Chicken And Milk: ಹಾಲಿನ ಜೊತೆ ಚಿಕನ್ ಯಾಕೆ ತಿನ್ನಬಾರದು? ಈ ಬಗ್ಗೆ ಆಯುರ್ವೇದ ಹೇಳೋದೇನು?

ಆರೋಗ್ಯ ಹದಗೆಡುವುದನ್ನು ತಡೆಯಲು ಸರಿಯಾದ ಸಮಯ ಅಥವಾ ಮಧ್ಯಂತರದಲ್ಲಿ ಸರಿಯಾದ ರೀತಿಯ ಸಂಯೋಜನೆಯ ಆಹಾರ ಪದಾರ್ಥ ಸೇವನೆ ಮಾಡುವುದು ತುಂಬಾ ಮುಖ್ಯ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಹಾಲಿನಿಂದ (Milk) ಮಾಡಿದ ಪೇಡಾ (Peda), ಕುಲ್ಫಿ, ಕೇಸರಿ ಮಿಲ್ಕ್, ಬಾದಾಮ್ ಮಿಲ್ಕ್ (Badami Milk) ಹೀಗೆ ಸಾಕಷ್ಟು ಹಾಲಿನಿಂದ ಮಾಡಿದ ಸಿಹಿ ಪದಾರ್ಥಗಳನ್ನು (Sweet Ingredients) ಜನರು ತಿನ್ನಲು ಸೇವನೆ ಮಾಡಲು ತುಂಬಾ ಇಷ್ಟ ಪಡುತ್ತಾರೆ. ವಿಶೇಷವಾಗಿ ಊಟ ಮಾಡುವ ಮೊದಲು ಮತ್ತು ಊಟದ ನಂತರ ಜನರು ಇದನ್ನು ಸೇವನೆ ಮಾಡಲು ಇಷ್ಟ ಪಡುತ್ತಾರೆ. ಕೆಲವರು ಊಟದ ನಂತರ ಸಿಹಿ ಪದಾರ್ಥ ತಿನ್ನುವ ರೂಢಿ ಹೊಂದಿರುತ್ತಾರೆ. ಇದು ಊಟದ ಅನುಭವವನ್ನು ಉತ್ಕೃಷ್ಟಗೊಳಿಸುತ್ತದೆ. ಆದರೆ ಆಯುರ್ವೇದವು ಹಾಲಿನಿಂದ ತಯಾರಿಸಿದ ಆಹಾರವನ್ನು ಉಪ್ಪು ಆಹಾರದ ಜೊತೆ ಸೇವನೆ ಮಾಡುವುದನ್ನು ವಿರೋಧ ಮಾಡುತ್ತದೆ.

  ಹಾಲು ಮತ್ತು ಚಿಕನ್

  ಅದರಲ್ಲೂ ಮಾಂಸಾಹಾರ ಸೇವಿಸುವಾಗ ಹಾಲು ಮತ್ತು ಹಾಲಿನಿಂದ ಮಾಡಿದ ಪದಾರ್ಥಗಳ ಸೇವನೆಯನ್ನು ವಿರೋಧಿಸುತ್ತದೆ. ಆಯುರ್ವೇದದಲ್ಲಿ ಕೆಲವು ಆಹಾರಗಳನ್ನು ಒಟ್ಟಿಗೆ ಅಥವಾ ತಕ್ಷಣವೇ ತಿನ್ನುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

  ಇವುಗಳನ್ನು ಹಾನಿಕಾರಕ ಆಹಾರ ಸಂಯೋಜನೆಗಳು ಎಂದು ಪರಿಗಣಿಸಲಾಗುತ್ತದೆ. ಅದರ ಸೇವನೆಯಿಂದಾಗಿ, ನೀವು ಜೀರ್ಣಕ್ರಿಯೆ ಮತ್ತು ಚರ್ಮಕ್ಕೆ ಸಂಬಂಧಿಸಿದ ಗಂಭೀರ ಕಾಯಿಲೆಗಳನ್ನು ಹೊಂದಬಹುದು ಎಂದು ಆಯುರ್ವೇದ ಎಚ್ಚರಿಕೆ ನೀಡುತ್ತದೆ.

  ಇದನ್ನೂ ಓದಿ: ಹಲವು ಕಾಯಿಲೆಗಳಿಗೆ ಕಾರಣವಾಗುವ ಯೂರಿಕ್ ಆಸಿಡ್ ಕಡಿಮೆ ಮಾಡಲು ಆಯುರ್ವೇದ ಪರಿಹಾರವೇನು?

  ಚಿಕನ್ ತಿಂದ ನಂತರ ನಾವು ಹಾಲು ಸೇವನೆ ಮಾಡಬಹುದೇ?

  ಆಯುರ್ವೇದ ವೈದ್ಯೆ ನಿತಿಕಾ ಕೊಹ್ಲಿ ಹೇಳುವ ಪ್ರಕಾರ, ಆಯುರ್ವೇದದ ತತ್ವವು ವಿಭಿನ್ನ ಜೀರ್ಣಕ್ರಿಯೆ ಪರಿಸರಕ್ಕೆ ಅಗತ್ಯವಿರುವ ಆಹಾರವನ್ನು ವಿಭಿನ್ನವಾಗಿ ಸೇವಿಸುವ ಅಗತ್ಯವಿದೆ ಎಂದು ಹೇಳುತ್ತದೆ. ಆರೋಗ್ಯ ಹದಗೆಡುವುದನ್ನು ತಡೆಯಲು ಸರಿಯಾದ ಸಮಯ ಅಥವಾ ಮಧ್ಯಂತರದಲ್ಲಿ ಸರಿಯಾದ ರೀತಿಯ ಸಂಯೋಜನೆಯ ಆಹಾರ ಪದಾರ್ಥ ಸೇವನೆ ಮಾಡುವುದು ತುಂಬಾ ಮುಖ್ಯ.

  ಆಯುರ್ವೇದದ ಪ್ರಕಾರ, ಕಫ, ವಾತ ಮತ್ತು ಪಿತ್ತ ಎಂಬ ಮೂರು ದೋಷಗಳ ಅಸಮತೋಲನವು ಒಬ್ಬರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಹೇಳುತ್ತದೆ.

  ಆಂಟಿ ಡಯಟ್ ಎಂದರೇನು?

  ಆಯುರ್ವೇದದ ಪ್ರಕಾರ, ವ್ಯತಿರಿಕ್ತ ಆಹಾರವು ಆಹಾರ ಪದಾರ್ಥಗಳ ಸಂಯೋಜನೆಯಾಗಿದೆ. ಇದನ್ನು ಒಟ್ಟಿಗೆ ಸೇವಿಸಿದರೆ, ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಆಚಾರ್ಯರ ಪ್ರಕಾರ, ಇಂತಹ ಆಹಾರಗಳನ್ನು ದೀರ್ಘ ಕಾಲದವರೆಗೆ ಆಹಾರದಲ್ಲಿ ಸೇರಿಸುವುದು ಕುರುಡುತನ, ಹುಚ್ಚುತನ, ಅಮಲು, ರಕ್ತಹೀನತೆ, ಚರ್ಮ ರೋಗಗಳು, ಶಕ್ತಿಹೀನತೆ ಮತ್ತು ಬಂಜೆತನದಂತಹ ಕಾಯಿಲೆ ಬರುತ್ತವೆ.

  ಆಯುರ್ವೇದ ಪ್ರಖ್ಯಾತ ಮಹರ್ಷಿ ಮತ್ತು ಆಯುರ್ವೇದ ವಿಶಾರದ್ ಚರಕ್ ಕೂಡ ಈ ಅಂಶವನ್ನು ಬೆಂಬಲಿಸಿದ್ದಾರೆ. ಮತ್ತು ಆಹಾರದ ವಿರುದ್ಧ ಆಹಾರವನ್ನು ದೀರ್ಘ ಕಾಲದವರೆಗೆ ಸೇವಿಸಿದರೆ, ಕೆಲವು ಸಂದರ್ಭಗಳಲ್ಲಿ ಅದು ಸಾವಿಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ.

  ಯಾವ ಆಹಾರ ಪದಾರ್ಥಗಳನ್ನು ಒಟ್ಟಿಗೆ ತಿನ್ನುವ ತಪ್ಪನ್ನು ಮಾಡಬಾರದು

  ಮೀನು + ಹಾಲು

  ಚಿಕನ್ + ಹಾಲು

  ಚಹಾ + ಬೆಳ್ಳುಳ್ಳಿ

  ಹಾಲು + ಬಾಳೆಹಣ್ಣು

  ದಾಳಿಂಬೆ + ದ್ರಾಕ್ಷಿ ಹಣ್ಣು

  ಹಸಿರು ಟೊಮ್ಯಾಟೊ + ವೈನ್

  ಆಲೂಗಡ್ಡೆ+ ಮದ್ಯ

  ಹಾಲು + ಉಪ್ಪು

  ಕೋಳಿ ಮಾಂಸ ಮತ್ತು ಹಾಲು ಒಟ್ಟಿಗೆ ಏಕೆ ತಿನ್ನಬಾರದು?

  ಈ ಪ್ರಶ್ನೆಗೆ ಇತ್ತೀಚೆಗೆ ಡಾ ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಉತ್ತರಿಸಿದ್ದಾರೆ. ಹಾಲಿನ ಜೀರ್ಣಕ್ರಿಯೆ ಪ್ರಕ್ರಿಯೆಯು ಕೋಳಿ ಮಾಂಸಕ್ಕಿಂತ ಭಿನ್ನವಾಗಿರುವ ಕಾರಣ ಚಿಕನ್ ಜೊತೆಗೆ ಹಾಲನ್ನು ಸಂಯೋಜಿಸುವುದು ಒಳ್ಳೆಯದಲ್ಲ.

  ಹಾಲು ಮತ್ತು ಚಿಕನ್ ಅನ್ನು ಒಟ್ಟಿಗೆ ತಿನ್ನುವುದರಿಂದ ದೇಹದಲ್ಲಿ ವಿಷಕಾರಿ ಅಂಶಗಳು ರೂಪುಗೊಳ್ಳುತ್ತವೆ. ಚಿಕನ್ ಕೆಲವು ಜನರಿಗೆ ಜೀರ್ಣಿಸಿಕೊಳ್ಳಲು ಭಾರವಾಗಿರುತ್ತದೆ. ಇದು ಜೀರ್ಣಕಾರಿ ಪ್ರಕ್ರಿಯೆಯಲ್ಲಿ ಅಡಚಣೆಗೆ ಕಾರಣ.

  ಚಿಕನ್ ಮತ್ತು ಹಾಲು ಒಟ್ಟಿಗೆ ತಿಂದರೆ ಏನಾಗುತ್ತದೆ?

  ಆಯುರ್ವೇದ ವೈದ್ಯರ ಪ್ರಕಾರ, ಹಾಲು ಮತ್ತು ಮಾಂಸದ ಸಂಯೋಜನೆ ದೀರ್ಘಾವಧಿಯಲ್ಲಿ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಈ ಪರಿಣಾಮಗಳಲ್ಲಿ ಹೊಟ್ಟೆ ನೋವು, ವಾಕರಿಕೆ, ಅಜೀರ್ಣ, ಅನಿಲ, ಉಬ್ಬುವುದು, ಹುಣ್ಣುಗಳು, ಕೆಟ್ಟ ವಾಸನೆ, ಮಲಬದ್ಧತೆ, ಆಮ್ಲೀಯತೆ ಮತ್ತು ಇನ್ನೂ ಅನೇಕ ಗಂಭೀರ ಚರ್ಮದ ಅಸ್ವಸ್ಥತೆ, ಹೊಟ್ಟೆಯ ಸಂಬಂಧಿತ ಸಮಸ್ಯೆಗಳು ಸೇರಿವೆ.

  ಇದನ್ನೂ ಓದಿ: ಮಧುಮೇಹ ನಿಯಂತ್ರಣ, ತೂಕ ಇಳಿಕೆಗೆ ಸಹಾಯ ಮಾಡುತ್ತದೆ ಶುಂಠಿ !

  ಚಿಕನ್ ತಿಂದ ನಂತರ ಹಾಲು ಯಾವಾಗ ಕುಡಿಯಬೇಕು?

  ಚಿಕನ್ ಮತ್ತು ಹಾಲನ್ನು ಪ್ರತ್ಯೇಕವಾಗಿ ಮತ್ತು 2 ಗಂಟೆಗಳ ಮಧ್ಯಂತರದಲ್ಲಿ ಸೇವನೆ ಮಾಡಬೇಕೆಂದು ತಜ್ಞರು ಶಿಫಾರಸು ಮಾಡುತ್ತಾರೆ. ಆರೋಗ್ಯಕರ ಆಹಾರ ಎಂದರೆ ವಿಷಕಾರಿ ಅಥವಾ ಹಾನಿಕಾರಕ ಆಹಾರಗಳು ಅಥವಾ ಆಹಾರ ಸಂಯೋಜನೆಗಳಿಂದ ದೂರವಿರುವುದು ಉತ್ತಮ.
  Published by:renukadariyannavar
  First published: