ವಲಯದಲ್ಲಿ ಹಬ್ಬದ ಕುರಿತು ಬದಲಾವಣೆಗಳು ಏರ್ಪಡುತ್ತಿರುವುದು ನಿಜ ಎಂದು ಅಂಗೀಕರಿಸಿದ್ದಾರೆ.


ರಂಗಿನ ವಾತಾವರಣವನ್ನು ಇಷ್ಟಪಡುವ ಯುವಜನರು


ಇಂದಿನ ತರುಣರು, ಪಾರ್ಟಿ, ಮೋಜು ಮಸ್ತಿಗಳ ಕಡೆಗೆ ಹೆಚ್ಚು ಆಕರ್ಷಿತರಾಗಿದ್ದು, ಮದ್ಯ, ಕುಣಿತ ಇಂತಹ ರಂಗಿನ ವಾತಾವರಣವನ್ನೇ ಹೆಚ್ಚು ಬಯಸುತ್ತಿದ್ದಾರೆ ಮತ್ತು ಕ್ರಿಸ್‌ಮಸ್ ಆಚರಣೆಯಲ್ಲೂ ಇದೇ ಆಧುನೀಕತೆಯನ್ನು ಅಳವಡಿಸಿಕೊಂಡಿದ್ದಾರೆ ಎಂಬುದು ಸಿರಿಲ್ ಅಭಿಪ್ರಾಯವಾಗಿದೆ.


ಇದನ್ನೂ ಓದಿ: ಕಡಿಮೆ ಖರ್ಚಲ್ಲಿ ಕ್ರಿಸ್‌ಮಸ್ ಟ್ರೀ ಮಾಡೋದು ಹೇಗೆ? ಹೀಗಿರಲಿ ನಿಮ್ಮ ಮನೆ ಅಲಂಕಾರ


ಕ್ರಿಸ್‌ಮಸ್ ಆಚರಣೆಯಲ್ಲಿ ಬದಲಾವಣೆಗಳಾಗಿವೆ


ಜೈಪುರ ಮೂಲದವರಾದ ಸಿರಿಲ್ ಬಾಲ್ಯದಲ್ಲಿ ಕ್ರಿಸ್‌ಮಸ್ ಆಚರಿಸುವ ವಿಧಾನಕ್ಕೂ ಈಗಿನ ಆಚರಣೆಗೂ ಅಜಗಜಾಂತರ ವ್ಯತ್ಯಾಸವಿದೆ ಎಂದು ತಿಳಿಸಿದ್ದಾರೆ. ಕ್ರಿಸ್‌ಮಸ್ ಕೇಕ್ ಅನ್ನು ಮೊದಲೆಲ್ಲಾ ಕುಟುಂಬಸ್ಥರು ಒಂದಾಗಿ ಸೇರಿ ತಯಾರಿಸುತ್ತಿದ್ದೆವು. ಇದೀಗ ಬೇಕರಿಯಿಂದ ತರಿಸಲಾಗುತ್ತಿದೆ ಹೀಗಾಗಿ ಅಂದಿನ ಗೌಜಿ ಗದ್ದಲ ಸಡಗರ ಸಂಭ್ರಮ ಮರೆಯಾಗಿದೆ ಎಂಬುದು ಸಿರಿಲ್ ಅಭಿಪ್ರಾಯವಾಗಿದೆ.


ಇಂದಿನ ಬಿಡುವಿಲ್ಲದ ಜೀವನಶೈಲಿಯಿಂದ ಯಾರಿಗೂ ಮನೆಯಲ್ಲಿ ಹಬ್ಬಕ್ಕಾಗಿ ಸಿದ್ಧತೆಗಳನ್ನು ನಡೆಸುವಷ್ಟು ತಾಳ್ಮೆ ಹಾಗೂ ಸಮಯವಿಲ್ಲ ಹಾಗಾಗಿಯೇ ಎಲ್ಲರೂ ಸಿದ್ಧವಾಗಿ ದೊರೆಯುವುದರತ್ತ ಮುಖಮಾಡುತ್ತಿದ್ದಾರೆ ಎಂದು ಸಿರಿಲ್ ತಿಳಿಸಿದ್ದಾರೆ.


ಒತ್ತಡದ ಜೀವನಶೈಲಿ ಹಬ್ಬಕ್ಕೆ ಬ್ರೇಕ್ ಹಾಕಿದೆ


ಬಿಡುವಿಲ್ಲದ ಕೆಲಸದ ಒತ್ತಡಗಳಲ್ಲಿ ತೊಡಗಿಕೊಂಡಿರುವುದೇ ಹಬ್ಬದ ಆಚರಣೆಗಳಲ್ಲಿ ಮೊದಲಿನ ಹುರುಪು ಮಾಯವಾಗಲು ಕಾರಣ ಎಂಬುದುನ್ನು 22 ರ ಹರೆಯದ ಬೆನಿಸನ್ ಉಲ್ಲೇಖಿಸಿದ್ದಾರೆ. ಪ್ರಸ್ತುತ ದೆಹಲಿಯಲ್ಲಿ ವಾಸವಾಗಿರುವ ಬೆನಿಸನ್ ನಗರಗಳಲ್ಲಿ ಸಮಯ ಓಡಿದಂತೆ ಭಾಸವಾಗುತ್ತಿದೆ ಜನರಿಗೆ ತಮ್ಮ ಕುಟುಂಬಗಳಿಗೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲ ಕಚೇರಿಗೆ ಧಾವಿಸುತ್ತಾರೆ ಹಿಂತಿರುಗಿ ಮನೆಗೆ ಬಂದು ನಿದ್ರಿಸಿ ವಿಶ್ರಾಂತಿ ಪಡೆಯುತ್ತಾರೆ. ಮರುದಿನ ಇದೇ ದಿನಚರಿ ಹೀಗಾಗಿ ಒಂದು ರೀತಿಯಲ್ಲಿ ಓಟದ ಜೀವನವನ್ನು ಪ್ರತಿಯೊಬ್ಬರೂ ನಡೆಸುತ್ತಿದ್ದಾರೆ ಎಂಬುದು ಬೆನಿಸನ್ ಮಾತಾಗಿದೆ.


ಪಟ್ಟಣಗಳಲ್ಲಿ ಎಲ್ಲರೂ ಸೇರಿ ಹಬ್ಬ ಆಚರಿಸುವುದಿಲ್ಲ


ಹಿಂದೆಲ್ಲಾ ಎಲ್ಲಾ ಧರ್ಮದವರು ಒಂದಾಗಿ ಸೇರಿ ಹಬ್ಬದಲ್ಲಿ ಪಾಲ್ಗೊಳ್ಳುತ್ತಿದ್ದರು ಹಾಗೂ ಕೇಕ್ ಕತ್ತರಿಸಿ ಪರಸ್ಪರ ಹಂಚಿಕೊಂಡು ಸೇವಿಸುತ್ತಿದ್ದರು. ಪ್ರತಿಯೊಬ್ಬರ ಮನೆಗೆ ಭೇಟಿನೀಡಿ ಕೇಕ್ ಹಂಚಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದರು ಎಂಬುದಾಗಿ ತನ್ನ ಊರಾದ ಕೇರಳದ ಆ ದಿನಗಳನ್ನು ಬೆನಿಸನ್ ಸ್ಮರಿಸಿಕೊಂಡಿದ್ದಾರೆ. ಆದರೆ ದೆಹಲಿಯಲ್ಲಿ ಈ ರೀತಿ ಯಾವುದೂ ನಡೆಯುವುದಿಲ್ಲ ಎಂಬುದು ಅವರ ಭಾವನೆಯಾಗಿದೆ.


ಇದನ್ನೂ ಓದಿ: ಕ್ರಿಸ್​ಮಸ್​ ಸಂಭ್ರಮದಲ್ಲಿ ಸುಂದರವಾಗಿ ಕಾಣಲು ಇಲ್ಲಿದೆ ಟಿಪ್ಸ್


ಪ್ರದೇಶದಿಂದ ಪ್ರದೇಶಕ್ಕೆ ಆಚರಣೆ ಭಿನ್ನ


ಅದಾಗ್ಯೂ ಕ್ರಿಸ್‌ಮಸ್ ಆಚರಣೆಗಳು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತವೆ ಎಂಬುದು ಬೆನಿಸನ್ ಮಾತಾಗಿದೆ. ಈಶಾನ್ಯದಲ್ಲಿ ಕ್ರಿಸ್‌ಮಸ್ ಆಚರಣೆ ಅವು ಕೇರಳ ಹಾಗೂ ಗೋವಾದಲ್ಲಿ ಆಚರಿಸುವುದಕ್ಕಿಂತ ಭಿನ್ನವಾಗಿರುತ್ತದೆ. ಮಹಾರಾಷ್ಟ್ರದ ಕ್ರಿಶ್ಚಿಯನ್ನರಲ್ಲಿ ಸಹ ಈ ಹಬ್ಬವನ್ನು ಆಚರಿಸುವ ವಿಶಿಷ್ಟ ವಿಧಾನಗಳಿವೆ ಎಂಬುದು ಅವರ ಮಾತಾಗಿದೆ.

Published by:Sandhya M
First published: