ಕಾಫಿನಾಡಿನಲ್ಲಿ ಮಂಗಗಳ ಕಿರಿಕ್; ಬೆಳೆ ರಕ್ಷಣೆಗೆ ವಿಶೇಷ ಬಂದೂಕಿನ ಮೊರೆ ಹೋದ ರೈತರು!

ಕೊಯ್ಲಿಗೆ ಬಂದಿರೋ ಕಾಫಿಗೆ ಮಂಗಗಳ ಹಾವಳಿ ಆಲ್ದೂರು ಭಾಗದಲ್ಲಿ ವಿಪರೀತವಾಗಿದೆ. ಹಾಗಾಗಿ, ಮಂಗಗಳ ಹಾವಳಿಯಿಂದ ಬೇಸತ್ತ ತೋಟದ ಮಾಲೀಕರು ಕಾಡು ಪ್ರಾಣಿ ಹಾಗೂ ಮಂ?

news18-kannada
Updated:January 8, 2020, 5:53 PM IST
ಕಾಫಿನಾಡಿನಲ್ಲಿ ಮಂಗಗಳ ಕಿರಿಕ್; ಬೆಳೆ ರಕ್ಷಣೆಗೆ ವಿಶೇಷ ಬಂದೂಕಿನ ಮೊರೆ ಹೋದ ರೈತರು!
ಚಿಕ್ಕಮಗಳೂರು
  • Share this:
ಚಿಕ್ಕಮಗಳೂರು(ಜ.02): ಕಾಫಿನಾಡ ಕಾಫಿ ಬೆಳೆಗಾರರು ಕಾಡು ಪ್ರಾಣಿಗಳ ಕಾಟಕ್ಕೆ ಬೆಂದು ಬಸವಳಿದು ಹೋಗಿದ್ದಾರೆ. ಕೊಯ್ಲಿಗೆ ಬಂದ ಕಾಫಿ ಹಣ್ಣನ್ನ ಉಳಿಸಿಕೊಳ್ಳೋದಕ್ಕೆ ಪರದಾಡುತ್ತಿದ್ದಾರೆ. ಆತ್ಮರಕ್ಷಣೆಗಾಗಿ ಬಳಸುತ್ತಿದ್ದ ಗನ್ ಇದೀಗ ಪ್ರಾಣಿಗಳಿಂದ ಬೆಳೆ ಉಳಿಸಿಕೊಳ್ಳೋದಕ್ಕು ಬಳಕೆಯಾಗುತ್ತಿದೆ. ಆದರೆ, ಈ ಗನ್ ಮಾಮೂಲಿ ಗನ್ನಿಗಿಂತ ತುಸು ಭಿನ್ನ. ತೋಟದ ತುಂಬೆಲ್ಲಾ ಇಬ್ಬರು ಗನ್ ಹಿಡಿದು ಓಡಾಡದಿದರೆ ಹಣ್ಣುಗಳು ಗಿಡದಲ್ಲಿರೋದಕ್ಕಿಂತ ನೆಲದಲ್ಲಿರೋದೆ ಹೆಚ್ಚು. ಆ ಗನ್ ಬೇಡ, ಗನ್​ ಹಿಡಿದ ವ್ಯಕ್ತಿ ಕಂಡರು ಮಂಗಗಳು ಎದ್ನೋ-ಬಿದ್ನೋ ಅಂತ ಓಡ್ತಾವೆ. ಹಾಗಾದ್ರೆ, ಆ ಗನ್ ಯಾವುದು ಅಂತೀರಾ.... ಮುಂದೆ ಓದಿ.

ಕಾಫಿನಾಡಿನ ಬಹುತೇಕ ಭಾಗದಲ್ಲಿ ಕಾಡು ಪ್ರಾಣಿಗಳ ಕಾಟ ಹೇಳತೀರದ್ದಾಗಿದೆ. ಹುಲಿ-ಚಿರತೆಯ ಭಯವಿದ್ದರು ಜನ ಹೆದರಲ್ಲ. ಆದರೆ, ಕಾಡಾನೆ-ಮಂಗ ಅಂದರೆ ಕನಸಲ್ಲೂ ಬೆಚ್ಚಿ ಬೀಳುತ್ತಿದ್ದಾರೆ. ಯಾಕಂದ್ರೆ, ಹುಲಿ-ಚಿರತೆ ಜೀವ ತೆಗೆದರೆ ಕಾಡಾನೆ-ಮಂಗಗಳು ಜೀವನವನ್ನೇ ತೆಗೆಯುತ್ತಿವೆ.

ಹೌದು. ಚಿಕ್ಕಮಗಳೂರಿನಲ್ಲಿ 2019ರ ರಣ-ರಾಕ್ಷಸ ಮಳೆಗೆ ಕಾಫಿ ಬದುಕಿದ್ದೇ ಪುಣ್ಯ. ಆದರೀಗ, ಕೊಯ್ಲಿಗೆ ಬಂದಿರೋ ಕಾಫಿಗೆ ಮಂಗಗಳ ಹಾವಳಿ ಆಲ್ದೂರು ಭಾಗದಲ್ಲಿ ವಿಪರೀತವಾಗಿದೆ. ಹಾಗಾಗಿ, ಮಂಗಗಳ ಹಾವಳಿಯಿಂದ ಬೇಸತ್ತ ತೋಟದ ಮಾಲೀಕರು ಕಾಡು ಪ್ರಾಣಿ ಹಾಗೂ ಮಂಗಗಳನ್ನ ಹೆದರಿಸಲು ಇಬ್ಬರು ಕೆಲಸಗಾರರಿಗೆ ಗನ್ ಕೊಟ್ಟಿದ್ದಾರೆ. ಮಂಗ ಕಂಡಲ್ಲಿ ಗುಂಡು ಹೊಡೀತಾರೆ. ಅದೇ ಮಂಕಿ ಗನ್.ಕೋವಿಯ ಮುಂಭಾಗಕ್ಕೆ ಕಲ್ಲು ಹಾಕಿ, ಹಿಂಭಾಗಕ್ಕೆ ಪಟಾಕಿ ಹಚ್ಚಿದರೆ ಕಲ್ಲು 100-200 ಅಡಿಯವರೆಗೂ ಭಾರೀ ಶಬ್ಧದೊಂದಿಗೆ ಹಾರುತ್ತೆ. ಕಲ್ಲಿನಿಂದ ಒದೆ ಬಿದ್ದ ಮಂಗಗಳು ಓಡಿ ಹೋಗುತ್ತವೆ ಎಂದು ಬೆಳೆ ಉಳಿಸಿಕೊಳ್ಳಲು ಮಾಲೀಕರು ಹೊಸ-ಹೊಸ ಆವಿಷ್ಕಾರಕ್ಕೆ ಮುಂದಾಗಿದ್ದಾರೆ. ಜಿಲ್ಲಾಡಳಿತ ಬಂದೂಕುಗಳಿಗೆ ಪರವಾನಗಿ ಕೊಡೋದನ್ನ ನಿಲ್ಲಿಸಿದ ಬೆನ್ನಲ್ಲೇ, ತೋಟದ ಮಾಲೀಕರೇ ಈ ಹೊಸ ಮಾದರಿಯ ಕೋವಿಗಳನ್ನ ತಯಾರಿಸುತ್ತಿದ್ದಾರೆ.

ಈ ಕೋವಿಗೆ ಯಾವುದೇ ಪರವಾನಗಿ ಬೇಕಿಲ್ಲ. ಜಿಲ್ಲಾಡಳಿತದ ನಿರ್ಬಂಧದ ಭಯವೂ ಇಲ್ಲ. ಇದಕ್ಕೆ ಪಟಾಕಿ ಹಾಕಿ ಬೆಂಕಿ ಹಚ್ಚಿದರೆ ಸುಮಾರು 1 ಕಿ.ಮೀ. ದೂರದವರೆಗೂ ಇದರ ಶಬ್ಧ ಕೇಳಿ ಬರುತ್ತೆ. ಈ ಶಬ್ಧದಿಂದ ಬೆಚ್ಚಿ ಬೀಳೋ ಕಾಡು ಪ್ರಾಣಿಗಳು ತೋಟದಿಂದ ಓಡಿ ಹೋಗುತ್ತವೆ ಅನ್ನೋದು ಬೆಳೆಗಾರರ ನಂಬಿಕೆ.

ಕಾಫಿಯನ್ನ ತಿನ್ನೋಲು ಬರುವ ಮಂಗಗಳ ಹಿಂಡು, ಕಾಡಾನೆಗಳು ಈ ಶಬ್ಧದಿಂದ ಕಾಫಿ ತೋಟದೊಳಗೆ ಬರೋದಿಲ್ಲ. ಈ ಕೋವಿಯನ್ನ ಯಾರು ಬೇಕಾದರು ಬಳಸಬಹುದು. ತರಬೇತಿಯ ಅಗತ್ಯವೂ ಇಲ್ಲ. ಇದರಿಂದ ತೋಟಗಳಲ್ಲಿ ಮಂಗಗಳ ಹಾವಳಿ ತಕ್ಕಮಟ್ಟಿಗೆ ಕಡಿಮೆಯೂ ಆಗಿದೆ.ಒಟ್ಟಾರೆ, ಕಾಡು ಪ್ರಾಣಿಗಳ ಕಾಟದಿಂದ ಬೇಸತ್ತಿದ್ದ ಜನ ಹೊಸ ಮಾದರಿಯ ಕೋವಿಯನ್ನ ಕಂಡು ಹಿಡಿದು ಕಾಫಿ ತೋಟವನ್ನ ಉಳಿಸಿಕೊಳ್ಳೋಕೆ ಮುಂದಾಗಿದ್ದಾರೆ. ಗನ್ ಪಡೆಯೋಕೆ ಜಿಲ್ಲಾಡಳಿತದ ಪರವಾನಗಿಯ ಗೋಜಿಗೂ ಹೋಗದೆ, ಅರಣ್ಯ ಇಲಾಖಾ ಅಧಿಕಾರಿಗಳ ಕಿರಿಕ್ಕೂ ಇಲ್ಲದೆ ನೂತನವಾದ ಸ್ವಾಭಾವಿಕ ಕೋವಿಯ ಬಳಕೆಯಿಂದ ತೋಟದ ರಕ್ಷಣೆಗೆ ಮುಂದಾಗಿದ್ದಾರೆ.

ಇದನ್ನೂ ಓದಿ: Bigg Boss Kannada Season 7: ನನ್ನ ಮರ್ಯಾದೆ ಉಳಿಸು; ದೀಪಿಕಾ ತಾಯಿ ಮಗಳಿಗೆ ಹೀಗ್ಯಾಕೆ ಹೇಳಿದರು?

ಇದನ್ನೂ ಓದಿ: ಮತ್ತೊಂದು ಸಿನಿಮಾಗೆ ಸ್ಫೂರ್ತಿ ಆಯ್ತು ‘ಅವನೇ ಶ್ರೀಮನ್ನಾರಾಯಣ‘; ಹೆಸರು ರಿಜಿಸ್ಟರ್​ ಮಾಡಿದ್ರು ರಿಷಭ್​ ಶೆಟ್ಟಿ
First published: January 2, 2020, 8:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading