• Home
  • »
  • News
  • »
  • lifestyle
  • »
  • Husband: ತಮ್ಮ ಗಂಡನಿಂದ ಪತ್ನಿಯರು ಬಯಸುವ ಗುಣಗಳು ಯಾವವು? ಇಲ್ಲಿದೆ ಸುಖ ಸಂಸಾರದ 11 ಸೂತ್ರಗಳು

Husband: ತಮ್ಮ ಗಂಡನಿಂದ ಪತ್ನಿಯರು ಬಯಸುವ ಗುಣಗಳು ಯಾವವು? ಇಲ್ಲಿದೆ ಸುಖ ಸಂಸಾರದ 11 ಸೂತ್ರಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತಮ್ಮ ಮಡದಿಯ ಮೇಲೆ ಪ್ರೀತಿ ಹಾಗೂ ಅನುರಾಗವನ್ನು ವ್ಯಕ್ತಪಡಿಸುವ ಪುರುಷರೆಡೆಗೆ ಮಹಿಳೆಯರು ಆಕರ್ಷಿತಗೊಳ್ಳುತ್ತಾರೆ ಹಾಗೂ ತಮ್ಮ ಪತಿಗಾಗಿ ತಮ್ಮ ಸ್ವಭಾವವನ್ನು ಬದಲಾಯಿಸಿಕೊಳ್ಳುತ್ತಾರೆ. ಅಂತಹ ಗುಣಗಳು ಯಾವುವು ಎಂಬುದನ್ನು ನೋಡೋಣ.

  • Share this:

ತಮ್ಮ ಸಂಗಾತಿ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡವರಾಗಿರಬೇಕು ಹಾಗೂ ತಮ್ಮನ್ನು ಅರ್ಥಮಾಡಿಕೊಳ್ಳುವಂತಹ ಮನಸ್ಥಿತಿ ಹೊಂದಿದವರಾಗಿರಬೇಕು ಎಂದೇ ಹೆಚ್ಚಿನ ಮಹಿಳೆಯರು (Womens) ತಮ್ಮ ಜೀವನ ಸಂಗಾತಿಯ ಬಗ್ಗೆ ಕನಸು ಕಾಣುತ್ತಾರೆ. ಸಂಬಂಧದಲ್ಲಿ ಪ್ರೀತಿ (Love) ಮತ್ತು ಆಕರ್ಷಣೆಯೊಂದೇ ಮುಖ್ಯವಾಗಿರದೇ ಸಂಬಂಧವನ್ನು ಕೊನೆಯವರೆಗೂ ಉಳಿಸಿಕೊಂಡು ಹೋಗುವ ಹಲವಾರು ಗುಣಗಳಿರಬೇಕಾಗುತ್ತವೆ. ತಮ್ಮ ಸಂಗಾತಿ ಹೀಗಿರಬೇಕು ಹಾಗಿರಬೇಕು ಎಂದೇ ಹೆಚ್ಚಿನ ಹೆಂಗಳೆಯರು ಕಲ್ಪಿಸಿಕೊಂಡು ತನ್ನವರಲ್ಲಿ ಅಂತಹ ಗುಣಗಳು (Characteristics )ಇದೆಯೇ ಎಂದೇ ಹುಡುಕಾಡುತ್ತಾರೆ. ಎಲ್ಲಾ ಪುರುಷರು ತಮ್ಮ ಪತ್ನಿಯರಿಗೆ ಹೊಂದಿಕೊಳ್ಳುವ ಗುಣಗಳನ್ನು ಪಡೆದುಕೊಂಡಿರಲೇಬೇಕು ಎಂಬ ನಿಯಮವೂ ಇಲ್ಲ. ಅದಾಗ್ಯೂ ಸುಖೀ ದಾಂಪತ್ಯಕ್ಕೆ ಕೆಲವೊಂದು ಗುಣಗಳನ್ನು ಸ್ತ್ರೀ ಪುರುಷರು ಇಬ್ಬರೂ ಹೊಂದುವುದು ಅತ್ಯವಶ್ಯಕವಾಗಿದೆ.


ತಮ್ಮ ಮಡದಿಯ ಮೇಲೆ ಪ್ರೀತಿ ಹಾಗೂ ಅನುರಾಗವನ್ನು ವ್ಯಕ್ತಪಡಿಸುವ ಪುರುಷರೆಡೆಗೆ ಮಹಿಳೆಯರು ಆಕರ್ಷಿತಗೊಳ್ಳುತ್ತಾರೆ ಹಾಗೂ ತಮ್ಮ ಪತಿಗಾಗಿ ತಮ್ಮ ಸ್ವಭಾವವನ್ನು ಬದಲಾಯಿಸಿಕೊಳ್ಳುತ್ತಾರೆ. ಅಂತಹ ಗುಣಗಳು ಯಾವುವು ಎಂಬುದನ್ನು ನೋಡೋಣ.


ಪರಸ್ಪರ ಸಮಯ ವಿನಿಯೋಗಿಸುವುದು:


ಸಂಬಂಧದಲ್ಲಿ ಉತ್ತಮ ಬಾಂಧವ್ಯವನ್ನು ಮಿಳಿತಗೊಳಿಸಲು ಸಂಗಾತಿಗಳು ಪರಸ್ಪರ ಸಮಯ ನೀಡುವುದು ಉತ್ತಮ ವಿಷಯವಾಗಿದೆ. ಜೊತೆಯಾಗಿ ತಿಂಡಿ ತಿನ್ನುವುದು, ಸ್ವಲ್ಪ ಕಾಲ ಹರಟೆ ಹೊಡೆಯುವುದು, ಹೀಗೆ ಒಂದಿನಿತು ಸಮಯವನ್ನು ಜೊತೆಯಾಗಿ ಕಳೆಯುವುದು ಉತ್ತಮ ಸಂಬಂಧಕ್ಕೆ ಭದ್ರ ಬುನಾದಿಯಾಗಿದೆ.


ಪರಸ್ಪರರನ್ನು ಅಭಿನಂದಿಸುವುದು:


ಜೀವನದಲ್ಲಿ ಒತ್ತಡ, ಕಷ್ಟ, ಸುಖ ಏರಿಳಿತಗಳು ಸರ್ವೇ ಸಾಮಾನ್ಯವಾಗಿರುತ್ತದೆ. ಈ ಸಂದರ್ಭಗಳಲ್ಲಿ ಪರಸ್ಪರರು ಜೊತೆಯಾಗಿರುವುದು ಯಾವುದೇ ಸವಾಲುಗಳನ್ನು ಹಿಮ್ಮೆಟ್ಟಿಸಲು ಸಹಕಾರಿಯಾಗಿದೆ. ಪರಸ್ಪರರನ್ನು ಮೆಚ್ಚಿಸುವಂತಹ ಮಾತುಗಳನ್ನಾಡುವುದು, ಅಭಿನಂದಿಸುವುದು, ಹೊಗಳುವುದು ಮೊದಲಾದ ಅಂಶಗಳು ದಾಂಪತ್ಯವನ್ನು ಗಟ್ಟಿಗೊಳಿಸುತ್ತದೆ.


ಇದನ್ನೂ ಓದಿ: Home Remedy: ಚಳಿಗಾಲದಲ್ಲಿ ಬರುವ ಶೀತ, ಗಂಟಲು ನೋವು ನಿವಾರಣೆಗೆ ಇಲ್ಲಿದೆ ಸೂಪರ್ ಮನೆಮದ್ದು!


ಸ್ಪಷ್ಟ ಹಾಗೂ ಸ್ಥಿರವಾದ ಸಂವಹನ:


ಆರೋಗ್ಯಕರ ಸಂಬಂಧಕ್ಕೆ ಸಂವಹನ ಅತ್ಯವಶ್ಯಕವಾಗಿದೆ. ಸಂವಹನದಲ್ಲಿ ವ್ಯತ್ಯಾಸಗಳುಂಟಾದಾಗ ಅದು ದಾಂಪತ್ಯದ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗದಂತೆ ನೋಡಿಕೊಳ್ಳಿ ಯಾವುದೇ ಸಮಸ್ಯೆಗಳನ್ನು ಮಾತನಾಡಿ ಪರಿಹರಿಸಿಕೊಳ್ಳಿ.


ತಪ್ಪುಗಳನ್ನು ಮನ್ನಿಸುವುದು:


ಮನುಷ್ಯ ತಪ್ಪು ಮಾಡುವುದು ಸಹಜ ಹಾಗೆಯೇ ನಿಮ್ಮ ಸಂಗಾತಿ ತಪ್ಪು ಮಾಡಿರುವುದು ಯಾವುದಾದರೂ ಬಲವಾದ ಕಾರಣದಿಂದಲೇ ಎಂಬುದನ್ನು ತಿಳಿದುಕೊಳ್ಳಿ. ತಪ್ಪುಗಳು ಆದರೆ ಅದರ ಬಗ್ಗೆಯೇ ಹೆಚ್ಚು ಮಾತನಾಡಬೇಡಿ. ಕ್ಷಮಿಸಿ ಮುಂದುವರಿಯಿರಿ.


ನ್ಯೂನತೆಗಳನ್ನು ಒಪ್ಪಿಕೊಳ್ಳುವುದು:


ಯಾರೂ ಪರಿಪೂರ್ಣರಲ್ಲ ಎಂಬ ಮಾತಿನಂತೆಯೇ ತಮ್ಮಲ್ಲಿರುವ ನ್ಯೂನತೆಗಳನ್ನು ಒಪ್ಪಿಕೊಳ್ಳುವುದು ದಾಂಪತ್ಯಕ್ಕೆ ಪೂರಕವಾಗಿರುವ ಅಂಶವಾಗಿದೆ. ಇಬ್ಬರೂ ವ್ಯಕ್ತಿಗಳು ನ್ಯೂನತೆಗಳನ್ನು ಹೊಂದಿರುತ್ತಾರೆ. ಆ ನ್ಯೂನತೆಗಳನ್ನು ಸ್ವೀಕರಿಸಬೇಕು ಮತ್ತು ಉತ್ತಮ ಅಂಶಗಳನ್ನು ಮಾತ್ರವೇ ಕೇಂದ್ರೀಕರಿಸಬೇಕು.


ಸಂಗಾತಿ ಮತ್ತು ಸಂಬಂಧಕ್ಕೆ ಆದ್ಯತೆ ನೀಡುವುದು:


ತಮ್ಮ ಸಂಗಾತಿ ತಮಗಾಗಿ ಸಮಯ ಮೀಸಲಿಡುವುದಿಲ್ಲ ಎಂದೇ ಹೆಚ್ಚಿನ ನಾರೀಮಣಿಯರು ಬೇಸರ ವ್ಯಕ್ತಪಡಿಸುತ್ತಾರೆ. ಈ ಭಾವನೆ ಸಂಬಂಧದಲ್ಲಿ ಅಡ್ಡಿಯನ್ನುಂಟು ಮಾಡದಂತೆ ನೋಡಿಕೊಳ್ಳಿ. ನಿಮ್ಮ ಸಂಗಾತಿಯ ಯೋಗಕ್ಷೇಮ ಮತ್ತು ಸಂತೃಪ್ತಿ ನಿಮ್ಮ ಮೊದಲ ಆದ್ಯತೆಯಾಗಿರಬೇಕು.


ವಿರೋಧ ಅಭಿಪ್ರಾಯವನ್ನು ಗೌರವಿಸುವುದು:


ಇಬ್ಬರೂ ವ್ಯಕ್ತಿಗಳ ಅಭಿಪ್ರಾಯ ಸಮಾನವಾಗಿರುವುದಿಲ್ಲ. ನಿಮ್ಮ ಸಂಗಾತಿ ಮತ್ತು ನೀವು ವಿವಿಧ ವಿಷಯಗಳಲ್ಲಿ ವಿರುದ್ಧ ಅಭಿಪ್ರಾಯಗಳನ್ನು ಹೊಂದಿರುತ್ತೀರಿ. ನಿಮ್ಮ ಅಭಿಪ್ರಾಯಕ್ಕೆ ಸಂಗಾತಿಯೂ ಬದ್ಧರಾಗಿರಬೇಕು ಎಂದು ಬಯಸಬೇಡಿ. ಅವರ ಸ್ವಂತಿಕೆಗೆ ಬೆಲೆ ನೀಡಿ.


ನಿಷ್ಠರಾಗಿ ಉಳಿಯುವುದು:


ಒಳ್ಳೆಯ ಪತಿ/ಸಂಗಾತಿಯು ತಾನು ಪ್ರೀತಿಸುವ ಮಹಿಳೆಗೆ ಯಾವಾಗಲೂ ನಿಷ್ಠನಾಗಿರುತ್ತಾನೆ. ನಿಷ್ಠೆಯಲ್ಲಿ ರಾಜಿಮಾಡಿಕೊಳ್ಳುವುದು ಸಂಬಂಧದಲ್ಲಿ ಆಯ್ಕೆಯಾಗುವುದಿಲ್ಲ.


ಸಂಗಾತಿಯ ಮೇಲೆ ನಂಬಿಕೆ ಇರಿಸುವುದು:


ಪ್ರಣಯ ಸಂಬಂಧದಲ್ಲಿ ಪರಸ್ಪರ ನಂಬಿಕೆ ಅತ್ಯಗತ್ಯ. ನಿಮ್ಮ ಸಂಗಾತಿಯನ್ನು ನೀವು ಯಾವಾಗಲೂ ಅನುಮಾನಿಸುತ್ತಿದ್ದರೆ ಆ ಅಭ್ಯಾಸವನ್ನು ಬಿಟ್ಟುಬಿಡಿ. ಅತಿಯಾದ ಸಂಶಯ ಸಂಬಂಧದಲ್ಲಿ ಹುಳಿ ಹಿಂಡಬಹುದು.


ಇದನ್ನೂ ಓದಿ: Jog Falls: ಪುನೀತ್ ಕಂಡ ರೀತಿಯಲ್ಲೇ ಜೋಗ್ ಫಾಲ್ಸ್ ನೋಡ್ಕೊಂಡ್ ಬನ್ನಿ, ಫುಲ್ ಟ್ರಿಪ್ ಪ್ಲಾನ್ ಇಲ್ಲಿದೆ


ಪ್ರೀತಿ ವ್ಯಕ್ತಪಡಿಸುವುದರಲ್ಲಿ ಉದಾರತೆ:


ದೈಹಿಕ ಪ್ರೀತಿಯ ವಿಷಯದಲ್ಲಿ ಮಾತ್ರವಲ್ಲದೆ ನೀವು ಬಳಸುವ ಪದ ಹಾಗೂ ಕ್ರಿಯೆಗಳಲ್ಲಿ ಕೂಡ ಈ ಭಾವನೆ ವ್ಯಕ್ತವಾಗಲಿ. ಸಂಗಾತಿಯು ನಿಮ್ಮನ್ನು ಪ್ರೀತಿಸುತ್ತಿದ್ದರೆ ಅದನ್ನವರು ಕ್ರಿಯೆಗಳ ಮೂಲಕ ವ್ಯಕ್ತಪಡಿಸುತ್ತಾರೆ.


ಸಂಗಾತಿಯನ್ನು ಅರ್ಥಮಾಡಿಕೊಳ್ಳುವುದು:


ನಿಮ್ಮ ಸಂಗಾತಿ ಜೀವನದಲ್ಲಿ ಏನನ್ನು ಬಯಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮತ್ತು ಪರಿಸ್ಥಿತಿಯನ್ನು ಲೆಕ್ಕಿಸದೆ ಅವರನ್ನು ಬೆಂಬಲಿಸುವುದು ನಿಮ್ಮ ಗುಣವಾಗಿರಲಿ. ನಿಮ್ಮ ಸಂಗಾತಿಯ ಜೀವನದಲ್ಲಿ ಅಡ್ಡಿಯಾಗಬೇಡಿ ಬದಲಿಗೆ ಅವರ ಕನಸುಗಳನ್ನು ನನಸಾಗಿಸಲು ಸಹಾಯ ಮಾಡುವವರಾಗಿರಿ.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು