Health Tips: ತಲೆನೋವಿನ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ಯಾ? ಇದಕ್ಕೆ ಪರಿಹಾರ ಇಲ್ಲಿದೆ ನೋಡಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸದ್ಯ ತಲೆನೋವಿನಿಂದ ಮುಕ್ತಿ ಪಡೆಯಲು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿ ಇರುವ ಕಾವೇರಿ ಆಸ್ಪತ್ರೆಯ ಎಂಡಿ ಡಿಎಂ(ನರವಿಜ್ಞಾನ), ಮೈಗ್ರೇನ್ ಪ್ರಮಾಣೀಕೃತ(ಮೇಯೊ ಕ್ಲಿನಿಕ್), ನರವಿಜ್ಞಾನ ಮತ್ತು ಅಪಸ್ಮಾರಶಾಸ್ತ್ರ ವಿಭಾಗದ ಡಾ.ಸೋನಿಯಾ ತಾಂಬೆ ಅವರು ಒಂದಷ್ಟು ಸಲಹೆ ನೀಡಿದ್ದಾರೆ.

  • Share this:

ತಲೆನೋವು (Headache) ಬಹುತೇಕ ಸಾಮಾನ್ಯ ಸಮಸ್ಯೆ ಆಗಿದೆ. ಜೀವನದಲ್ಲಿ ಒಮ್ಮೆಯಾದರೂ ತಲೆನೋವಿನಿಂದ ಬಳಲದವರು ಯಾರೂ ಇರಲಾರರು. ತಲೆನೋವಿಗೆ ಕೆಲವು ಕಾರಣಗಳು ಹಾನಿಕರವಲ್ಲ ಮತ್ತು ಕೆಲವು ಕಾರಣಗಳು ಅಪಾಯಕಾರಿ. ತಲೆನೋವನ್ನು ಸ್ಥೂಲವಾಗಿ ಪ್ರಾಥಮಿಕ ತಲೆನೋವು, ಎರಡನೇ ಹಂತದ ತಲೆನೋವು ಎಂದು ವರ್ಗೀಕರಿಸಲಾಗಿದೆ. ಪ್ರಾಥಮಿಕ ತಲೆನೋವಿಗೆ ಯಾವುದೇ ನಿರ್ದಿಷ್ಟ ಕಾರಣ ಕಂಡುಬಂದಿಲ್ಲ ಮತ್ತು ದ್ವಿತೀಯ ಹಂತದ ತಲೆನೋವು ಬಿಪಿ ಏರಿಕೆ (BP), ಸೈನುಟಿಸ್, ಸೋಂಕು, ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ, ಆಘಾತಕಾರಿ ತಲೆನೋವು, ಗೆಡ್ಡೆಗಳು ಇತ್ಯಾದಿಗಳಿಂದ ಬರುತ್ತದೆ. ಈ ತಲೆನೋವು ಗುರುತಿಸುವಿಕೆ, ಮೌಲ್ಯಮಾಪನ ಮತ್ತು ಸೂಕ್ತ ನಿರ್ವಹಣೆ ರೋಗಿಗಳ ಜೀವನದ ಗುಣಮಟ್ಟವನ್ನು ಸುಧಾರಿಸುವುದು ಅಗತ್ಯ. ಸದ್ಯ ತಲೆನೋವಿನಿಂದ ಮುಕ್ತಿ ಪಡೆಯಲು ಬೆಂಗಳೂರಿನ (Bengaluru) ಎಲೆಕ್ಟ್ರಾನಿಕ್ ಸಿಟಿ (Electronic City) ಬಳಿ ಇರುವ ಕಾವೇರಿ ಆಸ್ಪತ್ರೆಯ (Kauvery Hospital) ಎಂಡಿ ಡಿಎಂ(ನರವಿಜ್ಞಾನ), ಮೈಗ್ರೇನ್ (Migraine) ಪ್ರಮಾಣೀಕೃತ(ಮೇಯೊ ಕ್ಲಿನಿಕ್), ನರವಿಜ್ಞಾನ ಮತ್ತು ಅಪಸ್ಮಾರಶಾಸ್ತ್ರ ವಿಭಾಗದ ಡಾ.ಸೋನಿಯಾ ತಾಂಬೆ ಅವರು ಒಂದಷ್ಟು ಸಲಹೆ ನೀಡಿದ್ದಾರೆ.


ಸಾಂದರ್ಭಿಕ ಚಿತ್ರ


ಒತ್ತಡದ ರೀತಿಯ ತಲೆನೋವು: ಇದು ಸಣ್ಣ ಪ್ರಮಾಣದಿಂದ ಮಧ್ಯಮ ತೀವ್ರತೆ ಹೊಂದಿರುವ ತಲೆನೋವು, ಸಾಮಾನ್ಯವಾಗಿ ತಲೆಯ ಸುತ್ತ ಬಿಗಿಯಾದ ಬ್ಯಾಂಡ್‌ನಂತೆ ಭಾಸವಾಗುತ್ತದೆ. ಇದು ಸಾಮಾನ್ಯ ರೀತಿಯ ತಲೆನೋವು.


ಮೈಗ್ರೇನ್: ಮೈಗ್ರೇನ್ ತಲೆನೋವು ನಮ್ಮನ್ನು ತುಂಬಾ ನಿಷ್ಕ್ರಿಯವಾಗಿಸುವ ತಲೆನೋವು. ಇದು ತಲೆಯ ಒಂದು ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ ಮತ್ತು ಔಷಧ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ 4-72 ಗಂಟೆಗಳವರೆಗೆ ಇರುತ್ತದೆ. ಸಂಬಂಧಿತ ವಾಕರಿಕೆ / ವಾಂತಿ, ಬೆಳಕು ಮತ್ತು ಧ್ವನಿ ಸಂವೇದನೆ ಹೊಂದಿರುತ್ತದೆ. ರೋಗಿಗಳು ಸಾಮಾನ್ಯವಾಗಿ ಊಟ ತಪ್ಪಿಸಿದರೆ, ನಿದ್ರೆ ಕಡಿಮೆಯಾದರೆ, ಆಲ್ಕೋಹಾಲ್ ಸೇವನೆ, ವಾಸನೆ, ಸೂರ್ಯನ ಬೆಳಕು ಮುಂತಾದ ಪ್ರಚೋದನೆಗಳಿಂದ ಈ ತಲೆನೋವು ಕಾಣಿಸಿಕೊಳ್ಳಬಹುದು.


ಕ್ಲಸ್ಟರ್ ತಲೆನೋವು: ನೋವಿನ ತೀವ್ರತೆಯಿಂದಾಗಿ ಇದನ್ನು ಆತ್ಮಹತ್ಯೆಯ ತಲೆನೋವು ಎಂದೂ ಕರೆಯುತ್ತಾರೆ. ಇದು ಕಣ್ಣುಗಳ ಹಿಂಭಾಗದಲ್ಲಿ ಕಾಣಿಸಿಕೊಳ್ಳುತ್ತದೆ ಮತ್ತು ಕಣ್ಣಿನಲ್ಲಿ ಇರಿತದ ಅನುಭವ ಉಂಟು ಮಾಡುತ್ತದೆ. ಕಣ್ಣು ಕೆಂಪಾಗುವುದು ಮತ್ತು ಕಣ್ಣು, ಮೂಗುಗಳಲ್ಲಿ ನೀರು ಬರುವುದಕ್ಕೆ ಕಾರಣವಾಗುತ್ತದೆ.


ಆಘಾತ/ಗಾಯದ ನಂತರದ ತಲೆನೋವು: ಯಾವುದೇ ತಲೆ/ಕತ್ತಿನ ಗಾಯದ ನಂತರ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಗಾಯಗೊಂಡ 7 ದಿನಗಳ ನಂತರ ಪ್ರಾರಂಭವಾಗುತ್ತದೆ ಮತ್ತು ತಿಂಗಳವರೆಗೆ ಇರುತ್ತದೆ. ನೋವು ಕಾಣಿಸಿಕೊಳ್ಳುವ ಸ್ಥಳವು ತಲೆಯ ಮುಂಭಾಗ, ತಲೆ ಅಥವಾ ಕುತ್ತಿಗೆಯ ಭಾಗವಾಗಿದೆ.


ಡಾ.ಸೋನಿಯಾ ತಾಂಬೆ, ಎಂಡಿ ಡಿಎಂ(ನರವಿಜ್ಞಾನ), ಮೈಗ್ರೇನ್ ಪ್ರಮಾಣೀಕೃತ(ಮೇಯೊ ಕ್ಲಿನಿಕ್), ನರವಿಜ್ಞಾನ ಮತ್ತು ಅಪಸ್ಮಾರಶಾಸ್ತ್ರ. ಕಾವೇರಿ ಆಸ್ಪತ್ರೆ, ಎಲೆಕ್ಟ್ರಾನಿಕ್ ಸಿಟಿ, ಬೆಂಗಳೂರು.


ಅತಿಯಾದ ಔಷಧ ಬಳಕೆಯ ತಲೆನೋವು: ಪದೇ, ಪದೇ ತಲೆನೋವಿನಿಂದ ಬಳಲುತ್ತಿರುವ ರೋಗಿಗಳು ಆಗಾಗ್ಗೆ ನೋವು ನಿವಾರಕಗಳನ್ನು ಬಳಸುತ್ತಾರೆ, ಇದು ಮಿತಿಮೀರಿದ ಔಷಧ ಸೇವನೆ ತಲೆನೋವಿಗೆ ಕಾರಣವಾಗುತ್ತದೆ.


ಸೈನಸ್ ತಲೆನೋವು: ಇದು ಕೆನ್ನೆ, ಹಣೆಯ ಒಳಗೆ ಕಾಣಿಸುತ್ತದೆ. ಬಹುತೇಕ ನಿರಂತರ ನೋವು ಮತ್ತು ಸಂಬಂಧಿತ ಜ್ವರ, ಮೂಗು ಕಟ್ಟುವುದು, ಮೂಗು ಸೋರುವಿಕೆಯಿಂದ ಕೂಡಿರಬಹುದು.


ತಲೆನೋವಿನ ಆತಂಕಕಾರಿ ಲಕ್ಷಣಗಳು: ತಲೆನೋವಿನ ಕೆಲವು ಲಕ್ಷಣಗಳನ್ನು ಆಘಾತಕಾರಿ ಎಂದು ಕರೆಯಲಾಗುತ್ತದೆ. ಈ ರೋಗಲಕ್ಷಣಗಳು ಕಂಡುಬಂದರೆ ರೋಗಿಗಳಿಗೆ ತುರ್ತು ಚಿಕಿತ್ಸೆಯ ಅಗತ್ಯವಿರುತ್ತದೆ. ಇತ್ತೀಚಿನ ತಲೆನೋವಿನ ಪ್ರಕರಣಗಳು ಅಧಿಕ ಬಿಪಿ, 50 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸು, ಗರ್ಭಾವಸ್ಥೆಯಲ್ಲಿ ತಲೆನೋವು, ನಿದ್ರೆಯಿಂದ ಎಚ್ಚರಗೊಳಿಸುವ ತಲೆನೋವು,  ದೃಷ್ಟಿ ಸಮಸ್ಯೆ, ಕೈ ಮತ್ತು ಕಾಲುಗಳಲ್ಲಿ ದೌರ್ಬಲ್ಯ, ದೇಹ ಹಿಡಿದುಕೊಳ್ಳುವಿಕೆಯಿಂದ ಕಾಣಿಸಿಕೊಳ್ಳುತ್ತದೆ.
ತಲೆನೋವಿಗೆ ಚಿಕಿತ್ಸೆ: ತಲೆನೋವಿನ ಚಿಕಿತ್ಸೆಯು ಪರಿಹರಿಸುವಿಕೆ ಅಥವಾ ತಡೆಗಟ್ಟುವಿಕೆಯಾಗಿದೆ. ಪರಿಹರಿಸುವಿಕೆ ಚಿಕಿತ್ಸೆಯಲ್ಲಿ ರೋಗಿಯು ರೋಗಲಕ್ಷಣಗಳು ಕಾಣಿಸಿಕೊಂಡಾಗ ಔಷಧಿಯನ್ನು ತೆಗೆದುಕೊಳ್ಳುತ್ತಾನೆ. ತಡೆಗಟ್ಟುವ ಚಿಕಿತ್ಸೆಯಲ್ಲಿ ರೋಗಿಯು ತಲೆನೋವು ಸಂಭವಿಸುವುದನ್ನು ತಡೆಯಲು ಔಷಧದ ಕೋರ್ಸ್ ತೆಗೆದುಕೊಳ್ಳುತ್ತಾನೆ. ಈ ಔಷಧಿಗಳನ್ನು ಪ್ರತಿ ರೋಗಿಗೆ ಅವರ ವಯಸ್ಸು, ಲಿಂಗ, ಸಂಬಂಧಿತ ರೋಗಲಕ್ಷಣಗಳು, ಇತರ-ಅಸ್ವಸ್ಥತೆಗಳು ಇತ್ಯಾದಿಗಳಿಗೆ ಅನುಗುಣವಾಗಿ ಇರುತ್ತದೆ.


ಇದನ್ನೂ ಓದಿ:Headache: ನಿಮಗೆ ಆಗಾಗ ತಲೆ ನೋವು ಬರ್ತಿದ್ಯಾ? ಇದಕ್ಕೆ ಅಪೌಷ್ಟಿಕತೆಯೂ ಕಾರಣ ಆಗಿರಬಹುದು


ತಲೆನೋವು ಕಾಣಿಸಿಕೊಂಡಾಗ ಏನು ಮಾಡಬೇಕು: ಕತ್ತಲೆಯಾದ ಶಾಂತ ಸ್ಥಳವನ್ನು ಹುಡುಕಿ, ಉದ್ದದ ಲೋಟದಲ್ಲಿ ನೀರು ಕುಡಿಯಿರಿ, ಮಲಗಿಕೊಳ್ಳಿ, ಹಣೆಯ ಮೇಲೆ ತಣ್ಣನೆಯ ಬಟ್ಟೆಯನ್ನು ಇಡಿ, ವೈದ್ಯರ ಸಲಹೆಯಂತೆ ತಲೆನೋವು ನಿವಾರಕ / ಪ್ರಿಸ್ಕ್ರಿಪ್ಷನ್ ಔಷಧಿಯನ್ನು ತೆಗೆದುಕೊಳ್ಳಿ ಮತ್ತು ಚಿಕ್ಕನಿದ್ರೆ ಮಾಡಲು ಪ್ರಯತ್ನಿಸಿ.


ಸಾಂದರ್ಭಿಕ ಚಿತ್ರ


ಯಾವಾಗ ಆಸ್ಪತ್ರೆಗೆ ಹೋಗಬೇಕು: ನೀವು ಎಂದೂ ಕಾಣದ ರೀತಿಯಲ್ಲಿ ತೀವ್ರವಾದ ನೋವು ಕಾಣಿಸಿಕೊಂಡರೆ, ವ್ಯಾಯಾಮದೊಂದಿಗೆ ತಲೆನೋವು ಕಾಣಿಸಿಕೊಂಡರೆ, 3 ದಿನಗಳ ನಂತರವೂ ವಾಸಿಯಾಗದ ನೋವು ಕಾಣಿಸಿಕೊಂಡರೆ, ಜ್ವರದೊಂದಿಗೆ, ಕತ್ತು ಹಿಡಿದಂತಹ ಅನುಭವ, ದೇಹ ಹಿಡಿದುಕೊಳ್ಳುವಿಕೆ, ಯಾವುದೇ ನರಮಂಡಲದ ಸಮಸ್ಯೆಗಳು, ಗಾಯದ ನಂತರದ ತಲೆನೋವು, ಗರ್ಭಾವಸ್ಥೆಯಲ್ಲಿನ ತಲೆನೋವು ಕಾಣಿಸಿಕೊಂಡಾಗ ರೋಗಿಗಳು ವೈದ್ಯರನ್ನು ಸಂಪರ್ಕಿಸಿ ನ್ಯೂರೋ ಇಮೇಜಿಂಗ್‌ನಿಂದ ಗಂಭೀರವಾದ ಆರೋಗ್ಯ ಸಮಸ್ಯೆಗಳು ಇಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು.

Published by:Monika N
First published: