HOME » NEWS » Lifestyle » CHINA BASED HACKERS ARE TARGETING WHATSAPP USERS WITH PART TIME JOBS OFFER SESR

WhatsApp: ವಾಟ್ಸಾಪ್​ ಮೂಲಕ ಅರೆಕಾಲಿಕ ಉದ್ಯೋಗ ಭರವಸೆ; ಚೀನಿ ಹ್ಯಾಕರ್ಸ್​ ಹೊಸ ಯೋಜನೆ

ಕೇವಲ 10 ರಿಂದ 30 ನಿಮಿಷದ ಕೆಲಸಕ್ಕೆ 200 ರಿಂದ 3000 ರೂವರೆಗೆ ಗಳಿಸುವ ಅವಕಾಶವನ್ನು ನೀಡುತ್ತಿವೆ.

news18-kannada
Updated:January 12, 2021, 4:56 PM IST
WhatsApp: ವಾಟ್ಸಾಪ್​ ಮೂಲಕ ಅರೆಕಾಲಿಕ ಉದ್ಯೋಗ ಭರವಸೆ; ಚೀನಿ ಹ್ಯಾಕರ್ಸ್​ ಹೊಸ ಯೋಜನೆ
ವಾಟ್ಸ್​ಆ್ಯಪ್​
  • Share this:
ವಾಟ್ಸಾಪ್​ ಖಾಸಗಿ ಮಾಹಿತಿ ಸೋರಿಕೆ ಮಾಡುತ್ತಿರುವ ಬಗ್ಗೆ ಸದ್ಯ ತೀವ್ರ ಚರ್ಚೆಯಾಗುತ್ತಿದ್ದು, ಇದರಿಂದ ವಾಟ್ಸಾಪ್​ ಬಳಕೆದಾರರು ಸಂಸ್ಥೆ ವಿರುದ್ಧ ಗರಂ ಆಗಿದ್ದಾರೆ. ಈ ನಡುವೆ ಚೀನಾ ಮೂಲದ ಹ್ಯಾಂಕರ್​ಗಳು ಈ ವಾಟ್ಸಾಪ್​ ಬಳಕೆದಾರರನ್ನು ಗುರಿಯಾಗಿಸಿಕೊಂಡು ಅರೆಕಾಲಿಕ ಉದ್ಯೋಗ ನೀಡುವ ಭರವಸೆಯನ್ನು ನೀಡುತ್ತಿದ್ದಾರೆ ಎಂಬ ಹೊಸ ಅಂಶವನ್ನು ದೆಹಲಿ ಮೂಲಕ ಥಿಂಕ್​ ಟ್ಯಾಂಕ್​ ಸೈಬರ್​ ಪೀಸ್​ ಫೌಂಡೇಶನ್​ ಬಹಿರಂಗಪಡಿಸಿದೆ. ಈಗಾಗಲೇ ವಾಟ್ಸಾಪ್​ನ ಸಂದೇಶಗಳು ಗೂಗಲ್​ ಸರ್ಚ್​ನಲ್ಲಿ ಲಭ್ಯವಾಗುತ್ತಿದೆ ಎಂಬ ಅಂಶ ಬೆಳಕಿಗೆ ಬರುತ್ತಿದ್ದಂತೆ ಈ ರೀತಿಯ ಉದ್ಯೋಗ ಭರವಸೆಯ ಲಿಂಕ್​ಗಳು ವಾಟ್ಸಾಪ್​ನಲ್ಲಿ ಲಭ್ಯವಾಗುತ್ತಿದೆ. ವಾಟ್ಸಾಪ್​ನಲ್ಲಿ ಸಿಗುತ್ತಿರುವ ಈ ಲಿಂಕ್​ಗಳು ಕೇವಲ 10 ರಿಂದ 30 ನಿಮಿಷದ ಕೆಲಸಕ್ಕೆ 200 ರಿಂದ 3000 ರೂವರೆಗೆ ಗಳಿಸುವ ಅವಕಾಶವನ್ನು ನೀಡುತ್ತಿವೆ.

ವಾಟ್ಸಾಪ್​ನಲ್ಲಿ ಲಭ್ಯವಾಗುತ್ತಿರುವ ಯುಆರ್​ಎಲ್​ ಮೂಲಕ ಮತ್ತೆ ಅನೇಕ ವಿಭಿನ್ನ ಲಿಂಕ್​ ತೆರೆದುಕೊಳ್ಳುತ್ತಿವೆ. ಅಲ್ಲದೇ ಈ ಸಂದೇಶಗಳನ್ನು ಪ್ರತಿ ಬಾರಿ ವಿಭಿನ್ನ ಸಂಖ್ಯೆಗಳ ಮೂಲಕ ರವಾನಿಸಲಾಗುತ್ತಿದೆ ಎಂದು ಫೌಂಡೇಶನ್​ ತಿಳಿಸಿದೆ.

ವಿಭಿನ್ನ ನಂಬರ್​ಗಳ ಮೂಲಕ ನೀಡಲಾಗುತ್ತಿರುವ ಈ ಸಂದೇಶಗಳು ಅಂತಿಮವಾಗ ಒಂದೇ ಲಿಂಕ್​ಗಳನ್ನು ಬಳಸುತ್ತಿರುವುದು ಇದರಲ್ಲಿ ಗಮನಾರ್ಹ. ಈ ಸಂದೇಶವು ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ವಾಟ್ಸಾಪ್​ ಮೂಲಕ ಲಭ್ಯವಾಗುತ್ತಿದೆ. ಈ ಹಿನ್ನಲೆ ಸೈಬರ್​ ಪೀಸ್​ ಫೌಂಡೇಶನ್​ ಮತ್ತು ಆಟೊಬೊಟ್​ ಇನ್ಫೋಸೆಕ್​ ಪ್ರೈವೇಟ್​ ಲಿಮಿಟೆಡ್​ನ ತಜ್ಞರು ಈ ಬಗ್ಗೆ ಸ್ವತಂತ್ರ ತನಿಖೆಗೆ ಮುಂದಾಗಿದ್ದಾರೆ.

ಈ ವಾಟ್ಸಾಪ್​ನಲ್ಲಿ ಪತ್ತೆಯಾಗುತ್ತಿರುವ ವಿವಿಧ ಲಿಂಕ್​ಗಳು ಚೀನಾದ ಹೋಸ್ಟಿಂಗ್​ ಕಂಪನಿ ಆಲಿಬಾಬಾ ಕ್ಲೌಡ್​ನ ಐಪಿ ವಿಳಾಸ ಹೊಂದಿದೆ. ಈ ಯುಆರ್​ಎಲ್​ ಅನ್ನು ಡಿಕೋಡ್​ ಮಾಡಿದಾಗ ಅದು ಚೀನಿ ಭಾಷೆಯಲ್ಲಿ ಸಂಕೇತವನ್ನು ತೋರಿಸುತ್ತಿದೆ. ಅಲ್ಲದೇ ಈ ಡೋಮೆನ್​ ಹೆಸರುಗಳು ಕೂಡ ಚೀನಾದಲ್ಲಿ ನೋಂದಾಯಿಸಲಾಗಿದೆ ಎಂದು ತನಿಖೆ ವೇಳೆ ತಿಳಿದುಬಂದಿದೆ.
Published by: Seema R
First published: January 12, 2021, 4:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories