ನರಮಂಡಲವು (Nervous System) ಮನುಷ್ಯನ ದೇಹದಲ್ಲಿ ಸಂಕೀರ್ಣವಾದ, ಹೆಚ್ಚು ವಿಶೇಷವಾದ ನೆಟ್‌ವರ್ಕ್ ಆಗಿದೆ. ದೃಷ್ಟಿಯಿಂದ ಹಿಡಿದು, ವಾಸನೆ (Smell) ಮತ್ತು ವಾಕಿಂಗ್‌ನಿಂದ (Walking) ಮಾತಿನವರೆಗೆ, ನಮ್ಮ ನರಮಂಡಲವು ನಮ್ಮ ಸುತ್ತಲಿನ ಪ್ರಪಂಚವನ್ನು ನಮಗೆ ಗೊತ್ತು ಮಾಡಿಸುತ್ತದೆ, ವಿವರಿಸುತ್ತದೆ ಮತ್ತು ಸಂಪರ್ಕಿಸುತ್ತದೆ. ನರವೈಜ್ಞಾನಿಕ ಕಾಯಿಲೆ ಲಕ್ಷಣಗಳು (Neurological Disorders) ಸಾಕಷ್ಟಿವೆ. ಕೆಲವು ಸಾಮಾನ್ಯ ರೋಗಲಕ್ಷಣಗಳನ್ನು ಈ ಲೇಖನದಲ್ಲಿ ಚರ್ಚಿಸಲಾಗಿದೆ. ಅಲ್ಲದೇ ಈ ಕುರಿತಂತೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕಾವೇರಿ ಆಸ್ಪತ್ರೆಯ ಡಿಎಂ (ನ್ಯೂರಾಲಜಿ), ಸಲಹೆಗಾರ ನ್ಯೂರಾಲಜಿಸ್ಟ್ ಮತ್ತು ಎಪಿಲೆಪ್ಟಾಲಜಿಸ್ಟ್ ವಿಭಾಗದ ಡಾ.ಸೋನಿಯಾ ತಾಂಬೆ ಎಂಡಿ ಅವರು ಕೆಲವು ಮಾಹಿತಿಯನ್ನು ನೀಡಿದ್ದಾರೆ.
ತಲೆನೋವು: ತಲೆನೋವು ಸಾಮಾನ್ಯ ನರವೈಜ್ಞಾನಿಕ ಸಮಸ್ಯೆಗಳಲ್ಲಿ ಒಂದಾಗಿದೆ. ಕುತ್ತಿಗೆಯ ಮೇಲಿನ ಭಾಗದ ಯಾವುದೇ ನೋವುಗಳನ್ನು ಇದಕ್ಕೆ ಸೇರಿಸಬಹುದು. ಪ್ರಾಥಮಿಕ ತಲೆನೋವಾಗಿರಬಹುದು, ಮೈಗ್ರೇನ್, ಒತ್ತಡದ ತಲೆನೋವು, ಕ್ಲಸ್ಟರ್ ತಲೆನೋವು ಅಥವಾ ದ್ವಿತೀಯ ಹಂತದ ತಲೆನೋವು, ಅಂದರೆ ಅಧಿಕ ರಕ್ತದೊತ್ತಡ, ಸೈನುಟಿಸ್, ಮಿದುಳಿನ ರಕ್ತ ಹೆಪ್ಪುಗಟ್ಟುವಿಕೆ, ಮಿದುಳಿನ ಸೋಂಕುಗಳು, ಗಾಯ, ಮಿದುಳಿನ ಗೆಡ್ಡೆಗಳು, ಅನ್ಯೂರಿಮ್‌ಗಳಿಂದ ಉಂಟಾಗುವ ತಲೆನೋವುಗಳಿಗೆ ಯಾವುದೇ ಕಾರಣಗಳು ಇಲ್ಲದಿರಬಹುದು.
ತೀವ್ರವಾದ ರೋಗಲಕ್ಷಣ ಹೊಂದಿರುವ ಮತ್ತು ನಿರಂತರವಾದ ಹೊಸ ರೀತಿಯ ತಲೆನೋವುಗಳಿಗೆ ತಕ್ಷಣದ ವೈದ್ಯಕೀಯ ಚಿಕಿತ್ಸೆ ಅಗತ್ಯವಿದೆ. ಅವುಗಳು ಜ್ವರ, ಆಲಸ್ಯ, ಎರಡು ದೃಷ್ಟಿ, ಮಂದ ದೃಷ್ಟಿ, ಕಾಯಿಲೆಗಳು, ತಲೆಯ ಗಾಯದಿಂದ ಪ್ರಾರಂಭವಾದ ತಲೆನೋವುಗಳೊಂದಿಗೆ ಸಂಬಂಧಿಸಿರಬಹುದು. ಹಠಾತ್ ಆಕ್ರಮಣದೊಂದಿಗೆ ಕಾಣಿಸಿಕೊಳ್ಳುವ ತಲೆನೋವು ಜೀವನದ ಅತ್ಯಂತ ಕೆಟ್ಟ ಅನುಭವವಾಗಿದ್ದು, ಮೆದುಳನ್ನು ಸ್ಫೋಟಿಸಿ ಜೀವಕ್ಕೆ ಅಪಾಯ ತಂದೊಡ್ಡಬಹುದು.
ನರಮಂಡಲದ ನೋವು: ನೋವು ಅಹಿತಕರ ಸಂವೇದನೆ. ನರಗಳ ಹಾನಿಯಿಂದ ನರಮಂಡಲದ ನೋವು ಕಾಣಿಸಿಕೊಳ್ಳುತ್ತದೆ. ಬೆನ್ನು ಅಥವಾ ಕತ್ತು ನೋವು, ಸ್ಪಾಂಡಿಲೋಸಿಸ್, ಮಲ್ಟಿಪಲ್ ಸ್ಕ್ಲೆರೋಸಿಸ್, ವಿವಿಧ ಬಗೆಯ ನರರೋಗದಿಂದ ನರಮಂಡಲದಲ್ಲಿ ನೋವು ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ದೀರ್ಘಕಾಲದ ನೋವು ಆಯಾಸ, ನಿದ್ರೆ, ಸ್ಮರಣೆ ಮತ್ತು ಮನಸ್ಥಿತಿಯ ಸಮಸ್ಯೆಗಳೊಂದಿಗೆ ಮಸ್ಕ್ಯುಲೋಸ್ಕೆಲಿಟಲ್ ನೋವಿನಿಂದ ಕೂಡಿದ ಕಾಯಿಲೆಯಾಗಿರುವ ಫೈಬ್ರೊಮ್ಯಾಲ್‌ಗಿಯಾದಿಂದ ಉಂಟಾಗಬಹುದು. ದೀರ್ಘಕಾಲದ ನೋವು ನಿಮ್ಮನ್ನು ದುರ್ಬಲಗೊಳಿಸಬಹುದು, ಆದ್ದರಿಂದ ಮುಂಚಿತವಾಗಿ ಕಾಯಿಲೆ ಪತ್ತೆ ಮತ್ತು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡುವುದು ಮುಖ್ಯವಾಗಿದೆ.
ತಲೆಸುತ್ತುವಿಕೆ(ವರ್ಟಿಗೊ): ತಲೆ ಸುತ್ತುವಿಕೆ ಎಂಬುದು ದೇಹ ಸುತ್ತುವಿಕೆ ಸಂವೇದನೆಯಾಗಿದೆ. ಇದು ನಿಮ್ಮನ್ನು ತುಂಬಾ ದುರ್ಬಲಗೊಳಿಸಬಹುದು. ದೇಹದಲ್ಲಿನ ಸಮತೋಲನ ವ್ಯವಸ್ಥೆಯಲ್ಲಿನ ಸಮಸ್ಯೆಗಳಿಂದ ತಲೆ ಸುತ್ತುವಿಕೆ ಉಂಟಾಗುತ್ತದೆ. ಇದನ್ನು ಬಾಹ್ಯ ವರ್ಟಿಗೊ ಮತ್ತು ಸೆಂಟ್ರಲ್ ವರ್ಟಿಗೊ ಎಂದು ವರ್ಗೀಕರಿಸಲಾಗಿದೆ. ಬಾಹ್ಯ ವರ್ಟಿಗೊ ಹಠಾತ್ ತಲೆ ತಿರುಗುವಿಕೆಯಾಗಿದ್ದು, ಅಲ್ಪಾವಧಿಯವರೆಗೆ ಇರುತ್ತದೆ. ಪುನರಾವರ್ತನೆಗೊಳ್ಳುತ್ತದೆ.
ಕಿವಿಗಳಲ್ಲಿ ಗುಂಯ್‌ಗುಡುವುದು ಅಥವಾ ಶ್ರವಣ ಸಮಸ್ಯೆಗಳಿಗೆ ಸಂಬಂಧಿಸಿದೆ. ವಾಂತಿಯೂ ಕಾಣಿಸಿಕೊಳ್ಳಬಹುದು. ಸೆಂಟ್ರಲ್ ವರ್ಟಿಗೋ ಮೆದುಳಿನಲ್ಲಿನ ಸಮಸ್ಯೆಗಳಿಂದ ಉಂಟಾಗುತ್ತದೆ. ಕೇಂದ್ರಭಾಗದಲ್ಲಿ ತಲೆತಿರುಗುವಿಕೆಯು ದೀರ್ಘಕಾಲದ ತಲೆತಿರುಗುವಿಕೆಯಾಗಿದೆ. ದೇಹದ ಸಮತೋಲನದಲ್ಲಿ ತೀವ್ರ ತೊಂದರೆ, ದೃಷ್ಟಿ ನಷ್ಟ, ದೇಹದ ಮರಗಟ್ಟುವಿಕೆ, ಕಪಾಲದ ನರಗಳ ದೌರ್ಬಲ್ಯಕ್ಕೆ ಸಂಬಂಧಿಸಿದೆ. ಹಠಾತ್ ಆಕ್ರಮಣದ ತೀವ್ರ ತಲೆತಿರುಗುವಿಕೆ ಪಾರ್ಶ್ವವಾಯುಗೆ ಕಾರಣವಾಗಬಹುದು. ಆದ್ದರಿಂದ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಮುಖ್ಯವಾಗಿದೆ.
ಸೆಳತ(ಸೀಜರ್ಸ್): ಸೆಳವು ಮೆದುಳಿನ ಕೋಶಗಳ ನಡುವಿನ ಅನಿಯಂತ್ರಿತ ವಿದ್ಯುತ್ ಚಟುವಟಿಕೆಯ ಸ್ಫೋಟವಾಗಿದ್ದು ಅದು ಸ್ನಾಯು ಅಥವಾ ಚಲನೆಗಳಲ್ಲಿನ(ಠೀವಿ, ಸೆಳೆತ ಅಥವಾ ಲಿಂಪ್‌ನೆಸ್), ನಡವಳಿಕೆಗಳು, ಸಂವೇದನೆಗಳು ಅಥವಾ ಅರಿವಿನ ಸ್ಥಿತಿಗಳ ಮೇಲೆ ತಾತ್ಕಾಲಿಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಔಷಧಿ, ಜ್ವರದಂತಹ ತೀವ್ರ ಸಮಸ್ಯೆಯಿಂದಾಗಿ ಉಂಟಾಗುವ ಒಂದೇ ಘಟನೆಯಾಗಿರಬಹುದು ಅಥವಾ ಅಪಸ್ಮಾರದಂತಹ ಪುನರಾವರ್ತಿತ ಘಟನೆಗಳಾಗಿರಬಹುದು. ಫೋಕಲ್‌ಸೀಜರ್ಸ್‌ನಂತಹ ವಿವಿಧ ರೀತಿಯ ಸೀಜರ್ಸ್‌ಗಳು ಇವೆ, ಇದರಲ್ಲಿ ಸೀಜರ್ಸ್‌ದೇಹದ ಒಂದು ಭಾಗದಲ್ಲಿ ಪ್ರಾರಂಭವಾಗುತ್ತದೆ ಅಥವಾ ಇಡೀ ದೇಹವನ್ನು ವ್ಯಾಪಿಸುತ್ತದೆ. ಇದರ ಚಿಕಿತ್ಸೆ ನಿರ್ಧರಿಸಲು ಎಲೆಕ್ಟ್ರೋಎನ್ಸೆಫಾಲೋಗ್ರಾಮ್, ಮೆದುಳಿನ MRI ಮತ್ತು ಕ್ಲಿನಿಕಲ್ ವಿವರಗಳೊಂದಿಗೆ ಮೌಲ್ಯಮಾಪನ ಅಗತ್ಯವಿದೆ.
ಪಾರ್ಶ್ವವಾಯು / ದೌರ್ಬಲ್ಯ: ಮನುಷ್ಯರಿಗೆ ಸಂಪೂರ್ಣವಾಗಿ ಕ್ರಿಯಾತ್ಮಕ ದೇಹವು ಅತ್ಯಂತ ಮುಖ್ಯವಾಗಿದೆ. ದೇಹದ ಯಾವುದೇ ಭಾಗದಲ್ಲಿ ದೌರ್ಬಲ್ಯವು ವಿನಾಶಕಾರಿ ಪರಿಣಾಮಗಳನ್ನು ಉಂಟುಮಾಡಬಹುದು. ಮುಖದ ಸ್ನಾಯುಗಳ ದೌರ್ಬಲ್ಯವನ್ನು ಫೇಶಿಯಲ್ ಪಾಲ್ಸಿ ಎಂದು ಕರೆಯಲಾಗುತ್ತದೆ. ಒಂದು ಅಂಗದ ದೌರ್ಬಲ್ಯವನ್ನು ಮೊನೊಪರೆಸಿಸ್ ಎಂದು ಕರೆಯಲಾಗುತ್ತದೆ. ದೇಹದ ಅರ್ಧದಷ್ಟು ದೌರ್ಬಲ್ಯವನ್ನು ಹೆಮಿಪರೆಸಿಸ್ ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ: Health Tips: ತಲೆನೋವಿನ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ಯಾ? ಇದಕ್ಕೆ ಪರಿಹಾರ ಇಲ್ಲಿದೆ ನೋಡಿ!
ಎರಡೂ ಕಾಲುಗಳ ದೌರ್ಬಲ್ಯವನ್ನು ಪ್ಯಾರಾಪರೆಸಿಸ್ ಎಂದು ಕರೆಯಲಾಗುತ್ತದೆ. ಹಠಾತ್ ಆಕ್ರಮಣದ ದೌರ್ಬಲ್ಯವು ಪಾರ್ಶ್ವವಾಯುವಿನ ಲಕ್ಷಣವಾಗಿದೆ ಮತ್ತು ಶಾಶ್ವತವಾಗಿ ಲಕ್ವ ಪೀಡಿತರಾಗುವುದನ್ನು ತಪ್ಪಿಸಲು ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ. ಈ ಸ್ಥಿತಿಗೆ ಇತರ ಕಾರಣಗಳೆಂದರೆ ಗೆಡ್ಡೆಗಳು, ಆಘಾತ, ALS (ಅಮಿಯೋಟ್ರೋಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್) ನಂತಹ ಕ್ಷೀಣಗೊಳ್ಳುವ ಕಾರಣಗಳು ಪೋಲಿಯೊಮೈಲಿಟಿಸ್‌ನಂತಹ ಸೋಂಕುಗಳು, ಮಯೋಸಿಟಿಸ್‌ನಂತಹ ಉರಿಯೂತದ ಅಸ್ವಸ್ಥತೆಗಳು.
ಜ್ಞಾಪಕ ಶಕ್ತಿ ಕೊರತೆ: ಜ್ಞಾಪಕ ಶಕ್ತಿ ನಷ್ಟ ಸಾಮಾನ್ಯವಾಗಿ ಕೇಳಿ ಬರುವ ದೂರು, ವಿಶೇಷವಾಗಿ ವಯಸ್ಸಾದವರಲ್ಲಿ ಈ ಸಮಸ್ಯೆ ಹೆಚ್ಚು. ಒಂದು ನಿರ್ದಿಷ್ಟ ಮಟ್ಟದ ಸ್ಮರಣಶಕ್ತಿಯ ನಷ್ಟವು ವಯಸ್ಸಾಗುವಿಕೆಯ ಸಾಮಾನ್ಯ ಭಾಗವಾಗಿದೆ. ಕಳೆದು ಹೋಗುವಿಕೆ, ಹಣಕಾಸಿನ ನಿರ್ವಹಣೆಯಲ್ಲಿ ತೊಂದರೆಗಳು, ದೈನಂದಿನ ಜೀವನ ಚಟುವಟಿಕೆಗಳಲ್ಲಿ ತೊಂದರೆಗಳು, ಒಲೆ ಮೇಲೆ ಬಿಡುವುದು, ನಿಕಟ ಕುಟುಂಬ ಮತ್ತು ಸ್ನೇಹಿತರ ಹೆಸರುಗಳನ್ನು ಮರೆತುಬಿಡುವುದು ಅಥವಾ ಭಾಷೆಯ ಸಮಸ್ಯೆಗಳು ಒಂದು ಬಗೆಯ ಮಾನಸಿಕ ಕಾಯಿಲೆ(ಡಿಮೆಟೇನಿಯಾ) ಲಕ್ಷಣಗಳು.
ಬುದ್ಧಿಮಾಂದ್ಯತೆಯು ನಿಧಾನವಾಗಿ ಪ್ರಗತಿಶೀಲ ಸ್ಥಿತಿಯಾಗಿದೆ ಮತ್ತು ನರವಿಜ್ಞಾನಿಗಳಿಂದ ಮೌಲ್ಯಮಾಪನ ಮಾಡಬೇಕು. ಯಾವುದೇ ಚಿಕಿತ್ಸೆ ಇಲ್ಲದಿದ್ದರೂ, ರೋಗಲಕ್ಷಣಗಳನ್ನು ನಿರ್ವಹಿಸಲು ಸಹಾಯ ಮಾಡುವ ಔಷಧಿಗಳು ಮತ್ತು ಚಿಕಿತ್ಸೆಗಳು ಇವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ