Health: ಒತ್ತಡದ ದಿನಗಳು-ಪ್ರಯಾಣದ ವೇಳೆ ಯಾವ ರೀತಿಯ ಆಹಾರ ಸೇವಿಸೋದು ಉತ್ತಮ ಗೊತ್ತಾ..?

ತಾವು ಪ್ರಯಾಣದಲ್ಲಿದ್ದಾಗ, ಯಾವ ರೀತಿಯ ಆಹಾರವನ್ನು ತನ್ನೊಂದಿಗೆ ತೆಗೆದುಕೊಂಡು ಹೋಗುತ್ತೇನೆ ಎಂಬ ಕುರಿತ ಮಾಹಿತಿಯನ್ನು ಪೂಜಾ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.

ಅವಲಕ್ಕಿ

ಅವಲಕ್ಕಿ

  • Share this:
ನಾವು ಸಾಮಾನ್ಯವಾಗಿ ಕೆಲಸದಲ್ಲಿ (Hectic Day) ಅತ್ಯಂತ ವ್ಯಸ್ಥರಾಗಿದ್ದಾಗ, ನಮಗೆ ಬೇರೆ ಯಾವುದರ ಬಗ್ಗೆಯೂ ಯೋಚಿಸಲು ಸಮಯ ಇರುವುದಿಲ್ಲ. ಒಮ್ಮೊಮ್ಮೆ ಕೆಲಸದಲ್ಲಿ ನಾವೆಷ್ಟು ಮುಳುಗಿ ಹೋಗುತ್ತೇವೆ ಎಂದರೆ, ಆಹಾರ ಕ್ರಮ ಮತ್ತು ಪೌಷ್ಟಿಕಾಂಶವನ್ನು ಮರೆತೇ ಬಿಡುತ್ತೇವೆ. ನಮಗೆ ಊಟ ಮಾಡಲು ಸಮಯ ಸಿಗದ ದಿನಗಳಲ್ಲಿ,  ಕನಿಷ್ಟ ಪಕ್ಷ ಸ್ವಲ್ಪ ಬಿಡುವು ಸಿಕ್ಕರೂ, ಆರೋಗ್ಯಕರವಾದದ್ದೇನಾದರೂ (Healthy Food) ತಿನ್ನಬೇಕು. ಆಹಾರ ತಜ್ಞೆ ಪೂಜಾ ಮಖೀಜಾ ತಮ್ಮ ಇನ್‍ಸ್ಟಾಗ್ರಾಂ ಪೋಸ್ಟ್‌ನಲ್ಲಿ, ಬಿಡುವಿಲ್ಲದ ಕೆಲಸದ ದಿನಗಳಲ್ಲಿ, ನೀವು ತಿನ್ನಲು ಸಾಧ್ಯವಾಗುವ ಕೆಲವು ತಿನಿಸುಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

“ ಒಂದು ಸಣ್ಣ ಯೋಜನೆಯಿಂದ ಬಹು ದೂರ ಸಾಗಬಹುದು. ಆಲೋಚನೆ ಮತ್ತು ಆರೈಕೆಯ ಮೂಲಕ ದೇಹಕ್ಕೆ ನೀಡುವುದು, ಒತ್ತಡದಿಂದ ಕೂಡಿದ ದಿನದಿಂದ ಹೆಚ್ಚಿನದನ್ನು ಪಡೆಯುವ ಉತ್ತಮ ಮಾರ್ಗ” ಎಂದು ಪೂಜಾ ತಮ್ಮ ಪೋಸ್ಟ್‌ಗೆ ಅಡಿ ಬರಹ ನೀಡಿದ್ದಾರೆ.

ಮೊಸರನ್ನ


ತಾವು ಪ್ರಯಾಣದಲ್ಲಿದ್ದಾಗ, ಯಾವ ರೀತಿಯ ಆಹಾರವನ್ನು ತನ್ನೊಂದಿಗೆ ತೆಗೆದುಕೊಂಡು ಹೋಗುತ್ತೇನೆ ಎಂಬ ಕುರಿತ ಮಾಹಿತಿಯನ್ನು ಪೂಜಾ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಅವು ಈ ಕೆಳಗಿನಂತಿವೆ :




1. ಮೊಸರನ್ನಮೊಸರನ್ನ ತನ್ನ ಮೆಚ್ಚಿನ ಆರೋಗ್ಯಕರ ಊಟ ಎಂದು ಪೂಜಾ ಹೇಳಿದ್ದಾರೆ.  ನೀವು ಅದನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಬಹುದು ಮತ್ತು ಕೆಲಸದ ಜಾಗದಲ್ಲಿ ಮಧ್ಯಾಹ್ನದ ಊಟವಾಗಿ ಸೇವಿಸಬಹುದು. ಅದು ಸಾಧ್ಯವಾಗದಿದ್ದರೆ, ಒಂದು ಡಬ್ಬಿ ಮಿಶ್ರ ತರಕಾರಿ ಪಲಾವ್, ಮೊಟ್ಟೆಯ ಫ್ರೈಡ್ ರೈಸ್, ಹೆಸರು ಮೊಳಕೆಕಾಳಿನ ಪೌಷ್ಟಿಕಾಂಶಯುಕ್ತ ಪಲಾವ್, ಕಿಚಡಿ, ಫ್ರಾಂಕಿ ಅಥವಾ ಪಲ್ಯಗಳನ್ನು ತುಂಬಿಸಿರುವ ರೋಟಿ ತಿನ್ನಬಹುದು.

ಇದನ್ನೂ ಓದಿ:  Health Tips: ಉತ್ತಮ ಆರೋಗ್ಯಕ್ಕೆ ಸಮತೋಲಿತ ಆಹಾರ..!

2. ಅವಲಕ್ಕಿನೀವು ಕೆಲಸದಲ್ಲಿ ವ್ಯಸ್ಥರಾಗಿದ್ದಾಗ ತಿನ್ನಬಹುದಾದ ಇನ್ನೊಂದು ಆಹಾರದ ಆಯ್ಕೆ ಎಂದರೆ, ಅದು ಅವಲಕ್ಕಿ. ನೀವು ಅದನ್ನು ಊಟವಾಗಿ ಸೇವಿಸಬಹುದು ಅಥವಾ ಎರಡು ಗಂಟೆಗೊಮ್ಮೆ ತಿನ್ನುವ ತಿನಿಸಾಗಿಯೂ ಪರಿಗಣಿಸಬಹುದು. ಅದು ಸದ್ಯಕ್ಕೆ ನಿಮ್ಮ ಮನೆಯಲ್ಲಿ ಇಲ್ಲ ಎಂದಾದರೆ, ಉಪ್ಪಿಟ್ಟು, ತರಕಾರಿ ಕಿಚಡಿ, ಅಥವಾ ಕಿನೋವಾ ಸಲಾಡ್ ಸೇವಿಸಬಹುದು.

3. ಮೊಟ್ಟೆ ಸ್ಯಾಂಡ್‍ವಿಚ್ ಆರೋಗ್ಯಕರ ಸ್ಯಾಂಡ್‍ವಿಚ್‍ಗಳು ಬೆಳಗಿನ ಉಪಾಹಾರಕ್ಕೆ ಉತ್ತಮ ಆಯ್ಕೆ ಎನ್ನಬಹುದು. ಅದನ್ನು ತಮ್ಮ ವಿಡಿಯೋದಲ್ಲಿ ಮತ್ತೆ ಹೇಳಿರುವ ಪೂಜಾ, ತಾನು ಪ್ರಯಾಣಿಸುವಾಗ ಮೊಟ್ಟೆ ಸ್ಯಾಂಡ್‍ವಿಚ್‍ಗಳನ್ನು ಜೊತೆಗೆ ಕೊಂಡೊಯ್ಯುತ್ತೇನೆ ಎಂದು ತಿಳಿಸಿದ್ದಾರೆ. ಆದರೆ, ನಿಮಗೆ ಮೊಟ್ಟೆ ಇಷ್ಟವಿಲ್ಲ ಎಂದಾದಲ್ಲಿ, ತರಕಾರಿ ಸ್ಯಾಂಡ್‍ವಿಚ್, ಸರಳ ಪೀನಟ್ ಬಟರ್ ಸ್ಯಾಂಡ್‍ವಿಚ್ ಅಥವಾ ತರಕಾರಿ ಟೋಸ್ಟ್ ಅನ್ನೂ ಸೇವಿಸಬಹುದು.

ಇದನ್ನೂ ಓದಿ: ನೈಸರ್ಗಿಕವಾಗಿ ಕೂದಲ ಉತ್ತಮ ಬೆಳವಣಿಗೆಗಾಗಿ ಈ ಆಹಾರ ಸೇವಿಸಿ..!

4. ಡ್ರೈ ಫ್ರೂಟ್ಸ್‌ಮಧ್ಯಂತರ ತಿನಿಸುಗಳು ಬೇಡ ಎಂದಾದಲ್ಲಿ, ಬದಲಿಗೆ  ನೀವು ಡ್ರೈ ಫ್ರೂಟ್ಸ್‌ ಸೇವಿಸಬಹುದು ಮತ್ತು ಅವು ನಿಮ್ಮ ದೇಹದ ಆರೋಗ್ಯಕ್ಕೂ ಒಳ್ಳೆಯದು.

5. ಹಣ್ಣುಗಳುನೀವು ಹಣ್ಣುಗಳನ್ನು ಕೂಡ ಜೊತೆಗೆ ತೆಗೆದುಕೊಂಡು ಹೋಗಬಹುದು. ಏಕೆಂದರೆ ಅವು ಆರೋಗ್ಯಕ್ಕೆ ಉಪಯೋಗಕಾರಿ ಮಾತ್ರವಲ್ಲ, ಬಹು ಬೇಗನೆ ಹೊಟ್ಟೆಯನ್ನೂ ತುಂಬಿಸುತ್ತದೆ. ಹಣ್ಣುಗಳು ಸಿಹಿ ತಿನ್ನಬೇಕೆಂಬ ಆಸೆಯನ್ನು ಕೂಡ ಶಮನ ಮಾಡುತ್ತವೆ. ಮುಂದಿನ ಬಾರಿ ಒತ್ತಡದ ಕೆಲಸದ ದಿನವೊಂದರ ತಯಾರಿಯಲ್ಲಿದ್ದಾಗ, ನೀವು ಮೇಲೆ ತಿಳಿಸಿದ ಆಹಾರ ಪದಾರ್ಥಗಳನ್ನು ನಿಮ್ಮೊಂದಿಗೆ ಇರಿಸಿಕೊಳ್ಳುವುದನ್ನು ಮರೆಯದಿರಿ.
Published by:Anitha E
First published: