• Home
  • »
  • News
  • »
  • lifestyle
  • »
  • Cancer Research: ರಾಸಾಯನಿಕ ವಸ್ತುಗಳಲ್ಲಿನ ಕ್ಯಾನ್ಸರ್ ಪತ್ತೆಹಚ್ಚಲು AI-ಆಧಾರಿತ ಮಾದರಿ ಅಭಿವೃದ್ಧಿ

Cancer Research: ರಾಸಾಯನಿಕ ವಸ್ತುಗಳಲ್ಲಿನ ಕ್ಯಾನ್ಸರ್ ಪತ್ತೆಹಚ್ಚಲು AI-ಆಧಾರಿತ ಮಾದರಿ ಅಭಿವೃದ್ಧಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

Cancer Research: ಕ್ಯಾನ್ಸರ್ ಸಾಮಾನ್ಯವಾಗಿ ಅನುವಂಶಿಕವಾಗಿ ಇಲ್ಲವೇ ವಸ್ತುಗಳ ರಾಸಾಯನಿಕಗಳು ಕ್ಯಾನ್ಸರ್ ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿರುತ್ತವೆ.

  • Share this:

ಭಾರತದ IIIT-ದೆಹಲಿ ಸಂಶೋಧಕರು (Researchers) ರಾಸಾಯನಿಕ ರಚನೆಗಳಲ್ಲಿ ಕಾರ್ಸಿನೋಜೆನ್‌ಗಳನ್ನು ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆ-ಆಧಾರಿತ ಮಾದರಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಹೊಸ ಔಷಧಗಳ (Medicine) ಸ್ಕ್ರೀನಿಂಗ್‌ಗಾಗಿ ಫಾರ್ಮಾ ಉದ್ಯಮಕ್ಕೆ ಸಹಕಾರಿಯಾಗಲಿದೆ. ಕ್ಯಾನ್ಸರ್ (Cancer) ಸಾಮಾನ್ಯವಾಗಿ ಅನುವಂಶಿಕವಾಗಿ ಇಲ್ಲವೇ ವಸ್ತುಗಳ ರಾಸಾಯನಿಕಗಳು (Chemical) ಕ್ಯಾನ್ಸರ್ ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿರುತ್ತವೆ.


ಹೀಗಾಗಿ ವಸ್ತುಗಳಲ್ಲಿನ ಕಾರ್ಸಿನೋಜೆನ್‌ಗಳನ್ನು ಪತ್ತೆಹಚ್ಚಲು ಭಾರತೀಯ ಸಂಶೋಧಕರು ಕೃತಕ ಬುದ್ಧಿಮತ್ತೆ ಆಧಾರಿತ ಮಾದರಿಯನ್ನು ಅಭಿವೃದ್ಧಿಪಡಿಸಿದ್ದಾರೆ.


ಮೆಟಾಬೊಕಿಲ್ಲರ್ ಸಾಫ್ಟ್‌ವೇರ್‌ ಎಂದು ನಾಮಕರಣ


ಮೆಟಾಬೊಕಿಲ್ಲರ್ ಎಂದು ಹೆಸರಿಸಲಾದ ಈ ಸಾಫ್ಟ್‌ವೇರ್‌ನ ಸಂಶೋಧನೆಯನ್ನು ನೇಚರ್ ಕೆಮಿಕಲ್ ಬಯಾಲಜಿಯಲ್ಲಿ ಪ್ರಕಟಿಸಲಾಗಿದೆ, ಇದು ರಾಸಾಯನಿಕ ಜೀವಶಾಸ್ತ್ರದ ಕ್ಷೇತ್ರದಲ್ಲಿ ಅತ್ಯಂತ ಪ್ರತಿಷ್ಠಿತ ಜರ್ನಲ್‌ಗಳಲ್ಲಿ ಒಂದಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.


ದೀರ್ಘಾವಧಿಯ ಬಳಕೆಯ ನಂತರ ಕಂಡುಹಿಡಿಯುವ ಬದಲು ಹೊಸ ಅಣುಗಳ ಕಾರ್ಸಿನೋಜೆನೆಸಿಟಿಯನ್ನು ಊಹಿಸಲು ಈ ಮಾದರಿಯು ಆಹಾರ ಮತ್ತು ಔಷಧ ಉದ್ಯಮಕ್ಕೆ ಸಹಕಾರಿ ಎಂದು ಸಂಶೋಧಕರು ತಿಳಿಸಿದ್ದಾರೆ.


"ಕ್ಯಾನ್ಸರ್ ಕೋಶಗಳಲ್ಲಿ ನಡೆಯುವ ಆರು ಜೀವರಾಸಾಯನಿಕ ಪ್ರಕ್ರಿಯೆಗಳನ್ನು ಗುರುತಿಸಲು ಸಾಫ್ಟ್‌ವೇರ್‌ಗೆ ತರಬೇತಿ"


"ನಮ್ಮ ಇತ್ತೀಚಿನ ಕೆಲಸವು ರಾಸಾಯನಿಕ ರಚನೆಗಗಳು ಕಾರ್ಸಿನೋಜೆನ್‌ಗಳನ್ನು (ಕ್ಯಾನ್ಸರ್-ಉಂಟುಮಾಡುವ ಸಂಯುಕ್ತಗಳು) ಗುರುತಿಸಬಲ್ಲ AI ಮಾದರಿಯನ್ನು ನಿರ್ಮಿಸುತ್ತದೆ. ಈ ಮಾದರಿಯು ಕಾರ್ಸಿನೋಜೆನ್‌ಗಳಿಗೆ ಸಂಬಂಧಿಸಿದ ಜೈವಿಕ ಮತ್ತು ರಾಸಾಯನಿಕ ಗುಣಲಕ್ಷಣಗಳನ್ನು ನಿರ್ದಿಷ್ಟವಾಗಿ ಗುರಿಪಡಿಸುವ ಹೊಸ ವಿಧಾನವನ್ನು ಬಳಸುತ್ತದೆ" ಎಂದು IIIT ದೆಹಲಿಯ ಕಂಪ್ಯೂಟೇಶನಲ್ ಬಯಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಗೌರವ್ ಅಹುಜಾ ತಿಳಿಸಿದರು.


"ಕ್ಯಾನ್ಸರ್ ಕೋಶಗಳಲ್ಲಿ ಸಾಮಾನ್ಯವಾಗಿ ನಡೆಯುವ ಆರು ಜೀವರಾಸಾಯನಿಕ ಪ್ರಕ್ರಿಯೆಗಳನ್ನು ಗುರುತಿಸಲು ನಾವು ನಮ್ಮ ಮಾದರಿಯ ಅಲ್ಗಾರಿದಮ್‌ಗೆ ತರಬೇತಿ ನೀಡಿದ್ದೇವೆ,”ಎಂದು ಅವರು ಹೇಳಿದರು.


ಅಹುಜಾ, ಡಾ ದೇಬಾರ್ಕಾ ಸೇನ್ ಗುಪ್ತಾ ಅವರೊಂದಿಗೆ ಆರು ಸ್ವತಂತ್ರ ಯಂತ್ರ ಕಲಿಕೆ ಆಧಾರಿತ ಮಾದರಿಗಳನ್ನು ಅಭಿವೃದ್ಧಿಪಡಿಸಿದ್ದಾರೆ. IIT-Ropar, ರಾಜೀವ್ ಗಾಂಧಿ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಮತ್ತು CSIR-ಜೀನೋಮಿಕ್ಸ್ ಮತ್ತು ಇಂಟಿಗ್ರೇಟಿವ್ ಬಯಾಲಜಿ, ನವದೆಹಲಿಯಂತಹ ಇತರ ಕ್ಲಿನಿಕಲ್ ಮತ್ತು ಸಂಶೋಧನಾ ಸಂಸ್ಥೆಗಳು ಸಹ ಸಂಶೋಧನೆಯಲ್ಲಿ ಭಾಗವಹಿಸಿವೆ.


ಫಾರ್ಮಾ ಉದ್ಯಮಕ್ಕೆ ಸಹಕಾರಿ


ಮೆಟಾಬೊಕಿಲ್ಲರ್ ಹೊಸ ಔಷಧಗಳ ಸ್ಕ್ರೀನಿಂಗ್‌ಗಾಗಿ ಫಾರ್ಮಾ ಉದ್ಯಮದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಮತ್ತು ಬಳಕೆಯನ್ನು ಹೊಂದಿದೆ ಎಂದು ಅಹುಜಾ ಹೇಳಿದರು.


"ಔಷಧಿ ತಯಾರಕರು ಕ್ಯಾನ್ಸರ್ಗೆ ಕಾರಣವಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಪರೀಕ್ಷೆಗಳನ್ನು ನಡೆಸುತ್ತಾರೆ. ಅಂತೆಯೇ ಕಂಪನಿಗಳು ಹೊಸದೊಂದು ಉತ್ಪನ್ನವನ್ನು ತಯಾರು ಮಾಡುವಾಗ ಅವರು ಬಳಕೆ ಮಾಡಿರುವ ಪದಾರ್ಥಗಳು ಕ್ಯಾನ್ಸರ್ಗೆ ಕಾರಣವಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು. ಕಳೆದ ಕೆಲವು ದಶಕಗಳಲ್ಲಿ, 750ಕ್ಕೂ ಹೆಚ್ಚು ಎಫ್‌ಡಿಎ-ಅನುಮೋದಿತ ಔಷಧಿಗಳನ್ನು ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳಲಾಗಿದೆ ಏಕೆಂದರೆ ಅವು ಕ್ಯಾನ್ಸರ್ ಅನ್ನು ಪ್ರಚೋದಿಸುತ್ತವೆ ಎಂದು ಕಂಡುಬಂದಿದೆ” ಎಂದು ಅಹುಜಾ ಹೇಳಿದರು.


ಮೆಟಾಬೊಕಿಲ್ಲರ್‌ ಹೇಗೆ ಕೆಲಸ ಮಾಡುತ್ತದೆ?


ಕ್ಯಾನ್ಸರ್‌ಗೆ ಸಂಬಂಧಿಸಿದ ಆರು ಜೀವರಾಸಾಯನಿಕ ಪ್ರಕ್ರಿಯೆಗಳಿಗೆ ಅಣುವೊಂದು ಕಾರಣವಾಗಬಹುದೇ ಎಂದು ಲೆಕ್ಕಾಚಾರ ಮಾಡಲು ಮೆಟಾಬೊಕಿಲ್ಲರ್‌ ಸಾಫ್ಟ್‌ವೇರ್‌ಗೆ ತರಬೇತಿ ನೀಡಲಾಗಿದೆ. ಮೊದಲನೆಯದು ಎಲೆಕ್ಟ್ರೋಫಿಲಿಸಿಟಿ, ಇದು ಅಣು ಧನಾತ್ಮಕ ಆವೇಶವನ್ನು ಹೊಂದಿದೆಯೇ ಎಂದು ಪರಿಶೀಲಿಸುತ್ತದೆ.


ಎರಡನೆಯದಾಗಿ, ಕ್ಯಾನ್ಸರ್ ಬೆಳವಣಿಗೆಯಲ್ಲಿ ಕಂಡುಬರುವ ಜೀವಕೋಶಗಳಲ್ಲಿ ಪ್ರಸರಣ ಅಥವಾ ತ್ವರಿತ ಬೆಳವಣಿಗೆಯನ್ನು ಪ್ರಚೋದಿಸುವ ಸಾಮರ್ಥ್ಯವನ್ನು ಮೆಟಾಬೊಕಿಲ್ಲರ್ ಪರೀಕ್ಷಿಸುತ್ತದೆ. ಮೂರನೆಯದಾಗಿ, ಇದು ಅಣು ಸೃಷ್ಟಿಸುವ ಆಕ್ಸಿಡೇಟಿವ್ ಒತ್ತಡವನ್ನು ಗುರುತಿಸುತ್ತದೆ.


ಇದನ್ನೂ ಓದಿ: ಏಕತಾ ಪ್ರತಿಮೆ ಬಳಿ ತಲುಪಿದ ಪ್ರಧಾನಿ ಮೋದಿ, ಪುಷ್ಪಾರ್ಚನೆ ಮಾಡಿ ಉಕ್ಕಿನ ಮನುಷ್ಯನಿಗೆ ನಮನ!


ಮೆಟಾಬೊಕಿಲ್ಲರ್ ಹುಡುಕುವ ನಾಲ್ಕನೇ ಪ್ರಕ್ರಿಯೆಯು ಜೀನೋಮಿಕ್ ಅಸ್ಥಿರತೆ ಅಥವಾ ಡಿಎನ್ಎಗೆ ಹಾನಿ ಮಾಡುವ ಅಣುವಿನ ಸಾಮರ್ಥ್ಯವಾಗಿದೆ. ಐದನೆಯದು ಎಪಿಜೆನೆಟಿಕ್ ಬದಲಾವಣೆಯಾಗಿದ್ದು, ಮೆಟಾಬೊಕಿಲ್ಲರ್ ಹುಡುಕುವ ಕೊನೆಯ ಪ್ರಕ್ರಿಯೆಯು ಅಪೊಪ್ಟೋಟಿಕ್-ವಿರೋಧಿ ಪ್ರತಿಕ್ರಿಯೆಯಾಗಿದೆ - ಒತ್ತಡದಲ್ಲಿಯೂ ಸಹ ಜೀವಕೋಶದ ಸಾವನ್ನು ತಡೆಯುವ ಸಾಮರ್ಥ್ಯ ಹೊಂದಿರುತ್ತದೆ. ಈ ಆರು ಪ್ರಕ್ರಿಯೆಗಳನ್ನು ಪರಿಶೀಲಿಸಿದ ನಂತರ, ಅಲ್ಗಾರಿದಮ್ ಅಣುವಿನ ಬಗ್ಗೆ ಫಲಿತಾಂಶ ನೀಡುತ್ತದೆ.


95 % ಕ್ಯಾನ್ಸರ್ ಪರಿಸರದಲ್ಲಿನ ಕಾರ್ಸಿನೋಜೆನ್‌ಗಳಿಂದ ಸಂಭವಿಸುತ್ತದೆ


"ಮೆಟಾಬೊಕಿಲ್ಲರ್, ಇತರ ಸಾಫ್ಟ್‌ವೇರ್‌ಗಳಿಗಿಂತ ಭಿನ್ನವಾಗಿ, ವಿವರಣೆಯನ್ನು ನೀಡುತ್ತದೆ. ಮೆಟಾಬೊಕಿಲ್ಲರ್ ಕಾರ್ಸಿನೋಜೆನ್‌ಗಳನ್ನು ಊಹಿಸುತ್ತದೆ ಮತ್ತು ಮಾನವ ವ್ಯಾಖ್ಯಾನಿಸಬಹುದಾದ ತಾರ್ಕಿಕತೆಯನ್ನು ಒದಗಿಸುತ್ತದೆ" ಎಂದು ಸಂಶೋಧಕರು ಹೇಳಿದ್ದಾರೆ. ಸರಿಸುಮಾರು ಐದು ಪ್ರತಿಶತದಷ್ಟು ಕ್ಯಾನ್ಸರ್ ಆನುವಂಶಿಕವಾಗಿದ್ದರೆ, ಸುಮಾರು 95 ಪ್ರತಿಶತದಷ್ಟು ಕ್ಯಾನ್ಸರ್ ಪರಿಸರದಲ್ಲಿನ ಕಾರ್ಸಿನೋಜೆನ್‌ಗಳಿಗೆ (ಸಂಯುಕ್ತಗಳು) ಒಡ್ಡಿಕೊಳ್ಳುವುದರಿಂದ ಉಂಟಾಗುತ್ತದೆ ಎಂದು ಅವರು ಹೇಳಿದರು.


ಇದನ್ನೂ ಓದಿ: ತೂಗು ಸೇತುವೆ ಕುಸಿದು 32ಕ್ಕೂ ಹೆಚ್ಚು ಜನರು ಸಾವು, ನೂರಾರು ಮಂದಿ ನೀರುಪಾಲು!


ಅಭಿವೃದ್ಧಿಪಡಿಸಿದ ಸಾಫ್ಟ್‌ವೇರ್ ಅನ್ನು ಜಾರಿಗೆ ತರುವ ಬಗ್ಗೆ ಮಾತನಾಡಿದ ಅಹುಜಾ, "ನಮ್ಮ ಸಾಫ್ಟ್‌ವೇರ್ ಅನ್ನು ನೈಜ-ಪ್ರಪಂಚದ ಸನ್ನಿವೇಶದಲ್ಲಿ ಪರೀಕ್ಷಿಸಲು ನಾವು ಅನೇಕ ಫಾರ್ಮಾ ಕಂಪನಿಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಮೇಲಾಗಿ, IIIT-D ಯ ಸಂಶೋಧನಾ ತಂಡವು ಪ್ರಸ್ತುತ ಕಾರ್ಸಿನೋಜೆನ್‌ಗಳ ನಡುವೆ ನೇರ ಸಂಪರ್ಕವನ್ನು ಸ್ಥಾಪಿಸುವ ಕೆಲಸ ಮಾಡುತ್ತಿದೆ" ಎಂದರು.

First published: