Season And Unhealth: ಬದಲಾಗುತ್ತಿರುವ ಋತುವಿನಲ್ಲಿ ಅನಾರೋಗ್ಯ ಉಂಟಾಗದಂತೆ ಕಾಪಾಡುವುದು ಹೇಗೆ?

ಹವಾಮಾನ, ತಾಪಮಾನ ಮತ್ತು ಬೆಳಕಿನ ಬದಲಾವಣೆಗಳು ನಿಮ್ಮ ದೇಹದ ಮೇಲೆ ಪರಿಣಾಮ ಬೀರುತ್ತವೆ. ಇದು ನಿಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹಾಳು ಮಾಡುತ್ತದೆ. ಕಾಲೋಚಿತ ಅನಾರೋಗ್ಯದ ಸಾಧ್ಯತೆ ತಡೆಯಲು ಅಥವಾ ಕಡಿಮೆ ಮಾಡಲು ಸಹಾಯ ಮಾಡುವ ಹಲವು ಮಾರ್ಗಗಳಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬದಲಾಗುತ್ತಿರುವ (Changes) ಋತುವಿನ (Season) ಜೊತೆ ನಿಮ್ಮಲ್ಲಿ ಹಲವರು ಮೂಗು ಕಟ್ಟುವಿಕೆ, ಗೀರು ಅಥವಾ ನೋಯುತ್ತಿರುವ ಗಂಟಲು (Throat), ಆಗಾಗ್ಗೆ ಸೀನುವಿಕೆ, ಕಣ್ಣುಗಳಲ್ಲಿ (Eyes) ನೀರು ಬರುವುದು, ನಿಮ್ಮ ಮೂಗಿನಿಂದ ಲೋಳೆ ಹೊರ ಬರುವುದು, ಅಧಿಕ ಜ್ವರ, ಸ್ನಾಯು ನೋವು ಇತ್ಯಾದಿಗಳ ಬಗ್ಗೆ ದೂರು ನೀಡಬಹುದು. ಇದಕ್ಕೆ ಹಲವು ಕರಣಗಳಿವೆ. ಆದರೆ ಸೂಕ್ಷ್ಮ ಜೀವಿಗಳ ಬೆಳವಣಿಗೆಗೆ ಅನುಕೂಲಕರ ವಾತಾವರಣ ಮತ್ತು ನಿಮ್ಮ ರೋಗ ನಿರೋಧಕ ಶಕ್ತಿಯ ಮಟ್ಟದಲ್ಲಿ ಗಣನೀಯ ಕುಸಿತವು ಎರಡು ಪ್ರಮುಖ ಅಂಶ ಎಂದು ತಜ್ಞರು ತಿಳಿಸುತ್ತಾರೆ. ಬದಲಾಗುತ್ತಿರುವ ಋತುವಿನಲ್ಲಿ ನಿಮ್ಮನ್ನು ಆರೋಗ್ಯವಾಗಿ ಇರಿಸಿಕೊಳ್ಳುವುದು ಹೇಗೆ? ಅನಾರೋಗ್ಯದಿಂದ ಸುರಕ್ಷಿತವಾಗಿರುವುದು ಹೇಗೆ ಎಂದು ನಾವು ಇಲ್ಲಿ ತಿಳಿಯೋಣ.

  ಹವಾಮಾನ, ತಾಪಮಾನ ಮತ್ತು ಬೆಳಕಿನ ಬದಲಾವಣೆಗಳು

  ಹವಾಮಾನ, ತಾಪಮಾನ ಮತ್ತು ಬೆಳಕಿನ ಬದಲಾವಣೆಗಳು ನಿಮ್ಮ ದೇಹದ ಮೇಲೆ ಪರಿಣಾಮ ಬೀರುತ್ತವೆ. ಇದು ನಿಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹಾಳು ಮಾಡುತ್ತದೆ. ಕೆಲವು ಜೀವನಶೈಲಿಯ ಬದಲಾವಣೆ, ಮೂಗು ಸೋರುವಿಕೆ, ಸೀನುವಿಕೆ, ದದ್ದುಗಳು ಇತ್ಯಾದಿಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಕಾಲೋಚಿತ ಅನಾರೋಗ್ಯದ ಸಾಧ್ಯತೆ ತಡೆಯಲು ಅಥವಾ ಕಡಿಮೆ ಮಾಡಲು ಸಹಾಯ ಮಾಡುವ ಹಲವು ಮಾರ್ಗಗಳಿವೆ.

  ಈ ಬಗ್ಗೆ ಕ್ಲಿನಿಕಲ್ ನ್ಯೂಟ್ರಿಷನಿಸ್ಟ್ ಅವಂತಿ ದೇಶಪಾಂಡೆ, ಪರಿಣಾಮಕಾರಿ ಮನೆಮದ್ದು ಹಂಚಿಕೊಂಡಿದ್ದಾರೆ. ಹವಾಮಾನದಲ್ಲಿ ಶೀತ ಅಥವಾ ಶಾಖದ ಹಠಾತ್ ಹೆಚ್ಚಳ, ಪರಿಣಾಮ ನಿಮ್ಮ ರೋಗ ನಿರೋಧಕ ಶಕ್ತಿಯ ಮೇಲೆ ಬೀರುತ್ತದೆ ಎಂದು ಹೇಳುತ್ತಾರೆ.

  ಇದನ್ನೂ ಓದಿ: ರೂಟ್ ಟು ಸ್ಟೀಮ್ ಕುಕ್ಕಿಂಗ್ ಎಂದರೇನು? ಈರುಳ್ಳಿ ಸಿಪ್ಪೆಯ ಚಹಾ ಮಾಡುವುದು ಹೇಗೆ?

  ಇದರಿಂದ ನಿಮ್ಮ ದೇಹವು ರೋಗಗಳ ವಿರುದ್ಧ ಹೋರಾಡಲು ಸಾಧ್ಯ ಆಗುವುದಿಲ್ಲ. ಅಂತಹ ಸ್ಥಿತಿಯಲ್ಲಿ ಮನೆಯಲ್ಲಿ ತಯಾರಿಸಿದ ರೋಗ ನಿರೋಧಕ ಶಕ್ತಿ ವರ್ಧಕ ಪಾನೀಯ ನಿಮಗೆ ಪ್ರಯೋಜನಕಾರಿ. ಹೇಗೆ ತಯಾರಿಸುವುದು ನೋಡೋಣ.

  ತುಪ್ಪ + ಅರಿಶಿನ ಪುಡಿ

  ತುಪ್ಪ ಮತ್ತು ಅರಿಶಿನದಿಂದ ತಯಾರಿಸಿದ ಮಿಶ್ರಣವು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹಳೆಯ ಪರಿಹಾರ ಎಂದು ಪೌಷ್ಟಿಕ ತಜ್ಞ ಅವಂತಿ ವಿವರಿಸಿದ್ದಾರೆ. ಅರಿಶಿನದಲ್ಲಿರುವ ಕರ್ಕ್ಯುಮಿನ್ ದೇಹದ ಸೋಂಕು ಮತ್ತು ವೈರಸ್‌ಗಳಿಂದ ರಕ್ಷಿಸುತ್ತವೆ. ಮತ್ತು ತುಪ್ಪವು ಜೀರ್ಣಾಂಗ ವ್ಯವಸ್ಥೆಗೆ ರಕ್ಷಣಾತ್ಮಕ ಕವಚ. ಮತ್ತು ಉತ್ತಮ ಬ್ಯಾಕ್ಟೀರಿಯಾಗಳಿಗೆ ಆಹಾರವಾಗಿ ಕಾರ್ಯ ನಿರ್ವಹಿಸುತ್ತದೆ.

  ಹೇಗೆ ತಯಾರಿಸುವುದು

  1 ಟೀಸ್ಪೂನ್ ತುಪ್ಪ ಮತ್ತು 1/4 ಟೀಸ್ಪೂನ್ ಅರಿಶಿನ ತೆಗೆದುಕೊಳ್ಳಿ. ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿ. ಈಗ ಅದು ನಿಮ್ಮ ಬಳಕೆಗೆ ಸಿದ್ಧವಾಗಿದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿ

  ಫಾಸ್ಟ್ & ಅಪ್ ಚಾರ್ಜ್ ಜಿಂಕ್ + ವಿಟಮಿನ್ ಸಿ

  ಸತುವು ಉಸಿರಾಟದ ತೊಂದರೆಗೆ ಪ್ರಮುಖ ಪೋಷಕಾಂಶ ಎಂದು ಪೌಷ್ಟಿಕ ತಜ್ಞರು ತಿಳಿಸಿದ್ದಾರೆ. ಮತ್ತು ವಿಟಮಿನ್ ಸಿ ಉತ್ಕರ್ಷಣ ನಿರೋಧಕ ಆಗಿದೆ. ಇದು ದೇಹವನ್ನು ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಫಾಸ್ಟ್ ಮತ್ತು ಅಪ್ ಚಾರ್ಜ್ ಝಿಂಕ್ ಮತ್ತು ವಿಟಮಿನ್ ಸಿ ಸಂಯೋಜನೆಯು ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೆಲಸ ಮಾಡುತ್ತದೆ.

  ಹೇಗೆ ತಯಾರಿಸುವುದು

  ಒಂದು ಗ್ಲಾಸ್ ನೀರಿನಲ್ಲಿ ಫಾಸ್ಟ್ ಮತ್ತು ಅಪ್ ಚಾರ್ಜ್ ಜಿಂಕ್ ಮತ್ತು ವಿಟಮಿನ್ ಸಿ ಯ ಒಂದು ಟ್ಯಾಬ್ಲೆಟ್ ಮಿಶ್ರಣ ಮಾಡಿ. ಅದನ್ನು ಕರಗಿಸಲು ಸ್ವಲ್ಪ ಸಮಯ ಬಿಡಿ. ಟ್ಯಾಬ್ಲೆಟ್ ಕರಗಿದ ನಂತರ ಅದು ಬಳಕೆಗೆ ಸಿದ್ಧ ಆಗಿದೆ. ನೀವು ಅದನ್ನು ದಿನದ ಯಾವುದೇ ಸಮಯದಲ್ಲಿ ತಯಾರಿಸಬಹುದು ಮತ್ತು ಕುಡಿಯಬಹುದು.

  ಆಮ್ಲಾ ಪೌಡರ್ + ಜೇನುತುಪ್ಪ

  ಹವಾಮಾನ ಬದಲಾವಣೆಗಳಿಂದ ಉಂಟಾಗುವ ಪ್ರತಿರಕ್ಷೆಯ ಮೇಲೆ ಪರಿಣಾಮ ಕಡಿಮೆ ಮಾಡಲು ಆಮ್ಲಾ ಮತ್ತು ಜೇನುತುಪ್ಪ ಮಿಶ್ರಣ ಸೇವನೆಗೆ ಪೌಷ್ಟಿಕ ತಜ್ಞರು ಶಿಫಾರಸು ಮಾಡುತ್ತಾರೆ. ಆಮ್ಲಾ ವಿಟಮಿನ್ ಸಿ ಯ ನೈಸರ್ಗಿಕ ಮೂಲ ಆಗಿದೆ. ಮತ್ತು ಇದು ಕ್ಷಾರೀಯ ಆಹಾರವಾಗಿದೆ. ಜೇನುತುಪ್ಪವು ಸೂಕ್ಷ್ಮ ಜೀವಿಯ ವಿರೋಧಿ ಆಗಿದೆ. ಇದು ದೇಹವನ್ನು ಕೆಟ್ಟ ಬ್ಯಾಕ್ಟೀರಿಯಾದಿಂದ ರಕ್ಷಿಸುತ್ತದೆ.

  ಹೇಗೆ ತಯಾರಿಸುವುದು

  ಒಂದು ಬಟ್ಟಲಿನಲ್ಲಿ 1/2 ಚಮಚ ಆಮ್ಲಾ ಪುಡಿ ಮತ್ತು 1 ಚಮಚ ಜೇನುತುಪ್ಪ ಮಿಶ್ರಣ ಮಾಡಿ. ಈ ಸಿದ್ಧಪಡಿಸಿದ ಮಿಶ್ರಣ ನೀವು ಮಲಗುವ ವೇಳೆ ಅಥವಾ ಬೆಳಿಗ್ಗೆ ಸೇವಿಸಬಹುದು.

  ಇದನ್ನೂ ಓದಿ: ದೇಹದ ವಿವಿಧ ಭಾಗಗಳಲ್ಲಿ ಸಂಭವಿಸುವ ಕಾಯಿಲೆಯು ಯಾವ ರೀತಿಯ ಉರಿಯೂತಕ್ಕೆ ಕಾರಣವಾಗುತ್ತದೆ?

  ಬದಲಾಗುತ್ತಿರುವ ಋತುವಿನಲ್ಲಿ ಆರೋಗ್ಯವಾಗಿರುವ ವಿಷಯಗಳು

  ಬದಲಾಗುತ್ತಿರುವ ಋತುಗಳಲ್ಲಿ ಅನಾರೋಗ್ಯಕ್ಕೆ ಒಳಗಾಗುವುದು ಸಾಮಾನ್ಯ. ಆಹಾರ ಕ್ರಮ ಸುಧಾರಿಸುವುದು, 8 ಗಂಟೆಗಳ ಕಾಲ ನಿದ್ರೆ ಮಾಡುವುದು, ಅನಾರೋಗ್ಯವಾದಾಗ ಮನೆಯಲ್ಲಿಯೇ ಇರುವುದು, ಅಲರ್ಜಿ ಇದ್ದರೆ ವೈದ್ಯರ ಸಂಪರ್ಕಿಸಿ.
  Published by:renukadariyannavar
  First published: