Health Tips: ದೇಹದಲ್ಲಿ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಈ ಆಹಾರ ಸಹಕಾರಿ

Cholesterol Lowering Foods: ಕೊಲೆಸ್ಟ್ರಾಲ್ ನಿಯಂತ್ರಿಸಲು ಎಣ್ಣೆ, ತುಪ್ಪ, ವನಸ್ಪತಿ ಈ ರೀತಿಯ ಪದಾರ್ಥಗಳ ಬಳಕೆಯನ್ನು ಕಡಿಮೆ ಮಾಡಬೇಕು. ಅಲ್ಲದೆ ಸಂಸ್ಕರಿಸಿದ ಆಹಾರವನ್ನೂ ಬಳಸಬಾರದು.

ಸಾಂಧರ್ಬಿಕ ಚಿತ್ರ

ಸಾಂಧರ್ಬಿಕ ಚಿತ್ರ

 • Share this:
  ನಿಮ್ಮ ದೇಹದಲ್ಲಿನ (Body) ಕೊಲೆಸ್ಟ್ರಾಲ್ (Cholesterol) ನಿಮ್ಮ ಆರೋಗ್ಯಕ್ಕೆ(Health) ಯಾವ ರೀತಿಯಲ್ಲಿ ಮುಳುವಾಗುತ್ತದೆಯೋ ಊಹಿಸಲು ಅಸಾಧ್ಯ. ನಾವು ಸೇವಿಸುವ ಪರಿಷ್ಕರಿಸಿದ ಕೊಬ್ಬಿನಿಂದಾಗಿ ನಮ್ಮ ದೇಹದಲ್ಲಿನ ಕೊಬ್ಬಿನ ಪ್ರಮಾಣವು ಹೆಚ್ಚಾಗುತ್ತದೆ ಮತ್ತು ನಾವು ಅದನ್ನು ನಿಯಂತ್ರಿಸಿಕೊಳ್ಳಲೇಬೇಕು. ಇಲ್ಲವಾದರೆ ಈ ರೀತಿಯ ಕೊಬ್ಬು ಹೃದಯ ಸಂಬಂಧಿ ಕಾಯಿಲೆ (Heart Problem), ಕೊಲೆಸ್ಟ್ರಾಲ್, ಬೊಜ್ಜು, ಅಧಿಕ ತೂಕ(Weight gain) ಮತ್ತು ಇನ್ನಿತರೆ ಅಸ್ವಸ್ಥತೆಗಳಿಗೆ ಕಾರಣವಾಗಬಹುದು.ಈ ಪರಿಷ್ಕರಿಸಿದ ಕೊಬ್ಬುಗಳ ಸೇವನೆ, ಧೂಮಪಾನ (Smoking), ಜಡತ್ವದ ಜೀವನಶೈಲಿ (Lazy Lifestyle)ಮತ್ತು ಮದ್ಯಪಾನ ಇವೆಲ್ಲವುಗಳಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವು ಎಲ್ಲಾ ವಯೋಮಾನದವರಲ್ಲಿ ಹೆಚ್ಚಾಗುತ್ತಿದೆ.

  ಕೊಬ್ಬಿನಂಶವಿರುವ ಆಹಾರವನ್ನು ತಿನ್ನುವುದು ಮಿತಿ ಮೀರಿದರೆ ಮಾತ್ರ ಕಷ್ಟ. ಆಗ ಕೊಲೆಸ್ಟ್ರಾಲ್ ಹೆಚ್ಚಾಗುವುದು. ಅಷ್ಟು ಮಾತ್ರವಲ್ಲ ತುಂಬಾ ಹೊತ್ತು ಕೂತುಕೊಂಡು ಕೆಲಸ ಮಾಡುವುದರಿಂದಲೂ ಕೊಲೆಸ್ಟ್ರಾಲ್ ಹೆಚ್ಚಾಗುವುದು. ಹೀಗಾಗಿ ಕೊಲೆಸ್ಟ್ರಾಲ್ ನಿಯಂತ್ರಿಸಲು ಎಣ್ಣೆ, ತುಪ್ಪ, ವನಸ್ಪತಿ ಈ ರೀತಿಯ ಪದಾರ್ಥಗಳ ಬಳಕೆಯನ್ನು ಕಡಿಮೆ ಮಾಡಬೇಕು. ಅಲ್ಲದೆ ಸಂಸ್ಕರಿಸಿದ ಆಹಾರವನ್ನೂ ಬಳಸಬಾರದು.

  ಇನ್ನು ಕುಕ್ಕೀಸ್‌, ಚಿಪ್ಸ್ ಮುಂತಾದ ಆಹಾರ ಪದಾರ್ಥಗಳನ್ನು ಸ್ನ್ಯಾಕ್ಸ್ ಆಗಿ ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು. ಜೊತೆಗೆ ಈ ಕೆಳಗಿನ ಆಹಾರ ಪದಾರ್ಥ ಸೇವನೆ ಮಾಡುವುದರಿಂದ ಕೊಲೆಸ್ಟ್ರಾಲ್ ನಿಯಂತ್ರಿಸಬಹುದು

  ಇದನ್ನೂ ಓದಿ: ಸಕ್ಕರೆ ಬದಲಿಗೆ ಈ ವಸ್ತುಗಳನ್ನು ಬಳಸಿದ್ರೆ ಯಾವ್ದೇ ಆರೋಗ್ಯ ಸಮಸ್ಯೆ ಬರಲ್ವಂತೆ

  1)ಗ್ರೀನ್ ಟೀ: ಗ್ರೀನ್ ಟೀ ಉತ್ಕರ್ಷಣ ನಿರೋಧಕಗಳ ಅತ್ಯುತ್ತಮ ಮೂಲವಾಗಿದೆ. ಇದು ಕ್ಯಾಟೇಚಿನ್ ಮತ್ತು ಉತ್ತಮ ಅಂಶಗಳನ್ನು ಒಳಗೊಂಡಿದೆ. ಗ್ರೀನ್ ಟೀ ಕುಡಿಯುವುದರಿಂದ ಎಚ್ಡಿಎಲ್ ಮತ್ತು ಒಟ್ಟು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

  ಕಪ್ಪು ಚಹಾವು ಹಸಿರು ರೂಪಾಂತರಕ್ಕಿಂತ ಕಡಿಮೆ ಕ್ಯಾಟೇಚಿನ್ ಗಳನ್ನೂ ಹೊಂದಿದೆ. ಆದ್ದರಿಂದ ಗ್ರೀನ್ ಟೀ ಸೇವಿಸುವ ಅಭ್ಯಾಸವನ್ನು ಮಾಡಿಕೊಳ್ಳಿ.

  2)ಸೋಯಾ ಹಾಲು: ಸೋಯಾ ಹಾಲಿನಲ್ಲಿ ಕಡಿಮೆ ಮಟ್ಟದ ಸ್ಯಾಚುರೇಟೆಡ್ ಕೊಬ್ಬುಗಳಿವೆ.ನಿಯಮಿತ ಕ್ರೀಮರ್ ಮತ್ತು ಅಧಿಕ ಕೊಬ್ಬಿನ ಹಾಲನ್ನು ಸೋಯಾ ಹಾಲಿನೊಂದಿಗೆ ಬದಲಾಯಿಸುವುದರಿಂದ ಕೊಲೆಸ್ಟ್ರಾಲ್ ನಿರ್ವಹಣೆಗೆ ಸಹಾಯವಾಗುತ್ತದೆ.

  ಆಹಾರ ಮತ್ತು ಡ್ರಗ್ ಅಸೋಸಿಯೇಶನ್ ಆಹಾರದ ಭಾಗವಾಗಿ ಪ್ರತಿ ದಿನ ಕಡಿಮೆ ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು 25 ಗ್ರಾಂ ಸೋಯಾ ಪ್ರೊಟೀನ್ ಇರುವ ಆಹಾರವನ್ನು ಶಿಫಾರಸು ಮಾಡುತ್ತದೆ.ಅದರಿಂದ ಇದು ಉತ್ತಮವಾಗಿದೆ.

  3)ಓಟ್ಸ್ ಶೇಕ್: ಓಟ್ಸ್ ಆರೋಗ್ಯಕರ ಆಹಾರವಾಗಿದ್ದು, ಇದರಲ್ಲಿ ಬೀಟಾ ಗ್ಲುಕನ್‌ಗಳು ಕಂಡುಬರುತ್ತವೆ. ಇದು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಪ್ರತಿದಿನ ಓಟ್ಸ್ ಪಾನೀಯಗಳನ್ನು ಕುಡಿಯಿರಿ.

  4)ಬಾದಾಮಿ: ಬಾದಾಮಿ ಮತ್ತು ಇತರ ಒಣ ಬೀಜಗಳು ಕೊಲೆಸ್ಟ್ರಾಲ್‍ಗಳ ಸುಧಾರಣೆಗೆ ಹಾಗೂ ಆರೋಗ್ಯದಲ್ಲಿ ಕೊಬ್ಬಿನ ಪ್ರಮಾಣವನ್ನು ಸಮತೋಲನದಲ್ಲಿ ಇರುವಂತೆ ನೋಡಿಕೊಳ್ಳುವುದು.

  ಈ ಹಿಂದ ಹೃದಯಘಾತ ಹೊಂದಿರುವವರಾಗಿದ್ದರೆ ಬಾದಾಮಿಯನ್ನು ತಪ್ಪದೆ ಸೇವಿಸಬೇಕು. ಅದು ಹೃದಯದ ಆರೋಗ್ಯವನ್ನು ಸುಧಾರಿಸುವುದು. ಹೃದಯದ ತೊಂದರೆ ಅಪಾಯ ವಿದ್ದರೆ ಅದನ್ನು ಕಡಿಮೆ ಮಾಡುವುದು.

  ಎಲ್ಲಾ ಬೀಜಗಳಲ್ಲೂ ಸಾಮಾನ್ಯವಾಗಿ ಹೆಚ್ಚಿನ ಕ್ಯಾಲೋರಿಗಳಿರುತ್ತವೆ ಅವುಗಳನ್ನು ಬೆರಳೆಣಿಕೆಯ ಪ್ರಮಾಣದಲ್ಲಿ ಸಲಾಡ್‍ಗೆ ಸೆರಿಸಿಕೊಂಡು ಸವಿಯಬಹುದು. ಅದು ಲಘು ಆಹಾರವಾಗಿ ಆರೋಗ್ಯವನ್ನು ಸುಧಾರಿಸುವುದು.

  5)ಆಲೀವ್ ಎಣ್ಣೆ: ಆಹಾರ ತಯಾರಿಸಲು ಅಥವಾ ಸಲಾಡ್‍ಗಳ ತಯಾರಿಸಲು ಆಲಿವ್ ಎಣ್ಣೆ ಬಳಸುವುದು ಉತ್ತಮ. ಮಾಂಸಗಳನ್ನು ಬೇಯಿಸುವಾಗ ಬೆಣ್ಣೆಯ ಬದಲಿಗೆ ಆಲಿವ್ ಎಣ್ಣೆಯನ್ನು ಬಳಸಬಹುದು. ಬ್ರೆಡ್ ರೋಸ್ಟ್ ಮಾಡಲು ಅಥವಾ ಇನ್ನಿತರ ಕುರುಕಲು ತಿಂಡಿಗಳ ತಯಾರಿಕೆಗೆ ಆಲಿವ್ ಎಣ್ಣೆ ಉತ್ತಮ ಆಯ್ಕೆ ಆಗುವುದು.

  ಈ ಎಣ್ಣೆಯಲ್ಲಿ ಇರುವ ಪೋಷಕಾಂಶ ಹಾಗೂ ಔಷಧೀಯ ಗುಣವು ದೇಹದಲ್ಲಿ ಇರುವ ಕೆಟ್ಟ ಕೊಬ್ಬಿನಂಶಗಳನ್ನು ಕರಗಿಸಲು ಸಹಾಯ ಮಾಡುವುದು. ಜೊತೆಗೆ ಕೊಲೆಸ್ಟ್ರಾಲ್‍ನಂತಹ ಅನಾರೋಗ್ಯವನ್ನು ತಡೆಯುವುದು.

  6)ಬೆರ್ರಿ ಹಣ್ಣಿ ಮಿಲ್ಕ್ ಶೇಕ್: ಆಂಟಿಆಕ್ಸಿಡೆಂಟ್‌ಗಳು ಮತ್ತು ಫೈಬರ್ ಬೆರ್ರಿ ಹಣ್ಣಿನ ಮಿಲ್ಕ್ ಶೇಕ್ ನಲ್ಲಿ ಕಂಡುಬರುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಈ ಪಾನೀಯಗಳು ಆರೋಗ್ಯಕರ ಮತ್ತು ಸೇವಿಸಲು ಕೂಡ ರುಚಿಯಾಗಿರುತ್ತದೆ.

  ಇದನ್ನೂ ಓದಿ: ಚರ್ಮ ಬಿಗಿಯಾಗಿ, ಕಾಂತಿಯುತವಾಗಿ ಕಾಣಲು ಬೇವು, ಅರಿಶಿನವನ್ನು ಈ ರೀತಿ ಸೇವಿಸಿ.

  7)ಟೊಮೇಟೊ ರಸ: ಟಮೋಟದಲ್ಲಿ ಉತ್ತಮ ಪ್ರಮಾಣದ ಲೈಕೋಪಿನ್ ಇದೆ, ಇದು ಉತ್ಕರ್ಷಣ ನಿರೋಧಕವಾಗಿದ್ದು, ಇದು ಜೀವಕೋಶದ ಹಾನಿಯನ್ನು ರಕ್ಷಿಸುತ್ತದೆ.

  ಟಮೋಟೊಗಳ ಒಂದು ಕುತೂಹಲಕಾರಿ ವಿಷಯವೆಂದರೆ ಅದನ್ನು ಸಂಸ್ಕರಿಸುವುದರಿಂದ ಅವುಗಳಲ್ಲಿ ಲೈಕೋಪಿನ್ ಅಂಶವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ನಿಯಾಸಿನ್ ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡುವ ನಾರುಗಳನ್ನು ಕೂಡ ಹೊಂದಿದೆ.

  ಅಧ್ಯಯನವು ದಿನಕ್ಕೆ 280 ಮಿಲಿ ಎರಡು ತಿಂಗಳ ಕಾಲ ಕೊಲೆಸ್ಟ್ರಾಲ್ ಮಟ್ಟವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ ಎಂದು ತೋರಿಸುತ್ತದೆ.
  Published by:ranjumbkgowda1 ranjumbkgowda1
  First published: