ತ್ವಚೆಯ ಜತೆಗೆ ಆರೋಗ್ಯಕ್ಕೂ ಒಳ್ಳೆಯದು ಈ ಕಾಮಕಸ್ತೂರಿ

news18
Updated:May 13, 2018, 1:10 PM IST
ತ್ವಚೆಯ ಜತೆಗೆ ಆರೋಗ್ಯಕ್ಕೂ ಒಳ್ಳೆಯದು ಈ ಕಾಮಕಸ್ತೂರಿ
news18
Updated: May 13, 2018, 1:10 PM IST
ನ್ಯೂಸ್ 18 ಕನ್ನಡ

ಕಾಮಕಸ್ತೂರಿ ಬೀಜವನ್ನು ಚಿಯಾ ಸೀಡ್ಸ್​ ಎಂದು ಕರೆಯಲಾಗುತ್ತದೆ. ಈ ಬೀಜವು ಆರೋಗ್ಯವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಕಾಮಕಸ್ತೂರಿ ಪಾನೀಯದಿಂದ ಕೂದಲಿನ ಆರೈಕೆ ಮತ್ತು ತೂಕವನ್ನು ನಿಯಂತ್ರಿಸಬಹುದು. ಇಷ್ಟೇ ಅಲ್ಲದೆ ಇನ್ನೂ ಅನೇಕ ಪ್ರಯೋಜನಗಳನ್ನು ಇದರಿಂದ ಪಡೆಯಬಹುದು. ಅವುಗಳು ಈ ಕೆಳಗಿನಂತಿವೆ....

ಈ ಬೀಜಗಳಲ್ಲಿ ಉತ್ಕರ್ಷಣ ನಿರೋಧಕ(Antioxidants) ಶಕ್ತಿಯು ಸಮೃದ್ದವಾಗಿರುತ್ತದೆ. ನಿಯಮಿತವಾಗಿ ಕಾಮಕಸ್ತೂರಿ ಸೇವಿಸುವುದರಿಂದ ರೋಗಗಳಿಂದ ಮುಕ್ತಿ ಹೊಂದಬಹುದು.

ಇವುಗಳಲ್ಲಿ ಸಾಕಷ್ಟು ನೀರಿನಾಂಶವಿದ್ದು, ಇದು ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸುತ್ತದೆ. ಹಾಗೆಯೇ ಹೊಟ್ಟೆಯನ್ನು ಸಮತೋಲನದಲ್ಲಿರಿಸಲು ಸಹಕರಿಸುತ್ತದೆ.

ಕಾಮಕಸ್ತೂರಿ ಬೀಜಗಳಲ್ಲಿ ಪ್ರೊಟೀನ್ ಹೇರಳವಾಗಿರುತ್ತದೆ. ಇದರ ಬಳಕೆಯಿಂದ ಕೂದಲು ಮತ್ತು ತ್ವಚೆಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.

ಇದರಲ್ಲಿ ಸಾಕಷ್ಟು ಫೈಬರ್ ಮತ್ತು ಪ್ರೊಟೀನ್ ಅಂಶಗಳು ಕಂಡು ಬರುವುದರಿಂದ ದೇಹ ತೂಕವನ್ನು ನಿಯಂತ್ರಿಸುವಲ್ಲಿ ಮುಖ್ಯ ಪಾತ್ರವಹಿಸುತ್ತದೆ.

ಎಲುಬುಗಳು ಬಲಗೊಳ್ಳಲು ಬೇಕಾದ ಕ್ಯಾಲ್ಸಿಯಂ, ಪೊಟ್ಯಾಶಿಯಂ ಮತ್ತು ಪ್ರೊಟೀನ್​ ಪೋಷಕಾಂಶಗಳು ಕಾಮಕಸ್ತೂರಿ ಬೀಜಗಳಲ್ಲಿ ಹೆಚ್ಚಾಗಿರುತ್ತದೆ. ಹಾಲು ಕುಡಿಯಲು ಇಷ್ಟವಿಲ್ಲದವರು ಇದನ್ನು ಕುಡಿಯುವುದರಿಂದ ಮೂಳೆಗಳು ಬಲಪಡಿಸಿಕೊಳ್ಳಬಹುದು.
Loading...

ಪ್ರತಿದಿನ 30-35 ಗ್ರಾಂ ಪ್ರಮಾಣಕ್ಕಿಂತ ಹೆಚ್ಚಿನ ಕಾಮಕಸ್ತೂರಿಯನ್ನು ಸೇವಿಸಿದರೆ ಅಲರ್ಜಿ ಉಂಟಾಗಬಹುದು. ಅಂತಹ ಅಲರ್ಜಿ ಕಂಡು ಬಂದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
First published:May 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...