ತೆರೆಯಲ್ಲಿ ನಗಿಸಿದ ಚಾಪ್ಲಿನ್ ಮರೆಯಲ್ಲಿ ಸೆಕ್ಸ್ ಮೆಷಿನ್..!

ಚಿತ್ರರಂಗಕ್ಕೆ ಹೊಸಬರಾಗಿದ್ದ ಎಡ್ನಾಗೆ ಚಾರ್ಲಿಯೇ ಗಾಢ್ ಫಾದರ್. ಕ್ರಮೇಣ ಇವರಿಬ್ಬರೂ ತುಂಬಾ ಆಪ್ತರಾದರು. ಆದರೆ ಚಾರ್ಲಿ ಎಡ್ನಾಳನ್ನು ಯಾವತ್ತೂ ಮದುವೆಯಾಗಿಲ್ಲ ಎಂದು ಹೇಳಲಾಗಿದೆ.

zahir | news18
Updated:November 18, 2018, 1:08 PM IST
ತೆರೆಯಲ್ಲಿ ನಗಿಸಿದ ಚಾಪ್ಲಿನ್ ಮರೆಯಲ್ಲಿ ಸೆಕ್ಸ್ ಮೆಷಿನ್..!
ಚಾರ್ಲಿ ಚಾಪ್ಲಿನ್
  • Advertorial
  • Last Updated: November 18, 2018, 1:08 PM IST
  • Share this:
ಅದು 30 ಮತ್ತು 40 ರ ದಶಕ, ಮೂಕಿ ಸಿನಿಯುಗ. ನಗು ನಗಿಸುತ್ತಲೇ ಅಳಿಸುತ್ತಿದ್ದ, ಅಳಿಸುತ್ತಲೇ ನಗಿಸುತ್ತಿದ್ದ ನಟನಾಗಿ ಚಾರ್ಲಿ ಚಾಪ್ಲಿನ್‌ ವಿಶ್ವದ ಸಿನಿ ಪ್ರಿಯರ ಮನಗೆದ್ದಿದ್ದರು. 'ಕಿಂಗ್ ಆಫ್' ಕಾಮೆಡಿ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಆದರೆ ತೆರೆಯ ಮೇಲೆ ಚಾರ್ಲಿಯ ತುಂಟಾಟ ನೋಡಿದ್ದ ಪ್ರೇಕ್ಷಕರಿಗೆ ಮರೆಯಲ್ಲಿನ ಚಾರ್ಲಿ ಚಾಪ್ಲಿನ್ ಪುಂಡಾಟ ತಿಳಿಯದಾಂಗಿತ್ತು.

ಹೌದು, ದೊಡ್ಡ ಪರದೆಯಲ್ಲಿ ಚಾರ್ಲಿ ಚಾಪ್ಲಿನ್ ಎಷ್ಟು ಚತುರನಾಗಿದ್ದರೋ ಪರದೆ ಕಿ ಪೀಚೆ ಕೂಡ ಅಷ್ಟೇ ಚುತುರತೆ ಮೆರೆದಿದ್ದರು ಎಂಬುದು ನಗ್ನಸತ್ಯ. ತನ್ನ ಹಾಸ್ಯ ಅಭಿನಯದ ಮೂಲಕ ಖ್ಯಾತಿಗಳಿಸಿದ್ದ ಚಾರ್ಲಿ, ವೈವಾಹಿಕ ಜೀವನದಿಂದ ಕುಖ್ಯಾತಿ ಗಳಿಸಿದ್ದರು ಎಂಬುದು ಎಷ್ಟೋ ಜನರಿಗೆ ತಿಳಿದಿಲ್ಲ.

ಗ್ರೇಟ್ ಕಾಮೆಡಿಯನ್ ಸರ್ ಚಾರ್ಲ್ಸ್ ಸ್ಪೆನ್ಸರ್ ಚಾಪ್ಲಿನ್ ರಿಯಲ್ ಲೈಫ್​ ಯಾವುದೇ ಪ್ಲೇಬಾಯ್​ಗಿಂತ ಕಡಿಮೆಯಾಗಿರಲಿಲ್ಲ. ಮನೋಜ್ಱ ಅಭಿನಯದ ಮೂಲಕ ಗಳಿಸಿದ್ದ ಜನಪ್ರಿಯತೆ ಚಾರ್ಲಿಗೆ ದೊಡ್ಡ ಅಭಿಮಾನಿ ಬಳಗವನ್ನೇ ಸೃಷ್ಟಿಸಿತ್ತು. ಈ ಅಭಿಮಾನಿ ವೃಂದದಲ್ಲಿ ಮಹಿಳಾಮಣಿಗಳೇ ಹೆಚ್ಚಾಗಿದ್ದರು.

ಮಹಿಳಾ ಫ್ಯಾನ್ಸ್​ಗಳನ್ನೇ ಹೆಚ್ಚಾಗಿ ಇಷ್ಟಪಡುತ್ತಿದ್ದ ಚಾರ್ಲಿ ಅನೇಕ ಹೆಣ್ಮಕ್ಕಳ ಹೃದಯ ಕದಿಯುವಲ್ಲಿ ಯಶಸ್ವಿಯಾಗಿದ್ದರು. ಆದರೆ ಹೆಣ್ಣಿನ ವಿಚಾರದಲ್ಲಿ ಚಾರ್ಲಿಯ ಮನದಲ್ಲಿ ಚಪಲ ಮಾತ್ರ ಉಳಿಯುತ್ತಿತ್ತೇ, ಹೊರತು ಪ್ರೀತಿ ಇರುತ್ತಿರಲಿಲ್ಲ. ಕಡಿಮೆ ಅಂದರೂ ನಾನು ಜೀವನದಲ್ಲಿ 2000ರಷ್ಟು ಮಹಿಳೆಯರೊಂದಿಗೆ ಸಂಬಂಧ ಬೆಳೆಸಿದ್ದೇನೆ ಎಂದು ಅವರೇ ಒಂದು ಇಂಟರ್ವ್ಯೂನಲ್ಲಿ ಹೇಳಿದ್ದರು. ಇದರಿಂದ ಚಾರ್ಲಿ ಎಂತಹ ಚಪಲ ಚನ್ನಿಗರಾಯ ಎಂಬುದನ್ನು ಊಹಿಸಿಕೊಳ್ಳಬಹುದು.

5 ಅಡಿ 4 ಇಂಚಿನ ಸರಳ ದೇಹಾಕಾರದ ಚಾರ್ಲಿಯ ಸಕ್ಸಸ್ ಮತ್ತು ಚಾರ್ಮ್ ಹುಡುಗಿಯರನ್ನು ಅತಿಯಾಗಿ ಆಕರ್ಷಿಸುತ್ತಿತ್ತು. ಅದರಲ್ಲೂ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರು ಚಾರ್ಲಿ ಚಾಪ್ಲಿನ್​​ಗೆ ಮರಳಾಗುತ್ತಿದ್ದರು. ಹೀಗಾಗಿ ಚಾಪ್ಲಿನ್ ಹೆಚ್ಚಾಗಿ ಬಾಲಕಿಯರೊಂದಿಗೇ ಸಂಬಂಧ ಬೆಳೆಸುತ್ತಿದ್ದರು. ಬಳಿಕ ಇನ್ನಿತರ ಕಾರಣಗಳನ್ನು ನೀಡಿ ಅವರನ್ನು ಉಪೇಕ್ಷಿಸುತ್ತಿದ್ದರು.

ನಿಮ್ಮ ಬಾಳಿನಲ್ಲಿ ಮಹಿಳಾ ಐಡಲ್ ಯಾರು ಎಂದು ಕೇಳಿದಾಗ 'ನಾ ಅವರನ್ನು ಪ್ರೀತಿಸದೇ ಇರಬಹುದು ಆದರೆ ಅವರು ನನ್ನ ಪ್ರೀತಿಗೆ ಹುಚ್ಚಾರಾಗಿರ್ತಾರೆ' ಎಂದು ಚಾರ್ಲಿ ಹಿಂದೊಮ್ಮೆ ಉತ್ತರಿಸಿದ್ದರು. ಇದು ಕೂಡ ವಿಶ್ವ ಗೆದ್ದ ಚಾರ್ಲಿ ಚಾಪ್ಲಿನ್ ವ್ಯಕ್ತಿತ್ವವನ್ನು ಸೂಚಿಸುತ್ತದೆ.

ಅದರಲ್ಲೂ ಮುಖ್ಯವಾಗಿ ಚಾರ್ಲಿ ಚಾಪ್ಲಿನ್ ಮಹಿಳೆಯರನ್ನು ಇಷ್ಟಪಡುತ್ತಿದ್ದರೇ ಹೊರತು ಯಾವತ್ತೂ ಅವರನ್ನು ನಂಬುತ್ತಿರಲಿಲ್ಲ. ಸಿನೆಮಾದಲ್ಲಿ ನಾಯಕಿಯ ಪ್ರೀತಿಗೆ ಹಂಬಲಿಸುತ್ತಿದ್ದ ಚಾರ್ಲಿಯ ವರ್ತನೆ ನಿಜ ಜೀವನದಲ್ಲಿ ವ್ಯತಿರಿಕ್ತವಾಗಿತ್ತು. ಮೂರು ವಿವಾಹವಾಗಿದ್ದ ಚಾರ್ಲಿಯು ಹನ್ನೊಂದು ಮಕ್ಕಳನ್ನು ಹೊಂದಿದ್ದರು. ಅಲ್ಲದೇ ವೈವಾಹಿಕ ಜೀವನವು ಸದಾ ಸಂಘರ್ಷ, ವಿವಾದಗಳಿಂದಲೇ ಕೂಡಿತ್ತು ಎಂಬುದಕ್ಕೆ ಅವರ ಎರಡನೇ ಹೆಂಡತಿ ಚಾರ್ಲಿಯನ್ನು ಬಹಿರಂಗವಾಗಿ 'ಸೆಕ್ಸ್ ಮೆಷಿನ್' ಎಂದು ಕೆರೆದಿರುವುದೇ ಸಾಕ್ಷಿ.ಫಸ್ಟ್ ಅಫೇರ್ - ಎಡ್ನಾ ಪರ್ವಿಯೆನ್ಸ್

ಚಾರ್ಲಿ ಚಾಪ್ಲಿನ್ ಅನೇಕ ಸಂಬಂಧಗಳನ್ನು ಹೊಂದಿದ್ದರೂ, ಮೂರು ಮದುವೆಗಳನ್ನು ಮಾತ್ರ ಘೋಷಿಸಿದ್ದರು. ಅವರ ಮೊದಲ ವೈವಾಹಿಕ ಸಂಬಂಧ ಎಡ್ನಾ ಪರ್ವಿಯೆನ್ಸ್ (19) ರೊಂದಿಗೆ ಪ್ರಾರಂಭವಾಗಿತ್ತು.  ಚಾರ್ಲಿ ಮತ್ತು ಎಡ್ನಾ ರೆಸ್ಟೋರೆಂಟ್ನಲ್ಲಿ ಭೇಟಿಯಾಗಿದ್ದರು. ಒಬ್ಬ ಪರಿಚಾರಿಕೆಯಾಗಿದ್ದ ಎಡ್ನಾ ಸೌಂದರ್ಯವು ಚಾರ್ಲಿಯನ್ನು ಅತಿಯಾಗಿ ಆಕರ್ಷಿಸಿತ್ತು. ಇದಾದ ಬಳಿಕ ಚಾರ್ಲಿ ಚಾಪ್ಲಿನ್ ಸಿನೆಮಾದಲ್ಲಿ ಅಭಿನಯಿಸಲು ಎಡ್ನಾರವರನ್ನು ಆಹ್ವಾನಿಸಿದ್ದರು.

ಚಿತ್ರರಂಗಕ್ಕೆ ಹೊಸಬರಾಗಿದ್ದ ಎಡ್ನಾಗೆ ಚಾರ್ಲಿಯೇ ಗಾಢ್ ಫಾದರ್. ಕ್ರಮೇಣ ಇವರಿಬ್ಬರೂ ತುಂಬಾ ಆಪ್ತರಾದರು. ಆದರೆ ಚಾರ್ಲಿ ಎಡ್ನಾಳನ್ನು ಯಾವತ್ತೂ ಮದುವೆಯಾಗಿಲ್ಲ ಎಂದು ಹೇಳಲಾಗಿದೆ. ಒಂದು ವರ್ಷ ಜೊತೆಯಾಗಿದ್ದ ಚಾರ್ಲಿ ಮತ್ತು ಎಡ್ನಾ ಬಳಿಕ ದೂರವಾದರು. ಎಡ್ನಾಳನ್ನು ಕಡೆಗಣಿಸಿ ಚಾರ್ಲಿ ಸಿನೆಮಾದತ್ತ ಗಮನ ಕೇಂದ್ರೀಕರಿಸಿದ್ದರು. ಅಷ್ಟೊತ್ತಿಗೆ ಎಡ್ನಾ ಕೂಡ ಚಿತ್ರರಂಗದಲ್ಲಿ ನೆಲೆಯೂರಿದ್ದರು. ಚಾಪ್ಲಿನ್ ಎಡ್ನಾಳನ್ನು ತೊರೆದರೂ ಬಳಿಕ ಇವರಿಬ್ಬರು ಜೋಡಿಯಾಗಿ 34 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಮೊದಲ ಪತ್ನಿ- ಮಿಲ್ಡ್ರೆಡ್ ಹ್ಯಾರಿಸ್

ಎಡ್ನಾದಿಂದ ದೂರವಾದ ಬಳಿಕ ಚಾರ್ಲಿಯು 16 ವರ್ಷ ವಯಸ್ಸಿನ ಮಿಲ್ಡ್ರೆಡ್ ಹ್ಯಾರಿಸ್ ಅವರನ್ನು ಪ್ರೀತಿಸುತ್ತಿದ್ದರು. ಆ ಹೊತ್ತಿಗೆ 29 ವರ್ಷ ವಯಸ್ಸಿನ ಚಾಪ್ಲಿನ್ ಹಾಲಿವುಡ್​ನ ಅತ್ಯಂತ ಶ್ರೀಮಂತ ಕಲಾವಿದರಾಗಿದ್ದರು. ಮಿಲ್ಡ್ರೆಡ್ ಹ್ಯಾರಿಸ್ ಮೋಹಕ್ಕೆ ಒಳಗಾಗಿದ್ದ ಚಾರ್ಲಿ ಚಾಪ್ಲಿನ್ ತನ್ನ ಹೊಸ ಪ್ರಿಯತಮೆಗೆ ಹೂವುಗಳನ್ನು ಕಳುಹಿಸಲು ಪ್ರಾರಂಭಿಸಿದ್ದರು.

ಗಂಟೆಗಳ ಕಾಲ ತನ್ನ ಸ್ಟುಡಿಯೊದ ಹೊರಗೆ ಪ್ರೇಯಸಿ ಮಿಲ್ಡ್ರೆಡ್​ಗಾಗಿ ಕಾಯುತ್ತಾ ಕೂತಿರುತಿದ್ದರು. ಕ್ರಮೇಣ ಇವರಿಬ್ಬರ ಸಂಬಂಧವು ಪ್ರಬಲವಾಗಿ ಬೆಳೆಯಿತು. ಆದರೆ ಈ ಪ್ರೇಮ್ ಕಹಾನಿಯಲ್ಲಿ ಅದಾಗಲೇ ಟ್ವಿಸ್ಟ್ ಸಂಭವಿಸಿತ್ತು. 16ರ ಹರೆಯದ ಮಿಲ್ಡ್ರೆಡ್ ಗರ್ಭಿಣಿಯಾಗಿದ್ದರು. ಇದರಿಂದಾಗಿ ಚಾರ್ಲಿ ಅಸಮಾಧಾನಗೊಂಡಿದ್ದರು. ಏಕೆಂದರೆ ಚಾರ್ಲಿಯು ವಿವಾದಗಳಿಂದ ದೂರವಿರಲು ಬಯಸಿದ್ದರು. ಹೀಗಾಗಿ ಈ ಸುದ್ದಿ ಹೊರಜಗತ್ತಿಗೆ ಬರುವಷ್ಟರಲ್ಲಿ ಮಿಲ್ಡ್ರೆಡ್ ರಹಸ್ಯವಾಗಿ ಮದುವೆಯಾದರು.

ಆದರೆ ಸ್ವಲ್ಪ ದಿನಗಳ ಬಳಿಕ ಚಾರ್ಲಿಗೆ ಗರ್ಭದ ಟ್ವಿಸ್ಟ್ ಹಿಂದಿನ ಅಸಲಿಯತ್ತು ತಿಳಿಯಿತು. ಚಾಪ್ಲಿನ್ ರನ್ನು ಮದುವೆಯಾಗಲು ಮಿಲ್ಡ್ರೆಡ್ ಗರ್ಭವತಿಯ ನಾಟಕವಾಡಿದ್ದರು. ಇದರಿಂದಾಗಿ ಚಾರ್ಲಿ ಮಿಲ್ಡ್ರೆಡ್​ನ್ನು ದೂರ ಮಾಡಲು ಪ್ರಾರಂಭಿಸಿದ್ದರು. ಚಾಪ್ಲಿನ್ ಸಂಪೂರ್ಣವಾಗಿ ಮಿಲ್ಡ್ರೆಡ್ ರಿಂದ ದೂರವಾಗುವ ಸಂದರ್ಭದಲ್ಲಿ ಮಿಲ್ಡ್ರೆಡ್ ಗರ್ಭವತಿಯಾಗಿದ್ದಳು. ಆದರೆ ಇದ್ಯಾವುದನ್ನೂ ಚಾಪ್ಲಿನ್ ತಲೆಗೆ ಹಚ್ಚಿಕೊಳ್ಳಲಿಲ್ಲ.

ಚಾರ್ಲಿಯ ಹೊಸ ಸಂಬಂಧಗಳ ಬಗ್ಗೆ ತಿಳಿದಿದ್ದ ಮಿಲ್ಡ್ರೆಡ್ ಚಿಂತಿತಳಾಗಿದ್ದಳು. ಮದುವೆಯಾದ ಬಳಿಕ ಚಾರ್ಲಿ ನನ್ನನ್ನು ಮರೆತನು. ನಮ್ಮ ಮಗುವನ್ನೂ ನೋಡಲು ಕೂಡ ಹಿಂತಿರುಗಲಿಲ್ಲ ಎಂದು ಮಿಲ್ಡ್ರೆಡ್ ಒಂದು ಸಂದರ್ಭದಲ್ಲಿ ಹೇಳಿದ್ದರು.

ಮಿಲ್ಡ್ರೆಡ್ ಚಾರ್ಲಿ ದಂಪತಿಗೆ ಜನಿಸಿದ ಮಗು ಮೂರು ದಿನಗಳಲ್ಲಿ ನಿಧನ ಹೊಂದಿತು. 1920 ರಲ್ಲಿ ಚಾರ್ಲಿಯೊಂದಿಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಮಿಲ್ಡ್ರೆಡ್​ಗೆ ಪತಿಯಿಂದ ಡೈವೊರ್ಸ್ ಬೇಡವಾಗಿತ್ತು. ಆದರೆ ಚಾರ್ಲಿಯು ಮಹಿಳೆಯರೊಂದಿಗೆ ಹೊಂದಿದ್ದ ಅಫೇರ್ ಬಗ್ಗೆ ನಿಸ್ಸಹಾಯಕಳಾಗಿದ್ದಳು.

ಪುಟ್ಟದೊಂದು ಅಫೇರ್ - ಪೆಗ್ಗಿ ಹಾಪ್ಕಿನ್ಸ್

ಚಾರ್ಲಿ ಚಾಪ್ಲಿನ್ ಹೆಸರು ಮತ್ತೆ ದೊಡ್ಡಮಟ್ಟದಲ್ಲಿ ತಲುಕು ಹಾಕಿಕೊಂಡಿದ್ದು ಪೆಗ್ಗಿ ಹಾಪ್ಕಿನ್ಸ್ ಎಂಬ ಗೋಲ್ಡ್ ಡಿಗ್ಗರ್ (ಹಣಕ್ಕಾಗಿ ಪ್ರೀತಿ) ಮಹಿಳೆಯೊಂದಿಗೆ. ಪೆಗ್ಗಿ ಈ ಮೊದಲು ಐದು ಉದ್ಯಮಿಗಳನ್ನು ಮದುವೆಯಾಗಿದ್ದರೂ ಕೂಡ ಚಾರ್ಲಿಯ ಸಕ್ಸಸ್ ಮತ್ತು ಚಾರ್ಮ್​​ಗೆ ಮನಸೋತಿದ್ದಳು.

ಅಲ್ಲದೇ ಚಾರ್ಲಿಯೊಂದಿಗೆ ದೀರ್ಘ ಸಂಬಂಧವನ್ನು ಹೊಂದಿದ್ದರು. ಆದರೆ ಸ್ನೇಹಿತನ ಸಲಹೆಯ ಮೇರೆಗೆ ಚಾರ್ಲಿಯು ಈ ಸಂಬಂಧದಿಂದ ಹೊರಬಂದನು ಎನ್ನಲಾಗುತ್ತಿದೆ. ಹಾಗೆಯೇ ಈ ಸಂಬಂಧ ಕೂಡ ಚಾರ್ಲಿಯು ತನ್ನ ಚೇಷ್ಠೆಗಳನ್ನು ತೀರಿಸಿಕೊಳ್ಳಲು ಮಾಡಿದ್ದರೆಂದು ಹೇಳಲಾಗುತ್ತದೆ.

ಎರಡನೇ ಹೆಂಡತಿ - ಲಿಟಾ ಗ್ರೇ

ಪೆಗ್ಗಿ ನಂತರ, ಚಾರ್ಲಿಯ ಅತ್ಯಂತ ಆಪ್ತ ಸಂಗಾತಿ ಎಂದರೆ 15 ವರ್ಷದ ಲಿಟಾ ಗ್ರೇ. ಲೀ ಅವರನ್ನೂ ಕೂಡ ಚಲನಚಿತ್ರಕ್ಕಾಗಿ ಚಾರ್ಲಿಯವರು ಆಯ್ಕೆ ಮಾಡಿದ್ದರು. ಬಳಿಕ ಇವರಿಬ್ಬರ ನಡುವೆ ಅಫೇರ್ ಸಹ ಪ್ರಾರಂಭವಾಯಿತು. ಸಂಬಂಧ ಕೈ ಮೀರಿ ಲಿಟಾ ಗ್ರೇ  ಗರ್ಭಿಣಿಯಾಗಿದ್ದಳು.

ಇದರಿಂದ ವಿಚಿಲಿತರಾಗಿದ್ದ ಚಾರ್ಲಿ ಗರ್ಭಪಾತಕ್ಕೆ ಸಲಹೆ ನೀಡಿದ್ದರು. ಆದರೆ ಲೀಟಾ ಗರ್ಭಪಾತ ನಿರಾಕರಿಸಿದರು. ಚಾರ್ಲಿಯು ತನ್ನ ಪ್ರೇಯಸಿಯನ್ನು ಮದುವೆ ಮಾಡಿಸಲು ಪ್ರಯತ್ನಿಸಿದರು. ಲಿಟಾ ಗ್ರೇಯನ್ನು ಮದುವೆಯಾಗುವ ವರನಿಗೆ 20,000 ಡಾಲರ್ ನೀಡಲು ನಿರ್ಧರಿಸಿದ್ದರು. ಆದರೆ ಇದನ್ನು ಒಪ್ಪಲು ಲಿಟಾ ಗ್ರೇ ತಯಾರಿರಲಿಲ್ಲ. ಲೈಂಗಿಕ ದೌರ್ಜನ್ಯ ಆರೋಪ ಬಗ್ಗೆ ಹೆದರಿದ್ದ ಚಾರ್ಲಿಯು ಲಿಟಾ ಗ್ರೇಯನ್ನು ಕೊನೆಗೆ ಮದುವೆಯಾದರು.

ಆದರೆ ಈ ದಾಂಪತ್ಯ ಜೀವನ ಚಾರ್ಲಿಗೆ ಇಷ್ಟವಿರಲಿಲ್ಲ. ಲಿಟಾ ಗ್ರೇಗೆ ವಿಚ್ಛೇಧನ ನೀಡಲು ನಿರ್ಧರಿಸಿದ್ದರು. ಆ ಕಾಲಕ್ಕೆ ಅತೀ ದುಬಾರಿ ವಿಚ್ಛೇಧನ ಚಾರ್ಲಿ ಮತ್ತು ಲಿಟಾ ನಡುವೆ ನಡೆಯಿತು. ಸುಮಾರು 5 ಕೋಟಿ ರೂ. ಪರಿಹಾರ ಹಾಗೂ ಮಕ್ಕಳ ರಕ್ಷಣೆಗಾಗಿ 1 ಕೋಟಿ 33 ಲಕ್ಷ ರೂ.ವನ್ನು ಚಾರ್ಲಿ ನೀಡಿದ್ದರು. ಇದು ಅಮೇರಿಕಾದ ಇತಿಹಾಸದಲ್ಲೇ ಅತ್ಯಂತ ದುಬಾರಿ ವಿಚ್ಛೇದನ ಎಂದು ಆ ಕಾಲದಲ್ಲಿ ಪರಿಗಣಿಸಲಾಗಿತ್ತು.

ನಿಯತಕಾಲಿಕೆ ಮತ್ತು ಪತ್ರಿಕೆಗಳಿಗೆ ಲಿಟಾ ಗ್ರೇ ಹಲವಾರು ಸಂದರ್ಶನ ನೀಡಿದರು. ಈ ಸಂದರ್ಶನದಲ್ಲಿ ಅವರು ಚಾರ್ಲಿಯ ಸೆಕ್ಸ್ ಲೈಫ್ ಕುರಿತಾದ ಅನೇಕ ವಿಷಯಗಳನ್ನು ಬಹಿರಂಗಗೊಳಿಸಿದರು. ಸ್ಟಾರ್ ನಟನ ಬಗ್ಗೆ ಮತ್ತು 'ಸೆಕ್ಸ್ ಮೆಷಿನ್' ವಿಚಾರಗಳು ಆ ಸಮಯದಲ್ಲಿ ಅತೀ ದೊಡ್ಡ ಮಟ್ಟದ ಸುದ್ದಿಯಾಯಿತು. ಈ ವಿಚಾರಗಳು ಚಾರ್ಲಿಯ ಕೆಲಸದ ಮೇಲೆ ಪರಿಣಾಮ ಬೀರಿತ್ತು ಮತ್ತು ಅವರ 'ದಿ ಸರ್ಕಸ್' ಸಿನೆಮಾ ಎರಡು ವರ್ಷಗಳ ಕಾಲ ಮುಂದೂಡಲ್ಪಟ್ಟಿತು.

ಚಾರ್ಲಿ ಚಾಪ್ಲಿನ್​ರ ಮೂರನೇ ವಿವಾಹ ಊನಾ ಓ ಜೊತೆ ನಡೆಯಿತು. 1943 ರಲ್ಲಿ ನಡೆದ ಈ ವಿವಾಹ ಬಂಧವು ಬರೋಬ್ಬರಿ 35 ವರ್ಷಗಳ ಕಾಲ ನೆಲೆನಿಂತಿತು. ಮೂರನೇ ದಾಂಪತ್ಯ ಜೀವನವು ಚಾರ್ಲಿ ಚಾಪ್ಲಿನ್​ರ ಒಟ್ಟಾರೆ ಜೀವನಕ್ಕೆ ತದ್ವಿರುದ್ದವಾಗಿತ್ತು ಎಂಬುದೇ ಒಂದು ಅಚ್ಚರಿ.
First published:November 18, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ