Chest Pain: ಎದೆ ನೋವೇ? ಈ ಮೂರು ಚಿಹ್ನೆಗಳಿದ್ದರೆ ಅವು ಹೃದಯಾಘಾತದ ಲಕ್ಷಣಗಳಲ್ಲ ಅಂತಾರೆ ತಜ್ಞರು

ಎದೆಗೂಡಿನ ಒಳಗೆ ಅಥವಾ ಆಸುಪಾಸು, ವಸಡುಗಳು, ತೋಳುಗಳು, ಬೆನ್ನುಹುರಿ, ಕುತ್ತಿಗೆ ಮುಂತಾದ ಭಾಗಗಳಲ್ಲಿ ನೋವು ಕಾಣಿಸಿಕೊಂಡರೆ ಅಂತಹ ನೋವುಗಳು ಹೃದಯಾಘಾತದ ಚಿಹ್ನೆಯಾಗಿರುವ ಸಾಧ್ಯತೆ ಇದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಯಾರಿಗಾದರೂ ಎದೆ ನೋವು(Chest Pain) ಕಾಣಿಸಿಕೊಂಡರೆ ಅವರು ಗಾಬರಿಗೊಳ್ಳುವುದು(Horrified) ಸಹಜ ಪ್ರಕ್ರಿಯೆ. ಇಂತಹ ಸಂದರ್ಭಗಳಲ್ಲಿ ಆತಂಕ (Anxiety) ಹಾಗೂ ಒತ್ತಡಕ್ಕೆ ಒಳಗಾಗಬಾರದು ಎಂಬುದು ತಜ್ಞ ವೈದ್ಯರ ಕಿವಿಮಾತು. ಹಾಗೆಯೆ ಅನಗತ್ಯವಾಗಿ ಹೃದಯಾಘಾತವಾಗಿರಬಹುದು ಎಂದು ಊಹಿಸಿಕೊಳ್ಳುವುದನ್ನು(Unnecessarily) ಬಿಡಬೇಕು. ಒಂದೊಮ್ಮೆ ವಿವರಿಸಲಾಗದ ಎದೆ ನೋವು ಕಾಣಿಸಿಕೊಂಡರೆ ಅದಕ್ಕೆ ಕಾರಣವನ್ನು ವೈದ್ಯರ ಬಳಿಯೇ ತಪಾಸಿಸಿಕೊಳ್ಳಬೇಕು ಎನ್ನುತ್ತಾರೆ (Experts) ತಜ್ಞರು. ಹೃದಯ ಸಂಬಂಧಿ ಕಾರಣಗಳೊಂದಿಗೆ ಹಲವಾರು ಕಾರಣಗಳಿಂದ ಎದೆ ನೋವು(Heart Disease) ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ನಮಗೆಲ್ಲರಿಗೂ ಹೃದಯ ಸ್ನಾಯುವಿಗೆ ಸಾಕಷ್ಟು ಪ್ರಮಾಣದ ರಕ್ತ ಪೂರೈಕೆಯಾಗದಿದ್ದರೆ ಹೃದಯಾಘಾತ ಸಂಭವಿಸುತ್ತದೆ ಎಂಬ ಸಂಗತಿ ತಿಳಿದೇ ಇದೆ. ಅಂತಹ ಆತಂಕಕಾರಿ ಸಂದರ್ಭದಲ್ಲಿ ಹೃದಯಾಘಾತ ಸಂಭವಿಸುವ ಗಳಿಗೆಯನ್ನು ನಾವು ಹೇಗೆ ಗ್ರಹಿಸಬಹುದು ಎಂದು ತಿಳಿಸುತ್ತಲೇ ಇರುತ್ತೇವೆ.

ಅಮೆರಿಕಾದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರಗಳ ಪ್ರಕಾರ,
ಎದೆ ನೋವು ಅಥವಾ ಅಸ್ವಸ್ಥತೆ
ನಿಶ್ಯಕ್ತ ಅನುಭವ, ತಲೆ ಸುತ್ತು ಅಥವಾ ಸುಸ್ತು
ವಸಡುಗಳು, ಕುತ್ತಿಗೆ ಹಾಗೂ ಬೆನ್ನುಹುರಿಯಲ್ಲಿ ನೋವು ಅಥವಾ ಅಸ್ವಸ್ಥತೆ
ಒಂದು ಅಥವಾ ಎರಡೂ ತೋಳು ಹಾಗೂ ಭುಜಗಳಲ್ಲಿ ನೋವು ಅಥವಾ ಅಸ್ವಸ್ಥತೆ
ಉಸಿರಾಟದ ತೊಂದರೆ
ಅಸಹಜ ಹಾಗೂ ವಿವರಿಸಲಾಗದ ಆಯಾಸ ಮತ್ತು ವಾಕರಿಕೆ ಅಥವಾ ವಾಂತಿ ಹೃದಯಾಘಾತದ ಇನ್ನಿತರ ಚಿಹ್ನೆಗಳು

ಇದನ್ನೂ ಓದಿ: Skin Care: ಚರ್ಮಕ್ಕೆ ಒಳ್ಳೆಯದಂತೆ ಆ್ಯಕ್ಟಿವೇಟೆಡ್ ಚಾರ್ಕೋಲ್? ಇದರಿಂದಾಗುವ ಲಾಭಗಳೇನು..?

ಒಂದು ಕ್ಷಣ ವಿರಮಿಸಿ
ಎದೆ ನೋವು ಕಾಣಿಸಿಕೊಂಡ ಸಂದರ್ಭದಲ್ಲಿ ನಾವು ವಿಶೇಷವಾಗಿ ಅತಿಯಾದ ನೋವು ಹಾಗೂ ಒತ್ತಡವನ್ನು ಅನುಭವಿಸುತ್ತೇವೆ. ನಮಗೆ ಯಾವಾಗ ನಮ್ಮ ಎದೆಗೂಡಿನಲ್ಲಿ ಅನಿರೀಕ್ಷಿತವಾಗಿ ನೋವು ಕಾಣಿಸಿಕೊಳ್ಳುತ್ತದೊ ಆಗ ಒಂದು ಕ್ಷಣ ಮರಗಟ್ಟಿ ಹೋಗುತ್ತೇವೆ. ಹಾಗಾದರೆ ಅದು ಹೃದಯಾಘಾತವಾಗಿರಬಹುದೆ? ಒಂದು ಕ್ಷಣ ವಿರಮಿಸಿ ಎನ್ನುತ್ತದೆ ಕ್ಲೀವ್‌ಲ್ಯಾಂಡ್ ಕ್ಲಿನಿಕ್ ಪ್ರಕಟಿಸಿರುವ ಒಂದು ಲೇಖನ.

ಆತಂಕ ಪಡುವ ಅಗತ್ಯವಿಲ್ಲ
ದೀರ್ಘ ಉಸಿರೊಂದನ್ನು ಎಳೆದುಕೊಳ್ಳಿರಿ. ಬಹುತೇಕ ಸಮಯಗಳಲ್ಲಿ ಪರಿಸ್ಥಿತಿಯು ನಾವು ಭೀತಿಗೊಂಡಂತಿರುವುದಿಲ್ಲ. ಬಹುತೇಕ ಎದೆ ನೋವುಗಳು ನಮ್ಮ ಮೆದುಳಲ್ಲಿ ಎಚ್ಚರಿಕೆ ಗಂಟೆಯನ್ನು ಬಾರಿಸುವಂತೆ ಮಾಡುವ ಸಾಧ್ಯತೆ ಇರುತ್ತದೆ. ಆದರೆ, ಅದು ಅದು ಹೃದಯಾಘಾತ ಅಥವಾ ಅಲ್ಲ ಎಂದು ಎರಡು ಬಗೆಯಲ್ಲೂ ನಿರ್ಣಯಿಸದಿರಿ. "ಆತಂಕ ಪಡುವ ಅಗತ್ಯವಿಲ್ಲ" ಎಂದು ನಿರ್ಲಕ್ಷಿಸದಿರಿ ಅಥವಾ ಭೀತಿಯಿಂದ ಥರಗುಟ್ಟದಿರಿ.
ಬಹುತೇಕ ಎದೆ ನೋವುಗಳು ಹೃದಯಾಘಾತದ ಚಿಹ್ನೆಗಳಾಗಿರುವುದಿಲ್ಲ ಎಂಬುದನ್ನು ಮರು ಖಾತ್ರಿಗೊಳಿಸಿರುವ ಕ್ಲೀವ್‌ಲ್ಯಾಂಡ್, ಅಂತಹ ಚಿಹ್ನೆಗಳು ಕಾಣಿಸಿಕೊಂಡಾಗ ಹೃದಯ ತಜ್ಞರನ್ನು ಸಂಪರ್ಕಿಸುವುದು ಉತ್ತಮ ಎನ್ನುತ್ತಾರೆ ಅದರ ವ್ಯವಸ್ಥಾಪಕ ನಿರ್ದೇಶಕ ಡಾ. ಕ್ಯುರ್ಟಿಸ್ ರಿಮ್ಮರ್‌ಮ್ಯಾನ್.

ತುರ್ತು ನಿಗಾ ಘಟಕ
ಕೆಲವು ಬಗೆಯ ಎದೆ ನೋವುಗಳು-ನಿರ್ದಿಷ್ವವಾಗಿ ಕನಿಷ್ಠ ಐದು ನಿಮಿಷಗಳವರೆಗೆ ಇರುವ ಎದೆ ನೋವುಗಳು (ಸ್ನಾಯುಗಳ ಸೆಳೆತ ಅಥವಾ ಕುತ್ತಿಗೆಯಲ್ಲಿ ಉಳುಕು ಕಾಣಿಸಿಕೊಂಡಿರದಿದ್ದರೆ) ನಿಮ್ಮನ್ನು ತುರ್ತು ನಿಗಾ ಘಟಕಕ್ಕೆ ರವಾನಿಸುವ ಸಾಧ್ಯತೆ ಇರುತ್ತದೆ. ಉದರದ ಮೇಲ್ಭಾಗದಲ್ಲಿ ದೀರ್ಘ ಹಾಗೂ ತಗ್ಗದ ನೋವು ಕಾಣಿಸಿಕೊಂಡರೆ, ಎದೆಗೂಡಿನ ಒಳಗೆ ಅಥವಾ ಆಸುಪಾಸು, ವಸಡುಗಳು, ತೋಳುಗಳು, ಬೆನ್ನುಹುರಿ, ಕುತ್ತಿಗೆ ಮುಂತಾದ ಭಾಗಗಳಲ್ಲಿ ನೋವು ಕಾಣಿಸಿಕೊಂಡರೆ ಅಂತಹ ನೋವುಗಳು ಹೃದಯಾಘಾತದ ಚಿಹ್ನೆಯಾಗಿರುವ ಸಾಧ್ಯತೆ ಇದೆ ಎನ್ನುತ್ತಾರೆ ಡಾ. ರಿಮ್ಮರ್‌ಮ್ಯಾನ್.

ಇದನ್ನೂ ಓದಿ: Health Tips: ಹೊಕ್ಕಳಿಗೆ ಜೇನುತುಪ್ಪ ಹಚ್ಚುವುದರಿಂದ ಎಷ್ಟೆಲ್ಲಾ ಲಾಭಗಳಿವೆ ನೋಡಿ..

ಇಂತಹ ಸಂದರ್ಭಗಳಲ್ಲಿ ಹೃದಯ ಸ್ನಾಯುಗಳನ್ನು ರಕ್ಷಿಸಲು ಹೃದಯ ತುರ್ತು ಸೇವೆ ಅಧಿಕಾರಿಗಳಿಗೆ ಅಥವಾ ಆ್ಯಂಬುಲೆನ್ಸ್‌ಗೆ ಕರೆ ಮಾಡಿ ಎನ್ನುತ್ತಾರವರು. ರಕ್ತದ ಪೂರೈಕೆಯನ್ನು ಮರು ಸ್ಥಾಪಿಸುವ ಚಿಕಿತ್ಸೆ ಪಡೆಯುವಲ್ಲಿ ಎಷ್ಟು ವಿಳಂಬ ಮಾಡಲಾಗುತ್ತದೊ ಅಷ್ಟೇ ಪ್ರಮಾಣದಲ್ಲಿ ಹೃದಯ ಸ್ನಾಯುಗಳಿಗೆ ಹಾನಿಯಾಗುತ್ತದೆ ಎಂದು ಅಮೆರಿಕಾದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರದ ಅಂತರ್ಜಾಲ ತಾಣ ಎಚ್ಚರಿಕೆ ನೀಡಿದೆ.
Published by:vanithasanjevani vanithasanjevani
First published: