ವೀಕೆಂಡ್ (Weekend) ಬಂತು ಅಂದರೆ ಮಾಂಸಾಹಾರಿಗಳಿಗೆ ಪ್ರಿಯರಿಗೆ ಹಬ್ಬ ದಿನ ಅಂದರೆ ಸುಳ್ಳಾಗಲ್ಲಾ. ವಾರ ಪೂರ್ತಿ ಬ್ಯೂಸಿ ಇದ್ದವರಿಗೆ ಸಂಡೆ (Sunday) ಅಂದರೆ ಫನ್ ಡೇ. ಮಳೆಗಾಲ ಬೇರೆ ಸಂಜೆ ಮಳೆಗೆ ಈ ದಿನ ನೀವು ಟೇಸ್ಟೀ ಆಗಿರುವ ಚಿಕನ್ ಲಾಲಿಪಾಪ್ ಮಾಡಿದ್ರೇ ಇನ್ನೂ ಖುಷಿ. ಈ ಚಿಕನ್ ಲಾಲಿಪಾಪ್ (Chicken Lollipop) ಎಂದರೆ ತುಂಬಾನೇ ಇಷ್ಟ. ಮಳೆಗಾಲದಲ್ಲಂತೂ ಸಂಜೆ (Evening) ಆಗ್ತಾ ಏನಾದ್ರೂ ತಿನ್ನಲೇಬೇಕು ಎಂದು ಅನಿಸೋದಂತು ಪಕ್ಕಾ. ಸಂಜೆ ಹೊತ್ತಿನಲ್ಲಿ ನಿಮ್ಮ ಬಿಸಿ ಬಿಸಿ ಚಹಾದೊಂದಿಗೆ ಇಲ್ಲಿ ಒಂದು ಗರಿಗರಿಯಾದ ತಿಂಡಿ ಇದೆ ನೋಡಿ. ಮನೆಯಲ್ಲಿ ಹೋಟೆಲ್ (Hotel) ರೀತಿ ಚಿಕನ್ ಲಾಲಿಪಾಪ್ ಮಾಡುವುದು ಹೇಗೆ ಅನ್ನೋದನ್ನ ನಾವು ತಿಳಿಸಿಕೊಡ್ತೀವಿ.
ಚಿಕನ್ ಲಾಲಿಪಾಪ್ ಮಾಡುವುದು ತುಂಬಾ ಸರಳ ಅಂತೆಯೇ ಇದು ಹೆಚ್ಚು ರುಚಿಕರವಾಗಿದೆ ಕೂಡ. ಮೊದಲೇ ಇದಕ್ಕೆ ಬೇಕಾದ ಸಿದ್ಧತೆಯನ್ನು ನೀವು ಮಾಡಿಕೊಂಡಲ್ಲಿ ಮಕ್ಕಳ ಜೊತೆ ಬಿಸಿಬಿಸಿ ಚಿಕನ್ ಲಾಲಿಪಾಪ್ವನ್ನು ಚಟ್ನಿಯೊಂದಿಗೆ ಉಣಬಡಿಸಬಹುದು.
ಕೆಎಫ್ಸಿ ಚಿಕನ್ ಪ್ರಿಯರಿಗೆ ಇದೇ ರೀತಿ ಚಿಕನ್ ಲಾಲಿಪಾಪ್ ಮನೆಯಲ್ಲಿಯೇ ಮಾಡಿದರೆ ಹೇಗೆ ಎಂಬ ಆಲೋಚನೆ ಬರುವುದುಂಟು, ಆದರೆ ಮಾಡಿದಾಗ ಆ ರೀತಿ ಕ್ರಿಸ್ಪಿ ಬರುವುದಿಲ್ಲ, ಅದಕ್ಕಾಗಿ ಏನು ಮಾಡಬೇಕು ಎಂದು ಗೊತ್ತಿರುವುದಿಲ್ಲ.
ಇದನ್ನೂ ಓದಿ: Non-Veg Recipe: ಭಾನುವಾರದ ಬಾಡೂಟಕ್ಕೆ ಮನೆಯಲ್ಲಿ ಮಾಡಿ ಪೆಪ್ಪರ್ ಮಟನ್
ಚಿಕನ್ ಲಾಲಿಪಪ್ ಮಾಡಲು ಬೇಕಾಗುವ ಸಾಮಗ್ರಿಗಳು
1) ಚಿಕನ್ ವಿಂಗ್ಸ್ ಸುಮಾರು 12ರಿಂದ 13 ಪೀಸ್
2) ಒಂದು ಚಿಕ್ಕ ಚಮಚದಷ್ಟು ಕರಿಮೆಣಸಿನ ಪುಡಿ
3) ಒಂದುವರೆ ಚಮಚದಷ್ಟು ಕೆಂಪುಮೆಣಸಿನ ಪುಡಿ
4) ಮೂರು ದೊಡ್ಡ ಚಮಚದಲ್ಲಿ ವಿನೆಗರ್
5) ಒಂದು ದೊಡ್ಡ ಚಮಚದಷ್ಟು ಡಾರ್ಕ್ ಸೋಯಾ ಸಾಸ್
6) ಜೋಳದ ಹಿಟ್ಟು ಸುಮಾರು ಅರ್ಧದಿಂದ ಮುಕ್ಕಾಲು ತಟ್ಟೆ
7) ಮೈದಾ ಹಿಟ್ಟು ಅರ್ಧ ಬಟ್ಟಲು
8) ಬೆಳ್ಳುಳ್ಳಿ ಪುಡಿ ಅರ್ಧ ಚಮಚ
9) ಎಣ್ಣೆ ಕರಿಯಲು ಅಗತ್ಯಕ್ಕೆ ತಕ್ಕಷ್ಟು.
10) ರುಚಿಗೆ ತಕ್ಕಷ್ಟು ಉಪ್ಪು
11) ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಇದನ್ನೂ ಓದಿ: Father's Day 2022: ನಿಮ್ಮ ಪ್ರೀತಿಯ ತಂದೆಗೆ ರುಚಿಕರ ಸ್ಮೂದಿಗಳನ್ನು ಮಾಡಿ ಸರ್ಪ್ರೈಸ್ ನೀಡಿ
ಮಾಡುವ ವಿಧಾನ
ಮೊದಲು ಚಿಕನ್ ಅನ್ನು ಚೆನ್ನಾಗಿ ತೊಳೆದು ನಿಧಾನವಾಗಿ ಲಾಲಿಪಪ್ ರೀತಿಯಲ್ಲಿ ಮೂಳೆಯನ್ನು ಮಧ್ಯೆ ಇರಿಸಿ ಚಿಕ್ಕನ್ ಅನ್ನು ಮುಂದಕ್ಕೆ ಚಾಕುವಿನಿಂದ ತಳ್ಳಿ ಲಾಲಿಪಪ್ ರೀತಿಯಲ್ಲಿ ತಯಾರಿಸಿ ರೆಡಿ ಮಾಡಿಕೊಳ್ಳಿ.
ಹಾಗೇ ಮುಂದೆ ಇದಕ್ಕೆ ಉಪ್ಪು ಕಾಳುಮೆಣಸಿನ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಡಾರ್ಕ್ ಸೋಯಾಸಾಸ್, ಅಚ್ಚಕಾರದ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಸುಮಾರು 15 ರಿಂದ 20 ನಿಮಿಷಗಳ ಕಾಲ ಅದನ್ನು ಹಾಗೆ ನೆನೆಯಲು ಬಿಡಬೇಕು.
ನಂತರ ಇನ್ನೊಂದು ಪಾತ್ರೆಗೆ ಜೋಳದ ಹಿಟ್ಟು, ಮೈದಾ ಹಿಟ್ಟು ಬೆಳ್ಳುಳ್ಳಿ ಪುಡಿ ಅಚ್ಚಕಾರದ ಪುಡಿ ಉಪ್ಪು ಹಾಗೂ ನೀರು ಹಾಕಿ ಸ್ವಲ್ಪ ಬೋಂಡ ಮಾಡುವ ಅದಕ್ಕೆ ಅದನ್ನು ಕಲಸಿಕೊಳ್ಳಬೇಕು.
ನಂತರ ಗ್ಯಾಸ್ ಹಚ್ಚಿ ಬಾಣಲೆಯನ್ನು ಇಟ್ಟು ಎಣ್ಣೆ ಹಾಕಬೇಕು. ಎಣ್ಣೆಯನ್ನು ಚೆನ್ನಾಗಿ ಕಾಯಲು ಸ್ವಲ್ಪ ಸಮಯದವರೆಗೆ ದೊಡ್ಡ ಉರಿಯಲ್ಲಿ ಬಿಡಬೇಕು.
ಎಣ್ಣೆ ಕಾದ ನಂತರ ಇದಕ್ಕೆ ಈಗಾಗಲೇ ಮಸಾಲೆಯಲ್ಲಿ ನೆನೆದ ಚಿಕನ್ ಪೀಸ್ ಗಳನ್ನು ಹಾಕಿ ಎಣ್ಣೆಯಲ್ಲಿ ಬಿಟ್ಟು ಕಡುಗೆಂಪು ಬಣ್ಣ ಬರುವವರೆಗೆ ಕರಿದರೆ ಎಣ್ಣೆಯಲ್ಲಿ ಕಾಯಿಸುವಾಗ ಬೆಂಕಿಯನ್ನು ದೊಡ್ಡ ಉರಿ ಅಲ್ಲದೆ ಸಣ್ಣ ಉರಿಯು ಅಲ್ಲದೆ ಮಧ್ಯಮ ಉರಿಯಲ್ಲಿ ಇಡಿ ಇಲ್ಲದಿದ್ದರೆ ತುಂಬಾ ಕಾದು ಬಿಡುತ್ತದೆ ಮತ್ತು ಕ್ರಿಸ್ಪೀ ಆಗಿ ತಯಾರಾಗುವುದಿಲ್ಲ ರುಚಿಕರವಾದ ಚಿಕನ್ ಲಾಲಿಪಪ್ ಸವಿಯಲು ಸಿದ್ಧ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ