Life Tips: ಸಂಗಾತಿಯಿಂದ ದೂರವಾದಾಗ ನೋವು ಸಹಜ, ಆದ್ರೆ ಕೊರಗುವ ಬದಲು ಹೀಗೆ ಮಾಡಿ

ನಿಜ ಜೀವನದಲ್ಲಿ ಅವರ ಸಂಬಂಧದಲ್ಲಿ ಉಂಟಾಗುತ್ತಿರುವ ಏರುಪೇರು ಬಿರುಗಾಳಿಯ ಬಗ್ಗೆ ನಿಮಗೆ ತಿಳಿದಿರುವುದಿಲ್ಲ. ಅವರ ನೋವಿನ ಅನುಭವ ಗೊತ್ತಾಗುವುದಿಲ್ಲ. ಕೆಲವೊಮ್ಮೆ ಜಗತ್ತಿಗೆ ಪರಿಪೂರ್ಣವಾಗಿ ಕಾಣುವ ದಂಪತಿಗಳು ಪರಸ್ಪರ ಮೋಸ ಮಾಡುತ್ತಿರುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಪ್ರೀತಿ (Love) ಅನ್ನೋದು ನಮ್ಮ ರೋಮ ರೋಮಗಳಲ್ಲಿ ಬೆರೆತಾಗ ನಾವು ಅದರ ಹೊರತು ಬೇರೆ ಏನನ್ನೂ ಯೋಚಿಸುವುದಿಲ್ಲ. ಸಂಗಾತಿಯೊಂದಿಗೆ ನಮ್ಮ ಪ್ರೇಮ ನಿಷ್ಕಲ್ಮಶ (Pellucid) ಹಾಗೂ ನಿಸ್ವಾರ್ಥ (Selfless) ವಾಗಿದ್ದಾಗ ನಮಗೆ ಅವರೇ ಬೇಕು. ಹೆಜ್ಜೆ ಹೆಜ್ಜೆಗೂ ಅವರು ನಮ್ಮೊಡನೆ ಇಲ್ಲದಿದ್ದರೆ, ಬದುಕೇ ಬೇಡವೆನಿಸುತ್ತದೆ. ಆಳವಾಗಿ ಹಚ್ಚಿಕೊಂಡಿರುವ ಪ್ರೇಮ ಮುರಿದು ಬಿದ್ದಾಗ ಆಗುವ ವೇದನೆ, ಯಾತನೆ ಯಾರಿಗೂ ಬೇಡ. ಸಂಗಾತಿ ನಿಮಗೆ ಮೋಸ ಮಾಡಿದಾಗ ಎಲ್ಲವೂ ಕೊನೆಗೊಂಡಂತೆ ಭಾಸವಾಗುತ್ತದೆ. ಆದರೆ ಈ ಕಷ್ಟದ (Difficult) ಸಮಯದಲ್ಲಿ (Time) ನೀವು ನಿಮ್ಮನ್ನು ಬಲಪಡಿಸಿಕೊಳ್ಳಬೇಕು. ಇದು ನಿಮ್ಮ ನೋವನ್ನು (Pain) ಕಡಿಮೆ ಮಾಡುತ್ತದೆ. ಪ್ರೀತಿಯಲ್ಲಿರುವವರು ಪರಸ್ಪರ ಅನ್ಯೋನ್ಯವಾಗಿ ಬದುಕಲು ಮತ್ತು ಸಾಯುವ ಪ್ರತಿಜ್ಞೆ ಮಾಡುತ್ತಾರೆ. ಏಳೇಳು ಜನ್ಮದವರೆಗೆ ಜೊತೆಗಿರುವ ಪ್ರಮಾಣ ಮಾಡುತ್ತಾರೆ. ಸಂಬಂಧವನ್ನು ಉಳಿಸಿಕೊಳ್ಳಲು ಭರವಸೆ ನೀಡುತ್ತಾರೆ. ಆದರೆ ನಿಮ್ಮ ಸಂಗಾತಿಯು ನಿಮಗೆ ಗೊತ್ತಿಲ್ಲದಂತೆ ಮೋಸ (Cheating) ಮಾಡುತ್ತಿರುತ್ತಾರೆ. ಅಂತಹ ಅನೇಕ ಜೋಡಿಗಳನ್ನು (Couple) ನೀವು ನೋಡಿರಬಹುದು. ಅವರ ಪ್ರೀತಿಯ ಬಂಧವು ನಿಮಗೆ ಉದಾಹರಣೆಯಾಗಿರಬಹದು, ಪಾಠವನ್ನೂ ಕಲಿಸಿರಬಹುದು.  

  ಸಂಗಾತಿಯೊಂದಿಗೆ ಸಂಬಂಧ ಮುರಿದು ಬಿದ್ದ ನಂತರದ ಜೀವನ:  

  ನಿಜ ಜೀವನದಲ್ಲಿ ಅವರ ಸಂಬಂಧದಲ್ಲಿ ಉಂಟಾಗುತ್ತಿರುವ ಏರು-ಪೇರು ಬಿರುಗಾಳಿಯ ಬಗ್ಗೆ ನಿಮಗೆ ತಿಳಿದಿರುವುದಿಲ್ಲ. ಅವರ ನೋವಿನ ಅನುಭವ ಗೊತ್ತಾಗುವುದಿಲ್ಲ. ಕೆಲವೊಮ್ಮೆ ಜಗತ್ತಿಗೆ ಪರಿಪೂರ್ಣವಾಗಿ ಕಾಣುವ ದಂಪತಿಗಳು ಪರಸ್ಪರ ಮೋಸ ಮಾಡುತ್ತಿರುತ್ತಾರೆ. ಗೆಳೆಯ-ಗೆಳತಿಯರೇ ಆಗಿರಲಿ, ಗಂಡ ಹೆಂಡತಿಯೇ ಆಗಿರಲಿ, ಒಂದು ಕಾಲದಲ್ಲಿ ಪ್ರೀತಿಸುತ್ತಿದ್ದ ಜೋಡಿಗಳು, ಕಾಲ ಮತ್ತು ಸನ್ನಿವೇಶ ಬದಲಾದ ನಂತರ ಅವರು ಇಂದು ಬೇರೆಯವರನ್ನು ಪ್ರೀತಿಸಲು ಸಂಬಂಧ ಹೊಂದಲು ಪ್ರಾರಂಭಿಸಿದ್ದಾರೆ.

  ಇದನ್ನೂ ಓದಿ: ಅಪ್ಪಿ-ತಪ್ಪಿ ಸಂಗಾತಿ ಜೊತೆ ಈ ವಿಚಾರಗಳನ್ನು ಹಂಚಿಕೊಳ್ಳಬೇಡಿ

  ಬೇರೊಬ್ಬರನ್ನು ಇಷ್ಟಪಡಲು ಪ್ರಾರಂಭಿಸಿದ್ದಾರೆ. ಆದರೆ, ಪ್ರೀತಿಯಲ್ಲಿ ಮೋಸ ಹೋದವನಿಗೆ ಈ ಆಘಾತದಿಂದ ಹೊರಬರಲು ಸಾಧ್ಯವಿಲ್ಲ. ಕೆಲವೊಮ್ಮೆ ನೀವು ಸಹ ಇದಕ್ಕೆ ಜವಾಬ್ದಾರರಾಗಿರುತ್ತೀರಿ. ಇದರಿಂದ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ. ಆದರೆ ಇದಕ್ಕಾಗಿ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಸಂಗಾತಿ ನಿಮಗೆ ಮೋಸ ಮಾಡಿದ್ದಾರೆಯೇ ಹೊರತು ನಿಮ್ಮನ್ನು ಅಲ್ಲ ಎಂದು ಭಾವಿಸಿ ನಿಮ್ಮನ್ನು ಆಘಾತದಿಂದ ಹೊರ ಬರುವಂತೆ ಆಲೋಚಿಸಿರಿ. ಒಂದು ಸಂಬಂಧದಿಂದ ಜೀವನ ಮುಗಿಯುವುದಿಲ್ಲ.

  ಸೇಡು ತೀರಿಸಿಕೊಳ್ಳಬೇಡಿ:

  ನೀವು ಮೋಸ ಹೋದರೂ ಸಹ ಸೇಡು ತೀರಿಸಿಕೊಳ್ಳಬೇಡಿ. ಹೃದಯ ಒಡೆದಾಗ ತುಂಬಾ ನೋವಾಗುತ್ತದೆ. ಇದರಿಂದಾಗಿ ಕೆಲವರು ಸೇಡು ತೀರಿಸಿಕೊಳ್ಳುವ ಭಾವನೆ ಹೊಂದುತ್ತಾರೆ. ಅನೇಕರು ಇದಕ್ಕೆ ವಿರುದ್ಧವಾಗಿ ನೇರ ಆರೋಪ ಮಾಡುತ್ತಾರೆ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡು ಮಾನಹಾನಿ ಉಂಟು ಮಾಡಿಕೊಳ್ಳುತ್ತಾರೆ. ಇದು ನಿಮ್ಮಿಬ್ಬರಿಗೂ ಅಪಖ್ಯಾತಿ ತರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಬುದ್ಧಿವಂತಿಕೆಯಿಂದ ವರ್ತಿಸಿ ಮತ್ತು ನಿಮ್ಮನ್ನು ಬಲಪಡಿಸಿಕೊಳ್ಳಿ.

  ಸಂಬಂಧಿಕರೊಂದಿಗೆ ಮನಸ್ಸಿಗೆ ಹತ್ತಿರವಾದವರ ಜತೆ ಚರ್ಚಿಸಿ:  

  ಅನೇಕ ಬಾರಿ ಸಂಬಂಧದಲ್ಲಿ ಮೋಸವಾಗುತ್ತಿದೆ ಎಂದು ಗೊತ್ತಾದಾಗಲೂ ಸಹ ಮಾತನಾಡಲು, ಇದರ ಬಗ್ಗೆ ಚರ್ಚಿಸಲು ಸಂಬಂಧಿಕರೊಂದಿಗೆ ಮಾತನಾಡಲು ಹಿಂಜರಿಯುತ್ತಾರೆ. ಮದುವೆಯ ನಂತರ ಹೆಚ್ಚಿನವರು ಇಂತಹ ವಿಚಾರದ ಬಗ್ಗೆ ತಮ್ಮ ಸ್ನೇಹಿತರು ಅಥವಾ ಕುಟುಂಬದವರೊಂದಿಗೆ ಮಾತನಾಡುವುದಿಲ್ಲ. ಎಲ್ಲಿ ತಮ್ಮ ಗೌರವಕ್ಕೆ, ಮರ್ಯಾದೆಗೆ ಧಕ್ಕೆಯಾಗುತ್ತದೋ ಎಂದು ಭೈ ಪಡುತ್ತಾರೆ. ಇದು ಶುದ್ಧ ತಪ್ಪು. ಇದು ನಿಮ್ಮ ಜೀವನ ಸಂಗಾತಿ ಮತ್ತು ನಿಮ್ಮ ಜೀವನವನ್ನು ಮತ್ತಷ್ಟು ಹದಗೆಡಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಕುಟುಂಬ ಸದಸ್ಯರೊಂದಿಗೆ ಮತ್ತು ಮನಸ್ಸಿಗೆ ಹತ್ತಿರವಾದವರ ಜತೆ ಮಾತನಾಡಿ.

  ನಿಮ್ಮ ಭಾವನೆಯನ್ನು ನಿಮ್ಮ ಸಂಗಾತಿಗೆ ತಿಳಿಸಿ:

  ನೀವು ಪ್ರೀತಿಯಲ್ಲಿ ಮೋಸ ಹೋದಾಗ ನಿಮ್ಮ ಭಾವನೆಗಳಿಗೆ ಧಕ್ಕೆಯಾಗುತ್ತದೆ. ಯಾರೊಂದಿಗು ಸಂಬಂಧ ಬೇಡ, ಮಾತು ಬೇಡ ಎನ್ನಿಸುತ್ತದೆ. ಈ ಪರಿಸ್ಥಿತಿಯಲ್ಲಿ ಕಣ್ಣೀರು ಬರುವುದಿಲ್ಲ. ಆದರೆ ಇಡೀ ಜೀವನ ಸಂಗಾತಿಯಿಂದ ಬೇರೆಯಾಗುವ ಭಯವಿರುತ್ತದೆ. ಆದರೆ ನಿಮ್ಮ ಭಾವನೆಗಳನ್ನು ಸಂಗಾತಿಯ ಜತೆ ಹಂಚಿಕೊಳ್ಳೀ. ಇದು ನಿಮ್ಮ ಸಂಬಂಧದ ಬಗ್ಗೆ ಸ್ಪಷ್ಟತೆಯನ್ನು ನೀಡುತ್ತದೆ.

  ಇದನ್ನೂ ಓದಿ: ಸೌಂದರ್ಯ ಹೆಚ್ಚಿಸುವುದರಿಂದ ಹಿಡಿದು ತೂಕ ಇಳಿಸುವುದರವರೆಗೆ, ನಿಂಬೆಹಣ್ಣಿನ ಪ್ರಯೋಜನಗಳು ಒಂದೆರೆಡಲ್ಲ

  ಭವಿಷ್ಯದ ಬಗ್ಗೆ ಯೋಚಿಸಿ:

  ನಿಮ್ಮ ಸಂಗಾತಿಯ ವಿವಾಹೇತರ ಸಂಬಂಧದಲ್ಲಿದ್ದರೆ ಅದು ಇನ್ನೊಬ್ಬರನ್ನು ಅಪಘಾತಕ್ಕೀಡು ಮಾಡುತ್ತದೆ. ಭಾವನೆಗಳು ಒಡೆದು, ಸಂಬಂಧ ಕೊನೆಯಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಶಾಂತಚಿತ್ತರಾಗಿ ಯೋಚಿಸಿ, ಸಂಗಾತಿಯೊಂದಿಗೆ ಮಾತನಾಡಿ. ನಿಮ್ಮ ತಪ್ಪು ಮತ್ತು ಜೀವನವನ್ನು ಸುಧಾರಿಸಲು ಹೆಚ್ಚು ಒತ್ತು ನೀಡಿ. ನೀವು ಬಯಸಿದರೆ ನಿಮ್ಮ ಸಂಗಾತಿಗೆ ನೀವು ಇನ್ನೊಂದು ಅವಕಾಶ ನೀಡಬಹುದು. ಅಥವಾ ಸಂಬಂಧವನ್ನು ಕೊನೆಗೊಳಿಸಿ, ನಿಮ್ಮ ಭವಿಷ್ಯದ ಬಗ್ಗೆ ಯೋಚಿಸಬಹುದು.
  Published by:renukadariyannavar
  First published: