International Trips: ನಿಮ್ಮ ಸ್ಮಾರ್ಟ್ ಫೋನ್ ಬೆಲೆಯಲ್ಲಿ ಮಾಡಿ ಅಂತರಾಷ್ಟ್ರೀಯ ಪ್ರವಾಸ: ಇಲ್ಲಿವೆ 5 ಬೆಸ್ಟ್ ಸ್ಥಳಗಳು

ಭಾರತದ ಸುತ್ತಲೂ ಕೆಲವು ಅದ್ಭುತ ಸ್ಥಳಗಳಿದ್ದು, ಅವುಗಳನ್ನು ನೀವು ಕೇವಲ 40,000 ರೂಪಾಯಿಯಲ್ಲಿ ಹೋಗಿ ಬರಬಹುದು. ಹಾಗಾದರೆ ಭಾರತದಿಂದ ಕಡಿಮೆ ಬಜೆಟ್‌ನಲ್ಲಿ ಅಂತಾರಾಷ್ಟ್ರೀಯ ಪ್ರವಾಸ ಮಾಡಲು ಯಾವ ಸ್ಥಳಗಳು ಬೆಸ್ಟ್ ಅನ್ನೋದನ್ನ ನಾವು ನೋಡೋಣ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಾವಿರಾರು ರೂಪಾಯಿಗಳನ್ನು ಎಲ್ಲೆಲ್ಲೋ ವೆಚ್ಚ (Expenses) ಮಾಡುತ್ತೀರಾ, ಉದಾಹರಣೆಗೆ ಲಕ್ಷ ಲಕ್ಷ ಕೊಟ್ಟು ದಿನನಿತ್ಯ ಉಪಯೋಗಿಸುವ ಫೋನ್ (Mobile) ಅನ್ನು ತೆಗೆದುಕೊಳ್ಳುತ್ತಿರಾ, ಅದು ಹಳೇದಾಯ್ತು ಅಂದರೆ ಮುಗೀತು ಮತ್ತೆ ಹೊಸ ಫೋನ್. ಹೊಸ ಫೋನ್ ಮೇಲಿನ ಮೋಹ ಒಂದೆರಡು ವಾರ ಅಷ್ಟೇ. ಆದರೆ ಅದೇ ಬಜೆಟ್‌ನಲ್ಲಿ (Budget) ಅಥವಾ ಇನ್ನೂ ಕಡಿಮೆ ಹಣದಲ್ಲಿ ಅಂತಾರಾಷ್ಟ್ರೀಯ ಪ್ರವಾಸ (International Travel) ಮಾಡಿದರೆ ಹೇಗಿರುತ್ತೆ ಅಲ್ವಾ..? ಅದರ ನೆನಪುಗಳು ಸದಾ ಹಚ್ಚಹಸಿರಾಗಿರುತ್ತದೆ. ವಿದೇಶ ಪ್ರವಾಸ (Foreign Tour) ಅಂದರೆ ಭಾರೀ ಬಜೆಟ್ ನಮ್ಮ ಹತ್ರ ಹೋಗೋಕೆಲ್ಲಾ ಸಾಧ್ಯನಾ ಅಂತಾನೆ ಹಲವರು ಕಾಲ ಕಳೆದು ಬಿಡುತ್ತಾರೆ. ಆದರೆ ಇಲ್ಲಿ ನಾವು ಹೇಳುವ ಕೆಲವು ದೇಶಗಳು ನೀವು ಕೊಳ್ಳುವ ಸ್ಮಾರ್ಟ್‌ಫೋನ್ ಬೆಲೆಗಿಂತ ಅಗ್ಗವಾಗಿವೆ.

ಭಾರತದ ಸುತ್ತಲೂ ಕೆಲವು ಅದ್ಭುತ ಸ್ಥಳಗಳಿದ್ದು, ಅವುಗಳನ್ನು ನೀವು ಕೇವಲ 40,000 ರೂಪಾಯಿಯಲ್ಲಿ ಹೋಗಿ ಬರಬಹುದು. ಹಾಗಾದರೆ ಭಾರತದಿಂದ ಕಡಿಮೆ ಬಜೆಟ್‌ನಲ್ಲಿ ಅಂತಾರಾಷ್ಟ್ರೀಯ ಪ್ರವಾಸ ಮಾಡಲು ಯಾವ ಸ್ಥಳಗಳು ಬೆಸ್ಟ್ ಅನ್ನೋದನ್ನ ನಾವು ನೋಡೋಣ.

1) ಥೈಲ್ಯಾಂಡ್
ಪ್ರಪಂಚದ ಅತ್ಯುತ್ತಮ ರಜಾ ಸ್ಥಳಗಳಲ್ಲಿ ಒಂದಾದ ಥೈಲ್ಯಾಂಡ್ ಸುಂದರವಾದ ಕಡಲತೀರಗಳು, ಪರ್ವತಗಳು ಮತ್ತು ಶ್ರೀಮಂತ ದೇವಾಲಯಗಳನ್ನು ಹೊಂದಿದೆ. ಥೈಲ್ಯಾಂಡ್, ಆಗ್ನೇಯ ಏಷ್ಯಾದಲ್ಲಿರುವ ಒಂದು ಪ್ರಮುಖ ದೇಶ. ಭಾರತದಿಂದ, ರೌಂಡ್ ಟ್ರಿಪ್ ಫ್ಲೈಟ್ ಟಿಕೆಟ್‌ಗಳು ನಿಮಗೆ INR 15,000 ಮತ್ತು INR 20,000ರ ನಡುವೆ ಬರುತ್ತದೆ.

ಇದನ್ನೂ ಓದಿ:  Holiday Plan: 9 ಸಾವಿರಕ್ಕಿಂತ ಕಡಿಮೆ ಹಣದಲ್ಲಿ ಮಾಡಿ ಉತ್ತರ ಭಾರತ ಪ್ರವಾಸ

ಭಾರತದಲ್ಲಿನ ಬಜೆಟ್ ಪ್ರಯಾಣಿಕರು ಸಾಮಾನ್ಯವಾಗಿ ಥೈಲ್ಯಾಂಡ್‌ಗೆ ಪ್ರಯಾಣಿಸಲು ಬಯಸುತ್ತಾರೆ. ಏಕೆಂದರೆ ಇಡೀ ಪ್ರವಾಸವು ಒಬ್ಬರಿಗೆ ಕೇವಲ 30,000 ರೂ. ಗಿಂತ ಕಡಿಮೆ ವೆಚ್ಚವಾಗುತ್ತದೆ.

2) ಶ್ರೀಲಂಕಾ
ಭಾರತದಿಂದ ಅಗ್ಗದ ಅಂತಾರಾಷ್ಟ್ರೀಯ ತಾಣಗಳಲ್ಲಿ ಶ್ರೀಲಂಕಾ ಒಂದಾಗಿದೆ. ಈ ಸ್ಥಳವು ಅತ್ಯುತ್ತಮ ಬ್ಯಾಕ್‌ಪ್ಯಾಕಿಂಗ್/ಬಜೆಟ್ ರಾಷ್ಟ್ರಗಳೆಂದು ಗುರುತಿಸಲ್ಪಟ್ಟಿದೆ. ಹೊಸದಿಲ್ಲಿಯಿಂದ, ಹೋಗುವ / ಬರುವ ವಿಮಾನವು ಸುಮಾರು INR 20,000 ವೆಚ್ಚವಾಗುತ್ತದೆ.

ಈ ಸ್ಥಳವು ಚಹಾ ತೋಟಗಳ ಪರಿಮಳ ಮತ್ತು ಸ್ಥಳೀಯ ಭಕ್ಷ್ಯಗಳಿಗೆ ಹೆಸರುವಾಸಿಯಾಗಿದೆ. ಅಂತಾರಾಷ್ಟ್ರೀಯ ಮತ್ತು ಬಜೆಟ್ ಪ್ರವಾಸಕ್ಕೆ ಶ್ರೀಲಂಕಾ ಉತ್ತಮ ದೇಶವಾಗಿದೆ.

3) ಸಿಂಗಾಪುರ
ಸಿಂಗಾಪುರ ಎಂದರೆ ಹಲವರು ದುಬಾರಿ ದೇಶ ಎಂದುಕೊಂಡಿರುತ್ತಾರೆ. ಆದರೆ ನಿಮ್ಮ ಊಹೆ ತಪ್ಪು, ನಿಮ್ಮ ಬಜೆಟ್ ಪ್ರವಾಸದಲ್ಲಿ ನೀವು ಈ ವರ್ಣರಂಜಿತ ಸಿಂಗಾಪುರವನ್ನು ನೋಡಬಹುದು. ಭಾರತದಿಂದ ಹೋಗುವ ಹಾಗೂ ರಿಟರ್ನ್‌ ವಿಮಾನಗಳ ಬೆಲೆಯು 22,000 ರೂ. ನಿಂದ 25,000 ರೂ. (ಪ್ರತಿ ವ್ಯಕ್ತಿಗೆ) ವೆಚ್ಚವಾಗುತ್ತದೆ.

ಈ ಚಿಕ್ಕ ಮತ್ತು ಸೂಪರ್ ಆಧುನಿಕ ರಾಷ್ಟ್ರವು ಬಜೆಟ್ ಪ್ರಯಾಣಿಕರಿಗೆ ಸೂಕ್ತವಾದ ಹಲವಾರು ಗುಣಲಕ್ಷಣಗಳನ್ನು ಹೊಂದಿದೆ. ಅಗಾಧವಾದ ಹಸಿರಿನಿಂದ ತುಂಬಿರುವ ಸಿಂಗಾಪುರವು ತನ್ನ ಆಧುನಿಕತೆಯಿಂದಾಗಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ.

4) ಸೀಶೆಲ್ಸ್
ಭಾರತದಿಂದ ಮತ್ತೊಂದು ಜನಪ್ರಿಯ ಕಡಿಮೆ-ಬಜೆಟ್ ವಿದೇಶಿ ತಾಣವಾದ ಸೀಶೆಲ್ಸ್ ಹಿಂದೂ ಮಹಾಸಾಗರದ ನೀಲಿ ನೀರು ಮತ್ತು ಪ್ರಾಚೀನ ಕಡಲತೀರಗಳಿಂದ ಅದ್ಭುತವಾಗಿದೆ. ಈ ಆಫ್ರಿಕನ್ ಸ್ವರ್ಗವು ಅದರ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ ಮತ್ತು ಭಾರತದಿಂದ ರೌಂಡ್ ಟ್ರಿಪ್ ವಿಮಾನವು 36,000 ರೂ. ವೆಚ್ಚವಾಗುತ್ತದೆ.

5) ಭೂತಾನ್
ಪ್ರಪಂಚದ ಅತ್ಯಂತ ರಮಣೀಯ ರಾಷ್ಟ್ರಗಳಲ್ಲಿ ಒಂದಾದ ಭೂತಾನ್ ಪ್ರಾಚೀನ ದೇಶವಾಗಿದೆ. ದೇಶವು ನೈಸರ್ಗಿಕ ಅದ್ಭುತಗಳಿಂದ ತುಂಬಿದೆ ಮತ್ತು ಭಾರತದಿಂದ ಉತ್ತಮ ಅಗ್ಗದ ಅಂತಾರಾಷ್ಟ್ರೀಯ ತಾಣಗಳಲ್ಲಿ ಒಂದಾಗಿದೆ.

ಇದನ್ನೂ ಓದಿ:  Holiday Plan: ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಿ, ಕೊಡಗಿನ ಕೂಲ್ ವೆದರ್‌ನಲ್ಲಿ ಪ್ರವಾಸ ಮಾಡಿ!

ಭಾರತದಿಂದ ಭೂತಾನ್‌ಗೆ ನೇರ ವಿಮಾನವನ್ನು ಪಡೆಯುವುದು ಸ್ವಲ್ಪ ಕಷ್ಟಕರವಾಗಿದ್ದರೂ, ನೀವು ಭೂತಾನ್ ಗಡಿಗೆ ಹತ್ತಿರದ ಭಾರತೀಯ ವಿಮಾನ ನಿಲ್ದಾಣವಾಗಿರುವ ಬಾಗ್ಡೋಗ್ರಾವನ್ನು ತಲುಪಬಹುದು. ಅಲ್ಲಿಂದ ಸುಮಾರು 5 ಗಂಟೆಗಳ ಕಾಲ ಬಸ್ ಪ್ರಯಾಣದಲ್ಲಿ ಹೋಗಬಹುದು.

ಬಜೆಟ್‌ನಲ್ಲಿ ವಿದೇಶಿ ಪ್ರವಾಸ ಪ್ಲ್ಯಾನ್ ಮಾಡುತ್ತಿದ್ದರೆ ತಡಮಾಡಿ ಈ ಐದು ಸ್ಥಳಗಳಲ್ಲಿ ನಿಮ್ಮಿಷ್ಟದ ಜಾಗಕ್ಕೆ ಹೋಗಿ ಬನ್ನಿ.
Published by:Mahmadrafik K
First published: