HOME » NEWS » Lifestyle » CHILDREN MAY HAVE EASY ACCESS TO POSSIBLE SEX ABUSE VIDEOS ON PORN SITES STUDY WARNS STG LG

ಅಶ್ಲೀಲ ತಾಣಗಳಲ್ಲಿ ಲೈಂಗಿಕ ಕಿರುಕುಳ ವಿಡಿಯೋಗಳಿಗೆ ಮಕ್ಕಳು ಸುಲಭವಾಗಿ ಪ್ರವೇಶಿಸಬಹುದು: ಅಧ್ಯಯನ ಎಚ್ಚರಿಕೆ

ಲೈಂಗಿಕ ದೌರ್ಜನ್ಯವನ್ನು ಒಳಗೊಂಡಿರುವ ವಿಡಿಯೋಗಳನ್ನು ತಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ನಿಷೇಧಿಸಲಾಗಿದೆ ಎಂದು ಪೋರ್ನ್‌ಹಬ್ ಮತ್ತು ಎಕ್ಸ್‌ವಿಡಿಯೋಸ್‌ ಹೇಳುತ್ತವೆ.

news18-kannada
Updated:April 6, 2021, 2:13 PM IST
ಅಶ್ಲೀಲ ತಾಣಗಳಲ್ಲಿ ಲೈಂಗಿಕ ಕಿರುಕುಳ ವಿಡಿಯೋಗಳಿಗೆ ಮಕ್ಕಳು ಸುಲಭವಾಗಿ ಪ್ರವೇಶಿಸಬಹುದು: ಅಧ್ಯಯನ ಎಚ್ಚರಿಕೆ
ಪ್ರಾತಿನಿಧಿಕ ಚಿತ್ರ
  • Share this:
ಈ ದಿನಗಳಲ್ಲಿ ಮಕ್ಕಳಿಗೆ ಮೊಬೈಲ್‌, ಲ್ಯಾಪ್‌ಟಾಪ್‌/ ಡೆಸ್ಕ್‌ಟಾಪ್‌ ಜೊತೆಗೆ ಇಂಟರ್‌ನೆಟ್‌ ಸುಲಭವಾಗಿ ಸಿಗುವಂತಾಗಿದೆ. ಇದರಿಂದಾಗಿ ಅಶ್ಲೀಲ ವೆಬ್‌ಸೈಟ್‌ಗಳಿಗೂ ಮಕ್ಕಳು ಸುಲಭವಾಗಿ ಪ್ರವೇಶಿಸುವಂತಾಗಿದೆ. ಇದರಿಂದಾಗುವ ತೊಂದರೆಗಳ ಬಗ್ಗೆ ಇಂಗ್ಲೆಂಡ್‌ನ ವಿಶ್ವವಿದ್ಯಾಲಯವೊಂದು ನಡೆಸಿದ ಅಧ್ಯಯನದಲ್ಲಿ ಎಚ್ಚರಿಕೆ ನೀಡಲಾಗಿದೆ.

ಇಂಗ್ಲೆಂಡ್‌ನ ಡರ್ಹಾಮ್ ವಿಶ್ವವಿದ್ಯಾನಿಲಯವು ನಡೆಸಿದ ಅಧ್ಯಯನವೊಂದರಲ್ಲಿ ಪೋರ್ನ್‌ಹಬ್ ಸೇರಿದಂತೆ ಅನೇಕ ವಯಸ್ಕ ತಾಣಗಳು ಯಾವುದೇ ವಯಸ್ಸಿನ ಪರಿಶೀಲನೆ ಇಲ್ಲದೆ ಮಕ್ಕಳನ್ನು ಸಂಭವನೀಯ ಲೈಂಗಿಕ ದೌರ್ಜನ್ಯ ಮತ್ತು ದುರುಪಯೋಗದ ಅನುಮಾನಾಸ್ಪದ ವಿಡಿಯೋಗಳಿಗೆ ಪ್ರವೇಶ ನೀಡುತ್ತಿವೆ ಎಂದು ತಿಳಿದುಬಂದಿದೆ. ಇಂತಹ ಕೃತ್ಯಗಳ ವಿಡಿಯೋಗಳಿಂದ ಅಂತಹ ವಿಡಿಯೋಗಳಿಂದ ತುಂಬಿದ ಪೇಜ್‌ಗಳಿಗೆ ಜನರು ನೇರವಾಗಿ ವೀಕ್ಷಿಸಬಹುದಾಗಿದೆ.

ಈ ಸಂಶೋಧನೆಯು ಅಂತಹ ರೀತಿಯ ದೊಡ್ಡ ಅಧ್ಯಯನಗಳಲ್ಲಿ ಒಂದಾಗಿದೆ ಎಂದು ಮಿರರ್‌ ವರದಿ ಮಾಡಿದೆ. ಪೋರ್ನ್‌ಹಬ್ ಮತ್ತು ಎಕ್ಸ್‌ವಿಡಿಯೋಸ್ (Xvideos) ಹೋಂ ಪೇಜ್‌ನಲ್ಲಿ ಸುಮಾರು 1,31,738 ವಿಡಿಯೋಗಳನ್ನು ಸಂಶೋಧಕರು ಪರಿಗಣಿಸಿದ್ದಾರೆ. ಹೋಂ ಪೇಜ್‌ನಲ್ಲಿನ 8 ವಿಡಿಯೋಗಳ ಪೈಕಿ 1 ರಲ್ಲಿ ಲೈಂಗಿಕ ದೌರ್ಜನ್ಯದ ಕೃತ್ಯವನ್ನು ಒಳಗೊಂಡಿರುತ್ತದೆ ಮತ್ತು ಸಹಮತವಿಲ್ಲದವು ಎಂದು ವರದಿಗಳು ತೋರಿಸುತ್ತವೆ. ಜತೆಗೆ, ಅನೇಕ ವಿಡಿಯೋಗಳಲ್ಲಿ ಮಾದಕವಸ್ತು ಚಟಕ್ಕೊಳಗಾದವರು ಹಾಗೂ ಚಿಕ್ಕ ವಯಸ್ಸಿನ ಪಾತ್ರಗಳು ಸಹ ಕಂಡುಬಂದಿವೆ.

ಕೊಪ್ಪಳದಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಅಕ್ರಮ ಮರಳು ಮಾಫಿಯಾ; ದಂಧೆಕೋರರಿಗೆ ರಾತ್ರಿಯೇ ಹಗಲು

ವಿಡಿಯೋದಲ್ಲಿ ಹಿಂಸಾಚಾರವನ್ನು ಸೂಚಿಸುವ 'ಗ್ರೋಪ್ಡ್‌', ‘ಬಲವಂತದ ಲೈಂಗಿಕತೆ’ ಮುಂತಾದ ಕೀವರ್ಡ್‌ಗಳೊಂದಿಗೆ ವಿಡಿಯೋಗಳನ್ನು ಟ್ಯಾಗ್‌ ಮಾಡಲಾಗಿದೆ. ಈ ಅಧ್ಯಯನವನ್ನು ನಡೆಸುವ ಸಂಶೋಧಕರು ಈ ವೆಬ್‌ಸೈಟ್‌ಗಳ ಹೋಂ ಪೇಜ್‌ನಲ್ಲಿ 2017-18ರ ನಡುವೆ 6 ತಿಂಗಳವರೆಗೆ ಪ್ರತಿ ಗಂಟೆಗೊಮ್ಮೆ ಸ್ಕ್ರೀನ್‌ಶಾಟ್‌ಗಳನ್ನು ಸಂಗ್ರಹಿಸಿದ್ದಾರೆ.

ಈ ವಯಸ್ಕ ವೆಬ್‌ಸೈಟ್‌ಗಳು ಮೊದಲ ಬಾರಿ ಬಳಕೆದಾರರಿಗಾಗಿ ಆಯ್ಕೆಮಾಡಿದ ವಿಷಯವು ಸಮಸ್ಯಾತ್ಮಕವಾಗಿದೆ ಎಂದು ಸಂಶೋಧನೆಯ ಸಹ-ಲೇಖಕರಾದ ಡರ್ಹಾಮ್ ವಿಶ್ವವಿದ್ಯಾಲಯದ ಪ್ರೊಫೆಸರ್ ಕ್ಲೇರ್ ಮೆಕ್‌ಗ್ಲಿನ್ ಕ್ಯೂಸಿ ಹೇಳಿದ್ದಾರೆ. ನಿಯಂತ್ರಕ ಕಾರ್ಯವಿಧಾನಗಳು ಮತ್ತು ಆಚರಣೆಯಲ್ಲಿ ಅದರ ದಕ್ಷತೆಯ ಜೊತೆಗೆ ಅಧ್ಯಯನದ ಆವಿಷ್ಕಾರಗಳು “ಮುಖ್ಯವಾಹಿನಿಯ ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ಸುಲಭವಾಗಿ ಮತ್ತು ಮುಕ್ತವಾಗಿ ಲಭ್ಯವಿರುವ ಅಪರಾಧ ಸಾಮಗ್ರಿಗಳ ಬಗ್ಗೆ” ಪ್ರಶ್ನೆಗಳನ್ನು ಕೇಳುತ್ತವೆ ಎಂದು ಅವರು ಹೇಳಿದರು.

ಲೈಂಗಿಕ ದೌರ್ಜನ್ಯವನ್ನು ಒಳಗೊಂಡಿರುವ ವಿಡಿಯೋಗಳನ್ನು ತಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ನಿಷೇಧಿಸಲಾಗಿದೆ ಎಂದು ಪೋರ್ನ್‌ಹಬ್ ಮತ್ತು ಎಕ್ಸ್‌ವಿಡಿಯೋಸ್‌ ಹೇಳುತ್ತವೆ. ಒಮ್ಮತದ ಕಿಂಕ್ ಮತ್ತು ಲೈಂಗಿಕ ದೌರ್ಜನ್ಯದ ನಡುವೆ ಮೂಲಭೂತ ವ್ಯತ್ಯಾಸವನ್ನು ಸೃಷ್ಟಿಸುವಲ್ಲಿ ವಿಫಲವಾದ ಕಾರಣ ಸಂಶೋಧನೆಯಲ್ಲಿ ಬಳಸಿದ ವಿಧಾನವು ದೋಷಪೂರಿತವಾಗಿದೆ ಎಂದು ಪೋರ್ನ್‌ಹಬ್‌ ಈ ಅಧ್ಯಯನದ ವಿಚಾರದಲ್ಲಿ ತಮ್ಮ ವೆಬ್‌ಸೈಟ್‌ ಅನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.ಇದೇ ರೀತಿ ಎಕ್ಸ್‌ವಿಡಿಯೋಸ್‌ ಸಹ ಸಂಶೋಧನಾ ವರದಿಗೆ ಪ್ರತಿಕ್ರಿಯೆ ನೀಡಿದ್ದು, ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದೆ. "ಕಾನೂನುಬಾಹಿರ ವಿಷಯವನ್ನು ಅಪ್‌ಲೋಡ್ ಮಾಡುವುದನ್ನು ನಾವು ನಿಷೇಧಿಸುತ್ತೇವೆ, ಕಾನೂನುಬಾಹಿರ ವಿಷಯವನ್ನು ನಮ್ಮ ಗಮನಕ್ಕೆ ತಂದಾಗ ಅದನ್ನು ತೆಗೆದುಹಾಕುತ್ತೇವೆ ಮತ್ತು ಸೂಕ್ತ ಸಂದರ್ಭಗಳಲ್ಲಿ ಕಾನೂನು ಜಾರಿಗೊಳಿಸುವಿಕೆಯೊಂದಿಗೆ ಕಾರ್ಯ ನಿರ್ವಹಿಸುತ್ತೇವೆ'' ಎಂದು ಹೇಳಿದರು.

ಅನೇಕ ಇತರ ಸ್ವತಂತ್ರ ವರದಿಗಳು ಸಹ ವಯಸ್ಕ ವಿಡಿಯೋಗಳ ಬಳಕೆಯ ಮಾದರಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪ್ಲ್ಯಾಟ್‌ಫಾರ್ಮ್‌ಗಳಲ್ಲಿನ ಈ ಹಲವಾರು ವಿಡಿಯೋಗಳು ಗೊಂದಲವನ್ನುಂಟುಮಾಡುತ್ತವೆ ಎಂದು ಹದಿಹರೆಯದವರು ಸೇರಿದಂತೆ ಬಹಳಷ್ಟು ಯುವಕರು ಹೇಳಿದ್ದಾರೆ.
Published by: Latha CG
First published: April 6, 2021, 2:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories