ಹಾಲಿವುಡ್‌ನಲ್ಲೂ ಮಿಂಚುತ್ತಿರುವ ಭಾರತೀಯ ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್ ಈಗ ಕೇವಲ ದೇಸಿ ಗರ್ಲ್ ಆಗಿ ಉಳಿದಿಲ್ಲ. ತಮ್ಮ ಪ್ರತಿಭೆಯಿಂದ ವಿಶ್ವಾದ್ಯಂತ ಹೆಸರುವಾಸಿಯಾಗಿದ್ದಾರೆ ಪ್ರಿಯಾಂಕಾ ಚೋಪ್ರಾ. ಪತಿ ಮತ್ತು ಜನಪ್ರಿಯ ಗಾಯಕ-ನಟ ನಿಕ್ ಜೋನಸ್ ಅವರೊಂದಿಗಿನ ಕೆಮಿಸ್ಟ್ರಿ ಹಾಗೂ ನಟಿಯ ಅದ್ಭುತ ಫ್ಯಾಷನ್ ಪ್ರಜ್ಞೆ ಈಗಲೂ ಅಭಿಮಾನಿಗಳಿಗೆ ಹಾಟ್ ಫೆವರಿಟ್. ಅಲ್ಲದೆ, ಅನೇಕ ಯುವತಿಯರು, ಮಹಿಳೆಯರಿಗೂ ಅಚ್ಚುಮೆಚ್ಚು. ಸ್ಟೈಲ್ ಮೂಲಕವೇ ಸದಾ ಸುದ್ದಿಯಲ್ಲಿರುತ್ತಾರೆ. ತಮ್ಮ ಫ್ಯಾಷನ್ ಪ್ರಜ್ಞೆ ಬಗ್ಗೆ ಮಾತನಾಡಿರುವ ಖ್ಯಾತ ನಟಿ ಪ್ರಿಯಾಂಕಾ, “ಮಾನವರಾಗಿ ನಾವು ವಿಕಸನಗೊಳ್ಳುತ್ತೇವೆ. ಇದೇ ರೀತಿ ನನ್ನ ಫ್ಯಾಷನ್ ಪ್ರಜ್ಞೆಯು ಪ್ರತಿ ಎರಡು ವರ್ಷಗಳಿಗೊಮ್ಮೆ ಬದಲಾಗಿದೆ, ನಾನು ಇಷ್ಟಪಡುವುದರ ಬಗ್ಗೆ ಹೆಚ್ಚು ತಿಳಿದುಕೊಳ್ಳುತ್ತೇನೆ. ನಾನು ಯುಎಸ್‌ಗೆ ಬಂದಾಗಿನಿಂದ ಬದಲಾದ ಒಂದು ವಿಷಯವೆಂದರೆ ನನ್ನ ಪೂರ್ವ ಮತ್ತು ನನ್ನ ಪಾಶ್ಚಿಮಾತ್ಯ ಸಂವೇದನೆಗಳನ್ನು ಬೆರೆಸುವ ಮತ್ತು ಹೊಂದಿಸುವ ವಿಷಯದಲ್ಲಿ ನಾನು ಸ್ವಲ್ಪ ಹೆಚ್ಚು ಅಡ್ವೆಂಚರಸ್ ಆಗಿದ್ದೇನೆ'' ಎಂದೂ ಹೇಳಿಕೊಂಡಿದ್ದಾರೆ.
ತಮ್ಮ ಉಡುಪು ಅಥವಾ ಔಟ್‌ಫಿಟ್‌ಗಳ ಮೂಲಕ ನಮಗೆ ಪ್ರಮುಖ ಸ್ಟೈಲ್ ಗುರಿಗಳನ್ನು ನೀಡಿರುವ ನಟಿ, ತಮ್ಮ ಸೌಂಧರ್ಯದ ಮೂಲಕವೂ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ. ನಿಯತಕಾಲಿಕೆಗಳ ಕವರ್ ಶೂಟ್‌ನಿಂದ ಹಿಡಿದು ನಟಿಯ ಟ್ರೆಂಡಿ ಹಾಲಿಡೇ ಶೈಲಿಯವರೆಗೆ, ಎಲ್ಲದರಲ್ಲೂ ಸದಾ ಮಾಧ್ಯಮಗಳಲ್ಲಿ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿರುತ್ತಾರೆ.
ಇದೇ ರೀತಿ ನಟಿಯ ನೆಚ್ಚಿನ ಡಿಸೈನರ್ ಬ್ಯಾಗ್‌ಗಳೂ ಸದಾ ಸುದ್ದಿಯಲ್ಲಿರುತ್ತದೆ. ಪ್ರಿಯಾಂಕಾ ಚೋಪ್ರಾ ಜೋನಸ್ ಅವರ ಹಲವು ಬ್ಯಾಗ್‌ಗಳ ಬಗ್ಗೆ ಹಾಗೂ ಅವುಗಳ ಬೆಲೆಯ ಬಗ್ಗೆ ನೀವು ಓದಿದರೆ ನಿಮಗೆ ಆಶ್ಚರ್ಯ ಉಂಟಾಗುವುದಂತೂ ಖಂಡಿತ. ಆ ಬ್ಯಾಗ್‌ಗಳತ್ತ ಒಂದು ನೋಟ ಇಲ್ಲಿದೆ...
ಪಚ್ಚೆ ಹಸಿರು ಬಣ್ಣದ ಮಿನಿ ಬಲ್ಗರಿ ಬ್ಯಾಗ್..!
ಪ್ರಿಯಾಂಕಾ ಚೋಪ್ರಾ ಬಳಿ ಇರುವ ಈ ಬಲ್ಗರಿ ಬ್ಯಾಗ್‌ಗೆ ಬರೋಬ್ಬರಿ 1,980 ಯುರೋ ಅಂದರೆ ಸುಮಾರು 1.58 ಲಕ್ಷ ರೂಪಾಯಿಗಳಷ್ಟು ಖರ್ಚಾಗುತ್ತದೆ.
ಪ್ರಿಯಾಂಕಾ ಚೋಪ್ರಾ ಅವರ ಸ್ಲಿಂಗ್ ಬ್ಯಾಗ್‌ನ ಬೆಲೆ ಎಷ್ಟು ಗೊತ್ತಾ..?
ಬಾಲಿವುಡ್, ಹಾಲಿವುಡ್ ದಿವಾ ಪ್ರಿಯಾಂಕಾ ಬಳಿ ಇರುವ ಫೆಂಡಿ ಸ್ಲಿಂಗ್ ಬ್ಯಾಗ್‌ನ ಮೌಲ್ಯ 3,190 ಡಾಲರ್ ಅಂದರೆ ಭಾರತೀಯ ರೂಪಾಯಿಯಲ್ಲಿ ಮೌಲ್ಯ 2,23,953.95 ಲಕ್ಷ.
ಪ್ರಿಯಾಂಕಾಗೆ ವೈಎಸ್ಎಲ್ ಬ್ಯಾಗ್‌ಗಳ ಮೇಲೆ ಪ್ರೀತಿ..!
ಸೇಂಟ್ ಲಾರೆಂಟ್ ಮೋನೋಗ್ರಾಮ್ ಲೌಲೌ ಭುಜದ ಬ್ಯಾಗ್ ಅನ್ನೂ ಸಹ ನಟಿ ಹೊಂದಿದ್ದಾಳೆ. ಇದರ ಬೆಲೆ ಎಷ್ಟು ಅಂತೀರಾ..? ಇದೂ ಕೂಡ 1 ಲಕ್ಷಕ್ಕೂ ಹೆಚ್ಚು ಅಂದರೆ 1,23,000 ಲಕ್ಷ ಮೌಲ್ಯ.
ಇದನ್ನೂ ಓದಿ: ಮಾಯಾವತಿ ಬಗ್ಗೆ ಕೆಟ್ಟದಾಗಿ ಜೋಕ್ ಮಾಡಿ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾದ ನಟ ರಣದೀಪ್ ಹೂಡಾ
ಗುಸ್ಸಿ ಬ್ಯಾಗ್‌ಗಳ ಮೇಲೆ ಪಿಗ್ಗಿ ಚಾಪ್ಸ್‌ಗೆ ಲವ್..!
ನಟಿಯ ಬಳಿ ಗುಸ್ಸಿ ಎಂಬ್ರಾಯ್ಡರ್ಡ್ ಜಿಜಿ ಸುಪ್ರೀಂ ಟೋಟೆ ಬ್ಯಾಗ್ ಸಹ ಇದ್ದು, ಈ ಬ್ಯಾಗ್ ಧರಿಸಿ ಮಿಂಚಿರುವುದನ್ನು ನೋಡಿರಬಹುದು. ಇದು ಸಹ ದುಬಾರಿ ಬೆಲೆಯ ಬ್ಯಾಗ್ ಎಂದು ತಿಳಿದುಬಂದಿದೆ.
ಪರ್ಫ್ಯೂಮ್‌ಗೂ ಇದೆ ಬ್ಯಾಗ್..!
ದೋಸ್ತಾನಾ ಚಿತ್ರನಟಿ ತನ್ನ ನೆಚ್ಚಿನ ಬ್ಯಾಗ್ ಬ್ರಾಂಡ್‌ಗಳಲ್ಲಿ ಒಂದಾದ ಸ್ಪಷ್ಟವಾದ ಛಾನೆಲ್ ಪರ್ಫ್ಯೂಮ್ ಬ್ಯಾಗ್ ಅನ್ನು ಹೊಂದಿದ್ದಾಳೆ. ಈ ಬ್ಯಾಗ್ ಸಹ ಸಿಕ್ಕಾಪಟ್ಟೆ ದುಬಾರಿಯಾಗಿದ್ದು, ಇದನ್ನು ನೀವು ಕೊಂಡುಕೊಳ್ಳಬೇಕಾದರೆ ನೀವು ಅದೃಷ್ಟವನ್ನೇ ಮಾಡಿರಬೇಕು ಬಿಡಿ..!
ಇದನ್ನೂ ಓದಿ: Sara Annaiah: ಹೈದರಾಬಾದಿನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಕನ್ನಡತಿ ಧಾರಾವಾಹಿ ಖ್ಯಾತಿಯ ಸಾರಾ ಅಣ್ಣಯ್ಯ
ಬಾಸ್ ಲೇಡಿಯ ಸ್ಟೈಲ್ ಸ್ಟೇಟ್‌ಮೆಂಟ್..!
ಬಾಸ್ ಲೇಡಿಯಾಗಿಯೂ ಮಿಂಚುವ ಬಾಲಿವುಡ್ ಹಾಗೂ ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರ ಗುಸ್ಸಿ ಕಸೂತಿ ಜಿಜಿ ಸುಪ್ರೀಂ ಟೋಟೆ ಬ್ಯಾಗ್‌ನ ಬೆಲೆ ಬರೋಬ್ಬರಿ 1.5-2.5 ಲಕ್ಷ ರೂ. ಮೌಲ್ಯ.
ಬಿಳಿ ಬಣ್ಣದ ಬ್ಯಾಗ್ ಅಂದ್ರೆ ಪ್ರಿಯಾಂಕಾಗೆ ಇಷ್ಟ..!
ಪ್ರಿಯಾಂಕಾ ಚೋಪ್ರಾ ಜೋನಸ್ ಬಳಿ ಪೇಟೆಂಟ್ ವೈಟ್ ಛಾನೆಲ್ ಬ್ಯಾಗ್ ಸಹ ಇದ್ದು, ಈ ಬ್ಯಾಗ್‌ನ ಹ್ಯಾಂಡಲ್ ಟ್ಯಾನ್ ಬಣ್ಣ ಹೊಂದಿದೆ. ಇನ್ನು, ಇದರ ಬೆಲೆ 3,500 ಡಾಲರ್ ಅಂದರೆ ಭಾರತೀಯ ರೂಪಾಯಿಯಲ್ಲಿ ಇದಕ್ಕೆ 2.5 ಲಕ್ಷ ರೂ. ವೆಚ್ಚವಾಗುತ್ತದೆ.
ನಟಿಯ ಬಳಿಯಿರುವ ಗಿವೆಂಚಿ ಬ್ಯಾಗ್‌ನ ಬೆಲೆ ಹೀಗಿದೆ ನೋಡಿ
ಪ್ರಿಯಾಂಕಾ ಚೋಪ್ರಾ ಅವರ ದುಬಾರಿ ಬೆಲೆಯ ಬ್ಯಾಗ್ ಸಂಗ್ರಹಗಳಲ್ಲಿ ಈ ಗಿವೆಂಚಿ ಬ್ಯಾಗ್ ಸಹ ಒಂದು. ಇದರ ಬೆಲೆ ಬರೋಬ್ಬರಿ 2,88,000 ರೂ. ಎಂದು ತಿಳಿದುಬಂದಿದೆ.
ಇದು ಬಾಲಿವುಡ್ ಹಾಗೂ ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಜೋನಸ್ ಅವರ ಕೆಲ ದುಬಾರಿ ಬ್ಯಾಗ್‌ಗಳು. ಈ ದುಬಾರಿ ಬ್ಯಾಗ್‌ಗಳ ಮೂಲಕವೂ ಸದಾ ಸುದ್ದಿಮಾಡುತ್ತಾರೆ ದೇಸಿ ಗರ್ಲ್ ಚಿತ್ರನಟಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ