ಮಕ್ಕಳಲ್ಲಿನ ಬೊಜ್ಜಿನ ಸಮಸ್ಯೆಗೆ ಪೋಷಕರೂ ಕಾರಣ: ಸ್ಥೂಲಕಾಯ ಅನುವಂಶೀಯವಂತೆ!

news18
Updated:April 14, 2018, 6:18 PM IST
ಮಕ್ಕಳಲ್ಲಿನ ಬೊಜ್ಜಿನ ಸಮಸ್ಯೆಗೆ ಪೋಷಕರೂ ಕಾರಣ: ಸ್ಥೂಲಕಾಯ ಅನುವಂಶೀಯವಂತೆ!
news18
Updated: April 14, 2018, 6:18 PM IST
ನ್ಯೂಸ್​ 18 ಕನ್ನಡ

ಮಕ್ಕಳನ್ನು ನೋಡಿದಾಕ್ಷಣ ಥೇಟ್ ನಮ್ಮದೇ ಝೆರಾಕ್ಸ್​ ಕಾಪಿ ಎಂದು ಸ್ನೇಹಿತರು ಅಥವಾ ಸಂಬಂಧಿಕರು ಹೇಳುತ್ತಿರುತ್ತಾರೆ. ತಂದೆ ತಾಯಿಯಲ್ಲಿನ ಅನುವಂಶೀಯತೆ ಹುಟ್ಟುವ ಮಕ್ಕಳಿಗೂ ಬರುತ್ತದೆ ಎಂದು ನಮ್ಮೆಲ್ಲರಿಗೂ ತಿಳಿದಿರುವ ವಿಷಯವೇ ಸರಿ. ಆದರೆ ಈಗ ಆಶ್ಚರ್ಯದ ವಿಷಯವೇನೆಂದರೆ ಮಕ್ಕಳಲ್ಲಿ ಕಂಡು ಬರುವ ಬೊಜ್ಜಿಗೆ ತಂದೆ ತಾಯಂದಿರು ಪರೋಕ್ಷವಾಗಿ ಕಾರಣರಾಗುತ್ತಾರಂತೆ.

ಮಕ್ಕಳು ತಂದೆ ಹಾಗೂ ತಾಯಿ ಕಡೆಯಿಂದ ಶೇ.40ರಷ್ಟು ಅನುವಂಶೀಯತೆ ಪಡೆದಿರುತ್ತಾರೆ. ಹೀಗಾಗಿಯೇ ಬಹುತೇಕ ಚಿಕ್ಕ ಮಕ್ಕಳಲ್ಲಿ ಕಂಡು ಬರುವ ಬೊಜ್ಜಿಗೆ ಅಥವಾ ಸ್ಥೂಲಕಾಯಕ್ಕೆ ತಂದೆ ತಾಯಂದಿರು ಪರೋಕ್ಷವಾಗಿ ಕಾರಣರಾಗಿರುತ್ತಾರೆ ಎಂದು ಲಂಡನ್ ಮೂಲದ ಸಸೆಕ್ಸ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.

ಇದಕ್ಕಾಗಿ ಇಂಗ್ಲೆಂಡ್, ಅಮೆರಿಕ, ಚೀನಾ, ಇಂಡೊನೇಷ್ಯಾ ಹಾಗೂ ಮೆಕ್ಸಿಕೊ ದೇಶಗಳಲ್ಲಿ ವಯಸ್ಸಿಗೂ ಮೀರಿ ಎತ್ತರ ಹಾಗೂ ತೂಕವುಳ್ಳ ಒಂದು ಲಕ್ಷ ಮಕ್ಕಳನ್ನು ಈ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿತ್ತು. ಇದೇ ವೇಳೆ ಮಕ್ಕಳ ಬಾಡಿ ಮಾಸ್ ಇಂಡೆಕ್ಸ್ ಅನ್ನು ಪರೀಕ್ಷಿಸಲಾಗಿತ್ತು.

ಇದರಲ್ಲಿ ತಾಯಿಯಿಂದ ಶೇ.20 ಹಾಗೂ ತಂದೆಯಿಂದ ಶೇ.20 ಅನುವಂಶಿಯತೆಯನ್ನು ಮಕ್ಕಳು ಹೊಂದಿರುವುದು ದೃಢಪಟ್ಟಿದೆ. ಜತೆಗೆ ಸಣಕಲು ದೇಹ ಹೊಂದಿರುವ ಮಕ್ಕಳಲ್ಲಿ ಪಾಲಕರಿಂದ ಕಡಿಮೆ ಪ್ರಮಾಣದ ಅನುವಂಶಿಯತೆ ಸೇರ್ಪಡೆಗೊಂಡಿರುತ್ತದೆ.

ಸಪೂರ ದೇಹದ ಮಕ್ಕಳಲ್ಲಿ ತಂದೆ ಹಾಗೂ ತಾಯಿಯಿಂದ ತಲಾ ಶೇ. 10 ಮಾತ್ರ ಅನುವಂಶಿಯತೆ ಸೇರಿರುತ್ತದೆ. ಅದೇ ಬೊಜ್ಜು ಹೊಂದಿದ ಸ್ಥೂಲಕಾಯದ ಮಕ್ಕಳು ಪೋಷಕರಿಂದ ಶೇ.30 ಅನುವಂಶಿಯತೆ ಪಡೆದಿರುತ್ತಾರೆ ಎಂದು ಎಕನಾಮಿಕ್ಸ್ ಆ್ಯಂಡ್ ಹ್ಯೂಮನ್ ಬಯಾಲಜಿ ಜರ್ನಲ್ ತಿಳಿಸಿದೆ.

 
First published:April 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...