Cherry Benefits: ಮಧುಮೇಹ ಇದ್ರೆ ಸಿಹಿಯಾಗಿರೋ ಚೆರ್ರಿ ತಿನ್ನಬಹುದಾ?

ಪೊಟ್ಯಾಸಿಯಮ್ ಮತ್ತು ಮ್ಯಾಂಗನೀಸ್‌ನಂತಹ ಖನಿಜಗಳಿಂದ ಚೆರ್ರಿ ಹಣ್ಣು ಸಮೃದ್ಧವಾಗಿದೆ. ಚೆರ್ರಿಗಳ ಆರೋಗ್ಯ ಪ್ರಯೋಜನಗಳಲ್ಲಿ ಕಣ್ಣಿನ ಆರೈಕೆ, ಬಲವಾದ ರೋಗ ನಿರೋಧಕ ವ್ಯವಸ್ಥೆ, ಸೋಂಕಿನಿಂದ ಪರಿಹಾರ ನೀಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಚೆರ್ರಿ (Cherry) ಹಣ್ಣಿನ ವೈಜ್ಞಾನಿಕ ಹೆಸರು (Scientific Name) ಪ್ರುನಸ್ ಏವಿಯಮ್. ಇದು ಅತ್ಯಂತ ರೋಮ್ಯಾಂಟಿಕ್ ಹಣ್ಣುಗಳಲ್ಲಿ (Romantic Food) ಒಂದಾಗಿದೆ ಎಂದು ಹೇಳಲಾಗುತ್ತದೆ. ಚೆರ್ರಿಗಳು ಕೆಂಪು (Red), ಕಪ್ಪು (Black) ಮತ್ತು ಹಳದಿ (Yellow) ಬಣ್ಣದಿಂದ ಕೂಡಿರುತ್ತವೆ. ಚೆರ್ರಿಗಳನ್ನು ಪ್ರಪಂಚದಾದ್ಯಂತ ತುಂಬಾ ಜನರು ಸೇವಿಸುತ್ತಾರೆ. ಚೆರ್ರಿ ಮುಖ್ಯವಾಗಿ ಶೀತ ದೇಶಗಳಲ್ಲಿ ಹೆಚ್ಚು ಬೆಳೆಯಲ್ಪಡುವ ಹಣ್ಣು ಆಗಿದೆ. ಚೆರ್ರಿ ಹಣ್ಣಿನ ಆಕಾರ ಮತ್ತು ರುಚಿ ಉತ್ತಮವಾಗಿರುತ್ತದೆ. ಚೆರ್ರಿಗಳನ್ನು ಯುರೋಪ್ ಮತ್ತು ಯುನೈಟೆಡ್ ಸ್ಟೇಟ್ ಗಳಲ್ಲಿ ಹೆಚ್ಚು ಸೇವನೆ ಮಾಡುತ್ತಾರೆ. ಪ್ರಪಂಚದ ಹೆಚ್ಚಿನ ಭಾಗಗಳಲ್ಲಿ ಚೆರ್ರಿ ಬೆಳೆಯಲಾಗುತ್ತದೆ. ಭಾರತದಲ್ಲಿ ಚೆರ್ರಿ ಹಣ್ಣನ್ನ ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಈಶಾನ್ಯ ರಾಜ್ಯಗಳಲ್ಲಿ ಬೆಳೆಯುತ್ತಾರೆ.

    ಪೊಟ್ಯಾಸಿಯಮ್ ಮತ್ತು ಮ್ಯಾಂಗನೀಸ್‌ನಂತಹ ಖನಿಜಗಳಿಂದ ಕೂಡಿದೆ ಚೆರ್ರಿ

    ಚೆರ್ರಿಗಳು ಥಯಾಮಿನ್, ರಿಬೋಫ್ಲಾವಿನ್, ಪ್ಯಾಂಟೊಥೆನಿಕ್ ಆಮ್ಲದಿಂದ ಕೂಡಿದೆ. ಇದರಲ್ಲಿ ನಿಯಾಸಿನ್, ಫೋಲೇಟ್ ಇದರಲ್ಲಿ ಕಂಡು ಬರುತ್ತದೆ. ಪೊಟ್ಯಾಸಿಯಮ್ ಮತ್ತು ಮ್ಯಾಂಗನೀಸ್‌ನಂತಹ ಖನಿಜಗಳಿಂದ ಚೆರ್ರಿ ಹಣ್ಣು ಸಮೃದ್ಧವಾಗಿದೆ. ಸಣ್ಣ ಪ್ರಮಾಣದ ತಾಮ್ರ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ರಂಜಕವನ್ನು ಚೆರ್ರಿ ಹಣ್ಣು ಹೊಂದಿವೆ.

    ಚೆರ್ರಿ ಹಣ್ಣುಗಳ ಆರೋಗ್ಯ ಪ್ರಯೋಜನಗಳು

    ಚೆರ್ರಿಗಳ ಆರೋಗ್ಯ ಪ್ರಯೋಜನಗಳಲ್ಲಿ ಕಣ್ಣಿನ ಆರೈಕೆ, ಬಲವಾದ ರೋಗ ನಿರೋಧಕ ವ್ಯವಸ್ಥೆ, ಸೋಂಕಿನಿಂದ ಪರಿಹಾರ, ವಯಸ್ಸಾದ ವಿರೋಧಿ ಗುಣಲಕ್ಷಣಗಳು ಮತ್ತು ಉತ್ತಮ ಜೀರ್ಣಕ್ರಿಯೆ ಸೇರಿಕೊಂಡಿವೆ.

    ಇದನ್ನೂ ಓದಿ: ಮೇಕೆ ಹಾಲು ಕುಡಿದರೆ ಗ್ಯಾಸ್ಟ್ರಿಕ್ ಇರಲ್ಲ, ಮಕ್ಕಳಿಗೆ ಕೊಟ್ಟರೆ ಸಿಗೋ ಆರೋಗ್ಯ ಲಾಭಗಳಿವು

    ಸಾಮಾನ್ಯವಾಗಿ ಕೇಕ್ ಮತ್ತು ಸಿಹಿ ತಿನಿಸುಗಳ ಮೇಲೆ ಕೆಂಪು ಬಣ್ಣದ ಚೆರ್ರಿ ಇಟ್ಟು ಕೊಡಲಾಗುತ್ತದೆ. ಚೆರ್ರಿಗಳು ಜೀವಸತ್ವ ಮತ್ತು ಇತರೆ ಪೋಷಕಾಂಶಗಳಿಂದ ಇವು ಸಮೃದ್ಧವಾಗಿವೆ.

    ಚೆರ್ರಿಗಳಿಂದ ಸಾಕಷ್ಟು ಆರೋಗ್ಯ ಲಾಭ ಸಿಗುತ್ತದೆ

    ಚೆರ್ರಿಗಳನ್ನು ತಿನ್ನುವುದರಿಂದ ವಿಟಮಿನ್ ಬಿ6, ವಿಟಮಿನ್ ಎ, ವಿಟಮಿನ್ ಕೆ, ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಬಿ ಮುಂತಾದ ವಿಟಮಿನ್ ಗಳು ದೇಹಕ್ಕೆ ಸಿಗುತ್ತವೆ. ಚೆರ್ರಿಗಳು ನಿಮ್ಮ ಚರ್ಮ ಮತ್ತು ನಿಮ್ಮ ದೇಹಕ್ಕೆ ಪ್ರಯೋಜನಕಾರಿ ಉರಿಯೂತ ಗುಣಲಕ್ಷಣ ಹೊಂದಿವೆ.

    ಚೆರ್ರಿ ಹಣ್ಣು ಸೇವನೆಯಿಂದ ಆಗುವ ಪ್ರಯೋಜನಗಳು

    ಮಧುಮೇಹ ನಿಯಂತ್ರಿಸುತ್ತದೆ

    ಚೆರ್ರಿಗಳು ರಕ್ತದ ಸಕ್ಕರೆ ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಚೆರ್ರಿಗಳು ದೇಹವನ್ನು ಆರೋಗ್ಯಕರವಾಗಿ ಇಡುತ್ತವೆ. ಮತ್ತು ರಕ್ತದ ಸಕ್ಕರೆ ನಿಯಂತ್ರಿಸಲು ಸಹಾಯ ಮಾಡುತ್ತದೆ. ಚೆರ್ರಿಗಳಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ತುಂಬಾ ಕಡಿಮೆ ಇರುತ್ತದೆ. ಆದ್ದರಿಂದ ಮಧುಮೇಹ ರೋಗಿಗಳು ಬೇಸಿಗೆಯಲ್ಲಿ ಚೆರ್ರಿ ಹಣ್ಣು ಸೇವನೆ ಮಾಡಬೇಕು.

    ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

    ಚೆರ್ರಿ ಸೇವನೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದರಲ್ಲಿ ಮೆಲಟೋನಿನ್ ಎಂಬ ಅಂಶವಿದೆ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಚೆರ್ರಿಗಳಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ.

    ಮಲಬದ್ಧತೆ ತೊಡೆದು ಹಾಕುತ್ತದೆ

    ಮಲಬದ್ಧತೆಯ ಸಮಸ್ಯೆಯಿದ್ದರೆ ಆಹಾರದಲ್ಲಿ ನೀವು ಚೆರ್ರಿ ಸೇರಿಸಿಕೊಳ್ಳಬೇಕು. ಚೆರ್ರಿಗಳಲ್ಲಿ ಫೈಬರ್ ಸಮೃದ್ಧವಾಗಿದೆ ಮತ್ತು ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದರಿಂದ ನಿಮ್ಮ ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸಬಹುದು.

    ಒತ್ತಡ ಕಡಿಮೆ ಮಾಡುತ್ತದೆ

    ಚೆರ್ರಿ ತಿನ್ನಲು ರುಚಿಕರವಾಗಿದೆ ಮತ್ತು ನಿಮ್ಮ ಒತ್ತಡ ನಿವಾರಿಸುತ್ತದೆ. ನಿಮ್ಮ ಆಹಾರದಲ್ಲಿ ನೀವು ಚೆರ್ರಿ ಸೇರಿಸಿಕೊಳ್ಳಬೇಕು. ದೀರ್ಘಕಾಲದವರೆಗೆ ಆರೋಗ್ಯವಾಗಿರಿಸುತ್ತದೆ.

    ಇದನ್ನೂ ಓದಿ: ನಿಮ್ಮ ತ್ವಚೆಯ ಗುಣ ಯಾವುದು? ಈ ತರದ ಸ್ಕಿನ್ ಇದ್ದೋರು ತೆಂಗಿನೆಣ್ಣೆ ಬಳಸೋ ಮುನ್ನ ಎಚ್ಚರ ವಹಿಸಿ

    ತ್ವಚೆಯ ಯೌವನ ಕಾಪಾಡುತ್ತದೆ

    ಚೆರ್ರಿ ತಿನ್ನುವುದರಿಂದ ತ್ವಚೆಗೆ ಅನೇಕ ಪ್ರಯೋಜನಗಳು ಸಿಗುತ್ತವೆ. ಆಂಟಿ-ಆಕ್ಸಿಡೆಂಟ್‌ಗಳು ಚೆರ್ರಿಗಳಲ್ಲಿ ಕಂಡು ಬರುತ್ತವೆ. ಇದು ನಿಮ್ಮ ಚರ್ಮವನ್ನು ಹೊಳೆಯುವ ಮತ್ತು ಸುಂದರವಾಗಿಸುತ್ತದೆ.
    Published by:renukadariyannavar
    First published: