ಮದ್ಯಪಾನದಲ್ಲೂ ಅಮೆರಿಕವನ್ನು ಹಿಂದಿಕ್ಕಿದ ಚೀನಾ

news18
Updated:August 20, 2018, 12:49 PM IST
ಮದ್ಯಪಾನದಲ್ಲೂ ಅಮೆರಿಕವನ್ನು ಹಿಂದಿಕ್ಕಿದ ಚೀನಾ
news18
Updated: August 20, 2018, 12:49 PM IST
-ನ್ಯೂಸ್ 18 ಕನ್ನಡ

ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾ ದೇಶ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನ ಛಾಪು ಮೂಡಿಸುತ್ತಿರುವುದು ಗೊತ್ತಿದೆ. ಅದು ಕ್ರೀಡಾ ಕ್ಷೇತ್ರವಿರಲಿ ಅಥವಾ ತಂತ್ರಜ್ಞಾನ ಕ್ಷೇತ್ರವಾಗಿರಲಿ ಚೀನಾದ ಹೆಸರು ಮುಂಚೂಣಿಯಲ್ಲಿರುತ್ತದೆ. ಇದೀಗ ಮತ್ತೊಂದು ಖ್ಯಾತಿಯನ್ನು ಚೀನಿಗರು ತಮ್ಮದಾಗಿಸಿಕೊಂಡಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ ಚೀನಾ ಮದ್ಯಪಾನಿಗಳು ಅತಿ ಹೆಚ್ಚು ಬಿಯರ್​ಗಳನ್ನು ಕುಡಿಯುತ್ತಿದ್ದಾರಂತೆ. ಖ್ಯಾತ ಬಡ್​ವೈಸರ್ ಬಿಯರ್ ಕಂಪನಿಯ ಬಿಯರ್​ಗಳಿಗೆ ಮೊರೆ ಹೋಗಿರುವ ಚೀನಿಗರು ಅತಿ ಹೆಚ್ಚು ಬಿಯರ್ ಕುಡಿಯುತ್ತಿದ್ದ ಅಮೆರಿಕವನ್ನು ಹಿಂದಿಕ್ಕಿ ಮೊದಲ ಸ್ಥಾನ ತನ್ನದಾಗಿಸಿಕೊಂಡಿದೆ. ರೊಬೊಬ್ಯಾಂಕ್ ಸಂಸ್ಥೆ ಬಿಡುಗಡೆ ಮಾಡಿರುವ ಈ ವರದಿಯಲ್ಲಿ ಚೀನಾದಲ್ಲಿ ಮದ್ಯಪಾನಿಗಳ ಸಂಖ್ಯೆಯು ವ್ಯಾಪಕವಾಗಿ ವರ್ಧಿಸುತ್ತಿದೆ.

ಬಡ್​ವೈಸರ್ ಬಿಯರ್​ಗಳ ದರವು ಚೀನಾ ಮತ್ತು ಅಮೆರಿಕದಲ್ಲಿ ವ್ಯತ್ಯಾಸಗಳಿವೆ ಎಂದು ತಿಳಿಸಿರುವ ಬಾರ್ ಗ್ರಾಫ್, 2000ರ ನಂತರ ಯುಸ್​ಎ ದೇಶದಲ್ಲಿ ಬಡ್​ವೈಸರ್ ಖರೀದಿದಾರರು ಕಡಿಮೆಯಾದಾಗ, ಇತ್ತ ಚೀನಾದಲ್ಲಿ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡಿದೆ.

ಅತಿ ಹೆಚ್ಚು ಬಿಯರ್ ಕುಡಿಯುವ ಈ ಎರಡು ದೇಶಗಳಲ್ಲಿ ವಿದೇಶಿ ಬ್ರಾಂಡ್​ಗಳದ್ದೇ ಕಾರುಬಾರು. ಅಮೆರಿಕದ ಮದ್ಯಪ್ರೇಮಿಗಳು ಮೆಕ್ಸಿಕನ್ ಬಿಯರ್​ಗಳಿಗೆ ಮೊರೆ ಹೋದರೆ, ಚೀನಿ ಗ್ರಾಹಕರು ಅಮೆರಿಕನ್ ಬ್ರಾಂಡ್​ಗಳನ್ನು ಹೆಚ್ಚಾಗಿ ಕುಡಿಯುತ್ತಾರೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.

ಸದ್ಯ ಚೀನಾದ ಮದ್ಯ ಮಾರುಕಟ್ಟೆಯಲ್ಲಿ ಅಧಿಪತ್ಯ ಸಾಧಿಸುವತ್ತ ಮುನ್ನುಗ್ಗುತ್ತಿರುವ ಬಡ್​ವೈಸರ್ ಕಂಪನಿ ಈಗಾಗಲೇ ಚೀನಾದಲ್ಲಿ ಅತಿ ಹೆಚ್ಚು ಮಾರಾಟವಾಗುವ ಬಿಯರ್ ಕಂಪನಿಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.

ರೊಬೊಬ್ಯಾಂಕ್ ಸಂಶೋಧನೆಯ ಪ್ರಕಾರ ಇಟಲಿ, ನೆದರ್​ಲ್ಯಾಂಡ್ ಮತ್ತು ಬೆಲ್ಜಿಯಂ ದೇಶಗಳ ಮಾರುಕಟ್ಟೆಯಿಂದ ಲಭಿಸುವ ಲಾಭಕ್ಕಿಂತ ಹೆಚ್ಚಿನ ಪಾಲನ್ನು ಬಡ್​ವೈಸರ್ ಕಂಪನಿ  ಚೀನಾದಿಂದ ಪಡೆಯುತ್ತಿದೆ ಎಂದು ತಿಳಿಸಿದೆ. ಸದ್ಯ ಬಡ್​ವೈಸರ್​ ಬಿಯರ್ ಕಂಪನಿ ಚೈನೀಸ್ ಮದ್ಯ ಮಾರುಕಟ್ಟೆಯಿಂದ 400 ಮಿಲಿಯನ್ ಡಾಲರ್ ಮೊತ್ತದ ಲಾಭಗಳಿಸುತ್ತಿದೆ. ಆದರೆ ಶೇ.24ರಷ್ಟು ಪಾಲು ಹೊಂದಿರುವ ಸ್ನೋ ಬಿಯರ್ ಕಂಪನಿ ಚೀನಾದ ಮದ್ಯ ಮಾರುಕಟ್ಟೆಯಲ್ಲಿ ಮೊದಲ ಸ್ಥಾನ ಅಲಂಕರಿಸಿದೆ.
First published:August 20, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...