ಪ್ರೀತಿಯಲ್ಲಿ ನಾವು ವಿಫಲರಾದರೆ ಒಂದೋ ವಿಧಿ ಅಥವಾ ನಮ್ಮನ್ನು ನಾವೇ ನಿಷ್ಪ್ರಯೋಜಕ ಎಂದು ಅಂದುಕೊಳ್ಳುತ್ತೇವೆ. ನಿಮ್ಮ ಸುತ್ತಲಿನವರು ಸಂತೋಷವಾಗಿರುವಂತೆ ಹಾಗೂ ದೀರ್ಘ ಸಮಯದ ಪ್ರೀತಿ ಅನುರಾಗವನ್ನು (Relationship) ಪಡೆದುಕೊಳ್ಳುತ್ತಾರೆ. ಅವರ ಪ್ರೀತಿ (Love) ಅವರಿಗೆ ದಕ್ಕುತ್ತದೆ. ಆದರೆ ನೀವು ಮಾತ್ರ ಹತಾಶ ಭಗ್ನಪ್ರೇಮಿಗಳಾಗಿರುತ್ತೀರಿ. ಇದು ಏಕೆ ಎಂಬುದು ಎಲ್ಲಾ ಭಗ್ನ ಪ್ರೇಮಿಗಳನ್ನು (Love Failure) ಕಾಡುವ ಪ್ರಶ್ನೆಯಾಗಿದೆ.
ನಿಮ್ಮಲ್ಲೇನೋ ದೋಷವಿದೆ ಎಂಬುದಾಗಿ ನೀವು ನಿರ್ಣಯಿಸುತ್ತೀರಿ. ಆದರೆ ಇದಕ್ಕೆಲ್ಲಾ ಕಾರಣ ನಿಮ್ಮ ಬಾಲ್ಯ ಎಂಬುದು ನಿಮಗೆ ಗೊತ್ತೇ? ನಮಗೆ ಬೇಕಾದ ಅನುಬಂಧಗಳನ್ನು ಪ್ರೀತಿಯಲ್ಲಿ ಹುಡುಕುವುದು ಅದು ದೊರೆಯದೇ ಇದ್ದಾಗ ನಿರಾಶರಾಗುವುದು ಸಾಮಾನ್ಯವಾದುದು.
ಬಯಸಿದ ಪ್ರೀತಿ ದೊರೆಯದಿರಲು ಕಾರಣ
ನೀವು ಬಯಸಿದ ಸಂಬಂಧ ನಿಮಗೆ ದೊರಕಿದೆ. ಆದರೂ ಒಂದು ರೀತಿಯ ಶೂನ್ಯತೆ ನಿಮ್ಮನ್ನು ಕಾಡುತ್ತಿದೆ. ನಿಮ್ಮ ಸಂಗಾತಿಯೊಂದಿಗೆ ಜಗಳವಾಡಬೇಕು. ಅವರನ್ನು ದೂಷಿಸಬೇಕು ಎಂಬ ಭಾವನೆ ನಿಮ್ಮಲ್ಲಿ ಮೂಡುತ್ತದೆ. ಬಾಲ್ಯದಲ್ಲಿ ದೊರೆಯುವ ಪ್ರೀತಿ ಸಾಕಷ್ಟಿದ್ದರೆ ಮುಂದೆ ಪ್ರೀತಿಯಲ್ಲಿ ನಿರಾಶೆ ನಿಮ್ಮನ್ನು ಕಾಡುವುದಿಲ್ಲ.
ಧೈರ್ಯ ತುಂಬುವ ವ್ಯಕ್ತಿ
ನಿಮ್ಮ ಸಂಗಾತಿ ಅಥವಾ ಪ್ರೇಮಿ ಸೋತಾಗ ನೀವು ಧೈರ್ಯ ನೀಡಿ ಸ್ಫೂರ್ತಿ ತುಂಬುವವರಾಗಿರುತ್ತೀರಿ. ಅವರ ಅಗತ್ಯತೆಗಳ ಬಗ್ಗೆ ನೀವು ಕಾಳಜಿ ವಹಿಸುತ್ತೀರಿ. ಅವರು ನಿಮ್ಮನ್ನು ದೂರವಿಟ್ಟಷ್ಟು ನಿಮ್ಮೆಡೆಗೆ ಅವರು ಪ್ರೀತಿ ಪೂರಕವಾಗಿರಬೇಕು ಎಂದು ಬಯಸುತ್ತೀರಿ. ಒಂದು ರೀತಿ ಅವರನ್ನು ಹಿಂಬಾಲಿಸುತ್ತೀರಿ. ಪ್ರೀತಿಗಾಗಿ ಹಪಹಪಿಸುತ್ತೀರಿ.
ದೊರೆಯದೇ ಇರುವ ಪ್ರೀತಿಯನ್ನು ಹಿಂಬಾಲಿಸುತ್ತೀರಿ
ನಿಮಗೆ ಆ ವ್ಯಕ್ತಿ ದೊರೆಯುವುದಿಲ್ಲ ಎಂದು ಗೊತ್ತಿದ್ದರೂ ಅವರಿಗಾಗಿ ಸಮಯ ವಿನಿಯೋಗಿಸುತ್ತೀರಿ. ಅವರನ್ನು ಪಡೆಯಲೇಬೇಕೆಂಬ ಹಠ ನಿಮ್ಮಲ್ಲಿ ತೋರುತ್ತದೆ. ಅವರ ಬಗ್ಗೆ ಯೋಚಿಸುತ್ತೀರಿ. ನೀವು ನೀಡಿದ ಪ್ರೀತಿ ಅವರಿಂದ ದೊರೆಯದೇ ಇದ್ದಲ್ಲಿ ಹತಾಶೆ ನಿಮ್ಮನ್ನು ಕಾಡುತ್ತದೆ.
ಆರಂಭದಲ್ಲೇ ರಿಲೇಶನ್‌ಶಿಪ್‌ಗಳನ್ನು ಕಡೆಗಣಿಸುತ್ತೀರಿ
ಪ್ರೀತಿಯಲ್ಲಿ ಬೀಳುವುದು ತುಂಬಾ ಕಾಯಬೇಕಾದ ಕೆಲಸವಾಗಿದೆ. ಹಾಗಾಗಿ ನೀವು ಸಂಬಂಧವನ್ನು ಕಡೆಗಣಿಸುತ್ತೀರಿ ಹಾಗೂ ಕಾಯುವ ತಾಳ್ಮೆ ನಿಮ್ಮಲ್ಲಿ ಇರುವುದಿಲ್ಲ. ಆದರೆ ಒಬ್ಬಂಟಿ ಭಾವನೆ ನಿಮ್ಮನ್ನು ಬೆನ್ನಟ್ಟುತ್ತಿರುತ್ತದೆ. ಡೇಟಿಂಗ್ ಅಪ್ಲಿಕೇಶನ್ ಬಗ್ಗೆ ಆಸಕ್ತಿ ಇದ್ದರೂ ಒಂದು ರೀತಿಯ ಸೋಮಾರಿತನ ನಿಮ್ಮನ್ನು ಕಾಡುತ್ತದೆ.
ಎಚ್ಚರಿಕೆಯ ಸಂಕೇತಗಳನ್ನು ನಿರ್ಲಕ್ಷಿಸುತ್ತೀರಿ
ನಿಮ್ಮ ಪ್ರೀತಿ ನಿಷ್ಪಕ್ಷಪಾತವಲ್ಲ ಹಾಗೂ ನಿಮಗೆ ಸರಿಹೊಂದುವಂತಹದ್ದಲ್ಲ ಎಂಬುದು ನಿಮಗೆ ತಿಳಿದಿದ್ದರೂ ನೀವು ಆ ಪ್ರೀತಿಯನ್ನು ಪಡೆಯಬೇಕೆಂಬ ಹಂಬಲದಲ್ಲಿರುತ್ತೀರಿ. ಕೆಲವೊಂದು ಎಚ್ಚರಿಕೆಗಳನ್ನು ನೀವು ನಿರ್ಲಕ್ಷಿಸುತ್ತೀರಿ.
ಸಂಬಂಧದಲ್ಲಿ ಉಸಿರುಗಟ್ಟುವ ಅನುಭವ
ನಿಮ್ಮ ಸಂಬಂಧ ಸುರಕ್ಷಿತ ಹಾಗೂ ಆನಂದಮಯವಾಗಿದ್ದರೂ ಏನೋ ಸಂದೇಹ, ಪ್ರಶ್ನೆ ನಿಮ್ಮನ್ನು ಕಾಡುತ್ತದೆ. ಆ ವ್ಯಕ್ತಿಗೆ ಆಕರ್ಷಿತನಾಗಿದ್ದೇನೆಯೇ? ಸಂಬಂಧ ಸರಿಯಾದುದೇ? ಮೊದಲಾದ ಗೊಂದಲ ನಿಮಗೆ ಕಿರಿಕಿರಿ ಉಂಟುಮಾಡುತ್ತದೆ. ಆ ಪ್ರೀತಿಯನ್ನು ಕೊನೆಗೊಳಿಸುತ್ತೀರಿ.
ನೀವು ಒಬ್ಬಂಟಿಯಾಗಿರಲು ಬಯಸದ ಕಾರಣ ಸಂಬಂಧದಲ್ಲಿದ್ದೀರಿ ಎಂಬ ಭಾವನೆ ನಿಮ್ಮನ್ನು ಕಾಡುತ್ತದೆ. ಈ ಸಂಬಂಧ ನಿಮಗೆ ಸಂತೋಷವನ್ನು ನೀಡುವುದಿಲ್ಲ. ನೀವು ಒಬ್ಬಂಟಿ ಎಂಬ ಭಾವನೆ ನಿಮ್ಮನ್ನು ಕಾಡುತ್ತದೆ. ನಿಮ್ಮನ್ನು ಖುಷಿಯಾಗಿರಿಸಲು ನೀವು ಪ್ರಯತ್ನಿಸುವುದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ