• Home
 • »
 • News
 • »
 • lifestyle
 • »
 • Mantra Jaap: ಯಾವ ಆರೋಗ್ಯ ಸಮಸ್ಯೆಯಿರುವವರು ಯಾವ ಮಂತ್ರ ಜಪ ಜಪಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

Mantra Jaap: ಯಾವ ಆರೋಗ್ಯ ಸಮಸ್ಯೆಯಿರುವವರು ಯಾವ ಮಂತ್ರ ಜಪ ಜಪಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹೊಟ್ಟೆಯ ಆಳದಿಂದ ಹೊರಹೊಮ್ಮುವ ಈ ಶಬ್ದೋಚ್ಛಾರವನ್ನು ಸರಿಯಾದ ಯೋಗಾಸನಗಳ ಜೊತೆ ಮಾಡಿದರೆ ಅನೇಕ ಸಮಸ್ಯೆ ನಿವಾರಣೆಯಾಗುತ್ತವೆ. ಮಂತ್ರ ಜಪ ಮಾನಸಿಕವಾಗಿ ಹೆಚ್ಚು ಲಾಭಕಾರಿ. ಮನಸ್ಸಿಗೆ ವಿಶ್ರಾಂತಿ ನೀಡುವುದರ ಜೊತೆಗೆ ಈ ಒಂದು ಪದದ ಮಂತ್ರವು ಉಸಿರಾಟದ ಪ್ರದೇಶವನ್ನು ತೆರವುಗೊಳಿಸುತ್ತದೆ.

ಮುಂದೆ ಓದಿ ...
 • Share this:

  ಭಾರತೀಯರು (Indians) ಮಂತ್ರ ಜಪಕ್ಕೆ (Mantra Jaap) ಹೆಚ್ಚು ಮಹತ್ವ (Importance) ನೀಡುತ್ತಾರೆ. ಜೊತೆಗೆ ಇಡೀ ಜಗತ್ತು (World) ಮಂತ್ರಗಳ ಶಕ್ತಿಯನ್ನು (Energy) ಒಪ್ಪಿಕೊಂಡಿದೆ. ಪ್ರತಿಯೊಂದು ಮಂತ್ರದ ಪಠಣಕ್ಕೂ ಅದರದ್ದೇ ಆದ ಮಹತ್ವವಿದೆ. ಓಂ (Om) ಎಂಬ ಪದದಲ್ಲಿ ಎಷ್ಟು ಶಕ್ತಿ ಅಡಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೊಟ್ಟೆಯ ಆಳದಿಂದ ಹೊರಹೊಮ್ಮುವ ಈ ಶಬ್ದೋಚ್ಛಾರವನ್ನು ಸರಿಯಾದ ಯೋಗಾಸನಗಳ ಜೊತೆ ಮಾಡಿದರೆ ಅನೇಕ ಸಮಸ್ಯೆ ನಿವಾರಣೆಯಾಗುತ್ತವೆ. ಮಂತ್ರ ಜಪ ಮಾನಸಿಕವಾಗಿ ಹೆಚ್ಚು ಲಾಭಕಾರಿ. ಮನಸ್ಸಿಗೆ ವಿಶ್ರಾಂತಿ ನೀಡುವುದರ ಜೊತೆಗೆ ಈ ಒಂದು ಪದದ ಮಂತ್ರವು ಉಸಿರಾಟದ ಪ್ರದೇಶವನ್ನು ತೆರವುಗೊಳಿಸುತ್ತದೆ.


  ಯಾವ ಮಂತ್ರವು ಯಾವ ರೋಗ ಗುಣಪಡಿಸುವ ಶಕ್ತಿ ನೀಡುತ್ತದೆ?


  ಓಂ ಮಂತ್ರ ಜೀರ್ಣಕ್ರಿಯೆ ಉತ್ತಮ ಮಾಡುತ್ತದೆ ಎಂದು ಪರಿಗಣಿಸಲಾಗಿದೆ. ಇಷ್ಟೇ ಅಲ್ಲ ಅನೇಕ ರೋಗಗಳು ಇದ್ದವರು ಓಂ ಉಚ್ಛಾರಣೆ , ಜಪಿಸಿದಾಗ ಪರಿಹಾರ ನೀಡುತ್ತದೆ. ಇನ್ನೂ ಕೆಲವು ಮಂತ್ರಗಳು ಪರಿಹಾರ ನೀಡುತ್ತವೆ.


  ಗಂಭೀರ ಸ್ಥಿತಿಯ ಸಂದರ್ಭದಲ್ಲಿ ವೈದ್ಯರ ಸಲಹೆ ಪಡೆಯಿರಿ. ಆದರೆ ಮಂತ್ರಗಳ ಗುಣಪಡಿಸುವ ಶಕ್ತಿ ಆ ಔಷಧಿಗಳ ವಿಜ್ಞಾನದ ಜೊತೆಗೆ ಸಂಯೋಜಿಸಿದರೆ ಶೀಘ್ರ ಪರಿಹಾರ ಪಡೆಯುವ ಭರವಸೆ ಇದೆ. ಯಾವ ಮಂತ್ರವು ಯಾವ ರೋಗವನ್ನು ಗುಣಪಡಿಸುವ ಶಕ್ತಿ ನೀಡುತ್ತದೆ ಎಂದು ತಿಳಿಯೋಣ.


  ಇದನ್ನೂ ಓದಿ: ತೂಕ ಹೆಚ್ಚಾಗ್ಬೇಕು ಅಂತ ಸಿಕ್ಕಿದ್ದೆಲ್ಲಾ ತಿಂತೀರಾ? ಅದರ ಬದಲು ಈ ಆರೋಗ್ಯಕರ ಆಹಾರ ಸೇವಿಸಿ


  ಉತ್ತಮ ಆರೋಗ್ಯಕ್ಕಾಗಿ ಮಂತ್ರ ಪಠಣೆ


  ನೀವು ರಕ್ತದೊತ್ತಡ ನಿಯಂತ್ರಿಸಲು ಬಯಸಿದರೆ, ಪ್ರತಿದಿನ ‘ಹ್ರೀಂ’ ಮಂತ್ರ ಪಠಿಸಿ. ಈ ಮಂತ್ರವೂ ತುಂಬಾ ಚಿಕ್ಕದಾಗಿದೆ. ಬಿಪಿ ನಿಯಂತ್ರಣದಲ್ಲಿಡಲು, ಪ್ರತಿದಿನ ಹ್ರೀಂ ಮಂತ್ರ ಜಪ ಮಾಡಿ. ಇದರ ಹೊರತಾಗಿ ಇನ್ನೊಂದು ಮಂತ್ರವನ್ನು ಪಠಿಸಬಹುದು. ‘ಓಂ ಭವಾನಿ ಪಾಡುರಂಗ’ ಈ ಮಂತ್ರವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕನಿಷ್ಠ 21 ಬಾರಿ ಜಪಿಸಬೇಕು.


  ಶುಗರ್ ರೋಗಿಗಳು ಈ ಮಂತ್ರ ಪಠಿಸಿ


  ಶುಗರ್ ರೋಗಿಗಳೂ, ಬಿಪಿ ರೋಗಿಗಳು ‘ಹ್ರೀಂ’ ಈ ಮಂತ್ರ ಜಪಿಸಬೇಕು. ಈ ಮಂತ್ರವನ್ನು ಪಠಿಸುವ ವಿಧಾನವಿದೆ. ಆ ವಿಧಾನವನ್ನು ಅನುಸರಿಸಬೇಕು. ಮಂತ್ರವನ್ನು ಜಪಿಸುವಾಗ, ವಜ್ರಾಸನದಲ್ಲಿ ಕುಳಿತುಕೊಳ್ಳಿ. ನಿಮ್ಮ ಹೊಕ್ಕುಳಿನ ಮೇಲೆ ಎಲ್ಲಾ ಗಮನವನ್ನು ಕೇಂದ್ರೀಕರಿಸಿ.


  ಈಗ ಈ ಮಂತ್ರವನ್ನು ಜಪಿಸಿ. ಈ ಮಂತ್ರವನ್ನು ಗಟ್ಟಿಯಾಗಿ ಪಠಿಸುವುದರಿಂದ ಲಾಭ ಸಿಗುತ್ತದೆ. ಮಂತ್ರವನ್ನು ಪಠಿಸುವ ಒತ್ತಡವು ಹೊಕ್ಕುಳಿನ ಮೇಲೆ ಬೀಳುತ್ತದೆ. ಇದು ದೇಹದಲ್ಲಿ ಸಮತೋಲನ ನೀಡುತ್ತದೆ. ಮತ್ತು ವಿಷವನ್ನು ಹೊರಗೆ ಬಿಡುಗಡೆ ಮಾಡುತ್ತದೆ.


  ಕೆಲಸದ ಒತ್ತಡ ಮತ್ತು ಆಯಾಸ ಹೋಗಲಾಡಿಸಲು ಮಂತ್ರ


  ದಿನವಿಡೀ ಕಛೇರಿಯ ಕೆಲಸದ ಒತ್ತಡ, ದಣಿವು ತೆಗೆದು ಹಾಕಲು ‘ಲಂ’ ಮಂತ್ರ ಪಠಿಸಿ. ಅಂದಹಾಗೆ, ‘ಲಂ’ ಮಂತ್ರವನ್ನು ಐದು ಸುತ್ತು  ಜಪಿಸಬೇಕು. ನೀವು ಇದನ್ನು ಮಾಡಲು ಸಾಧ್ಯವಾಗದಿದ್ದರೂ ಸ್ವಲ್ಪ ಸಮಯ ಈ ಮಂತ್ರ ಜಪಿಸುವುದರಿಂದ ಆಯಾಸ ಹೋಗಲಾಡಿಸುತ್ತದೆ.


  ಜೀರ್ಣಕ್ರಿಯೆ ಮತ್ತು ಜ್ವರಕ್ಕೆ ಸಂಬಂಧ ತೊಂದರೆ


  ನೀವು ಅಜೀರ್ಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯಿಂದ ಬಳಲುತ್ತಿದ್ದರೆ ಅಂದರೆ ಜೀರ್ಣಕ್ರಿಯೆ, ನಂತರ ಸುಖಾಸನ ಅಥವಾ ವಜ್ರಾಸನ ಹಾಕಿ. ಈ ಭಂಗಿಯಲ್ಲಿ ಕುಳಿತೆ ‘ಓಂ’  ಜಪ ಮಾಡಿ. ಈ ಮಂತ್ರದ ಹೊರತಾಗಿ ನೀವು ‘ರಂ’ ಮಂತ್ರ ಪಠಿಸಬಹುದು.


  ಯಾರಿಗಾದರೂ ಹೆಚ್ಚಿನ ಜ್ವರ ಇದ್ದರೆ ಔಷಧ ಜೊತೆಗೆ ‘ಓಂ ನಮೋ ಭಗವತೇ ರುದ್ರಾಯ’ ಮಂತ್ರ ಪಠಣ ಪಠಿಸಿ. ರೋಗಿಯು ಜ್ವರದಲ್ಲಿ ಈ ಮಂತ್ರ ಸ್ವತಃ ಜಪಿಸುವುದು ಕಷ್ಟ. ಆದರೆ ಅವರ ಕುಟುಂಬದ ಸದಸ್ಯರು ಅವರ ಬಳಿ ಕುಳಿತು ಈ ಮಂತ್ರ ಪಠಿಸಬಹುದು.


  ಮಾರಕ ರೋಗದಿಂದ ಮುಕ್ತಿ ಪಡೆಯಲು


  ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವುದರಿಂದ ಯಾವುದೇ ಮಾರಣಾಂತಿಕ ಕಾಯಿಲೆಯಿಂದ ಮುಕ್ತಿ ಸಿಗುತ್ತದೆ ಎಂದು ನಂಬಲಾಗಿದೆ. ‘ಓಂ ತ್ರ್ಯಂಬಕಂ ಯಜಾಮಹೇ, ಸುಗನ್ಧಿಂ ಪುಷ್ಟಿವರ್ಧನಮ್ ಉರ್ವಾರುಕಮಿವ ಬನ್ಧನಂ, ಮೃತ್ಯೋಮಕ್ಷೀಯಾಮೃತಾ’ ಮಂತ್ರ ಪಠಿಸಿ.


  ಮೈಗ್ರೇನ್ ಶಮನ ಮಂತ್ರಗಳು


  ಮೈಗ್ರೇನ್ ಸಂದರ್ಭದಲ್ಲಿ ಶಿವನ ಮಂತ್ರವನ್ನು ಜಪಿಸಬೇಕು. ನೀವು ಮೈಗ್ರೇನ್‌ನಿಂದ ಬಳಲುತ್ತಿದ್ದರೆ, ಓಂ ನಮಃ ಶಿವಾಯ ನಿಯಮದಿಂದ. ಮಂತ್ರವನ್ನು ಪಠಿಸಿ. ಇದರಿಂದ ಮನಸ್ಸಿನಲ್ಲಿ ಶಾಂತಿ ನೆಲೆಸುತ್ತದೆ.


  ಇದನ್ನೂ ಓದಿ: ನೈಸರ್ಗಿಕವಾಗಿ ಚರ್ಮದ ಕಾಳಜಿಗೆ ಈ ಆಹಾರ ಸೇವಿಸಿ, ಒಮ್ಮೆ ಟ್ರೈ ಮಾಡಿ ನೋಡಿ


  ಹೃದಯ ರೋಗದಲ್ಲಿ


  ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಇದ್ದವರು ಪ್ರತಿದಿನ ‘ಓಂ ನಮಃ ಶಿವಾಯ:’ ಮಂತ್ರ ಪಠಿಸಿ. ಸುಖಾಸನದಲ್ಲಿ ಕುಳಿತು ಈ ಮಂತ್ರ ಪಠಿಸಿ. ನಿದ್ರಾಹೀನತೆ ಸಮಸ್ಯೆ ಇರುವವರು ‘ಓಂ ಅಗಸ್ತಿ ಶಯೀನ:’ ಮಂತ್ರ ಪಠಿಸಿ.

  Published by:renukadariyannavar
  First published: