Detox ಜ್ಯೂಸ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು! ಇದರಿಂದ ದೇಹಕ್ಕೆ ಸಿಗುವ ಲಾಭವೇನು ಗೊತ್ತಾ?

ಇತ್ತೀಚಿಗೆ ಟ್ರೆಂಡ್ ಅಲ್ಲಿರೋದು ಅಂದರೇ ಈ ಡಿಟಾಕ್ಸ್ ಜ್ಯೂಸ್ ಗಳು. ಇವುಗಳು ದೇಹದಲ್ಲಿರುವ ವಿಷವನ್ನು ಶುದ್ಧಿಕರಿಸುವ ಕೆಲಸವನ್ನು ಮಾಡುತ್ತವೆ. ಈ ಡಿಟಾಕ್ಸ್ ಜ್ಯೂಸ್ ಗಳನ್ನು ಕುಡಿಯುವುದರ ಜೊತೆಗೆ ನಮ್ಮ ಜೀವನಶೈಲಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತವೆ. ಇಲ್ಲಿ ನಿಮಗಾಗಿ 6 ವಿಧದ ಡಿಟಾಕ್ಸ್ ಜ್ಯೂಸ್ ಗಳನ್ನು ಈ ಕೆಳಗೆ ನೀಡಿದ್ದೇವೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಇಂದಿನ ಜೀವನಶೈಲಿ ಮತ್ತು ಸೂಕ್ತವಾಗಿ ಇರದ ಆಹಾರ ಅಭ್ಯಾಸಗಳು , ವ್ಯಾಯಾಮ (Exercise) ಇಲ್ಲದಿರುವ ಮಾನವನ ದೇಹ ಬಹುಬೇಗನೆ ಅನಾರೋಗ್ಯಕ್ಕೆ (llness) ತುತ್ತಾಗುತ್ತಿದೆ. ಇದರಿಂದ ಆಗಾಗ ನಮ್ಮ ದೇಹವನ್ನು ಆಳವಾಗಿ ಸ್ವಚ್ಛಗೊಳಿಸಬೇಕಾದ ಅಗತ್ಯ ಖಂಡಿತ ಇರುತ್ತದೆ. ಇತ್ತೀಚಿಗೆ ಟ್ರೆಂಡ್ ಅಲ್ಲಿರೋದು ಅಂದರೇ ಈ ಡಿಟಾಕ್ಸ್ ಜ್ಯೂಸ್ ಗಳು (Detox Juice). ಇವುಗಳು ದೇಹದಲ್ಲಿರುವ ವಿಷವನ್ನು ಶುದ್ಧಿಕರಿಸುವ ಕೆಲಸವನ್ನು ಮಾಡುತ್ತವೆ. ಈ ಡಿಟಾಕ್ಸ್ ಜ್ಯೂಸ್ ಗಳನ್ನು ಕುಡಿಯುವುದರ ಜೊತೆಗೆ ನಮ್ಮ ಜೀವನಶೈಲಿಯಲ್ಲಿ (Lifestyle) ಸ್ವಲ್ಪ ಬದಲಾವಣೆ ಮಾಡಿಕೊಂಡರೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತವೆ. ಇಲ್ಲಿ ನಿಮಗಾಗಿ 6 ವಿಧದ ಡಿಟಾಕ್ಸ್ ಜ್ಯೂಸ್ ಗಳನ್ನು ಈ ಕೆಳಗೆ ನೀಡಿದ್ದೇವೆ.

6 ವಿಧದ ಡಿಟಾಕ್ಸ್ ಜ್ಯೂಸ್ ಗಳು

1) ಕ್ಯಾರೆಟ್ ಶುಂಠಿ ಡಿಟಾಕ್ಸ್ ಜ್ಯೂಸ್
ಬೇಕಾಗುವ ಪದಾರ್ಥಗಳು

  1. 1 ಕ್ಯಾರೆಟ್

  2. 2 ಕಿತ್ತಳೆ

  3. 1 ಟೀಚಮಚ ಅರಿಶಿನ ಪುಡಿ

  4. ½ ಇಂಚಿನ ಶುಂಠಿ, ಪುಡಿ ಮಾಡಿರುವುದು

  5. 1 ಚಮಚ ನಿಂಬೆ ರಸ

  6. ಬೇಕಾದಷ್ಟೂ ನೀರು


ಮಾಡುವ ವಿಧಾನ

  • ಬ್ಲೆಂಡರ್ ತೆಗೆದುಕೊಂಡು ಕಿತ್ತಳೆ ಮತ್ತು ಕ್ಯಾರೆಟ್ ಅನ್ನು ಒಟ್ಟಿಗೆ ಮಿಶ್ರಣ ಮಾಡಿ.

  • ಈಗ, ಅರಿಶಿನ ಪುಡಿ ಮತ್ತು ಶುಂಠಿಯನ್ನು ಸೇರಿಸಿ ಮತ್ತು ನಯವಾಗಿ ರುಬ್ಬಿಕೊಳ್ಳಿ. ನಿಮಗೆ ಬೇಕು ಎನಿಸಿದರೇ ನೀರು ಸೇರಿಸಿ.

  • ನಿಂಬೆ ರಸವನ್ನು ಸೇರಿಸಿ ಮತ್ತು ಈಗ ಕ್ಯಾರೆಟ್ ಶುಂಠಿ ಡಿಟಾಕ್ಸ್‌ ಜ್ಯೂಸ್ ಸವಿಯಲು ಸಿದ್ಧ.


2) ಪುದೀನ ಮತ್ತು ನಿಂಬೆ ಡಿಟಾಕ್ಸ್ ಜ್ಯೂಸ್
ಬೇಕಾಗುವ ಪದಾರ್ಥಗಳು

  1. 3 ನಿಂಬೆಹಣ್ಣು

  2. 10-15 ಪುದೀನ ಎಲೆಗಳು

  3. ½ ಕಪ್ ಜೇನುತುಪ್ಪ

  4. ಐಸ್ ಕ್ಯೂಬ್ ಗಳು


ಮಾಡುವ ವಿಧಾನ

  • ಬ್ಲೆಂಡರ್ ತೆಗೆದುಕೊಂಡು ಎಲ್ಲಾ ಪದಾರ್ಥಗಳನ್ನು ಐಸ್ ಕ್ಯೂಬ್‌ಗಳೊಂದಿಗೆ ರುಬ್ಬಿಕೊಳ್ಳಿ. ತಣ್ಣಗಾದ ನಂತರ ಸವಿಯಿರಿ..


3) ಕಲ್ಲಂಗಡಿ ಮತ್ತು ಸೌತೆಕಾಯಿ ಡಿಟಾಕ್ಸ್ ಜ್ಯೂಸ್
ಬೇಕಾಗುವ ಪದಾರ್ಥಗಳು

  1. 1 ಸೌತೆಕಾಯಿ, ಸಿಪ್ಪೆ ಸುಲಿದು ಕತ್ತರಿಸಿಕೊಂಡಿದ್ದು ಮತ್ತು

  2. ½ ಕಪ್ ಕಲ್ಲಂಗಡಿ, ಕತ್ತರಿಸಿಕೊಂಡಿದ್ದು

  3. 8-10 ಪುದೀನ ಎಲೆಗಳು

  4. ½ ಇಂಚಿನ ಶುಂಠಿ, ಕತ್ತರಿಸಿಕೊಂಡೀದ್ದು

  5. ರುಚಿಗೆ ತಕ್ಕಷ್ಟು ಉಪ್ಪು

  6. 2 ನಿಂಬೆಹಣ್ಣುಗಳು,

  7. ಐಸ್ ಕ್ಯೂಬ್ ಗಳು


ಮಾಡುವ ವಿಧಾನ

  • ಬ್ಲೆಂಡರ್ ತೆಗೆದುಕೊಂಡು ಸೌತೆಕಾಯಿ, ಕಲ್ಲಂಗಡಿ ಮತ್ತು ಪುದೀನಾವನ್ನು 1 ಕಪ್ ನೀರಿನೊಂದಿಗೆ ರುಬ್ಬಿಕೊಳ್ಳಿ..

  • ಇದಕ್ಕೆ ನಿಂಬೆ ರಸ ಮತ್ತು ಕಪ್ಪು ಉಪ್ಪನ್ನು ಮಿಶ್ರಣ ಮಾಡಿ.

  • ಐಸ್ ಕ್ಯೂಬ್‌ಗಳು ಮತ್ತು ನಿಂಬೆ ಸ್ಲೈಸ್ ಗಳಿಂದ ಅಲಂಕರಿಸಿ ಮತ್ತು ತಣ್ಣಗಾದ ನಂತರ ಸವಿಯಿರಿ.


ಇದನ್ನೂ ಓದಿ:  Weight Loss: ತೂಕ ಇಳಿಸಲು ವಾಲ್ ನಟ್ಸ್ ಪವರ್​ಫುಲ್​ ಫುಡ್; ಹೀಗೆ ತಿಂದು ಬೊಜ್ಜು ಕರಗಿಸಿ

4) ದಾಳಿಂಬೆ ಮತ್ತು ಬೀಟ್ರೂಟ್ ಡಿಟಾಕ್ಸ್ ಜ್ಯೂಸ್
ಬೇಕಾಗುವ ಪದಾರ್ಥಗಳು

  1. 1 ಆಲೋವೆರಾ ಎಲೆ,

  2. 1 ಕಪ್ ಬೀಟ್ರೂಟ್, ಕತ್ತರಿಸಿಕೊಂಡಿದ್ದು

  3. 1 ಕಪ್ ದಾಳಿಂಬೆ ಬೀಜಗಳು

  4. 1 ಆಮ್ಲಾ, ಕತ್ತರಿಸಿಕೊಂಡಿದ್ದು

  5. ¼ ಟೀಚಮಚ ದಾಲ್ಚಿನ್ನಿ ಪುಡಿ

  6. ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕರಿಮೆಣಸಿನ ಪುಡಿ


ಮಾಡುವ ವಿಧಾನ

  • ಬ್ಲೆಂಡರ್ ತೆಗೆದುಕೊಂಡು ಬೀಟ್ರೂಟ್ ಮತ್ತು ದಾಳಿಂಬೆ ಬೀಜಗಳನ್ನು ರುಬ್ಬಿಕೊಳ್ಳಿ.

  • ಈಗ, ಆಲೋವೆರಾ, ಆಮ್ಲಾ ಮತ್ತು ಮಸಾಲೆ ಸೇರಿಸಿ ಮತ್ತೆ ರುಬ್ಬಿಕೊಳ್ಳಿ. ನಂತರ ಸವಿಯಿರಿ.


5) ಹಣ್ಣು-ಇನ್ಫ್ಯೂಸ್ಡ್ ಡಿಟಾಕ್ಸ್ ಜ್ಯೂಸ್
ಬೇಕಾಗುವ ಪದಾರ್ಥಗಳು

  1. 1 ಕಪ್ ದಾಳಿಂಬೆ ಬೀಜಗಳು

  2. ½ ಕಪ್ ಕಲ್ಲಂಗಡಿ, ಕತ್ತರಿಸಿಕೊಂಡಿದ್ದು

  3. 1 ಸೌತೆಕಾಯಿ, ಸಿಪ್ಪೆ ಸುಲಿದ ಮತ್ತು ಕತ್ತರಿಸಿಕೊಂಡಿದ್ದು

  4. 1 ಸೇಬು, ಕತ್ತರಿಸಿಕೊಂಡಿದ್ದು

  5. 8-10 ಪುದೀನ ಎಲೆಗಳು

  6. ½ ಇಂಚಿನ ಶುಂಠಿ, ಕತ್ತರಿಸಿಕೊಂಡಿದ್ದು

  7. ನಿಂಬೆ, ಸ್ಲೈಸ್ ಗಳಾಗಿ ಕತ್ತರಿಸಿಕೊಂಡಿದ್ದು


ಮಾಡುವ ವಿಧಾನ

  • ಒಂದು ಗಾಜಿನ ಬಾಟಲಿಯನ್ನು ತೆಗೆದುಕೊಂಡು ಅದಕ್ಕೆ ಈ ಎಲ್ಲಾ ಪದಾರ್ಥಗಳನ್ನು ಸೇರಿಸಿ.

  • ಈಗ, ಬಾಟಲಿಯನ್ನು 30 ನಿಮಿಷಗಳ ಕಾಲ ರೆಫ್ರಿಜರೇಟರ್ ನಲ್ಲಿ ಇರಿಸಿ.

  • ದಿನವಿಡೀ ಆ ನೀರನ್ನು ಕುಡಿಯಿರಿ.


6) ತೆಂಗಿನ ನೀರಿನ ಡಿಟಾಕ್ಸ್ ಜ್ಯೂಸ್
ಬೇಕಾಗುವ ಪದಾರ್ಥಗಳು

  1. 1 ತೆಂಗಿನಕಾಯಿ

  2. 8-10 ಪುದೀನ ಎಲೆಗಳು

  3. 1 ನಿಂಬೆ ಹಣ್ಣಿನ ನಿಂಬೆ ರಸ

  4. ಚಿಯಾ ಬೀಜಗಳು


ಇದನ್ನೂ ಓದಿ:  Orange History: ಕಿತ್ತಳೆ ಹಣ್ಣಿನ ಇತಿಹಾಸ ಗೊತ್ತಾ? ಇದರ ಪ್ರಯೋಜನಗಳನ್ನು ತಿಳಿದುಕೊಳ್ಳಿ

ಮಾಡುವ ವಿಧಾನ

ತೆಂಗಿನಕಾಯಿಯಿಂದ ತಿರುಳು ಮತ್ತು ತೆಂಗಿನ ಕಾಯಿ ನೀರನ್ನು ಹೊರ ತೆಗೆಯಿರಿ. ಈಗ ತೆಂಗಿನಕಾಯಿಯಲ್ಲಿನ ಕೊಬ್ಬರಿಯನ್ನು ಸಣ್ಣದಾಗಿ ಕತ್ತರಿಸಿ ಅದನ್ನು ನುಣ್ಣಗೆ ರುಬ್ಬಿಕೊಳ್ಳಿ. ನಂತರ ಅದಕ್ಕೆ ತೆಂಗಿನಕಾಯಿ ನೀರನ್ನು ಸೇರಿಸಿ. ಇದಕ್ಕೆ ಪುದೀನ ಎಲೆಗಳು, ನಿಂಬೆ ರಸ ಮತ್ತು ಚಿಯಾ ಬೀಜಗಳನ್ನು ಸೇರಿಸಿ. ಸವಿಯಿರಿ.
Published by:Ashwini Prabhu
First published: