Cheese And Health: ಆರೋಗ್ಯದ ಸಮತೋಲನ ಕಾಪಾಡುವಲ್ಲಿ ಚೀಸ್ ಯಾವ ಪ್ರಯೋಜನ ನೀಡುತ್ತದೆ?

ಆಹಾರದಲ್ಲಿ ಎಲ್ಲಾ ರೀತಿಯ ಆಹಾರಗಳ ಸಮತೋಲಿತ ಮಿಶ್ರಣ ಇದ್ದಾಗ ಸಮತೋಲನ ಕಾಪಾಡಬಹುದು ಎನ್ನುತ್ತಾರೆ ತಜ್ಞರು. ಯಾವ ವಸ್ತುಗಳ ಪದಾರ್ಥ ಸೇವನೆ ಬೇಡ ಎನ್ನುತ್ತೇವೆಯೋ ಅದರಲ್ಲಿ ಚೀಸ್ ಇರುತ್ತದೆ. ಇದು ಆರೋಗ್ಯಕ್ಕೆ ತುಂಬಾ ಮುಖ್ಯ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಆರೋಗ್ಯದ (Health) ಬಗ್ಗೆ ಕಾಳಜಿ (Care) ವಹಿಸುವ ವಿಷಯ ಬಂದಾಗ ಹೆಚ್ಚಾಗಿ ಜನರು (People) ಆಹಾರ (Food) ಮತ್ತು ಪಾನೀಯಕ್ಕೆ (Drink) ಮೊದಲ ಆದ್ಯತೆ ಮತ್ತು ಗಮನ ನೀಡುತ್ತಾರೆ. ವಿವಿಧ ರೀತಿಯ ಆಹಾರಗಳನ್ನು ನಿತ್ಯವೂ ಸೇವನೆ ಮಾಡುವುದು ಸಾಕಷ್ಟು ಆರೋಗ್ಯ ಪ್ರಯೋಜನ ತಂದು ಕೊಡುತ್ತದೆ. ಕೆಲವೊಮ್ಮೆ ಒಂದು ಊಟ ಮಾಡುವುದು ಬಿಟ್ಟು ಬಿಡುತ್ತೇವೆ. ಕೆಲವೊಮ್ಮೆ ಸಿಹಿ ಮತ್ತು ಉಪ್ಪು ತಿನ್ನುವುದನ್ನು ಕಂಟ್ರೋಲ್ ಮಾಡುತ್ತೇವೆ. ಆಹಾರ ಪದ್ಧತಿಯ ಅಗತ್ಯತೆ ಮತ್ತು ತಮ್ಮ ದೇಹದ ಅಗತ್ಯವನ್ನು ಅರ್ಥ ಮಾಡಿಕೊಳ್ಳದೆ, ಹೆಚ್ಚಿನ ಜನರು ಆಹಾರದಲ್ಲಿ ದೊಡ್ಡ ಬದಲಾವಣೆ ಮಾಡುತ್ತಾರೆ. ನಮ್ಮ ಆಹಾರದಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ.

    ಮತ್ತು ಆಹಾರದಲ್ಲಿ ಎಲ್ಲಾ ರೀತಿಯ ಆಹಾರಗಳ ಸಮತೋಲಿತ ಮಿಶ್ರಣ ಇದ್ದಾಗ ಸಮತೋಲನ ಕಾಪಾಡಬಹುದು ಎನ್ನುತ್ತಾರೆ ತಜ್ಞರು. ಯಾವ ವಸ್ತುಗಳ ಪದಾರ್ಥ ಸೇವನೆ ಬೇಡ ಎನ್ನುತ್ತೇವೆಯೋ ಅದರಲ್ಲಿ ಚೀಸ್ ಇರುತ್ತದೆ. ಇದು ಆರೋಗ್ಯಕ್ಕೆ ತುಂಬಾ ಮುಖ್ಯ.

    ಹಲ್ಲು ಸ್ವಚ್ಛಗೊಳಿಸುವ ಅಗತ್ಯವಿದೆ

    ಚೀಸ್ ಪದಾರ್ಥ ಸೇವನೆಯ ನಂತರ ಕೆಲವೊಮ್ಮೆ ಚೀಸ್ ಹಲ್ಲುಗಳಲ್ಲಿ ಅಥವಾ ಕಡ್ಡಿಗಳಲ್ಲಿ ಸಿಕ್ಕಿಹಾಕಿಕೊಂಡಂತೆ ಭಾಸವಾಗುತ್ತದೆ. ಹಲ್ಲು ಮತ್ತು ಒಸಡುಗಳಲ್ಲಿ ಸೋಂಕು ಇಡೀ ದೇಹವನ್ನು ತೊಂದರೆಗೀಡು ಮಾಡುತ್ತದೆ.

    ಇದನ್ನೂ ಓದಿ: ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಲು ಮುಖ್ಯ ಕಾರಣಗಳು ಮತ್ತು ಸಮಸ್ಯೆಗಳು ಯಾವವು?

    ಹಾಗಾಗಿ ಏನನ್ನಾದರೂ ತಿಂದ ನಂತರ ನೀರಿನಿಂದ ಬಾಯಿ ಮುಕ್ಕಳಿಸುವುದು ಮುಖ್ಯ. ಬ್ರಷ್ ಕೂಡ ಮಾಡಬಹುದು. ಇದು ಚೀಸ್ ಅಥವಾ ಚೀಸೀ ಪದಾರ್ಥಗಳಿಗೆ ಮಾತ್ರವಲ್ಲ. ಇದು ಮೌಖಿಕ ನೈರ್ಮಲ್ಯದ ಮೂಲ ಮಂತ್ರ.

    ಚೀಸ್‌ನಲ್ಲಿರುವ ಪೋಷಕಾಂಶಗಳು

    ಆರೋಗ್ಯಕರ ಹಲ್ಲು ಕಾಪಾಡಿಕೊಳ್ಳಲು ಪೋಷಕಾಂಶಗಳು ಬೇಕು. ಈ ಪೋಷಕಾಂಶಗಳಲ್ಲಿ ಕ್ಯಾಲ್ಸಿಯಂ ಪ್ರಮುಖ ಅಂಶವಾಗಿದೆ. ಡೈರಿ ಉತ್ಪನ್ನಗಳು ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ಹೊಂದಿವೆ. ಮತ್ತು ಚೀಸ್ ಅನ್ನು ಸಹ ಹೊಂದಿರುತ್ತವೆ. ಚೀಸ್ ಕ್ಯಾಲ್ಸಿಯಂ ಹೊಂದಿದೆ. ಇದು ಹಲ್ಲು ಮತ್ತು ಮೂಳೆಗಳನ್ನು ಬಲಪಡಿಸುತ್ತದೆ. ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಎರಡರ ಪೂರೈಕೆ ಆಗಿದೆ.

    ಅನೇಕ ಡೈರಿ ಉತ್ಪನ್ನಗಳಿಗಿಂತ ಚೀಸ್‌ನ pH ಮಟ್ಟವು ಹಲ್ಲುಗಳಿಗೆ ಉತ್ತಮವಾಗಿದೆ. ಚೀಸ್ ಹಲ್ಲುಗಳನ್ನು ಸುರಕ್ಷಿತವಾಗಿರಿಸಿಕೊಂಡು ಪೌಷ್ಟಿಕಾಂಶ ನೀಡುತ್ತದೆ. ಇದು ಮಕ್ಕಳಿಗೆ ಉತ್ತಮ ಆಯ್ಕೆ. ಚೀಸ್ ಮಾತ್ರ ತಿನ್ನಲು ಅಥವಾ ಬಹಳಷ್ಟು ಚೀಸ್ ತಿನ್ನಲು ತಪ್ಪಿಸಬೇಕು.

    ಸರಿಯಾದ ಪ್ರಮಾಣದಲ್ಲಿ ಚೀಸ್ ತಿನ್ನಬೇಕು

    ಬೊಜ್ಜು, ಹೃದ್ರೋಗ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲದಕ್ಕೂ ಚೀಸ್ ತಿನ್ನುವುದು ಬೇಡ ಎನ್ನುತ್ತಾರೆ. ಪ್ರತಿದಿನ ಸಣ್ಣ ಪ್ರಮಾಣದ ಚೀಸ್ ಸೇವಿಸುವುದು ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎಂದು ಸಂಶೋಧನಾ ಅಧ್ಯಯನಗಳು ಹೇಳಿವೆ. ಇದು ಹೃದಯರಕ್ತನಾಳದ ಕಾಯಿಲೆಗಳ ಅಪಾಯ ಕಡಿಮೆ ಮಾಡುತ್ತದೆ.

    ಸ್ಯಾಚುರೇಟೆಡ್ ಕೊಬ್ಬು ಸಾಮಾನ್ಯ ಚೀಸ್ನಲ್ಲಿ ಹೆಚ್ಚಾಗಿರುತ್ತದೆ. ಇದು ರಕ್ತದೊತ್ತಡದ ಮಟ್ಟ ಕಡಿಮೆ ಮಾಡುತ್ತದೆ.

    ಸರಿಯಾದ ಆಹಾರ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು

    ಗೂಯಿ ಅಥವಾ ಹೌಡಾ (ಡಚ್ ಪದ) ಚೀಸ್ ಅಥವಾ ಚೆಡ್ಡಾರ್ ಚೀಸ್ ಅನೇಕ ವಿಧಗಳಲ್ಲಿ ಉತ್ತಮ ಆಯ್ಕೆಯಾಗಿದೆ. ತಿರುಳಿನಲ್ಲಿ ಲ್ಯಾಕ್ಟೋಬಾಸಿಲ್ಲಿಯಂತಹ ಕೆಲವು ಉತ್ತಮ ಬ್ಯಾಕ್ಟೀರಿಯಾಗಳಿವೆ. ಇದು ಉತ್ತಮ ಕರುಳಿನ ಆರೋಗ್ಯ ಉತ್ತೇಜಿಸಲು ಮತ್ತು ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

    ಚೆಡ್ಡಾರ್ ಚೀಸ್ ವಿಟಮಿನ್ ಬಿ 12 ಅನ್ನು ಒದಗಿಸುತ್ತದೆ. ಇದು ಕೆಂಪು ರಕ್ತ ಕಣಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ ಮತ್ತು ಇತರ ಪ್ರಮುಖ ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳನ್ನು ನಿರ್ವಹಿಸುತ್ತದೆ.

    ಮಕ್ಕಳು, ಹದಿಹರೆಯದವರು ಮತ್ತು ಗರ್ಭಿಣಿಯರಿಗೆ ಚೀಸ್ ಪ್ರಯೋಜನಕಾರಿ

    ಕೊಬ್ಬುಗಳು ಮಿತವಾಗಿ ಸೇವಿಸಿದಾಗ, ದೇಹವು ಆರೋಗ್ಯಕರವಾಗಿರುತ್ತದೆ. ಪ್ರೋಟೀನ್, ಕ್ಯಾಲ್ಸಿಯಂ ಮತ್ತು ವಿಟಮಿನ್‌ಗಳ ಜೊತೆಗೆ, ಚೀಸ್ ದೇಹಕ್ಕೆ ಅಗತ್ಯವಾದ ಕೊಬ್ಬನ್ನು ಪೂರೈಸುತ್ತದೆ. ಸಣ್ಣ ಪ್ರಮಾಣದಲ್ಲಿ ಚೀಸ್ ತಿನ್ನುವುದು ಉತ್ತಮ ಆಯ್ಕೆ.

    ಇದನ್ನೂ ಓದಿ: ಹೊಟ್ಟೆಯ ಆಮ್ಲ ಸಮಸ್ಯೆಯ ಲಕ್ಷಣಗಳು ಮತ್ತು ನಿವಾರಣೆಗೆ ಮನೆಮದ್ದು ಯಾವವು?

    ಮಕ್ಕಳು, ಹದಿಹರೆಯದವರು, ಯುವಕರು ಮತ್ತು ಗರ್ಭಿಣಿಯರಿಗೆ ಚೀಸ್ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಬೆಳಗಿನ ಉಪಾಹಾರದಲ್ಲಿ ಅಥವಾ ಸಲಾಡ್, ತರಕಾರಿಗಳು, ಪರೋಟಾ ಇತ್ಯಾದಿಗಳೊಂದಿಗೆ ತಿನ್ನಿರಿ.
    Published by:renukadariyannavar
    First published: