ಯಾವಾಗಲೂ ಬ್ಯುಸಿ ಲೈಫ್ ಸ್ಟೈಲ್ (Busy Lifestyle) ಲಾಂಗ್ ವೀಕೆಂಡ್ಸ್ (Long Weekends) ಒಂದು ವರದಾನ ಎಂದರೆ ತಪ್ಪಾಗಲಾರದು. ಕೆಲಸ ಮಾಡುವವರು ವಾರಾಂತ್ಯವನ್ನು ಸ್ವಲ್ಪ ವಿಶ್ರಾಂತಿ ಪಡೆದು ಕಳೆಯುತ್ತಾರೆ. ಈ ವಾರಾಂತ್ಯ ಹೀಗೆ ಬಂದು ಬಿಡುತ್ತದೆ. ಎರಡು ವರ್ಷ ಲಾಂಗ್ ವೀಕೆಂಡ್ ಇದ್ದರೂ ಎಂಜಾಯ್ ಮಾಡಲಾಗದ ಪರಿಸ್ಥಿತಿ ಇತ್ತು. ದೀರ್ಘ ವಾರಾಂತ್ಯಗಳನ್ನು ಎಲ್ಲರೂ OTT ಗಳು ಮತ್ತು ಟಿವಿ (TV) ನೋಡುವುದರಲ್ಲಿ ಕಳೆದಿದ್ದಾರೆ. ಈ ಬಾರಿಯ ಕೊರೊನಾ (Corona) ಅಲೆಯ ಪರಿಣಾಮ ಮತ್ತು ಸರ್ಕಾರದ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಈ ವರ್ಷ ಲಾಂಗ್ ವೀಕೆಂಡ್ಗಳು ಯಾವಾಗ ಬರುತ್ತವೆ ಎಂದು ನಿಮಗೆ ತಿಳಿದಿದ್ದರೆ ನಿಮ್ಮ ಕುಟುಂಬ ಸದಸ್ಯರೊಂದಿಗೆ ಹೇಗೆ ಸಮಯ ಕಳೆಯಬೇಕು ಎಂದು ನೀವು ಮೊದಲೇ ಯೋಜಿಸಬಹುದು.
ನಿಮ್ಮ ದಿನಚರಿಯಲ್ಲಿ ಅನೇಕ ಒಳ್ಳೆಯ ನೆನಪುಗಳನ್ನು ಬರೆಯಬಹುದು. ಹೆಚ್ಚಿನ ಜನರು ಇತ್ತೀಚೆಗೆ ದೀರ್ಘ ವಾರಾಂತ್ಯದಲ್ಲಿ ತಮ್ಮ ಕುಟುಂಬದೊಂದಿಗೆ ಸಾಕಷ್ಟು ಸಮಯವನ್ನು ಕಳೆಯುತ್ತಾರೆ ಮತ್ತು ಕೆಲವು ಪ್ರವಾಸಗಳಿಗೆ ಹೋಗುತ್ತಾರೆ. ನೀವು ಮುಂಚಿತವಾಗಿ ಯೋಜನೆಯನ್ನು ಹೊಂದಿದ್ದರೆ ಟಿಕೆಟ್ ಬುಕಿಂಗ್, ಪ್ರಯಾಣ ವೆಚ್ಚದ ಬಗ್ಗೆ ಪ್ಲ್ಯಾನ್ ಮಾಡಬಹುದು. ಹಾಗಾದ್ರೆ ಈ ವರ್ಷದ ಲಾಂಗ್ ವೀಕೆಂಡ್ ಬಗ್ಗೆ ಇಲ್ಲಿದೆ ಮಾಹಿತಿ.
ಫೆಬ್ರವರಿ
ಚಳಿಗಾಲದ ನಂತರ ವಿರಾಮ ಫೆಬ್ರವರಿ ಕೊನೆಯಲ್ಲಿ ಬರುತ್ತದೆ. ಈ ದೀರ್ಘ ವಾರಾಂತ್ಯದಲ್ಲಿ ನೀವು ಕಚೇರಿಯಿಂದ ಒಂದು ದಿನ ರಜೆ ತೆಗೆದುಕೊಳ್ಳಬೇಕಾಗುತ್ತದೆ.
ಫೆಬ್ರವರಿ 26 - ಶನಿವಾರ
ಫೆಬ್ರವರಿ 27 - ಭಾನುವಾರ
ಫೆಬ್ರವರಿ 28 - ಸೋಮವಾರ (ಒಂದು ದಿನ ರಜೆ ತೆಗೆದುಕೊಳ್ಳಿ)
ಮಾರ್ಚ್ 1 - ಮಂಗಳವಾರ (ಮಹಾಶಿವರಾತ್ರಿ)
ಈ ಸಮಯದಲ್ಲಿ ಹವಾಮಾನವು ಉತ್ತಮವಾಗಿರುತ್ತದೆ.
ಮಾರ್ಚ್
ಮಾರ್ಚ್ನಲ್ಲಿ ಹೋಳಿಯನ್ನು ಜಾಲಿ ಪ್ಲಾನ್ ಮಾಡುವ ಅವಕಾಶ ಈ ವರ್ಷ ಬಂದಿದೆ. ಈ ಹಬ್ಬಕ್ಕೆ ರಜೆ ಹಾಕುವ ಅಗತ್ಯವಿಲ್ಲ.
ಮಾರ್ಚ್ 18 - ಶುಕ್ರವಾರ (Holy)
ಮಾರ್ಚ್ 19 - ಶನಿವಾರ
ಮಾರ್ಚ್ 20 – ಭಾನುವಾರ
ಏಪ್ರಿಲ್
ಏಪ್ರಿಲ್ನ ಬಂಪರ್ ನಾಲ್ಕು ದಿನಗಳು ಲಭ್ಯವಿದೆ. ನೀವು ಮೊದಲೇ ತಯಾರಿ ಮಾಡಿಕೊಂಡರೆ ನೀವು ಅದನ್ನು ಸೂಪರ್ ಆಗಿ ಆನಂದಿಸಬಹುದು.
ಏಪ್ರಿಲ್ 14 - ಗುರುವಾರ (ಮಹಾವೀರ ಜಯಂತಿ / ವೈಶಾಖಿ / ಡಾ. ಅಂಬೇಕರ್ ಜಯಂತಿ)
ಏಪ್ರಿಲ್ 15 - ಶುಕ್ರವಾರ (ಶುಭ ಶುಕ್ರವಾರ)
ಏಪ್ರಿಲ್ 16 - ಶನಿವಾರ
ಏಪ್ರಿಲ್ 17 – ಭಾನುವಾರ
ಇದನ್ನೂ ಓದಿ: ಕೋವಿಡ್ ಸಂದರ್ಭದ ಸಂಜೀವಿನಿ Dolo650 ವಿಶೇಷತೆ ಏನು? ಡೀಟೆಲ್ಸ್
ಮೇ
ಈ ಸಮಯದಲ್ಲಿ, ಒಂದು ದಿನದ ರಜೆ ತೆಗೆದುಕೊಂಡರೆ ನಾಲ್ಕು ದಿನಗಳ ರಜಾದಿನಗಳೊಂದಿಗೆ ಹಾಗೂ 3 ದಿನ ರಜೆಗಳೊಂದಿಗೆ ಮೇ ತಿಂಗಳಲ್ಲಿ ಮತ್ತೊಂದು ದೀರ್ಘ ವಾರಾಂತ್ಯವಿದೆ.
ಏಪ್ರಿಲ್ 30 - ಶನಿವಾರ
ಮೇ 1 - ಭಾನುವಾರ
ಮೇ 2 - ಸೋಮವಾರ (ಒಂದು ದಿನ ರಜೆ ತೆಗೆದುಕೊಳ್ಳಿ)
ಮೇ 3 - ಮಂಗಳವಾರ (ಈದ್-ಉಲ್-ಫಿತರ್)
ಅಲ್ಲದೇ
ಮೇ 14 - ಶನಿವಾರ
ಮೇ 15 -ಭಾನುವಾರ,
ಮೇ 16 - ಸೋಮವಾರ (ಬುದ್ಧ ಪೂರ್ಣಿಮಾ)
ಆಗಸ್ಟ್
ಈ ವರ್ಷದ ಆಗಸ್ಟ್ನಲ್ಲಿ ಒಳ್ಳೆಯ ರಜಾದಿನಗಳು ನಿಮಗಾಗಿ ಕಾಯುತ್ತಿವೆ. ಮೂರು ದೀರ್ಘ ವಾರಾಂತ್ಯಗಳನ್ನು ಸೂಪರ್ ಪ್ಲಾನ್ ಮಾಡಲು ಆಗಸ್ಟ್ ಅವಕಾಶ ನೀಡುತ್ತದೆ.
ಆಗಸ್ಟ್ 6 - ಶನಿವಾರ
ಆಗಸ್ಟ್ 7 - ಭಾನುವಾರ
ಆಗಸ್ಟ್ 8 - ಮೊಹರಂ
ಆಗಸ್ಟ್ 11 - ಗುರುವಾರ (ರಕ್ಷಾಬಂಧನ)
ಆಗಸ್ಟ್ 12 - ಶುಕ್ರವಾರ (ಒಂದು ದಿನ ರಜೆ ತೆಗೆದುಕೊಳ್ಳಿ)
ಆಗಸ್ಟ್ 13 - ಶನಿವಾರ
ಆಗಸ್ಟ್ 14 - ಭಾನುವಾರ
ಆಗಸ್ಟ್ 15 - ಸೋಮವಾರ (ಸ್ವಾತಂತ್ರ್ಯ ದಿನ)
ಆಗಸ್ಟ್ 19 - ಶುಕ್ರವಾರ (ಶ್ರೀ ಕೃಷ್ಣ ಜನ್ಮಾಷ್ಟಮಿ)
ಆಗಸ್ಟ್ 20 - ಶನಿವಾರ
ಆಗಸ್ಟ್ 21 - ಭಾನುವಾರ
ಅಕ್ಟೋಬರ್
ಸೆಪ್ಟೆಂಬರ್ನಲ್ಲಿ ಯಾವುದೇ ದೀರ್ಘ ವಾರಾಂತ್ಯದ ಯೋಜನೆಗಳಿಗೆ ಅವಕಾಶವಿಲ್ಲ. ಆದರೆ, ಅಕ್ಟೋಬರ್ನಲ್ಲಿ ದೀರ್ಘ ವಾರಾಂತ್ಯ ಸಿಗುತ್ತದೆ.
ಅಕ್ಟೋಬರ್ 22 - ಶನಿವಾರ
ಅಕ್ಟೋಬರ್ 23 - ಭಾನುವಾರ
ಅಕ್ಟೋಬರ್ 24 - ದೀಪಾವಳಿ
ನವೆಂಬರ್
ಈ ವರ್ಷದ ಕೊನೆಯ ದೀರ್ಘ ವಾರಾಂತ್ಯವು ನವೆಂಬರ್ನಲ್ಲಿ ಬರುತ್ತದೆ. ಈ ವಾರಾಂತ್ಯವನ್ನು ನೀವು ಆನಂದಿಸಲು ಬಯಸಿದರೆ, ನೀವು ಒಂದು ದಿನ ರಜೆ ತೆಗೆದುಕೊಳ್ಳಬೇಕು.
ನವೆಂಬರ್ 5 - ಶನಿವಾರ
ಇದನ್ನೂ ಓದಿ: ಬ್ರೇಕಪ್ ನೋವಿನಿಂದ ಹೊರ ಬರೋಕೆ ಇಷ್ಟು ಮಾಡಿ ಸಾಕು
ನವೆಂಬರ್ 6 - ಭಾನುವಾರ
ನವೆಂಬರ್ 7 - ಸೋಮವಾರ (ಒಂದು ದಿನ ರಜೆ ತೆಗೆದುಕೊಳ್ಳಿ)
ನವೆಂಬರ್ 8 - ಮಂಗಳವಾರ (ಗುರುನಾನಕ್ ಜಯಂತಿ)
ಜೂನ್, ಜುಲೈ, ಸೆಪ್ಟೆಂಬರ್ ಮತ್ತು ಡಿಸೆಂಬರ್ ನಾಲ್ಕು ತಿಂಗಳಿಗೆ ಲಾಂಗ್ ವೀಕೆಂಡ್ ಚಾನ್ಸ್ ಇಲ್ಲ. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ