Health: ನಾಲಗೆ ನೋಡಿದ್ರೆ ಖಾಯಿಲೆ ತಿಳಿಯುತ್ತೆ, ನೀವೂ ತಿಳಿದುಕೊಳ್ಳಬಹುದು!

Know Your Health by Color of the Tongue: ನಮ್ಮ ನಾಲಿಗೆ ನಮ್ಮ ದೇಹದ ಆಂತರಿಕ ಆರೋಗ್ಯವನ್ನು(Internal Health) ಅದರ ಬಣ್ಣ, ನೋಟ, ವಿನ್ಯಾಸ ಮತ್ತು ಅದು ತಿಳಿಸುವ ಸಂವೇದನೆಯ ಮೇಲೆ ಪ್ರಕಟಪಡಿಸುತ್ತದೆ. ನಿಮ್ಮ ಆರೋಗ್ಯದ ಕುರಿತು ನಾಲಿಗೆ ಬಹಳಷ್ಟು ವಿಷಯಗಳನ್ನು ತಿಳಿಸುತ್ತದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
Health Check: ನಿಮಗೆ ನೆನಪಿರಬಹುದು ಸಣ್ಣವರಾಗಿದ್ದಾಗ ವೈದ್ಯರು ನಾಲಿಗೆ ಹೊರಚಾಚಲು (Stick your Tongue) ಹೇಳಿ ನಮ್ಮ ಅನಾರೋಗ್ಯದ ಕಾರಣ ಬಹಿರಂಗಪಡಿಸುತ್ತಿದ್ದರು. ಹಾಗಿದ್ದರೆ ನಾಲಿಗೆ ನೋಡಿ ನಮ್ಮ ಕಾಯಿಲೆಯನ್ನು (Sickness) ವೈದ್ಯರು ಹೇಗೆ ಪತ್ತೆಮಾಡುತ್ತಿದ್ದರು ಎಂಬುದು ಸೋಜಿಗಕ್ಕೆ ಕಾರಣವಾಗಿರುವ ಅಂಶವೂ ಹೌದು. ನಮ್ಮ ನಾಲಿಗೆ ನಮ್ಮ ದೇಹದ ಆಂತರಿಕ ಆರೋಗ್ಯವನ್ನು(Internal Health) ಅದರ ಬಣ್ಣ, ನೋಟ, ವಿನ್ಯಾಸ ಮತ್ತು ಅದು ತಿಳಿಸುವ ಸಂವೇದನೆಯ ಮೇಲೆ ಪ್ರಕಟಪಡಿಸುತ್ತದೆ. ನಿಮ್ಮ ಆಂತರಿಕ ಆರೋಗ್ಯದ ಕುರಿತು ನಾಲಿಗೆ ಬಹಳಷ್ಟು ವಿಷಯಗಳನ್ನು ತಿಳಿಸುತ್ತದೆ. USAಯ ಕ್ಲೀವ್ಲ್ಯಾಂಡ್ ಕ್ಲಿನಿಕ್ ಕುಟುಂಬ ವೈದ್ಯ ಡೇನಿಯಲ್ ಅಲನ್ ಹೇಳುವಂತೆ ಆರೋಗ್ಯವಂತ ನಾಲಿಗೆ ಗುಲಾಬಿ ಬಣ್ಣದಲ್ಲಿದ್ದು (Pink Color) ಸಣ್ಣಗಂಟುಗಳಿಂದ ಕೂಡಿರಬೇಕು ಎಂದಾಗಿದೆ. ನಿಮ್ಮ ನಾಲಿಗೆ ಸಾಮಾನ್ಯವಾಗಿ ಗೋಚರಿಸುವುದಕ್ಕಿಂತ ಪ್ರತ್ಯೇಕವಾಗಿ ಕಂಡರೆ ಅಥವಾ ನಾಲಿಗೆಯಲ್ಲಿ ಯಾವುದೇ ನೋವು (Pain) ಕಂಡುಬಂದರೆ ವೈದ್ಯರನ್ನು ಕಾಣಬೇಕಾಗುತ್ತದೆ. ಈ ಕುರಿತು ವಿಷದವಾಗಿ ಅರಿತುಕೊಳ್ಳೋಣ.

ನಾಲಿಗೆಯ ಮೇಲೆ ಬಿಳಿ ಲೇಪನ ಅಥವಾ ಬಿಳಿ ಚುಕ್ಕೆಗಳು:

ಬಿಳಿ ಬಣ್ಣದ ಲೇಪನ ಅಥವಾ ನಾಲಿಗೆಯ ಮೇಲೆ ಬಿಳಿ ಚುಕ್ಕೆಗಳು ಯೀಸ್ಟ್ ಸೋಂಕಾಗಿರುವ ಬಾಯಿಯೊಳಗೆ ನಿರ್ಮಾಣವಾಗುವ ಲ್ಯುಕೋಪ್ಲಾಕಿಯಾ ಕೋಶಗಳ ಸೂಚನೆಯಾಗಿರಬಹುದು. ಬಾಯಿಯಲ್ಲಿ ಈ ಕೋಶಗಳ ಬೆಳವಣಿಗೆ ಹೆಚ್ಚಿರುತ್ತದೆ. ನಾಲಿಗೆಯ ಮೇಲೆ ಬಿಳಿ ಬಣ್ಣದ ಗೆರೆಗಳು ಉಂಟಾಗುವುದು ಈ ಕೋಶಗಳ ರಚನೆಯಿಂದಾಗಿ. ಬಾಯಿಯ ಸೋಂಕು ಹೆಚ್ಚಾಗಿ ಶಿಶುಗಳಲ್ಲಿ ಹಾಗೂ ವಯಸ್ಸಾದವರಲ್ಲಿ ಕಂಡುಬರುತ್ತದೆ.

ಕೃತಕ ದಂತ ಅಳವಡಿಸಿಕೊಂಡವರು ಹಾಗೂ ದುರ್ಬಲ ರೋಗನಿರೋಧಕ ಶಕ್ತಿ ಇರುವವರಲ್ಲಿ ಈ ಸೋಂಕು ತೀವ್ರವಾಗಿರುತ್ತದೆ. ತಂಬಾಕು ಉತ್ಪನ್ನಗಳನ್ನು ಸೇವಿಸುವವರಲ್ಲಿ ಬಾಯಿಯ ಸೋಂಕು ಅತಿಯಾಗಿರುತ್ತದೆ. ಕ್ಯಾನ್ಸರ್ ಪೂರ್ವ ಸೂಚಕವಾಗಿ ಕೂಡ ಈ ಸೋಂಕು ಕಂಡುಬರುವ ಸಾಧ್ಯತೆ ಇರುತ್ತದೆ. ಒಮ್ಮೊಮ್ಮೆ ಇದು ತನ್ನಷ್ಟಕ್ಕೆ ಗುಣವಾಗುವ ಸಾಧ್ಯತೆಯೂ ಇರುತ್ತದೆ ಎಂಬುದಾಗಿ ಡೇನಿಯಲ್ ಅಲನ್ ಅಭಿಪ್ರಾಯಿಸಿದ್ದಾರೆ.

ಕೆಂಪು ವರ್ಣದ ನಾಲಿಗೆ

ನಾಲಿಗೆಯು ಕಡುಗೆಂಪು ಬಣ್ಣಕ್ಕೆ ಮಾರ್ಪಟ್ಟಿದ್ದರೆ ವಿಟಮಿನ್ ಕೊರತೆಯ ಸಂಕೇತ ಎಂಬುದಾಗಿ ಬಣ್ಣಿಸಬಹುದಾಗಿದೆ. ಇದರಿಂದ ನಾಲಿಗೆಯ ಮೇಲೆ ಕೆಂಪು ಕಲೆಗಳ ನಕ್ಷೆಗಳಂತಹ ಮಾದರಿ ರೂಪುಗೊಳ್ಳುತ್ತದೆ. ಸ್ಕಾರ್ಲೆಟ್ ಜ್ವರದ ಲಕ್ಷಣದಿಂದ ಕೂಡ ನಾಲಿಗೆ ಕೆಂಪಾಗಿ ಮಾರ್ಪಡುತ್ತದೆ. ವಿಟಮಿನ್ ಕೊರತೆಯಿಂದ ಉಂಟಾಗುವ ಕವಾಸಕಿ ಕಾಯಿಲೆಗೂ ಕೆಂಪು ವರ್ಣ ಕಾರಣವಾಗಿದೆ.

ಇದನ್ನೂ ಓದಿ: ನೀವು ನಾಲಿಗೆ ಕ್ಲೀನ್ ಮಾಡುತ್ತಿಲ್ಲವೇ? ಹಾಗಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ..!

ಇದನ್ನು ಸರಳ ರಕ್ತಪರೀಕ್ಷೆಯ ಮೂಲಕ ಪತ್ತೆಹಚ್ಚಬಹುದು ಎಂದು ಅಲನ್ ಹೇಳುತ್ತಾರೆ. ನಾಲಿಗೆಯ ಮೇಲೆ ಕಂಡುಬರುವ ತೇಪೆಗಳ ಸುತ್ತ ಬಿಳಿ ಅಂಚನ್ನು ಒಳಗೊಂಡಿದ್ದು ಒಮ್ಮೊಮ್ಮೆ ಇವು ಸ್ಥಳ ಬದಲಾಯಿಸುತ್ತವೆ. ನಾಲಿಗೆ ಕೆಂಪು ವರ್ಣದಲ್ಲಿದ್ದು ಜ್ವರದ ಅನುಭವವಾಗುತ್ತಿದ್ದರೆ ವೈದ್ಯರನ್ನು ಕಾಣಬೇಕು. ಮಕ್ಕಳಲ್ಲಿ ಕವಾಸಕಿ ಕಾಯಿಲೆ ಉಂಟಾಗಿದ್ದರೂ ನಾಲಿಗೆ ಕೆಂಬಣ್ಣಕ್ಕೆ ತಿರುಗುತ್ತದೆ ಎಂಬುದು ಅಲನ್ ಹೇಳಿಕೆಯಾಗಿದೆ.

ನೋಯುತ್ತಿರುವ ಅಥವಾ ಗಡುಸಾದ ನಾಲಿಗೆ

ನಿಮ್ಮ ನಾಲಿಗೆ ಗಡುಸಾಗಿದ್ದು ನೋವಿನ ಅನುಭವ ಉಂಟು ಮಾಡುತ್ತಿದ್ದರೆ ಒಮ್ಮೊಮ್ಮೆ ನೀವಾಗಿಯೇ ಹಲ್ಲುಗಳಿಂದ ಕಚ್ಚಿಕೊಂಡಿದ್ದರ ಪರಿಣಾಮವಾಗಿರಬಹುದು. ಇಲ್ಲದಿದ್ದರೆ ಅತಿಯಾದ ಧೂಮಪಾನದಿಂದ ಉಂಟಾದ ನೋವಾಗಿರುತ್ತದೆ. ಒತ್ತಡ ಹಾಗೂ ಇತರ ಅಂಶಗಳಿಂದ ಉತ್ಪಾದನೆಯಾಗುವ ಬಾಯಿ ಹುಣ್ಣು 2 ವಾರಗಳಲ್ಲಿ ಚಿಕಿತ್ಸೆ ಇಲ್ಲದೆಯೇ ಗುಣವಾಗುತ್ತದೆ. ಒಮ್ಮೊಮ್ಮೆ 2 ವಾರಗಳಲ್ಲಿ ಗುಣವಾಗದೇ ನಾಲಿಗೆಯ ಮೇಲೆ ಗಡ್ಡೆ ಅಥವಾ ಹುಣ್ಣು ಹಾಗೆಯೇ ಇದ್ದಲ್ಲಿ ಇದು ಕ್ಯಾನ್ಸರ್ ಲಕ್ಷಣಗಳಾಗಿರಬಹುದು. ಹೆಚ್ಚಿನ ಬಾಯಿಯ ಕ್ಯಾನ್ಸರ್ ಯಾವುದೇ ನೋವಿನ ಅನುಭವ ಹಾಗೂ ರೋಗ ಲಕ್ಷಣಗಳನ್ನುಂಟು ಮಾಡುವುದಿಲ್ಲ. ಹಾಗಾಗಿ ವೈದ್ಯರೊಂದಿಗೆ ಸಮಾಲೋಚಿಸುವುದು ಉತ್ತಮ ಎಂಬುದು ಅಲನ್ ವಾದವಾಗಿದೆ.

ಕಪ್ಪು ವರ್ಣದ ಹಾಗೂ ಗುಳ್ಳೆಗಳಿರುವ ನಾಲಿಗೆ

ಕೂದಲಿನ ರೀತಿಯಲ್ಲೇ ನಿಮ್ಮ ನಾಲಿಗೆಯ ಮೇಲೆ ಗುಳ್ಳೆಗಳು ಬೆಳೆಯುತ್ತವೆ. ಇದು ನಿಮ್ಮ ಜೀವಿತಾವಧಿಯವರೆಗೆ ಕಂಡುಬರುತ್ತದೆ. ಇನ್ನು ಕೆಲವರಲ್ಲಿ ಈ ಗುಳ್ಳೆಗಳು ಉದ್ದ ಕೂದಲಿನಿಂದ ಕೂಡಿರುತ್ತದೆ. ಇದರಿಂದ ಬ್ಯಾಕ್ಟೀರಿಯಾಗಳು ನೆಲೆಗೊಳ್ಳುವ ಸಾಧ್ಯತೆ ಇರುತ್ತದೆ. ನಾಲಿಗೆಯ ಮೇಲೆ ಹೆಚ್ಚಾದ ಗುಳ್ಳೆಗಳು ಕೂದಲಿನ ರಚನೆಯಂತೆ ಕಂಡುಬರುತ್ತವೆ.

ಇದನ್ನೂ ಓದಿ: Black Spots: ನಾಲಿಗೆ ಮೇಲಿನ ಕಪ್ಪು ಕಲೆಯನ್ನ ಹೋಗಲಾಡಿಸಬೇಕಾ? ಹಾಗಿದ್ರೆ ಇಲ್ಲಿದೆ ಟಿಪ್ಸ್

ಇದು ಗಂಭೀರ ಹಾಗೂ ಚಿಂತಾಜನಕ ಸ್ಥಿತಿಯಲ್ಲದಿದ್ದರೂ ಮೌಖಿಕ ನೈರ್ಮಲ್ಯದಿಂದ ಗುಣಪಡಿಸಬಹುದಾಗಿದೆ. ಅಲನ್ ಹೇಳುವಂತೆ ಮಧುಮೇಹ ರೋಗಿಗಳು, ಆ್ಯಂಟಿಬಯೋಟಿಕ್ ಸೇವಿಸುವವರು ಅಥವಾ ಕೀಮೋಥೆರಪಿ ಚಿಕಿತ್ಸೆಗೆ ಒಳಗಾದವರಲ್ಲಿ ಈ ರೀತಿಯ ಕೂದಲ ಬೆಳವಣಿಗೆ ಕಂಡುಬರುತ್ತದೆ. ಈ ಸಮಯದಲ್ಲಿ ಶೀಘ್ರ ಆರೈಕೆ ಹಾಗೂ ವೈದ್ಯಕೀಯ ಸಲಹೆ ಅನುಸರಿಸಬೇಕು ಎಂದು ವೈದ್ಯರು ತಿಳಿಸುತ್ತಾರೆ.

ನಾಲಿಗೆಯ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು?

ವೈದ್ಯರಾದ ಅಲನ್ ತಿಳಿಸುವಂತೆ ಪ್ರತಿನಿತ್ಯವೂ ನಾಲಿಗೆಯ ಪರಿಶೀಲನೆ ಮಾಡಿಕೊಳ್ಳಬೇಕು ಎಂದಾಗಿದೆ. ನಿಮ್ಮ ಹಲ್ಲು ಹಾಗೂ ನಾಲಿಗೆ ಸ್ವಚ್ಛಗೊಳಿಸುವ ಸಮಯದಲ್ಲಿ ನಾಲಿಗೆ ಪರೀಕ್ಷಿಸಿ ಎಂದವರು ಕಿವಿಮಾತು ಹೇಳುತ್ತಾರೆ
ಈ ಎಲ್ಲಾ ಲಕ್ಷಣಗಳು ಕಂಡುಬಂದಾಗ ಇಲ್ಲವೇ ನಾಲಿಗೆಯ ಬಣ್ಣ ಬದಲಾದಾಗ ಭಯಗೊಳ್ಳದೆಯೇ ವೈದ್ಯರೊಂದಿಗೆ ಸಮಾಲೋಚಿಸಬೇಕು ಎಂದು ಅಲನ್ ಹೇಳುತ್ತಾರೆ
ಬಣ್ಣದ ಬದಲಾವಣೆ, ಗಂಟುಗಳು, ಹುಣ್ಣು ಅಥವಾ ನೋವನ್ನು ವೈದ್ಯರು ಪರಿಶೀಲನೆ ನಡೆಸಬೇಕು.
Published by:Soumya KN
First published: