• Home
  • »
  • News
  • »
  • lifestyle
  • »
  • Children’s Health: ಮಕ್ಕಳ ಸದೃಢ ಆರೋಗ್ಯಕ್ಕೆ ಸತು ಪದಾರ್ಥಗಳು ಹೇಗೆ ಸಹಕಾರಿ ಆಗಿವೆ?

Children’s Health: ಮಕ್ಕಳ ಸದೃಢ ಆರೋಗ್ಯಕ್ಕೆ ಸತು ಪದಾರ್ಥಗಳು ಹೇಗೆ ಸಹಕಾರಿ ಆಗಿವೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸತು ಪದಾರ್ಥಗಳ ಸೇವನೆ ಮಕ್ಕಳ ರೋಗ ನಿರೋಧಕ ಶಕ್ತಿ ಬಲಪಡಿಸುತ್ತದೆ. ಸತುವು ಮಕ್ಕಳ ಸರಿಯಾದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಹಾಗೆಯೇ ರೋಗಗಳ ಅಪಾಯ ಕಡಿಮೆ ಮಾಡುತ್ತದೆ. ಆದರೆ ಮಕ್ಕಳ ದಿನನಿತ್ಯದ ಆಹಾರದಲ್ಲಿ ಸತು ಎಷ್ಟು ಸೇರಿಸಬೇಕು ಎಂದು ತಿಳಿಯಿರಿ.

  • Share this:

    ಪೋಷಕಕರು ಯಾವಾಗಲೂ ಮಕ್ಕಳ ಬೆಳವಣಿಗೆ ಬಗ್ಗೆ ಹೆಚ್ಚು ಚಿಂತಾಕ್ರಾಂತರಾಗಿರುತ್ತಾರೆ. ಮಗುವಿನ ಬೆಳವಣಿಗೆ ಆಗುತ್ತಿಲ್ಲ, ಸರಿಯಾಗಿ ಆಹಾರ ಸೇವಿಸುವುದಿಲ್ಲ, ಪರೀಕ್ಷೆಯಲ್ಲಿ ಕಡಿಮೆ ಅಂಕ ತೆಗೆಯುವುದು, ಓದಿನತ್ತ ಗಮನವೇ ಇಲ್ಲ. ಹೀಗೆ ಹತ್ತು ಹಲವು ವಿಷಯಗಳು ಪೋಷಕರನ್ನು ನಿದ್ದೆಗೆಡುವಂತೆ ಮಾಡುತ್ತವೆ. ಮಕ್ಕಳ ಆರೋಗ್ಯ ಮತ್ತು ಬೆಳವಣಿಗೆ ಬಗ್ಗೆ ಪೋಷಕರು ಹೆಚ್ಚು ಆಲೋಚನೆ ಮಾಡ್ತಾರೆ. ಜೊತೆಗೆ ಮಕ್ಕಳ ಆರೋಗ್ಯ ಕಾಪಾಡುವುದು, ಕಾಯಿಲೆಗಳಿಂದ ರಕ್ಷಿಸಲು ಅವರಿಗೆ ಊಟ, ತಿಂಡಿ ಕೊಡುವುದರಲ್ಲಿ ಕಾಳಜಿ ವಹಿಸುವುದು, ಮಕ್ಕಳ ರೋಗ ನಿರೋಧಕ ಶಕ್ತಿ ಕಾಪಾಡಲು ಮಕ್ಕಳಿಗೆ ಯಾವ ಆಹಾರ ನೀಡಬೇಕು ಎಂಬ ಪ್ರಶ್ನೆ ಕಾಡುತ್ತಲೇ ಇರುತ್ತದೆ.  


    ಹಾಗಾದ್ರೆ ಮಕ್ಕಳಿಗೆ ಯಾವ ಮಟ್ಟದ ಪೋಷಕಾಂಶವನ್ನು, ಯಾವ ಪ್ರಮಾಣದಲ್ಲಿ ಕೊಟ್ಟರೆ ಉತ್ತಮ ಎಂದು ಯೋಚನೆ ಮಾಡುತ್ತಿದ್ದರೆ, ನಿಮ್ಮ ಯೋಚನೆಗೆ ಬ್ರೇಕ್ ಹಾಕಿ. ಯಾಕಂದ್ರೆ ಮಗುವಿನ ಆಹಾರದಲ್ಲಿ ಅಗತ್ಯವಿರುವ ಎಲ್ಲಾ ಪೋಷಕಾಂಶಗಳ ಜೊತೆಗೆ ಮಗುವಿನ ಬೆಳವಣಿಗೆಗೆ ಸಹಾಯ ಮಾಡಲು  ಸರಿಯಾದ ಪ್ರಮಾಣದ ಸತುವನ್ನು ನೀಡುವುದು.


    ಸತು ಪದಾರ್ಥಗಳ ಸೇವನೆ ಮಕ್ಕಳ ರೋಗ ನಿರೋಧಕ ಶಕ್ತಿ ಬಲಪಡಿಸುತ್ತದೆ. ಸತುವು ಮಕ್ಕಳ ಸರಿಯಾದ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ರೋಗ ನಿರೋಧಕ ಶಕ್ತಿ ಬಲಪಡಿಸುತ್ತದೆ. ಹಾಗೆಯೇ ರೋಗಗಳ ಅಪಾಯ ಕಡಿಮೆ ಮಾಡುತ್ತದೆ. ಆದರೆ ಮಕ್ಕಳ ದಿನನಿತ್ಯದ ಆಹಾರದಲ್ಲಿ ಸತು ಎಷ್ಟು ಸೇರಿಸಬೇಕು?


    ಇದನ್ನೂ ಓದಿ: ಡೆಂಗ್ಯೂ ಜ್ವರದಿಂದ ಬೇಗ ಗುಣಮುಖರಾಗಲು ಈ ಆಹಾರ ಸೇವಿಸಿ


    ಮಕ್ಕಳಿಗೆ ಸತು ಏಕೆ ಬೇಕು ?


    ಆಹಾರದಲ್ಲಿ ಸರಿಯಾದ ಪ್ರಮಾಣದ ಸತು ಹೊಂದಿದ್ದರೆ ಉತ್ತಮ ಬೆಳೆವಣಿಗೆಗೆ ಸಹಕಾರಿ ಆಗಿದೆ. ಸತು ಕೊರತೆ ಮಗುವಿನ ಬೆಳವಣಿಗೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಏಕೆಂದರೆ ಸತುವು ಪ್ರೋಟೀನ್ ಚಯಾಪಚಯ, ಡಿಎನ್‌ಎ ಸೇರಿ ದೇಹದ ವಿವಿಧ ಕಾರ್ಯಗಳಿಗೆ ಸಹಕಾರಿಯಾಗಿದೆ.


    ನ್ಯುಮೋನಿಯಾ ಅಪಾಯ 


    ಸರಿಯಾದ ಪ್ರಮಾಣದ ಸತು ಪದಾರ್ಥಗಳ ಸೇವನೆ ನ್ಯುಮೋನಿಯಾ ಸಮಸ್ಯೆಗೆ ಪರಿಹಾರ ನೀಡುತ್ತದೆ. ಆಮ್ಲಜನಕ ಮಟ್ಟ ಕಾಯ್ದುಕೊಳ್ಳುತ್ತದೆ. ಜೊತೆಗೆ ದೇಹದ ಉಷ್ಣತೆ ಕಾಪಾಡುತ್ತದೆ.


    ಮೆದುಳಿನ ಕಾರ್ಯಕ್ಕೆ ಸಹಕಾರಿ


    ಸತುವಿನ ಕೊರತೆ ಮಗುವಿನ ಗಮನ, ಮನಸ್ಥಿತಿ, ಮೋಟಾರು ಕೌಶಲ್ಯ ಮತ್ತು ನಡವಳಿಕೆಯಲ್ಲಿ ತ್ವರಿತ ಬದಲಾವಣೆ ಉಂಟು ಮಾಡುತ್ತದೆ. ದೈನಂದಿನ ಆಹಾರದಲ್ಲಿ ಎಲ್ಲಾ ಪೋಷಕಾಂಶಗಳನ್ನು ಸೇರಿಸಿ.


    ಹಸಿವಿನ ನಷ್ಟ


    ದೇಹದಲ್ಲಿ ಸತುವಿನ ಕೊರತೆ ಮಗುವಿನ ಹಸಿವು ಕಡಿಮೆ ಮಾಡುತ್ತದೆ. ಇದು ಮಗುವಿನ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಹಾಗೂ ರೋಗಗಳ ಅಪಾಯ ಹೆಚ್ಚಾಗುತ್ತದೆ.


    ಯಾವ ವಯಸ್ಸಿನಲ್ಲಿ ಎಷ್ಟು ಸತು ತೆಗೆದುಕೊಳ್ಳಬೇಕು 


    ತಿಂಗಳ ಮತ್ತು 3 ವರ್ಷಗಳ ನಡುವಿನ ಮಕ್ಕಳಿಗೆ 3mg ಸತು ಬೇಕು. 4 ರಿಂದ 8 ವರ್ಷ ವಯಸ್ಸಿನವರಿಗೆ 5mg ಸತು ಮತ್ತು 9 ರಿಂದ 13 ವರ್ಷಗಳ ವಯಸ್ಸಿನಲ್ಲಿ 8mg ಸತು  ಬೇಕು. 14 ರಿಂದ 8 ವರ್ಷ ವಯಸ್ಸಿನೊಳಗೆ ಪುರುಷರಿಗೆ 11 ಮಿಗ್ರಾಂ ಮತ್ತು ಮಹಿಳೆಯರಿಗೆ 9 ಮಿಗ್ರಾಂ ಸತು ಬೇಕು.


    ಈ ಆಹಾರಗಳು ಮಕ್ಕಳಲ್ಲಿ ಸತು ಕೊರತೆ ಪೂರೈಸುತ್ತವೆ!


    ಡಾರ್ಕ್ ಚಾಕೊಲೇಟ್


    ಮಕ್ಕಳಿಗೆ ಚಾಕೊಲೇಟ್ ತಿನ್ನುವ ಅಭ್ಯಾಸವಿದ್ದರೆ ಡಾರ್ಕ್ ಚಾಕೊಲೇಟ್ ತಿನ್ನಲು ಕೊಡಿ. ಫುಡ್ ಡಾಟಾ ಸೆಂಟ್ರಲ್‌ನ ಸಂಶೋಧನೆ ಪ್ರಕಾರ, 100 ಗ್ರಾಂ ಡಾರ್ಕ್ ಚಾಕೊಲೇಟ್‌ನಲ್ಲಿ ಸುಮಾರು 3.31 ಮಿಗ್ರಾಂ ಸತು ಇದೆ. ಇದು ಹೆಚ್ಚಿನ ಕ್ಯಾಲೋರಿ ಮತ್ತು ಸಕ್ಕರೆ ಹೊಂದಿದೆ. ಸಣ್ಣ ಪ್ರಮಾಣದಲ್ಲಿ ಸೇವಿಸಿ.


    ಧಾನ್ಯಗಳು


    ಗೋಧಿ, ಅಕ್ಕಿ, ಓಟ್ಸ್ ಮುಂತಾದ ಧಾನ್ಯಗಳಲ್ಲಿ ಉತ್ತಮ ಪ್ರಮಾಣದ ಸತು ಇದೆ. ಆಹಾರದಲ್ಲಿ ಸೇರಿಸಿದಾಗ ಸತು, ಫೈಬರ್, ಜೀವಸತ್ವಗಳು, ಖನಿಜಗಳು, ಮೆಗ್ನೀಸಿಯಮ್ ಇವೆ.


    ಹಾಲಿನ ಉತ್ಪನ್ನಗಳು


    ಎಲ್ಲಾ ಪೋಷಕಾಂಶಗಳ ಜೊತೆಗೆ ಹಾಲು, ಮೊಸರು, ಚೀಸ್ ಮುಂತಾದ ಡೈರಿ ಪದಾರ್ಥಗಳ ಸೇವನೆ ಸತುವಿನ ಕೊರತೆ ನಿವಾರಿಸುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತವೆ. ಮೂಳೆಯ ಆರೋಗ್ಯ ಬಲಪಡಿಸುತ್ತವೆ.


    ಇದನ್ನೂ ಓದಿ: ಟೇಸ್ಟಿ ಎಂದು ಅತಿಯಾಗಿ ತಿನ್ನುವ ಚೀಸ್ ಯಾವೆಲ್ಲಾ ಅಡ್ಡ ಪರಿಣಾಮ ಉಂಟು ಮಾಡುತ್ತದೆ?


    ಬೀಜಗಳು


    ಬೀಜಗಳು ಸತು ಅಗತ್ಯತೆ ಪೂರೈಸುತ್ತವೆ. ಆರೋಗ್ಯಕರ ಕೊಬ್ಬು, ಜೀವಸತ್ವ, ಖನಿಜ, ಫೈಬರ್ ಹೊಂದಿದೆ. ಸತು ಹೊಂದಿದ್ದು, ರೋಗಗಳ ಅಪಾಯ ಕಡಿಮೆ ಮಾಡುತ್ತದೆ.

    Published by:renukadariyannavar
    First published: