ಅಡುಗೆ ಮನೆಯಲ್ಲೇ ಇರುವ ಆಹಾರ ಪದಾರ್ಥ ಬಳಸಿ ದೇಹದ ತೂಕ ಇಳಿಸಿಕೊಳ್ಳಿ

ಅಡುಗೆ ಮನೆಯಲ್ಲೇ ಸಿಗುವ ಪದಾರ್ಥದಲ್ಲಿ ಅತಿ ಕಡಿಮೆ ವೆಚ್ಚದಲ್ಲಿ ದೇಹದ ತೂಕವನ್ನು ಸುಲಭವಾಗಿ ಇಳಿಸಿಕೊಳ್ಳಬಹುದು. ಹಾಗಾದರೆ ಆ ಅಡುಗೆ ಪದಾರ್ಥಗಳು ಯಾವುವು ಎಂದು ತಿಳಿಯೋಣ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತೂಕ ಇಳಿಕೆ ಈಗ ಎಲ್ಲರನ್ನು ಕಾಡುತ್ತಿರುವ ದೊಡ್ಡ ದೈಹಿಕ ಸಮಸ್ಯೆಯಾಗಿದೆ. ನಮ್ಮ ಅಜ್ಜಿ, ಅಮ್ಮಂದಿರು ತಿಳಿಸಿದ್ದ ಕೆಲವು ವಿಭಿನ್ನ ಆಹಾರ ಪದ್ಧತಿಗಳ ಮೂಲಕ ಭಾರತೀಯರು ತಮ್ಮ ದೇಹದ ಆಕಾರವನ್ನು ಸುಂದರವಾಗಿ ಕಾಪಾಡಿಕೊಂಡಿದ್ದರು. ಆದರೆ ಇದೀಗ ನಮ್ಮ ಭಾರತೀಯ ಅಡುಗೆ ಮನೆಗೆ ವಿದೇಶಿ ಆಹಾರ ಪದಾರ್ಥಗಳು ಸೇರಿದ ಕಾರಣ ದೇಹದಲ್ಲಿ ತೂಕವೂ ಕೂಡ ಬದಲಾಗಿದೆ. ಹಾಗಾಗಿ ತೂಕ ಇಳಿಕೆಗಾಗಿ ವ್ಯಾಯಾಮ, ಇನ್ನಿತರ ಉತ್ಪನ್ನಗಳ ಬಳಕೆ, ಡಯಟ್, ವಾಕ್, ಜಾಗಿಂಗ್ ಹೀಗೆ ವಿವಿಧ ಪರ್ಯಾಯ ಮಾರ್ಗಗಳನ್ನು ಅನುಸರಿಸುತ್ತಾರೆ. ಇದರಿಂದ ಕೆಲವೊಮ್ಮೆ ದೇಹ ತೂಕ ಇಳಿಯುವುದು ಸಹ ಅನುಮಾನವೆ. ಹಾಗಾಗಿ ಕೆಲವರು ಮನೆಯಲ್ಲೇ ತೂಕ ಇಳಿಸಿಕೊಳ್ಳುವ ಯಾವುದಾದರೂ ಮಾರ್ಗವಿದೆಯಾ ಎಂದು ಬಹುತೇಕ ಮಂದಿ ಹುಡುಕುತ್ತಾರೆ. ಏಕೆಂದರೆ ಕೆಲಸದ ಒತ್ತಡ, ಸಮಯದ ಅಭಾವವೂ ಇದಕ್ಕೆ ಕಾರಣವಾಗಬಹುದು.

ವಿವಿಧ ಪರ್ಯಾಯ ಮಾರ್ಗ ಹುಡುಕುವ ಸಾಕಷ್ಟು ಮಂದಿಗೆ ಅಡುಗೆ ಮನೆಯಲ್ಲೇ ಸಿಗುವ ಪದಾರ್ಥಗಳಿಂದಲೇ ದೇಹತೂಕ ಇಳಿಸಿಕೊಳ್ಳಬಹುದು ಎಂಬುದರ ಅರಿವೇ ಇಲ್ಲ.

follow potato diet for weight loss, potato diet, weight loss tips, how to loose weight fast, ಆಲೂಗಡ್ಡೆ, ತೆಳುವಾದ ಸೊಂಟ, ದೇಹದ ತೂಕ ಇಳಿಸಿಕೊಳ್ಳುವುದು, ಆಲೂಗಡ್ಡೆ ಡಯಟ್
ಸಾಂದರ್ಭಿಕ ಚಿತ್ರ


ಹೌದು, ಅಡುಗೆ ಮನೆಯಲ್ಲೇ ಸಿಗುವ ಪದಾರ್ಥದಲ್ಲಿ ಅತಿ ಕಡಿಮೆ ವೆಚ್ಚದಲ್ಲಿ ದೇಹದ ತೂಕವನ್ನು ಸುಲಭವಾಗಿ ಇಳಿಸಿಕೊಳ್ಳಬಹುದು. ಹಾಗಾದರೆ ಆ ಅಡುಗೆ ಪದಾರ್ಥಗಳು ಯಾವುವು ಎಂದು ತಿಳಿಯೋಣ.

1. ಸೊಪ್ಪು
ನಮ್ಮ ಅಡುಗೆ ಮನೆಯಲ್ಲಿ ಪಾಲಾಕ್ ಸೊಪ್ಪು ಯಥೇಚ್ಛವಾಗಿ ಆರಾಮವಾಗಿ ಸಿಗುತ್ತದೆ. ಇದು ಕಡಿಮೆ ಕ್ಯಾಲೋರಿ ಹೊಂದಿದ್ದು, ಇದರಲ್ಲಿ ಅಧಿಕ ಪೌಷ್ಟಿಕಾಂಶ ಇರುತ್ತದೆ. ಅದಲ್ಲದೇ ಇದರಲ್ಲಿ ನೀರಿನಾಂಶ ಯಥೇಚ್ಛವಾಗಿರುವುದರಿಂದ ದೇಹದ ತೂಕ ಇಳಿಕೆ ಪ್ರಮುಖ ಕಾರಣವಾಗುತ್ತದೆ.

ಇದನ್ನೂ ಓದಿ: Nandamuri Balakrishna-AR Rahman: ಎ.ಆರ್​. ರೆಹಮಾನ್​ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟ ನಟ ಬಾಲಕೃಷ್ಣ

2. ಸೋರೆಕಾಯಿ
ಈ ಹಸಿರು ತರಕಾರಿಯನ್ನು ಸಾಕಷ್ಟು ಮಂದಿ ದ್ವೇಷಿಸುತ್ತಾರೆ. ಆದರೆ ನಿಮ್ಮ ಆಹಾರದಲ್ಲಿ ಸೋರೆಕಾಯಿಯನ್ನು ಸೇರಿಸುವುದರಿಂದ ಆಗುವ ಅನೇಕ ಪ್ರಯೋಜನಗಳನ್ನು ನೀವು ಅಲ್ಲಗಳೆಯಲಾಗುವುದಿಲ್ಲ. ಕಡಿಮೆ ಕ್ಯಾಲೋರಿ ಹೊಂದಿದ್ದು, ಹೆಚ್ಚಿನ ನಾರಿನಾಂಶ ಹೊಂದಿರುವ ತರಕಾರಿ ಇದಾಗಿದೆ. ಅಲ್ಲದೇ ಇದು ಹಸಿವನ್ನು ನಿಗ್ರಹಿಸಲು ನಿಮಗೆ ಸಹಾಯ ಮಾಡುತ್ತದೆ. ಉತ್ತಮ ನಿದ್ರೆ ಮಾಡಲು ಸಹ ಸಹಾಯ ಮಾಡುತ್ತದೆ ಮತ್ತು ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ ಮತ್ತು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

3. ಹೆಸರು ಬೇಳೆ
ಹೆಚ್ಚಿನ ಪ್ರೋಟೀನ್ ಮತ್ತು ಫೈಬರ್ ಮತ್ತು ಕಡಿಮೆ ಕ್ಯಾಲೊರಿಗಳನ್ನು ಹೊಂದಿರುವ ಹೆಸರು ಬೇಳೆಯು ಸ್ನಾಯುಗಳ ದುರಸ್ತಿ ಮತ್ತು ರಚನೆಯಲ್ಲೂ ಸಹಾಯ ಮಾಡುತ್ತದೆ ಮತ್ತು ವಿಶೇಷವಾಗಿ ಸಸ್ಯಾಹಾರಿಗಳು ದೇಹಕ್ಕೆ ಹೆಚ್ಚಿನ ಪ್ರೋಟೀನ್ ಪಡೆಯುವುದಲ್ಲದೇ ತೂಕ ನಷ್ಟಕ್ಕೆ ಕಾರಣವಾಗುತ್ತದೆ.

4. ಟೊಮೇಟೊ
ಟೊಮೇಟೊಗಳು ದೇಹದಲ್ಲಿ ಕೊಬ್ಬು ಕಡಿಮೆ ಮಾಡಲು ಮತ್ತು ದೇಹದಲ್ಲಿ ನೀರಿನ ಅಂಶ ಶೇಖರಣೆಗೆ ಸಹಾಯ ಮಾಡುತ್ತದೆ ಎಂದು ಹಲವೃಆಉ ಅಧ್ಯಯನಗಳು ತಿಳಿಸಿವೆ. ಆದ ಕಾರಣ ತೂಕ ಇಳಿಕೆಯಲ್ಲಿ ಟೊಮ್ಯಾಟೋ ಅಗ್ರಸ್ಥಾನ ಪಡೆದಿದೆ.

5. ಮೊಟ್ಟೆ
ಮೊಟ್ಟೆಯ ಹಳದಿ ಭಾಗ ಅಷ್ಟೊಂದು ಆರೋಗ್ಯಕಾರಿ ಪ್ರಯೋಜನ ಹೊಂದಿಲ್ಲ. ಆದರೆ ಮೊಟ್ಟೆಯಲ್ಲಿನ ಬಿಳಿ ಭಾಗದಲ್ಲಿ ಅಧಿಕ ಪ್ರೋಟೀನ್ ಇದ್ದು, ತೂಕ ಇಳಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಇದನ್ನೂ ಓದಿ: Bigg Boss Kannada Season 8: ಅರವಿಂದ್​-ದಿವ್ಯಾ ಉರುಡುಗ ಸ್ನೇಹದಲ್ಲಿ ಬಿರುಕು: ಕಾರಣವಾಯ್ತಾ ಆ ಒಂದು ಮಾತು..!

6. ಸೌತೆಕಾಯಿ
ಇದು ಹೆಚ್ಚಿನ ನೀರಿನಾಂಶ ಹೊಂದಿರುವ ತರಕಾರಿ. ಇದರಲ್ಲಿ ನಾರಿನಾಂಶವೂ ಇದ್ದು, ಕಡಿಮೆ ಕ್ಯಾಲೋರಿಗಳನ್ನು ಸಹ ಹೊಂದಿದೆ. ಇದು ಹಸಿವನ್ನು ನಿಗ್ರಹಿಸುವುದಲ್ಲದೇ ದೇಹಕ್ಕೆ ತಂಪು ಮತ್ತು ತಾಜಾತನ ನೀಡುತ್ತದೆ.

7. ನಟ್ಸ್
ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ತೊಡೆದುಹಾಕಲು ಆರೋಗ್ಯಕರ ಕೊಬ್ಬುಗಳು ಸಹ ಬೇಕಾಗುತ್ತವೆ. ಬಾದಾಮಿ, ಕಡಲೆಕಾಯಿ ಮತ್ತು ವಾಲ್‍ನಟ್ಸ್ ನಂತಹ ಕಾಯಿಗಳಿಗಿಂತ ಇವುಗಳನ್ನು ನೀವು ಪಡೆಯಬಹುದು. ಜೊತೆಗೆ ಪೆÇ್ರೀಟೀನ್ ಮತ್ತು ನಾರಿನಾಂಶವೂ ಸಹ ಥೇಚ್ಛವಾಗಿರುತ್ತದೆ.

8. ಮಸಾಲೆಗಳು
ಅರಿಶಿಣ ಮತ್ತು ದಾಲ್ಚಿನ್ನಿ ಯಿಂದ ಹಿಡಿದು ಜೀರಿಗೆ, ಅಜ್ವೈನ್ ಮತ್ತು ಕರಿಮೆಣಸು ಇವು ಭಾರತೀಯ ಮಸಾಲೆ ಪದ್ದತಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಇವು ಚಯಾಪಚಯ ಶಕ್ತಿಯನ್ನು ಹೆಚ್ಚಿಸುತ್ತದೆ. ಇದಕ್ಕಾಗಿಯೇ ಹೆಚ್ಚಿನ ಆಹಾರ ತಜ್ಞರು ಮತ್ತು ಪೌಷ್ಟಿಕತಜ್ಞರು ಅವುಗಳನ್ನು ನೀರಿನಲ್ಲಿ ಕುದಿಸಿ ಮತ್ತು ಆ ನೀರನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಲು ಸಲಹೆ ನೀಡುತ್ತಾರೆ.

9. ಶುಂಠಿ
ಇದು ಬೊಜ್ಜು ವಿರುದ್ಧ ಹೋರಾಡುವುದಲ್ಲದೇ, ದೇಹದಲ್ಲಿ ನೀರು ಶೇಖರಣೆಗೊಳ್ಳದಂತೆ ತಡೆಯುತ್ತದೆ, ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಈ ಕಾರಣಗಳಿಂದ ದೇಹವು ತೂಕವನ್ನು ಕಳೆದುಕೊಳ್ಳುತ್ತದೆ.

10. ಬೆಳ್ಳುಳ್ಳಿ
ಇದು ಹಸಿವನ್ನು ನಿಗ್ರಹಿಸುವುದಲ್ಲದೇ, ಚಯಾಪಚಯ ಕ್ರಿಯೆಯನ್ನು ವೃದ್ಧಿಸುತ್ತದೆ. ಜೊತೆಗೆ ಹೃದಯದ ಆರೋಗ್ಯಕ್ಕೂ ಇದು ಉತ್ತಮವಾಗಿದೆ.


Published by:Anitha E
First published: